Real Story : ಮಾಜಿ ಜೊತೆ ಸೆಕ್ಸ್ ವಿಷ್ಯ ಕೇಳಿ ನಿದ್ರೆ ಬರ್ತಿಲ್ಲ
ನಾನೇನೇ ಆಗಿರಲಿ, ನನ್ನ ಸಂಗಾತಿ ಕನ್ಯೆಯಾಗಿರಬೇಕೆಂದು ಕೆಲವರು ನಿರೀಕ್ಷೆ ಮಾಡ್ತಾರೆ. ಪ್ರೇಯಸಿಗೆ ಮಾಜಿಗಳಿದ್ರು ಎಂಬ ಸಂಗತಿಯೇ ಅವರ ಕೋಪಕ್ಕೆ ಕಾರಣವಾಗುತ್ತದೆ. ಇನ್ನು ಸಂಗಾತಿ ಬೇರೊಬ್ಬನ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ಲು ಎಂಬ ವಿಷ್ಯ ಗೊತ್ತಾದ್ರೆ ?
ಸಂಗಾತಿ ಮೇಲೆ ವಿಶೇಷ ಮೋಹ ಪ್ರತಿಯೊಬ್ಬರಿಗೂ ಇರುತ್ತದೆ. ಪ್ರೀತಿಸುವ ವ್ಯಕ್ತಿ ಸದಾ ನನ್ನವನಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಇದ್ರಲ್ಲಿ ತಪ್ಪೇನಿಲ್ಲ. ಆದ್ರೆ ವಾಸ್ತವವನ್ನು ಒಪ್ಪಿಕೊಂಡು ಸಂಗಾತಿ ಜೊತೆ ಜೀವನ ನಡೆಸುವುದು ಬಹಳ ಮುಖ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಒಂದಕ್ಕಿಂತ ಹೆಚ್ಚು ಸಂಗಾತಿ ಹೊಂದುವುದು ಮಾಮೂಲಿ ಎನ್ನುವಂತಾಗಿದೆ. ಮಾಜಿ ಪ್ರೇಮಿಗಳ ವಿಷ್ಯವನ್ನು ಮುಚ್ಚಿಟ್ಟು ಅನೇಕರು ಮದುವೆಯಾಗ್ತಾರೆ ಇಲ್ಲವೆ ಇನ್ನೊಬ್ಬರ ಸಂಬಂಧ ಬೆಳೆಸ್ತಾರೆ. ಆದ್ರೆ ಮತ್ತೆ ಕೆಲವರು ಮಾಜಿಗಳ ವಿಷ್ಯವನ್ನು ಸಂಗಾತಿ ಮುಂದೆ ಹೇಳಿಕೊಳ್ತಾರೆ. ಇದೇ ಸತ್ಯ ಅವರ ಸಂಬಂಧಕ್ಕೆ ಮುಳುವಾಗುತ್ತದೆ. ಅವಿವಾಹಿತ ವ್ಯಕ್ತಿಯೊಬ್ಬನಿಗೆ ತನ್ನ ಸಂಗಾತಿಯ ಮಾಜಿ ವಿಷ್ಯ ಗೊತ್ತಾಗಿದೆ. ಇದು ಆತನ ಬಾಳಲ್ಲಿ ದೊಡ್ಡ ಬಿರುಗಾಳಿಯಾಗಿ ಬೀಸ್ತಿದೆ. ಇಷ್ಟಕ್ಕೂ ಆತನ ಕಥೆ ಏನು ಎಂಬುದನ್ನು ನಾವಿಂದು ಹೇಳ್ತೆವೆ.
ಆತ ಅವಿವಾಹಿತ (Unmarried) ವ್ಯಕ್ತಿ. ಕಳೆದ ಎರಡು ವರ್ಷಗಳಿಂದ ಹುಡುಗಿಯೊಬ್ಬಳನ್ನು ಪ್ರೀತಿ (Love) ಸುತ್ತಿದ್ದಾನೆ. ಆಕೆಯನ್ನು ಮದುವೆ (Marriage) ಯಾಗುವ ನಿರ್ಧಾರಕ್ಕೆ ಬಂದಿದ್ದಾನೆ. ಆದ್ರೆ ಕೆಲ ದಿನಗಳ ಹಿಂದೆ ಆತನ ಪ್ರೇಮಿ ಹೇಳಿದ ವಿಷ್ಯ ಸಂಬಂಧ (Relationship) ಹಾಳು ಮಾಡ್ತಿದೆ. ಆತನ ಸಂಗಾತಿಗೆ ಮೊದಲೇ ಒಬ್ಬ ಗೆಳೆಯನಿದ್ದನಂತೆ. ಆತನ ಜೊತೆ ಆಕೆ ಅನೇಕ ಬಾರಿ ಶಾರೀರಿಕ ಸಂಬಂಧ (Physical Relationship) ಬೆಳೆಸಿದ್ದಳಂತೆ. ಈ ಸತ್ಯವನ್ನು ಆಕೆ ಪ್ರೇಮಿ ಮುಂದೆ ಹೇಳಿದ್ದಾಳೆ. ಆಕೆ ಮಾಜಿ ಬಗ್ಗೆ ಹೇಳಿದ ನಂತ್ರ ಈತ ನಿದ್ದೆ ಬಿಟ್ಟಿದ್ದಾನೆ. ಸದಾ ಸಂಗಾತಿ ಹಾಗೂ ಆಕೆಯ ಮಾಜಿ ಬಗ್ಗೆ ಯೋಚನೆ ಮಾಡುವಂತಾಗಿದೆ. ಹಾಗಂತ ಈತ ಈಗ್ಲೂ ವರ್ಜಿನ್ (Virgin) ಎಂದಲ್ಲ. ಆತ ಕೂಡ ಅನೇಕ ಹುಡುಗಿಯರ ಜೊತೆ ಸಂಬಂಧ ಬೆಳೆಸಿದ್ದಾನಂತೆ. ನಾಲ್ಕೈದು ಹುಡುಗಿಯರ ಜೊತೆ ಶಾರೀರಿಕ ಸಂಬಂಧ ಕೂಡ ಬೆಳೆಸಿದ್ದಾನಂತೆ. ಆದ್ರೆ ಆ ವಿಷ್ಯವನ್ನು ಎಂದೂ ಸಂಗಾತಿಗೆ ಹೇಳಿಲ್ಲವಂತೆ. ಆಕೆಯನ್ನು ತುಂಬಾ ಪ್ರೀತಿಸ್ತೇನೆ. ಭಾವನಾತ್ಮಕವಾಗಿ ಆಕೆ ಜೊತೆ ಸಂಬಂಧ ಬೆಳೆಸಿದ್ದೇನೆ. ನನ್ನ ಸತ್ಯ ತಿಳಿದು ಅವಳು ನನ್ನನ್ನು ತೊರೆದ್ರೆ ಎಂಬ ಭಯ ಕೂಡ ನನಗಿದೆ ಎನ್ನುತ್ತಾರೆ ಆತ.
ತಜ್ಞರ ಸಲಹೆ : ಮುಂದಿನ ಜೀವನದ ಬಗ್ಗೆ ಆಲೋಚನೆ ಮಾಡೋದು ಮುಖ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ. ಹಿಂದೆ ಏನಾಯ್ತು ಎಂಬುದು ಮುಖ್ಯವಲ್ಲ. ಹಿಂದೆ ನಡೆದಿದ್ದನ್ನು ಬದಲಿಸಲು ಸಾಧ್ಯವಿಲ್ಲ. ಸಂಗಾತಿ ತನ್ನ ಮಾಜಿ ವಿಷ್ಯ ನಿಮ್ಮಲ್ಲಿ ಹೇಳಿಕೊಂಡಾಗ ನಿಮಗೆ ನೋವಾಗಿರಬಹುದು. ಆದ್ರೆ ಆಕೆ ಆತನ ಜೊತೆ ಸಂಬಂಧದಲ್ಲಿರುವಾಗ ನಿಮ್ಮ ಪರಿಚಯ ಆಕೆಗಿರಲಿಲ್ಲ. ಅದು ಹಳೆ ವಿಷ್ಯ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ: ದಿನಕ್ಕೆ ಆರು ಸೆಕೆಂಡು ಸಂಗಾತಿಗೆ ಮುತ್ತು ಕೊಟ್ರೆ ಮ್ಯಾರೀಡ್ ಲೈಫ್ ಸೂಪರ್
ಆಕೆಯೇ ಎಲ್ಲ ಸಂಗತಿ ನಿಮ್ಮ ಮುಂದೆ ಹೇಳಿದ್ದಾಳೆ ಎಂದಾದ್ರೆ ಆಕೆ ನಿಮ್ಮನ್ನು ಎಷ್ಟು ಶುದ್ಧ ಮನಸ್ಸಿನಿಂದ ಪ್ರೀತಿಸ್ತಾಳೆ ಎಂಬುದನ್ನು ಅರಿಯಿರಿ ಎನ್ನುತ್ತಾರೆ ತಜ್ಞರು. ನಿಮ್ಮನ್ನು ಪ್ರಾಮಾಣಿಕವಾಗಿ ಪ್ರೀತಿ ಮಾಡದೆ ಹೋಗಿದ್ರೆ ಆಕೆ ನಿಮ್ಮ ಬಳಿ ಸತ್ಯ ಹೇಳ್ತಿರಲಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎನ್ನುತ್ತಾರೆ ತಜ್ಞರು. ಅಷ್ಟೇ ಅಲ್ಲ ಹಿಂದೆ ನಡೆದ ಸಂಗತಿ ಮೆಲಕು ಹಾಕುವ ಬದಲು ಮುಂದಿನದನ್ನು ಆಲೋಚನೆ ಮಾಡಿ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ: ಪತಿ- ಪತ್ನಿ ಸರಸ ಹೆಚ್ಚಾಗೋಕೆ ಬೆಡ್‌ರೂಮಿನಲ್ಲಿ ಈ ಕಲರ್ ಇರಲಿ!
ಸಂಗಾತಿ ಜೊತೆ ಮದುವೆಯಾಗು ಪ್ಲಾನ್ ಮಾಡ್ತಿರೋದು ಸಂತೋಷದ ವಿಷ್ಯ. ಆದಷ್ಟು ಬೇಗ ಎಲ್ಲವನ್ನೂ ಮರೆತು ಮದುವೆಯಾಗಿ ಎನ್ನುತ್ತಾರೆ ತಜ್ಞರು. ಹಳೆ ವಿಷ್ಯಗಳು ಮನಸ್ಸು ಹಾಳು ಮಾಡುತ್ತದೆಯೇ ವಿನಃ ಮತ್ತೇನನ್ನೂ ಮಾಡಲು ಸಾಧ್ಯವಿಲ್ಲ. ಒಂದ್ವೇಳೆ ಭಾವನೆಗಳನ್ನು ಹತ್ತಿಕ್ಕಲು ಸಾಧ್ಯವಾಗ್ತಿಲ್ಲ ಎನ್ನುವದಾದ್ರೆ ನೀವು ಮಾನಸಿಕ ತಜ್ಞರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆಯಿರಿ ಎಂಬುದು ತಜ್ಞರ ಸಲಹೆಯಾಗಿದೆ.