ಅವನೂ ಬೇಕು, ಅವಳೂ ಬೇಕು ! ಗಂಡ-ಹೆಂಡತಿ, ಅವಳು ಮೂವರದು ಅನ್ಯೋನ್ಯ ಸಂಸಾರ..!
ಮದುವೆ (Marriage)ಯ ನಂತ್ರ ಪತಿ ಮತ್ತು ಪತ್ನಿ ಇಬ್ಬರೂ ತಮ್ಮ ಸಂಬಂಧ (Relationship)ದಲ್ಲಿ ಇನ್ನೊಬ್ಬರನ್ನು ಸೇರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಜನರು ಅವರನ್ನು ಭಿನ್ನವಾಗಿ ನೋಡ್ತಿದ್ದಾರೆ. ಮೂವರೂ ಒಬ್ಬರನ್ನೊಬ್ಬರು ಅಪಾರವಾಗಿ ಪ್ರೀತಿ (Love)ಸುತ್ತಿದ್ದು, ಅವರ ಕಥೆ ಇಲ್ಲಿದೆ.
ಪತಿ (Husband) – ಪತ್ನಿ (Wife) ಮಧ್ಯೆ ಬರುವ ಮತ್ತೊಬ್ಬರು ಎಷ್ಟೋ ಮನೆ (Home) ಗಳನ್ನು ಹಾಳು ಮಾಡಿದ್ದಾರೆ. ಆ ಮತ್ತೊಬ್ಬರ ಕಾರಣಕ್ಕೆ ದಾಂಪತ್ಯ (Marriage) ಮುರಿದು ಬಿದ್ದಿದೆ. ಕೆಲವೇ ಕೆಲವು ವಿಚಿತ್ರ ಸಂಬಂಧಗಳನ್ನು ನಾವು ನೋಡ್ಬಹುದು. ಪತಿ ಇನ್ನೊಬ್ಬರ ಜೊತೆ ಸಂಬಂಧ ಹೊಂದಿದ್ದರೆ ಅವರನ್ನು ಸ್ವೀಕರಿಸಿ ಮನೆ ತುಂಬಿಸಿಕೊಂಡ ಪತ್ನಿಯರಿದ್ದಾರೆ. ಪತಿಯನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವುದು ಹೇಳಿದಷ್ಟು ಸುಲಭವಲ್ಲ. ಪತ್ನಿಯಾದವಳು ಏನನ್ನು ಬೇಕಾದ್ರೂ ಹಂಚಿಕೊಳ್ಳಬಲ್ಲಳು. ಆದ್ರೆ ಪತಿಯನ್ನಲ್ಲ ಎಂಬ ಮಾತಿದೆ.
ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಬದಲಾಗ್ತಿವೆ. ಹೊಸ –ಹೊಸ ಸಂಬಂಧಗಳು ಹುಟ್ಟಿಕೊಳ್ತಿವೆ. ಗಂಡ – ಹೆಂಡತಿ ಮಧ್ಯೆ ಪ್ರೀತಿ ನಾಶಕ್ಕೆ ಕಾರಣವಾಗ್ತಿದ್ದ ಇನ್ನೊಬ್ಬರ ಸ್ಥಾನ ಈಗ ಬದಲಾಗ್ತಿದೆ. ಇನ್ನೊಬ್ಬರಿಂದಾಗಿ ದಂಪತಿ ಮಧ್ಯೆ ಪ್ರೀತಿ ಮತ್ತಷ್ಟು ಗಟ್ಟಿಗೊಂಡಿದ್ದಲ್ಲದೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಅವಕಾಶ ಸಿಕ್ಕಿದೆ ಎಂಬ ಘಟನೆಗಳು ನಡೆಯುತ್ತಿವೆ. ಇದಕ್ಕೆ ಇಂಗ್ಲೆಂಡ್ ದಂಪತಿ ನಿದರ್ಶನ. ಇಂಗ್ಲೆಂಡ್ ದಂಪತಿ ಈಗ ಮೂವರಾಗ್ತಿದ್ದಾರೆ. ಮಹಿಳೆಯೊಬ್ಬಳನ್ನು ಮದುವೆಯಾಗುವ ನಿರ್ಧಾರಕ್ಕೆ ಪತಿ –ಪತ್ನಿ ಬಂದಿದ್ದಾರೆ. ಈ ವಿಷ್ಯ ಈಗ ಚರ್ಚೆಯಾಗ್ತಿದೆ.
ಮಕ್ಕಳು ಯಾವಾಗ್ಲೂ ಇಂಟರ್‌ನೆಟ್ ಯೂಸ್ ಮಾಡ್ತಾರಾ ? ಹಾಗಿದ್ರೆ ಈ ವಿಚಾರ ನಿಮ್ಗೆ ತಿಳಿದಿರ್ಲಿ
ಅವನ ಹೆಂಡತಿ ಸಲಿಂಗಕಾಮಿ : ಬಹುತೇಕ ಸಂದರ್ಭದಲ್ಲಿ ಪತಿಯ ಎರಡನೇ ಸಂಬಂಧವನ್ನು ಪತ್ನಿ ಒಪ್ಪಿಕೊಂಡಿದ್ದನ್ನು ನಾವು ನೋಡಿರ್ತೇವೆ. ಆದ್ರೆ ಇಲ್ಲಿ ಸ್ವಲ್ಪ ಬದಲಾವಣೆಯಿದೆ. ಪತ್ನಿಯ ಸಂಬಂಧಕ್ಕೆ ಪತಿ ಒಪ್ಪಿಗೆ ನೀಡಿದ್ದಾನೆ. ಈಸ್ಟ್ ಸಸೆಕ್ಸ್ ನ 25 ವರ್ಷದ ಟಾಮ್ ಮತ್ತು 24 ವರ್ಷದ ಲೆಸ್ಲಿ ಹಿಲ್ಯಾರ್ಡ್ 2017ರಲ್ಲಿ ಮದುವೆಯಾದ್ರು. ಆ ವೇಳೆ ಪತ್ನಿ ಸಲಿಂಗಕಾಮಿ ಎಂಬುದು ಟಾಮ್ ಗೆ ಗೊತ್ತಾಯ್ತು. ಅಂದರೆ ಪತ್ನಿ ಲೆಸ್ಲಿಯ ಪುರುಷ ಮತ್ತು ಮಹಿಳೆ ಇಬ್ಬರನ್ನು ಇಷ್ಟಪಡ್ತಾರೆ ಎಂಬುದು ಗೊತ್ತಾಯ್ತು.
ಆದ್ರೂ ಇವರ ಸಂಬಂಧಕ್ಕೆ ಯಾವುದೇ ತೊಂದೆಯಾಗ್ಲಿಲ್ಲ. ಇಬ್ಬರ ಮಧ್ಯೆ ಪ್ರೀತಿ,ಗೌರವವಿತ್ತು. ಸಲಿಂಗಕಾಮಿಯಾಗಿದ್ದ ಪತ್ನಿ ಲೆಸ್ಲಿ, ನಮ್ಮಿಬ್ಬರ ಮಧ್ಯೆ ಮೂರನೇ ವ್ಯಕ್ತಿ ಕೂಡ ಬರಬಹುದು ಎಂದಿದ್ದಳಂತೆ. ಈ ಬಗ್ಗೆ ಇಬ್ಬರ ಮಧ್ಯೆ ಚರ್ಚೆಯೂ ನಡೆದಿತ್ತಂತೆ. ಇದಕ್ಕೆ ಟಾಮ್ ಒಪ್ಪಿಗೆ ನೀಡಿದ್ದ.
ಲೆಸ್ಲಿ LGBT ಡೇಟಿಂಗ್ ಅಪ್ಲಿಕೇಶನ್ ಬಳಸ್ತಾಳೆ. ಅಲ್ಲಿ ಮಹಿಳೆಯೊಬ್ಬಳ ಭೇಟಿಯಾದೆ. ಈ ಮಹಿಳೆಯ ಹೆಸರು ಎಮ್ಮಾ ಕೂಂಬರ್. ಇಬ್ಬರೂ ಭೇಟಿಯಾದಾಗ ಅವರ ನಡುವೆ ಸಾಕಷ್ಟು ಮಾತುಕತೆ ನಡೆದಿತ್ತು. ಇಬ್ಬರೂ ಪರಸ್ಪರ ಇಷ್ಟಪಡಲು ಶುರು ಮಾಡಿದ್ದರಂತೆ. ಆಕೆ ಜೊತೆ ಲೆಸ್ಲಿ ಖುಷಿಯಾಗಿ ಮಾತನಾಡ್ತಿದ್ದಳಂತೆ. ಒಂದು ತಿಂಗಳ ನಂತರ, ಲೆಸ್ಲಿ ಎಮ್ಮಾಳನ್ನು ತನ್ನ ಪತಿ ಟಾಮ್‌ಗೆ ಪರಿಚಯಿಸಿದ್ದಳಂತೆ. ಎಮ್ಮಾ ಸ್ವಭಾವ ಟಾಮ್ ಗೆ ಕೂಡ ಇಷ್ಟವಾಗಿತ್ತಂತೆ. ಟಾಮ್ ಈ ಸಂಬಂಧಕ್ಕೆ ಓಕೆ ಎಂದಿದ್ದನಂತೆ.
ಹುಡುಗಿ ಸಿಗ್ತಿಲ್ಲ ಎಂದು ಖಿನ್ನತೆಗೊಳಗಾದ ವ್ಯಕ್ತಿ
ಮದುವೆ ನಿರ್ಧಾರ ಕೈಗೊಂಡ ಮೂವರು : ಪರಸ್ಪರ ಪ್ರೀತಿ ಶುರುವಾಗ್ತಿದ್ದಂತೆ ಮೂವರು ಕುಳಿತು ನಿರ್ಧಾರಕ್ಕೆ ಬಂದಿದ್ದಾರೆ. ಮದುವೆಯಾಗುವ ತೀರ್ಮಾನ ಕೈಗೊಂಡಿದ್ದಾರೆ. ಕೆಲವೇ ತಿಂಗಳಲ್ಲಿ ಇಬ್ಬರು ಮದುವೆಯಾಗಲಿದ್ದಾರಂತೆ. ಮೂವರ ಸಂಬಂಧದ ಬಗ್ಗೆಯೂ ಕುಟುಂಬಸ್ಥರಿಗೆ ಹೇಳಿದ್ದಾರಂತೆ. ಕುಟುಂಬಸ್ಥರಿಂದಲೂ ಇದಕ್ಕೆ ಒಪ್ಪಿಗೆಯಿದೆಯಂತೆ. ನಮ್ಮ ಮೂವರ ಸಂಬಂಧದ ಬಗ್ಗೆ ಜನರು ಅನೇಕ ರೀತಿಯಲ್ಲಿ ಮಾತನಾಡ್ತಾರೆ. ಆದ್ರೆ ನಮಗೆ ಖುಷಿಯಿದೆ ಎನ್ನುತ್ತಾಳೆ ಲೆಸ್ಲಿ.
ಮೂವರು ಮನೆಯಲ್ಲಿ ಎಲ್ಲವನ್ನೂ ಹಂಚಿಕೊಳ್ಳುತ್ತಾರಂತೆ. ಒಟ್ಟಿಗೆ ಮಲಗುತ್ತಾರೆ ಕೂಡ. ಅದೇ ಸಮಯದಲ್ಲಿ ಮನೆಯ ಖರ್ಚುಗಳನ್ನು ಸಹ ಎಲ್ಲರೂ ಸೇರಿ ನೋಡಿಕೊಳ್ತಾರಂತೆ. ನಾವು ಮೂವರೂ ಪರಸ್ಪರ ಅರ್ಥ ಮಾಡಿಕೊಂಡಿದ್ದೇವೆ ಎನ್ನುತ್ತಾಳೆ ಲೆಸ್ಲಿ.