ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ವಿಶಿಷ್ಟ ಮದುವೆಯೊಂದು ವೈರಲ್ ಆಗಿದೆ. ಆಧುನಿಕ ಸೀತಾ ಸ್ವಯಂವರದಂತೆ ನಡೆದ ಈ ಮದುವೆಯಲ್ಲಿ, ಮುರಿದ ಧನಸ್ಸನ್ನು ಎತ್ತಿ ವರನು ವಧುವನ್ನು ವರಿಸಿದನು. ತಂತ್ರಜ್ಞಾನವನ್ನು ಬಳಸಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಮದುವೆಯಲ್ಲಿ ವಧು-ವರರ ಡ್ಯಾನ್ಸ್ ಕೂಡ ಇತ್ತು. ಇಂತಹ ವಿಭಿನ್ನ ಪ್ರಯತ್ನಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನವನ್ನು ಬಳಸುವ ಇಂತಹ ಮದುವೆಗಳು ಸಾಮಾನ್ಯವಾಗಿದ್ದರೂ, ಕೆಲವೊಮ್ಮೆ ವಿಫಲವಾಗಬಹುದು.
ವಧು ಸರ್ವಾಲಂಕಾರ ಮಾಡಿಕೊಂಡು ವೇದಿಕೆ ಮೇಲೆ ನಿಂತಿದ್ದಾಳೆ. ಪಕ್ಕದಲ್ಲಿಯೇ ಇರುವ ಟೇಬಲ್ ಮೇಲೆ ಧನಸ್ಸು ಇಡಲಾಗಿದೆ. ಹಲವು ಪುರುಷರು ಬಂದು ಆ ಧನಸ್ಸನ್ನು ಎತ್ತಲು ಟ್ರೈ ಮಾಡಿದ್ರೂ ಅದು ಆಗಲಿಲ್ಲ. ಕೊನೆಗೆ ಯುವಕನೊಬ್ಬ ಅದನ್ನು ಸುಲಭದಲ್ಲಿ ಎತ್ತಿ, ಮುರಿದು ಪಕ್ಕದಲ್ಲಿಯೇ ಇದ್ದ ವಧುವನ್ನು ಮದ್ವೆಯಾದ...
- ಹಾಗೆಂದು ಇದು ರಾಮಾಯಣದ ಸೀತಾ ಸ್ವಯಂವರವಲ್ಲ, ಬದಲಿಗೆ ವಿಶೇಷವಾಗಿ ನಡೆದ ಮದುವೆಯೊಂದರ ಝಲಕ್. ಅಷ್ಟಕ್ಕೂ ಇಂದು ಮದುವೆಯಾಗುವವರು ತಮ್ಮ ಮದ್ವೆ ಸಕತ್ ಡಿಫರೆಂಟ್ ಆಗಿ ಇರಬೇಕು ಎಂದು ಬಯಸುತ್ತಾರೆ. ಅದರಲ್ಲಿಯೂ ಕ್ರಿಯೇಟ್ ಮೈಂಡ್ ಇರುವ ವಧು ಅಥವಾ ವರ, ತಮ್ಮ ಮದುವೆಯನ್ನು ವಿಶಿಷ್ಟವಾಗಿ ಆಚರಿಸಿಕೊಳ್ಳಬೇಕು ಎಂದು ಬಯಸುವುದು ಸಹಜ. ಇದೇ ಕಾರಣಕ್ಕೆ ಭಿನ್ನ ಭಿನ್ನ ರೀತಿಯಲ್ಲಿ ಯೋಚಿಸಿ, ಯೋಜನೆ ರೂಪಿಸಲಾಗುತ್ತದೆ. ಅವುಗಳ ಪೈಕಿ ಕೆಲವೊಂದು ಸಕತ್ ಹಿಟ್ ಆಗಿ ವೈರಲ್ ಆಗುತ್ತದೆ. ಅಂಥದ್ದೇ ಒಂದು ಈ ಆಧುನಿಕ ಸೀತಾ ಸ್ವಯಂವರ.
ಡ್ರೋನ್ನಲ್ಲಿ ಬಂದ ಹಾರ ವರನ ಕೊರಳ ಬದ್ಲು ಸಿಕ್ಕಾಕ್ಕೊಂಡಿದ್ದೇ ಬೇರೆ ಕಡೆ! ಮದುಮಗ ಕಕ್ಕಾಬಿಕ್ಕಿ... ವಿಡಿಯೋ ವೈರಲ್
ಇದು ನಡೆದಿರುವುದು ಹೈದರಾಬಾದ್‌ನಲ್ಲಿ, ಈ ವಧು-ವರರು ಯಾರು ಎಂಬ ಬಗ್ಗೆ ವೈರಲ್ ವಿಡಿಯೋದಲ್ಲಿ ಮಾಹಿತಿ ಇಲ್ಲ. ಆದರೆ, ವಿಡಿಯೋ ಮಾತ್ರ ಸಕತ್ ಸೌಂಡ್ ಮಾಡುತ್ತಿದೆ. ಅಂದಹಾಗೆ ಇಲ್ಲೇನೂ ರಾಮಾಯಣದ ರೀತಿಯಲ್ಲಿ ಭಾರಿ ಶಿವಧನಸ್ಸನ್ನು ಇಟ್ಟಿಲ್ಲ. ಬದಲಿಗೆ ಮೊದಲೇ ಮುರಿದುಹೋದ ಧನಸ್ಸನ್ನು ಇಡಲಾಗಿದೆ. ಕೆಲವು ಪುರುಷರು ಬಂದು ಅದನ್ನು ಎತ್ತಲು ನೋಡಿದ್ದಾರೆ. ಅದನ್ನು ಎತ್ತಲು ಆಗಲಿಲ್ಲ. ತಮಾಷೆಯಾಗಿದ್ದರೂ ಇದು ಸೀರಿಯಸ್ ಎನ್ನುವ ರೀತಿಯಲ್ಲಿ ಇದೆ. ಕೊನೆಗೆ ನಿಜವಾದ ವರ ಬಂದು ಅದನ್ನು ಸುಲಭದಲ್ಲಿ ಎತ್ತಿದ್ದಾನೆ. ತಮಾಷೆಯ ವಿಷಯ ಏನೆಂದರೆ, ಅದು ಎತ್ತುವ ಮೊದಲೇ ಮುರಿದು ಹೋಗಿದೆ! ಕೊನೆಗೆ ತಾನೇ ಧನಸ್ಸು ಮುರಿದಂತೆ ವರ ಪೋಸ್ ಕೊಟ್ಟಿದ್ದಾನೆ. ಬಳಿಕ ಪಕ್ಕದಲ್ಲಿಯೇ ಇದ್ದ ಆಧುನಿಕ ಸೀತೆ ಜೊತೆ ಮದುವೆಯಾಗಿದ್ದಾನೆ. ಬಳಿಕ ತಂತ್ರಜ್ಞಾನ ಬಳಸಿ ಕೆಲವೊಂದು ಟೆಕ್ನಿಕ್‌ಗಳನ್ನು ಮಾಡಲಾಗಿದೆ. ವಿಶೇಷ ರೀತಿ ಎನ್ನಿಸುವ ರೀತಿಯಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಹಾರ್ಟ್ ಓಪನ್ ಆಗಿ, ಅದರಲ್ಲಿ ವಧು-ವರರು ಕಾಣಿಸಿಕೊಳ್ಳುತ್ತಾರೆ. ಇದಾದ ಬಳಿಕ ಮದುಮಕ್ಕಳು ಡಾನ್ಸ್ ಮಾಡಿದ್ದಾರೆ. ಇದರ ವಿಡಿಯೋಗೆ ಹಲವರು ಕಮೆಂಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ. ವಿಭಿನ್ನ ರೀತಿಯ ಈ ಪ್ರಯೋಗಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ.
ಒಟ್ಟಿನಲ್ಲಿ, ಈ ಮದುವೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇಂದು ತಂತ್ರಜ್ಞಾನ ಬಳಸಿ ಇಂಥ ಮದುವೆಗಳನ್ನು ಮಾಡುವುದು ಕಾಮನ್ ಆಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಅವು ಫೇಲ್ ಆಗಿ ಬಿಡುತ್ತವೆ. ಆದರೆ ಹೇಳಿಕೇಳಿ ಅದು ತಂತ್ರಜ್ಞಾನ. ಎಲ್ಲಾ ನಾವು ಅಂದುಕೊಂಡಂತೆಯೇ ಆಗಬೇಕಲ್ಲ! ಕೆಲವೊಮ್ಮೆ ಮಾಡಿದ ಉಪಾಯಗಳು ಉಲ್ಟಾ ಹೊಡೆಯುವುದು ಇದೆ. ಆದರೆ ಪ್ಲ್ಯಾನ್ ಉಲ್ಟಾ ಹೊಡೆದರೆ ಅಂಥ ವಿಡಿಯೋಗಳು ಇನ್ನಷ್ಟು ಹೆಚ್ಚು ಪ್ರಸಾರ ಆಗುವುದೂ ಇದೆ ಅನ್ನಿ. ತಮ್ಮ ಮದುವೆಯನ್ನು ವಿಶೇಷ ರೀತಿಯಲ್ಲಿ ಮಾಡಿ ಫೇಮಸ್ ಆಗಬೇಕು ಎಂದುಕೊಂಡು ಮಾಡಿದ ಉಪಾಯ ಟುಸ್ ಎಂದು ಅದು ತಮಾಷೆಯ ರೂಪ ಪಡೆದುಕೊಂಡರೆ, ಅಂಥ ವಿಡಿಯೋಗಳೇ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚೆಚ್ಚು ಶೇರ್ ಮಾಡಿಕೊಳ್ಳುತ್ತಾರೆ. ಅಂಥದ್ದೇ ಒಂದು ವಿಡಿಯೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಇದರಲ್ಲಿ ಮದುಮಗನೊಬ್ಬ ತನ್ನ ಕೊರಳಿಗೆ ಹಾರ ಹಾಕಲು ವಿಭಿನ್ನ ರೀತಿಯಲ್ಲಿ ಪ್ಲ್ಯಾನ್ ಮಾಡಿದ್ದ. ಆದರೆ ಠುಸ್ ಆಗಿ ಸಕತ್ ವೈರಲ್ ಆಗಿತ್ತು.
ವೈದ್ಯೆ ನಿರ್ಲಕ್ಷ್ಯ- ಡೆಲಿವರಿ ವೇಳೆ ಹೊಟ್ಟೆಯಲ್ಲಿಯೇ ಉಳಿದ ಕತ್ತರಿ! 17 ವರ್ಷಗಳ ಬಳಿಕ ನಡೆದದ್ದೇ ಪವಾಡ...
