Real Story : 7 ವರ್ಷ ಚಿಕ್ಕವನ ಜೊತೆ ಸಂಬಂಧ ಬೆಳೆಸಿ ಸಂಕಷ್ಟದಲ್ಲಿ ವಿವಾಹಿತೆ
ಪ್ರೀತಿ ಹಾಗೂ ಮದುವೆ ಎರಡೂ ಬೇರೆ. ಪ್ರೀತಿಸಿ ಮದುವೆಯಾದ್ಮೇಲೆ ಸಂಗಾತಿ ಮೊದಲಿನಂತೆ ಇರಬೇಕೆಂದು ಬಯಸುವುದು ತಪ್ಪು. ಹಾಗೆ ಸಂಗಾತಿ ಪ್ರೀತಿ ನೀಡ್ತಿಲ್ಲ ಎಂಬ ಕಾರಣಕ್ಕೆ ದಾರಿ ತಪ್ಪಿದ್ರೆ ಅದ್ರಿಂದ ಸಿಗುವ ಸುಖ ಅತ್ಯಲ್ಪ ಎಂಬುದು ನೆನಪಿರಬೇಕು.
ಒಂದ್ಕಡೆ ಪ್ರೀತಿ ಸಿಕ್ಕಿಲ್ಲ ಎಂದಾಗ ಇನ್ಮೊಂದ್ಕಡೆ ಪ್ರೀತಿ ಹುಡುಕುವುದು ಸಾಮಾನ್ಯ ಸಂಗತಿ. ಆದ್ರೆ ಗಡಿ ಮೀರಿದಾಗ ಸಮಸ್ಯೆ ಶುರುವಾಗುತ್ತದೆ. ವಿವಾಹದಲ್ಲಿ ಏನೆ ಸಮಸ್ಯೆ ಬಂದ್ರೂ ಅದನ್ನು ಬಗೆಹರಿಸುವ ಪ್ರಯತ್ನ ನಡೆಸಬೇಕು. ಸಮಸ್ಯೆಯಿಂದ ಮುಕ್ತಿ ಪಡೆಯಲು ಅಕ್ರಮ ಮಾರ್ಗ ಹಿಡಿದ್ರೆ ಸಮಸ್ಯೆಯಿಂದ ಮುಕ್ತಿ ಸಿಗುವ ಬದಲು ಜೇಡರ ಬಲೆಯಲ್ಲಿ ಬಲಿಯಾಗಬೇಕಾಗುತ್ತದೆ. ಇದಕ್ಕೆ ಈ ಮಹಿಳೆ ಉತ್ತಮ ನಿದರ್ಶನ ಎನ್ನಬಹುದು. ಪತಿಯಿಂದ ಪ್ರೀತಿ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ತನಗಿಂತ 7 ವರ್ಷ ಚಿಕ್ಕವಳಾದ ಹುಡುಗನ ಜೊತೆ ಸಂಬಂಧ ಬೆಳೆಸಿದ್ದಾಳೆ. ಆ ಸಂಬಂಧ ಕೂಡ ಆರಂಭದಲ್ಲಿ ಚೆನ್ನಾಗಿಯೇ ಇತ್ತು. ಆದ್ರೀಗ ಆತನ ಧಮಕಿಗೆ ಬೇಸತ್ತಿದ್ದಾಳೆ. ಮುಂದೇನು ಮಾಡ್ಬೇಕು ಎಂಬುದು ಗೊತ್ತಾಗ್ತಿಲ್ಲ. ಆ ಮಹಿಳೆ ಸಮಸ್ಯೆ ಏನು ಎಂಬುದನ್ನು ನಾವಿಂದು ಹೇಳ್ತೇವೆ.
ಆಕೆಗೆ ಈಗ 29 ವರ್ಷ. ಆರು ವರ್ಷದ ಮಗಳಿ (Daughter) ದ್ದಾಳೆ. ಪ್ರೀತಿ (Love) ಸಿ ಮದುವೆ (Marriage) ಯಾಗಿದ್ದಳಂತೆ. ಮದುವೆಯಾದ ಮೊದಲ ಎರಡು ವರ್ಷ ಪತಿ ತುಂಬಾ ಪ್ರೀತಿ ಮಾಡ್ತಿದ್ದನಂತೆ. ಆದ್ರೀಗ ಸಂಸಾರ ಹಿಂಸೆಯಾಗಿದೆ ಎನ್ನುತ್ತಾಳೆ ಆಕೆ. ಪತಿ ಸಣ್ಣ ಸಣ್ಣ ವಿಷ್ಯಕ್ಕೂ ಕೋಪ ಮಾಡಿಕೊಳ್ತಾನಂತೆ. ಆತನಲ್ಲಿ ಪ್ರೀತಿ ಉಳಿದಿಲ್ಲ ಎನ್ನುತ್ತಾಳೆ ಅವಳು. ಪತಿ 12 ವರ್ಷ ದೊಡ್ಡವನು. ಅವನು ಸದಾ ನನ್ನ ಮೇಲೆ ಕಿರುಚುತ್ತಿರುತ್ತಾನೆ. ಇದ್ರಿಂದಾಗಿ ಅವನ ಮೇಲೆ ನಾನು ಆಸಕ್ತಿ ಕಳೆದುಕೊಂಡಿದ್ದೇನೆ ಎನ್ನುತ್ತಾಳೆ ಆಕೆ.
ಇದೇ ಸಂದರ್ಭದಲ್ಲಿ ಪಕ್ಕದ ಮನೆಯ ಹುಡುಗನ ಮೇಲೆ ಕಣ್ಣು ಬಿದ್ದಿದೆ. ಈಕೆಗಿಂತ 7 ವರ್ಷ ಚಿಕ್ಕವನಿರುವ ಆತ ಆರಂಭದಲ್ಲಿ ಸ್ನೇಹಿತನಾಗಿದ್ದನಂತೆ. ನಂತ್ರ ಇಬ್ಬರ ಮಧ್ಯೆ ಪ್ರೀತಿ ಚಿಗುರಿತ್ತಂತೆ. ಅತಿ ಹೆಚ್ಚು ಕಾಳಜಿ, ಪ್ರೀತಿ ತೋರಿಸ್ತಿದ್ದ ಕಾರಣ ಆತನ ಮೇಲೆ ಆಸಕ್ತಿ ಹೆಚ್ಚಾಗಿತ್ತು ಎನ್ನುತ್ತಾಳೆ ಮಹಿಳೆ. ಆತನ ಜೊತೆ ಇರುವಾಗೆಲ್ಲ ಆಕೆ ಖುಷಿಯಾಗಿರುತ್ತಿದ್ದಳಂತೆ.
ಇದನ್ನೂ ಓದಿ: Real Story : ಮಾಜಿ ಜೊತೆ ಸೆಕ್ಸ್ ವಿಷ್ಯ ಕೇಳಿ ನಿದ್ರೆ ಬರ್ತಿಲ್ಲ
ಆರಂಭದಲ್ಲಿ ಎಲ್ಲವೂ ಸರಿಯಿತ್ತಂತೆ. ಆತನ ಕೆಟ್ಟ ಸಮಯದಲ್ಲಿ ಈಕೆ ಸಾಕಷ್ಟು ಸಹಾಯ ಮಾಡಿದ್ದಳಂತೆ. ಆತ ಕೂಡ ಈಕೆಗೆ ನೆರವಾಗಿದ್ದನಂತೆ. ಆದ್ರೆ ಒಂದು ದಿನ ಹಣ ಕೇಳಿದ್ದನಂತೆ. ಆರಂಭದಲ್ಲಿ ಕೇಳಿದ್ದು ಬರೀ ಸಾವಿರ ರೂಪಾಯಿ. ಆದ್ರೆ ಬರ್ತಾ ಬರ್ತಾ ಹಣ ಕೇಳುವುದು ಹೆಚ್ಚಾಯ್ತಂತೆ. ಹಣ ಬೇಕಾದ ಸಂದರ್ಭದಲ್ಲಿ ಹೆಚ್ಚು ಪ್ರೀತಿ ತೋರಿಸುತ್ತಿದ್ದನಂತೆ. ಉಳಿದ ಸಮಯದಲ್ಲಿ ದೂರ ಇರ್ತಿದ್ದನಂತೆ. ಆತನಿಂದ ನಾನೂ ದೂರವಿರಲಿ ಬಯಸಿದ್ದೆ. ಆದ್ರೆ ಈಗ ಧಮಕಿ ಹಾಕ್ತಿದ್ದಾನೆ ಎನ್ನುತ್ತಾಳೆ ಮಹಿಳೆ. ವಿಷ್ಯವನ್ನು ಪತಿಗೆ ಹೇಳ್ತೇನೆ ಎನ್ನುತ್ತಿರುವ ಹುಡುಗನ ಬಳಿ ಈಕೆಗ ಖಾಸಗಿ ಫೋಟೋಗಳಿದೆಯಂತೆ. ನಿನ್ನನ್ನು ಪ್ರೀತಿಸ್ತೇನೆ ಎನ್ನುವ ಹುಡುಗ ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದಿದ್ದಾನಂತೆ. ಆತನಿಂದ ತಪ್ಪಿಸಿಕೊಳ್ಳವುದು ಹೇಗೆ ಎಂಬುದು ಗೊತ್ತಾಗ್ತಿಲ್ಲ ಎನ್ನುತ್ತಿದ್ದಾಳೆ ಮಹಿಳೆ.
ಇದನ್ನೂ ಓದಿ: ಲೈಂಗಿಕ ಸಂಪರ್ಕದಿಂದ ಗೌಪ್ಯ ರೋಗಗಳೂ ಹರಡುತ್ತೆ,ಹುಷಾರ್!
ತಜ್ಞರ ಸಲಹೆ : ತಪ್ಪಿನ ಅರಿವಾಗಿದ್ದರೆ ಅದನ್ನು ಒಪ್ಪಿಕೊಂಡು ಮುನ್ನಡೆಯುವುದು ದೊಡ್ಡ ಕೆಲಸವಲ್ಲ. ಸಮಯ ಸಿಕ್ಕಾಗ ನಿಮ್ಮ ಪತಿ ಮುಂದೆ ವಿಷ್ಯ ಹೇಳುವುದು ಉತ್ತಮ ಎನ್ನುತ್ತಾರೆ ತಜ್ಞರು. ಪತಿಗೆ ವಿಷ್ಯ ತಿಳಿದ್ರೆ ಬ್ಲಾಕ್ಮೇಲ್ ಹುಡುಗನ ಬಾಯಿ ಮುಚ್ಚಿಸಬಹುದು ಜೊತೆಗೆ ಪತಿ ಮುಂದೆ ಎಲ್ಲ ವಿಷ್ಯ ಗೊತ್ತಾದ್ರೆ ಎಂಬ ಭಯ ಇರುವುದಿಲ್ಲ. ಪತಿ ಈ ವಿಷ್ಯ ಕೇಳಿ ನಿಮ್ಮ ಮೇಲೆ ಕೋಪಗೊಳ್ಳಬಹುದು. ಆದ್ರೆ ಮಾಡಿದ್ದು ತಪ್ಪು ಎಂಬ ಅರಿವು ನಿಮಗಾಗಿದೆ ಎಂಬುದನ್ನು ನಿಮ್ಮ ಪತಿಗೆ ಹೇಳಿ. ಬೇರೆ ಅನವಶ್ಯಕ ಚಿಂತೆ, ಕೆಲಸದಲ್ಲಿ ಸಮಯ ಕಳೆಯುವ ಬದಲು ಪತಿ ಜೊತೆ ಹೆಚ್ಚಿನ ಸಮಯ ಕಳೆಯಿರಿ. ಅವರನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ನಡೆಸಿ. ಹಾಗೆಯೇ ನಿಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿ ಎನ್ನುತ್ತಾರೆ ತಜ್ಞರು. ತಾಳ್ಮೆಯಿಂದ ಕೆಲಸ ಮಾಡ್ಬೇಕು. ಹಾಗೆ ನಿಮ್ಮ ಪತಿ ಜೊತೆ ಕೆಲಸ ಮಾಡಿದ್ರೆ ಬ್ಲಾಕ್ಮೇಲ್ ಮಾಡ್ತಿರುವ ಹುಡುಗ ನಿಮ್ಮ ಸುದ್ದಿಗೆ ಬರುವುದಿಲ್ಲ.