ಅತ್ತೆ-ಸೊಸೆಯ ನಡುವಿನ ತಮಾಷೆಯ ಮೊಟ್ಟೆ ಕಥೆಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಇಂದು ಸೋಶಿಯಲ್ ಮೀಡಿಯಾದಲ್ಲಿ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಗ್ರಾಮೀಣ ಭಾಗದ ಜನರು ಸಹ ತಮ್ಮದೇ ಶೈಲಿಯಲ್ಲಿ ವಿಡಿಯೋ ಮತ್ತು ರೀಲ್ಸ್ ಮಾಡುವ ಮೂಲಕ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಅತ್ತೆ-ಸೊಸೆ, ಗಂಡ-ಹೆಂಡತಿ, ಗೆಳೆಯ-ಗೆಳತಿ ನಡುವಿನ ಸಂಭಾಷಣೆಯುಳ್ಳು ವಿಡಿಯೋಗಳು ಕಡಿಮೆ ಸಮಯದಲ್ಲಿಯೇ ವೈರಲ್ ಆಗುತ್ತದೆ. ಇದೀಗ ಅಂತಹವುದೇ ಒಂದು ವಿಡಿಯೋ ವೈರಲ್ ಆಗಿದೆ. ತಾಯಿ ಮತ್ತು ಹೆಂಡತಿ ಮುಂದೆ ದಾನ ಶೂರ ವೀರ ಕರ್ಣನಾಗಲು ಹೋದ ಗಂಡ ಇಲ್ಲಿ ಇಂಗು ತಿಂದ ಮಗನಾಗಿದ್ದಾನೆ. ಇಷ್ಟು ಮಾತ್ರವಲ್ಲ ತಟ್ಟೆಯಲ್ಲಿದ್ದ ಮೊಟ್ಟೆಯನ್ನು ಸಹ ಕಳೆದುಕೊಂಡಿದ್ದಾನೆ.
ಅತ್ತೆ, ಸೊಸೆ ಇಬ್ಬರ ನಡುವೆ ಮನಸ್ತಾಪ ಇರುತ್ತೆ, ಇಬ್ಬರ ನಡುವೆ ಹೊಂದಾಣಿಕೆ ಇರಲ್ಲ ಅಂತ ಹಿಂದೆಯಿಂದಲೂ ಜನರು ಹೇಳಿರುತ್ತಾರೆ. ಆದ್ರೆ ಇಂದು ಸೋಶಿಯಲ್ ಮೀಡಿಯಾದಲ್ಲಿ ಅತ್ತೆ-ಸೊಸೆ ಕಂಟೆಂಟ್ ಹೊಂದಿರುವ ಫನ್ನಿ ವಿಡಿಯೋಗಳು ಹೆಚ್ಚು ವ್ಯೂವ್ ಪಡೆದುಕೊಳ್ಳುತ್ತವೆ. ವಿಶೇಷವಾಗಿ ಗ್ರಾಮೀಣ ಭಾಗದ ಜನರ ಸಿಂಪಲ್ ಭಾಷೆಯ ವಿಡಿಯೋಗಳು ನೋಡುಗರನ್ನು ನಗೆಗಡಿಲಿನಲ್ಲಿ ತೇಲಾಡಿಸುತ್ತವೆ.
ಇಂದು ವೈರಲ್ ಆಗುತ್ತಿರುವ ವಿಡಿಯೋವನ್ನು Mr & Mrs Malnad (mr_and_mrs_malnad) ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಮ್ಮ ಮತ್ತು ಪತ್ನಿಯೊಂದಿಗೆ ಯುವಕ ಮಾಡಿರುವ ರೀಲ್ಸ್ ತಮಾಷೆಯಾಗಿದೆ. ವೈರಲ್ ಆಗಿರುವ ವಿಡಿಯೋಗೆ 1.96 ಲಕ್ಷಕ್ಕೂ ಅಧಿಕ ಲೈಕ್ಸ್ ಮತ್ತು ನೂರಾರು ಕಮೆಂಟ್‌ಗಳು ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು, ಇದು ಒಂದಲ್ಲ, ಮೂರು ಮೊಟ್ಟೆ ಕಥೆ ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. 3 ಮೊಟ್ಟೆ ಕೊನೆಗೆ ಸೇರಿದ್ದು ಒಂದು ಹೊಟ್ಟೆ, ಸೂಪರ್ ಕಾಮಿಡಿ ಅಕ್ಕ,ನಾನಂತೂ ಹೀಂಗೆ ಮಾಡಿಲ್ಲ, ಮಾಡೋದು ಇಲ್ಲ, ಮಗ ಫುಲ್ ಶಾಕ್, ಹೆಂಡತಿ ರಾಕ್ ಎಂಬಿತ್ಯಾದಿಯಾಗಿ ಕಮೆಂಟ್ ಬಂದಿವೆ.
ಇದನ್ನೂ ಓದಿ: ಓ ದೇವ್ರೇ ಇಂಥ ಮಕ್ಕಳನ್ನು ಯಾರಿಗೂ ಕೊಡಬೇಡ; ಕುಂಭಮೇಳದಲ್ಲಿ ವೃದ್ಧ ಪೋಷಕರನ್ನು ಬಿಟ್ಟು ಹೋದ ಪಾಪಿ ಮಕ್ಕಳು
ವೈರಲ್ ವಿಡಿಯೋದಲ್ಲಿ ಏನಿದೆ?
ಮಗ ಮತ್ತು ಸೊಸೆ ಊಟಕ್ಕೆ ಕುಳಿತಿರುತ್ತಾರೆ. ಇಬ್ಬರ ತಟ್ಟೆಯಲ್ಲಿಯೂ ರೈಸ್ ಮತ್ತು ಪಲ್ಯ ಹಾಕಲಾಗಿರುತ್ತದೆ. ಈ ವೇಳೆ ಮಗನ ತಟ್ಟೆಯಲ್ಲಿ ಬೇಯಿಸಿದ ಮೊಟ್ಟೆಯನ್ನು ಇರಿಸಿ ಅಡುಗೆಮನೆಯೊಳಗೆ ಹೋಗುತ್ತಾರೆ. ಹೆಂಡತಿಗೆ ಇಲ್ಲವಲ್ಲ ಅಂತ ಗಂಡ ತನ್ನ ತಟ್ಟೆಯಲ್ಲಿದ್ದ ಮೊಟ್ಟೆಯನ್ನು ಹೆಂಡತಿಗೆ ನೀಡುತ್ತಾನೆ. ಹೆಂಡತಿ ಒಳಗೊಳಗೆ ನಗುತ್ತಾ ಮೊಟ್ಟೆ ತಿನ್ನಲು ಆರಂಭಿಸುತ್ತಾಳೆ. ಅಮ್ಮ ಬಂದ ಕೂಡಲೇ, ನನ್ನ ತಟ್ಟೆಗೆ ಮೊಟ್ಟೆ ಹಾಕಿ, ಸೊಸೆಗೆ ಕೊಡಲಿಲ್ಲವಾ ಅಮ್ಮಾ.. ಸೊಸೆಯನ್ನು ಸಹ ಮಗಳ ರೀತಿ ನೋಡಿಕೊಳ್ಳಬೇಕು ಎಂದು ಅಮ್ಮನಿಗೆ ಮಗ ಬುದ್ಧಿವಾದ ಹೇಳುತ್ತಾನೆ. ಇದಕ್ಕೆ ಉತ್ತರಿಸುವ ಅಮ್ಮ, ಇರೋದೇ ಮೂರು ಮೊಟ್ಟೆ. ಅದರಲ್ಲಿ ಆಗಲೇ ಅವಳು ಎರಡು ತಿಂದಿದ್ಲು. ಇರೋ ಒಂದನ್ನು ನಿನಗೆ ನೀಡಿದ್ದೆ ಎಂದು ಹೇಳುತ್ತಾರೆ. ಈ ವಿಷಯ ತಿಳಿಯುತ್ತಲೇ ಮಗ ಫುಲ್ ಶಾಕ್ ಆಗುತ್ತಾನೆ. ಹೆಂಡತಿ ಮಾತ್ರ ನಗುತ್ತಾ ಮೊಟ್ಟೆ ತಿನ್ನುತ್ತಾಳೆ.
ಸದ್ಯ ಈ ವಿಡಿಯೋಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅತ್ತೆ-ಸೊಸೆ ಇಂದು ತಾಯಿ-ಮಗಳಂತೆ ಇರುತ್ತಾರೆ. ಇಬ್ಬರು ಸೇರಿಕೊಂಡು ಗಂಡನನ್ನ ಫೂಲ್ ಮಾಡುತ್ತಿರುತ್ತಾರೆ. ಹಾಗಾಗಿ ಹುಡುಗರು ತುಂಬಾನೇ ಎಚ್ಚರಿಕೆಯಿಂದಿರಬೇಕಾಗುತ್ತದೆ ವಿಡಿಯೋ ನೋಡಿದ ಗಂಡೈಕ್ಳ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಬೆಡ್‌ರೂಮ್‌ಗೆ ನುಗ್ಗಿ ಮಹಿಳೆಯರ ಒಳಉಡುಪು ಧರಿಸಿ ಕುಣಿದಾಡಿದ ಸೈನಿಕರು: ವಿಡಿಯೋ ವೈರಲ್
