ಚಿಕ್ಕ ವಯಸ್ಸಿನಲ್ಲೇ ತಾಯಿಯಾದ ಮಹಿಳೆಯೊಬ್ಬರ ವಿಡಿಯೋ ವೈರಲ್ ಆಗಿದೆ. ಆಕೆಯ ಮಗ ತನಗಿಂತ ಎತ್ತರವಾಗಿ ಬೆಳೆದಿದ್ದು, ಇವರಿಬ್ಬರ ಸಂಬಂಧದ ಬಗ್ಗೆ ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ. ಇದು ತಾಯಿ-ಮಗನ ಸಂಬಂಧವೇ ಅಥವಾ ಬೇರೆಯೇ ಎಂದು ಚರ್ಚಿಸುತ್ತಿದ್ದಾರೆ. ಕೆಲವರು ಆ ವ್ಯಕ್ತಿ ತಂದೆಯಂತೆ ಕಾಣುತ್ತಾನೆ ಎಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಭಾರತದಲ್ಲಿ ಆಗಲೀ ಅಥವಾ ವಿದೇಶಗಳಲ್ಲಿ ಆಗಲೀ ಸಣ್ಣ ವಯಸ್ಸಿಗೆ ಮದುವೆ ಮಾಡಿಕೊಳ್ಳುವಂತಹ ಹಾಗೂ ಮಕ್ಕಳನ್ನು ಮಾಡಿಕೊಳ್ಳುವಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಲೇ ಇರುತ್ತವೆ. ಆದರೆ, ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಮಾಡಿಕೊಳ್ಳುವುದನ್ನು ಬಹುತೇಕರು ವಿರೋಧ ಮಾಡುತ್ತಾರೆ. ಆದರೆ, ಕೆಲವರು ಮದುವೆಯಾಗಿ ಮರು ವರ್ಷವೇ ಮಕ್ಕಳು ಮಾಡಿಕೊಳ್ಳುವುದು ಒಳ್ಳೆಯದೇ ಎಂದು ಹೇಳುತ್ತಾರೆ. ಇಲ್ಲೊಬ್ಬ ಮಹಿಳೆ ಚಿಕ್ಕ ವಯಸ್ಸಿಗೆ ಮಗುವಿಗೆ ಜನ್ಮ ನೀಡಿದ್ದು, ಆಕೆಗೆ 40 ವರ್ಷವಾಗುವುದಕ್ಕೂ ಮುಂಚೆ ಮಗನ ತನಗಿಂತ ಎತ್ತರ ಬೆಳೆದು ಅಜಾನುಬಾಹು ಆಗಿದ್ದಾನೆ. ಇದೀಗ ಆಕೆಯ ಜೊತೆಗಿರುವ ಮಗನನ್ನು ನೋಡಿ, ಇವರಿಬ್ಬರ ಸಂಬಂಧ ಬಗ್ಗೆ ಎಲ್ಲರೂ ತಲೆ ಕೆಡಿಸಿಕೊಂಡಿದ್ದಾರೆ.

ಡೀಪ್‌ಫೇಕ್ ವೀಡಿಯೊಗಳಿಂದ ಹಿಡಿದು ವೀಕ್ಷಕರನ್ನು ದಾರಿ ತಪ್ಪಿಸುವಂತಹ ವೀಡಿಯೊಗಳು ಈ ಕಾಲದಲ್ಲಿ ಸಾಮಾನ್ಯವಾಗಿದೆ. ನಮ್ಮ ದೃಷ್ಟಿಯ ವಾಸ್ತವವನ್ನೇ ಮೋಸಗೊಳಿಸುವಂತಹ ವೀಡಿಯೊಗಳು ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯವಿದೆ. ಇಂತಹ ಒಂದು ನೋಟದಲ್ಲಿ ಯಾವುದು ಸತ್ಯವೆಂದು ಖಚಿತಪಡಿಸಿಕೊಳ್ಳಲು ಸಾಧ್ಯವಾಗದಂತಹ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಳಕೆದಾರರ ನಡುವೆ ತೀವ್ರ ಚರ್ಚೆಗೆ ಕಾರಣವಾಗಿದೆ. ಟ್ರೆಂಡಿಂಗ್ ವೀಡಿಯೊಗಳು ಮತ್ತು ಎಐ ವೀಡಿಯೊಗಳನ್ನು ಹಂಚಿಕೊಳ್ಳುವ ಜನಪ್ರಿಯ ಇನ್‌ಸ್ಟಾಗ್ರಾಮ್ ಖಾತೆಯಾದ ರಾಮ್ಸಿ ಆಫೀಶಿಯಲ್‌ನಿಂದ ಹಂಚಿಕೊಳ್ಳಲಾದ ವೀಡಿಯೊವೊಂದು ಸಾಮಾಜಿಕ ಮಾಧ್ಯಮ ಬಳಕೆದಾರರ ನಿದ್ದೆಗೆಡಿಸಿದೆ.

ಇದನ್ನೂ ಓದಿ: ಇನ್ನೊಂದೇ ವಾರದಲ್ಲಿ 10 ಗ್ರಾಂ ಚಿನ್ನದ ಬೆಲೆ ₹1 ಲಕ್ಷ! ತಜ್ಞರು ಹೇಳಿದ್ದೇನು?

'ಅದೃಷ್ಟವಂತ ಮನುಷ್ಯ' ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾದ ವೀಡಿಯೊ ಅದು. ವೀಡಿಯೊದ ಆರಂಭದಲ್ಲಿ, ಯುವತಿಯೊಬ್ಬಳು ನೆಲದ ಮೇಲೆ ಕಾಲುಗಳನ್ನು ಚಾಚಿ ಕುಳಿತಿರುವುದನ್ನು ಕಾಣಬಹುದು. ನೋಡಲು ಆಕೆ ಹೆಚ್ಚು ವಯಸ್ಸಾದವರಂತೆ ಕಾಣುವುದಿಲ್ಲ. ತುಂಬಾ ಚಿಕ್ಕವಯಸ್ಸಿನವಳು. ಆಕೆಯ ಹಿಂದೆ ಆಕೆಗಿಂತ ವಯಸ್ಸಾದ ವ್ಯಕ್ತಿಯೊಬ್ಬ ನಿಂತಿರುತ್ತಾನೆ. ಇದ್ದಕ್ಕಿದ್ದಂತೆ ಆತ ಮುಂದೆ ಬಂದು ಆಕೆಯ ಮಡಿಲಲ್ಲಿ ಕುಳಿತುಕೊಳ್ಳುತ್ತಾನೆ. ನಂತರ ಇಬ್ಬರ ಹಳೆಯ ಫೋಟೋವನ್ನು ವೀಡಿಯೊದಲ್ಲಿ ತೋರಿಸಲಾಗುತ್ತದೆ. ಆ ಚಿತ್ರದಲ್ಲಿ ಯುವತಿ ಇನ್ನಷ್ಟು ಚಿಕ್ಕವಯಸ್ಸಿನವಳಾಗಿ ಕಾಣುತ್ತಾಳೆ. ಮಡಿಲಲ್ಲಿ ಮಗುವಿದೆ. ವೀಡಿಯೊದಲ್ಲಿ, 'ಚಿಕ್ಕ ವಯಸ್ಸಿನಲ್ಲಿ ತಾಯಿಯಾದ ಪ್ರಯೋಜನಗಳು' ಎಂದು ಬರೆದಿರುವುದನ್ನು ಸಹ ಕಾಣಬಹುದು.

View post on Instagram

ತಾಯಿ ಮತ್ತು ಮಗನ ಎರಡು ಕಾಲಗಳನ್ನು ಒಟ್ಟುಗೂಡಿಸಿ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದೆ. ಅನೇಕ ಜನರು ಆ ಯುವಕನಿಗೆ 'ನೀನು ನಿನ್ನ ತಾಯಿಗಿಂತ ದೊಡ್ಡವನಾಗಿದ್ದೀಯಾ' ಎಂದು ಕೇಳಿದರು. ಮತ್ತೆ ಕೆಲವರು ಆಕೆ ಆ ಯುವತಿಯ ಮಗನಲ್ಲ, ಸಹೋದರ ಎಂದು ವಾದಿಸಿದರು. ಇದೆಲ್ಲಾ ಫಿಲ್ಟರ್‌ನಿಂದ ಆಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ನಿಮ್ಮ ತಾಯಿ ನಿಮ್ಮ ಮಗಳಂತೆ ಕಾಣುತ್ತಾರೆ ಎಂದು ಬರೆದವರೂ ಇದ್ದಾರೆ. ಈ ವೀಡಿಯೊವನ್ನು ಈಗಾಗಲೇ ಒಂದು ಕೋಟಿ ಇಪ್ಪತ್ತಾರು ಲಕ್ಷ ಜನರು ನೋಡಿದ್ದಾರೆ. ಸುಮಾರು 4 ಲಕ್ಷ ವೀಕ್ಷಕರು ವೀಡಿಯೊವನ್ನು ಲೈಕ್ ಮಾಡಿದ್ದಾರೆ.

ಇದನ್ನೂ ಓದಿ: ಕುಸಿದು ಬಿದ್ದ ವೃದ್ಧನಿಗೆ ಸಹಾಯ ಮಾಡದ ದಾರಿಹೋಕರಿಗೆ ₹16 ಲಕ್ಷ ದಂಡ

ಅಪ್ಪನಂತೆ ಕಾಣುತ್ತಾನೆ ಎಂದ ನೆಟ್ಟಿಗರು: 
ಈ ವಿಡಿಯೋ ನೋಡಿದ ನೆಟ್ಟಿಗರು ಇವರಿಬ್ಬರೂ ತಾಯಿ-ಮಗು ಆಗುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಇವರು ಗಂಡ-ಹೆಂಡತಿ ಒರಬಹುದು. ಇವನು ನಿನ್ನ ಗಂಡನಲ್ಲವೇ? ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಚಿಕ್ಕ ವಯಸ್ಸಿನ ಫೋಟೋಗೆ ಹೋಲಿಕೆ ಮಾಡಿದರೆ, ನಿನ್ನ ಸಹೋದರ ಆಗಿರಬಹುದು ಎಂದಿದ್ದಾರೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ನೆಟ್ಟಿಗನೊಬ್ಬ ಈ ವ್ಯಕ್ತಿಯೇ ನಿನಗೆ ಅಪ್ಪನಂತೆ ಕಾಣಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.