ಸೆಕ್ಸ್‌ ವೇಳೆ ಗಂಡಸರು ಇಂಥಾ ಅಚಾತುರ್ಯ ಮಾಡಬೇಡಿ! ಜೀವನಕ್ಕೇ ಆಗಬಹುದು ಡೇಂಜರಸ್!

ಲೈಂಗಿಕತೆ ವೇಳೆ ಪುರುಷರು ಮಾಡೋ ಕೆಲವು ತಪ್ಪುಗಳು ಅವರ ಸೆಕ್ಸ್‌ ಲೈಫ್‌ ಮೇಲೇ ಪರಿಣಾಮ ಬೀರಬಹುದು.

Men should not be so careless during sex bni

ಲೈಂಗಿಕತೆ ಅನ್ನೋದು ನೀವು ಅಂದ್ಕೊಂಡಷ್ಟು ಸರಳ ವಿಷಯ ಅಲ್ಲ. ಸೆಕ್ಸ್‌ ವೇಳೆ ಮಾಡುವ ಸಣ್ಣಪುಟ್ಟ ಪ್ರಮಾದಗಳು ಲೈಂಗಿಕ ಬದುಕಿನ ಮೇಲೆ ದೊಡ್ಡ ಪರಿಣಾಮ ಉಂಟು ಮಾಡಬಹುದು. ಧನ್ಯಾ ಮತ್ತು ಸಮೀರ್ ಅವರದು ಮನೆಯವರು ನೋಡಿ ಆದ ಮದುವೆ. ಇತ್ತೀಚೆಗೆ ತಾನೇ ಒಂದು ಮಗುವಿನ ತಾಯಿ ಆಗಿರುವ ಧನ್ಯಾ ಗಂಡನ ಮನೆಗೆ ಹೋಗಲು ಸುತಾರಾಂ ರೆಡಿ ಇರಲಿಲ್ಲ. ಮನೆಯವರು ಒಳ್ಳೆಯವರು, ಗಂಡ ಒಳ್ಳೆಯವ. ಇವಳ್ಯಾಕೆ ಹೀಗ್ ಮಾಡ್ತಾಳೆ ಅನ್ನೋದು ಧನ್ಯಾ ಹೆತ್ತವರಿಗೂ ಸಮೀರ್ ಮನೆಯವರಿಗೂ ಅರ್ಥವೇ ಆಗುತ್ತಿರಲಿಲ್ಲ. ಕೊನೆಗೆ ಕೌನ್ಸಿಲಿಂಗ್ ವೇಳೆ ಧನ್ಯಾ ಬಾಯ್ಬಿಟ್ಟ ಸಂಗತಿ ಸೆಕ್ಸ್ ವೇಳೆ ಸಮೀರ್ ಮಾಡೋ ಕೆಲವು ಪ್ರಯೋಗಗಳು ತನಗೆ ಇರಿಟೇಟ್ ಮಾಡ್ತವೆ. ಅದು ದಿನವಿಡೀ ಕಾಡುತ್ತದೆ, ತನ್ನ ಬದುಕಿನ ನೆಮ್ಮದಿಯನ್ನೇ ಕಿತ್ತುಕೊಂಡಿದೆ. ಹೀಗಾಗಿ ತಾನು ಅವನ ಜೊತೆಗೆ ಇನ್ನು ಮುಂದೆ ಸಂಸಾರ ಮಾಡಲ್ಲ. ಓದು ಮುಂದುವರಿಸಿ ಸ್ವತಂತ್ರವಾಗಿ ಬದುಕ್ತೀನಿ ಅಂತ.

ಹಾಗೆ ನೋಡಿದರೆ ಗಂಡ ಹೆಂಡತಿ ನಡುವೆ ಲೈಂಗಿಕ ಕ್ರಿಯೆಯಲ್ಲಿ ಪರಸ್ಪರ ತೃಪ್ತಿ ಇದ್ದಾಗ ಮಾತ್ರ ಭಾವನಾತ್ಮಕವಾಗಿಯೂ ಹೊಂದಾಣಿಕೆ (Emotional Compatiblity) ಬರಲು ಸಾಧ್ಯ. ಸಾಮಾನ್ಯವಾಗಿ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಪುರುಷರು ಕೆಲ ತಪ್ಪುಗಳನ್ನು ಮಾಡುತ್ತಾರೆ. ಇದು ಮಹಿಳೆಯರ ನಿರಾಸೆಗೆ ಕಾರಣವಾಗುತ್ತದೆ. ದಾಂಪತ್ಯ ಜೀವನದಲ್ಲಿ ಮಿಲನ ಪ್ರಕ್ರಿಯೆಗೆ ಅದರದ್ದೇ ಆದ ಮಹತ್ವವಿದೆ. ಇದು ಇಬ್ಬರ ನಡುವಿನ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸುತ್ತೆ ಕೂಡ. ಆದರೆ ಅನೇಕರು ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ತಮ್ಮ ಸಂಗಾತಿಯ ಇಷ್ಟಗಳಿಗೆ ಬೆಲೆಯೇ ನೀಡುವುದಿಲ್ಲ. ಬಹುತೇಕ ಪುರುಷರು ಈ ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಸೆಕ್ಸ್ ಲೈಫ್‌ ಹಾಳಾಗುತ್ತೆ.

ನೇಪಾಳದಲ್ಲಿ ಸಲಿಂಗ ವಿವಾಹದ ಮೊದಲ ನೋಂದಣಿ, ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟ ಜೋಡಿ

ಸಾಮಾನ್ಯವಾಗಿ ಗಂಡಸರು ಸೆಕ್ಸ್ ಅನ್ನು ಕೇವಲ ದೈಹಿಕ ಕ್ರಿಯೆ (physical act) ಎಂಬಂತೆ ವರ್ತಿಸುತ್ತಾರೆ. ಆದರೆ ಹೆಣ್ಣು ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಪತಿಯು ತನ್ನೊಡನೆ ಭಾವನಾತ್ಮಕವಾಗಿಯೂ ಬೆರೆಯಬೇಕು ಎಂದು ಬಯಸುತ್ತಾಳೆ. ಆತ ಆಕೆಯ ಮೇಲೆ ಎರಗದೇ ಪ್ರೀತಿಯಿಂದ, ಒಪ್ಪಿಗೆಯಿಂದ ಇಬ್ಬರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕು. ಅದು ಇಬ್ಬರಿಗೂ ಲೈಂಗಿಕ ತೃಪ್ತಿ (sex satisfaction)  ನೀಡುತ್ತದೆ.

ಲೈಂಗಿಕ ಕ್ರಿಯೆ ಎನ್ನುವುದು ಇಬ್ಬರಿಗೂ ಸೇರಿದ್ದು. ಹೀಗಾಗಿ ಇಬ್ಬರ ಆದ್ಯತೆಗಳಿಗೂ ಇಲ್ಲಿ ಬೆಲೆ ಸಿಗಲೇಬೇಕು. ಸಂಗಾತಿಗಳಿಗೆ ಅವರದ್ದೇ ಆದ ಇಷ್ಟಾನಿಷ್ಟಗಳು ಇರುತ್ತವೆ. ಹೀಗಾಗಿ ಇಬ್ಬರು ಈ ಬಗ್ಗೆ ಮುಕ್ತವಾಗಿ ಚರ್ಚಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಮಹಿಳೆಯು ನಿಮ್ಮೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡ ಬಳಿಕವೂ ಆಕೆಯಲ್ಲಿ ಅತೃಪ್ತ ಭಾವ ಕಂಡುಬಂದಲ್ಲಿ ಆಕೆಯ ಬಗ್ಗೆ ನೀವು ಸಮಾಲೋಚನೆ ನಡೆಸಲೇಬೇಕು. ಸಾಮಾನ್ಯವಾಗಿ ಪುರುಷರು ಲೈಂಗಿಕ ಕ್ರಿಯೆಯನ್ನು ಆರಂಭಿಸಿದ ಐದಾರು ನಿಮಿಷಗಳಲ್ಲೇ ವೀರ್ಯ ಸ್ಖಲನ ಮಾಡುತ್ತಾರೆ. ಆದರೆ ಮಹಿಳೆಯರು ಹೆಚ್ಚಿನ ಸಮಯದ ಮಿಲನ ಕ್ರಿಯೆಯನ್ನು ಆನಂದಿಸುತ್ತಾರೆ. ಮಹಿಳೆಯರು ಹದಿನೈದು ನಿಮಿಷಗಳ ಮಿಲನ ಕ್ರಿಯೆಯನ್ನು ಹೆಚ್ಚು ಆನಂದಿಸುತ್ತಾರಂತೆ. ಆದರೆ ಪುರುಷರು ಮ್ಯಾರಥಾನ್​ ರೇಸ್​ಗೆ ಇಳಿದವರಂತೆ ವರ್ತಿಸುತ್ತಾರೆ. ಹೀಗಾಗಿ ಪುರುಷರು ವೀರ್ಯ ಸ್ಖಲನಕ್ಕೂ ಮುನ್ನ ಹೆಚ್ಚು ಸಮಯ ರೊಮ್ಯಾನ್ಸ್​ ಮಾಡಿದಲ್ಲಿ ನಿಮ್ಮ ಸಂಗಾತಿಯು ಅದನ್ನು ಹೆಚ್ಚು ಇಷ್ಟಪಡುತ್ತಾರೆ. ಪುರುಷರು ವೀರ್ಯ ಸ್ಖಲನ ಮಾಡಿದ ನಂತರವೂ ಸಂಗಾತಿಯು ನಿಮ್ಮಿಂದ ಹೆಚ್ಚಿನದನ್ನು ಬಯಸಬಹುದು. ನೀವು ವೀರ್ಯ ಸ್ಖಲನವಾದ ಕೂಡಲೇ ಎದ್ದು ಹೋದರೆ ಇದು ಖಂಡಿತವಾಗಿಯೂ ಮಹಿಳೆಯ ಅತೃಪ್ತಿಗೆ ದಾರಿ ಮಾಡುತ್ತದೆ. ಲೈಂಗಿಕ ಕ್ರಿಯೆಯಲ್ಲಿ ನೀವು ಸಂಗಾತಿಯ ಮೇಲೆ ಒಲವು ತೋರದೇ ಇದ್ದಲ್ಲಿ ಖಂಡಿತವಾಗಿಯೂ ಆಕೆ ನಿರಾಶೆಗೊಳ್ಳುತ್ತಾಳೆ.

ಲೈಂಗಿಕತೆ (sex) ವೇಳೆ ವಿಭಿನ್ನ ಭಂಗಿಗಳನ್ನು ಪ್ರಯತ್ನಿಸುವುದು ಕೂಡ ಮುಖ್ಯವಾಗಿದೆ. ಇದು ನಿಮ್ಮ ಮಿಲನವನ್ನು ಇನ್ನಷ್ಟು ರೋಮಾಂಚನಕಾರಿಯಾಗಿಸಬಹುದು. ಇದು ನಿಮ್ಮ ರಿಫ್ರೆಶ್​ (refresh)  ಆಗಿ ಇರಿಸಲಿದೆ. ಇಲ್ಲವಾದಲ್ಲಿ ಸಂಗಾತಿಯು ದೈಹಿಕವಾಗಿ ಹಾಗೂ ಭಾವನಾತ್ಮಕವಾಗಿ ನಿಮ್ಮ ಮೇಲೆ ಆಸಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

ಹೆಣ್ಣನ್ನು ನಿಯಂತ್ರಿಸುವುದೇ ಹಾರ್ಮೋನ್, ಗಂಡು ಅಂತ ಹೇಳ್ತಾರೆ ಅಷ್ಟೇ!

Latest Videos
Follow Us:
Download App:
  • android
  • ios