ಗೋವಾದ ಹೋಮ್ ಸೈನ್ಸ್ ಕಾಲೇಜು ಯುವಜನತೆಗಾಗಿ 'ವಿವಾಹಕ್ಕೆ ಸಿದ್ಧತೆ' ಎಂಬ ೧೫ ದಿನಗಳ ವಿಶೇಷ ಪ್ರಮಾಣಪತ್ರ ಕೋರ್ಸ್ ಅನ್ನು ಪರಿಚಯಿಸಿದೆ. ಆರೋಗ್ಯಕರ ಮತ್ತು ದೀರ್ಘಕಾಲದ ದಾಂಪತ್ಯ ಜೀವನವನ್ನು ನಡೆಸುವುದು ಹೇಗೆ ಎಂಬುದನ್ನು ಈ ಕೋರ್ಸ್ ಮೂಲಕ ಕಲಿಸಲಾಗುತ್ತದೆ.

- 15 ದಿನಗಳ ವಿಶೇಷ ತರಬೇತಿ

- ದಾಂಪತ್ಯ ಜೀವನದ ಬಗ್ಗೆ ಟ್ರೇನಿಂಗ್‌

ಪಣಜಿ: ಉದ್ಯೋಗ, ಕೌಶಲ್ಯ ಕಲಿಸಿಕೊಡುವ ವಿಶೇಷ ಕೋರ್ಸ್‌ಗಳ ನಡುವೆ ಇದೀಗ ಗೋವಾದ ಕಾಲೇಜೊಂದರಲ್ಲಿ ಯುವ ಜನತೆಗೆ ಆರೋಗ್ಯಕರ ದಾಂಪತ್ಯ ಜೀವನ ನಡೆಸುವುದು ಹೇಗೆ ಎಂದು ತಿಳಿಸಿಕೊಡಲು ‘ವಿವಾಹಕ್ಕೆ ಸಿದ್ಧತೆ’ ಎಂಬ ವಿಶೇಷ ಕೋರ್ಸ್‌ವೊಂದನ್ನು ಪರಿಚಯಿಸಲಾಗಿದೆ.

ಅಚ್ಚರಿಯೆನಿಸಿದರೂ ಇದು ನಿಜ. ಗೋವಾ ಕಾಲೇಜ್ ಆಫ್ ಹೋಮ್ ಸೈನ್ಸ್‌ ಇಂತಹದ್ದೊಂದು ವಿನೂತನ ಸಾಹಸಕ್ಕೆ ಕೈ ಹಾಕಿದೆ.ಕಾಲೇಜಿನ ಮಾನವ ಅಭಿವೃದ್ಧಿ ಮತ್ತು ಕುಟುಂಬ ಅಧ್ಯಯನ ವಿಭಾಗವು ''ಮ್ಯಾರೇಜ್ ರೆಡಿನೆಸ್: ಪ್ರಿಪೇರಿಂಗ್ ಫಾರ್ ಹೆಲ್ದಿ ಆ್ಯಂಡ್ ಲಾಸ್ಟಿಂಗ್ ರಿಲೇಷನ್‌ಶಿಪ್ಸ್'' (ಆರೋಗ್ಯಕರ ಮತ್ತು ದೀರ್ಘಕಾಲದ ಸಂಬಂಧಗಳಿಗೆ ಮದುವೆಯ ಸಿದ್ಧತೆ) ಎಂಬ ಹೆಸರಿನಲ್ಲಿ ಈ ಪ್ರಮಾಣಪತ್ರ ಕೋರ್ಸ್ ಪರಿಚಯಿಸಿದೆ. ಡಿ.2ರಿಂದ 17ರವರೆಗೆ 15 ದಿನ ತರಗತಿಗಳು ನಡೆಯಲಿವೆ.

ಏನು ಕಲಿಕೆ?

ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಅವಿವಾಹಿತ ಯುವಜನರು ಸೇರಿದಂತೆ ಆರೋಗ್ಯಕರ ಸಂಬಂಧಗಳನ್ನು ಬೆಳೆಸಲು ಹಾಗೂ ಮದುವೆಗೆ ಸಿದ್ಧರಾಗಲು ಆಸಕ್ತಿ ಹೊಂದಿರುವ ಎಲ್ಲರೂ ಈ ಕೋರ್ಸ್‌ಗೆ ಸೇರಬಹುದು. ಆರೋಗ್ಯಕರ ಮತ್ತು ದೀರ್ಘಕಾಲಿಕ ಸಂಬಂಧವನ್ನು ರೂಪಿಸಲು ಏನೆಲ್ಲಾ ಅಗತ್ಯವಿದೆ ಎಂಬುದರ ಕುರಿತು ಈ ಕೋರ್ಸ್‌ನಲ್ಲಿ ಆಸಕ್ತರು ತಿಳಿಯಬಹುದು.

ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ: ಡಾ.ಸಂತೋಷ್‌ ಹಾನಗಲ್‌

ಗೋವಾದಲ್ಲಿರುವ ಕನ್ನಡಿಗರಿಗೆ ಒಂದು ವೇದಿಕೆ ಕಲ್ಪಿಸಲು ಕರ್ನಾಟಕ ಸರ್ಕಾರ ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ ತಿಳಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗೋವಾ ಕನ್ನಡ ಸಮಾಜದ ಸಂಯುಕ್ತ ಆಶಯದಲ್ಲಿ ಗೋವಾದ ಪರ್ವರಿಯ ಆಜಾದ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ, ಕನ್ನಡ ಭಾಷಾ ಮತ್ತು ಸಂಸ್ಕೃತಿ ಸೊಗಡು ಹಾಗೂ ಡಿಂಡಿಮ ಉತ್ಸವ-2026ರಲ್ಲಿ ಪಾಲ್ಗೊಂಡು ಮಾತನಾಡಿದರು.

ಕಳೆದ 40 ವರ್ಷಗಳ ಹಿಂದೆ ಗೋವಾಕ್ಕೆ ಬಂದು ಇಲ್ಲಿ ಕನ್ನಡ ಸಮಾಜ ಕಟ್ಟಿ ಹಿರಿಯ ಕನ್ನಡಿಗ ವೀರಪ್ಪ ಹುಬ್ಬಳ್ಳಿಯವರು ಕನ್ನಡಿಗರಿಗೆ ಒಂದು ವೇದಿಕೆ ಕಲ್ಪಿಸಿದ್ದಾರೆ. ನ.1ರಂದು ಗೋವಾದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿರುವುದು ಮಹತ್ವದ್ದಾಗಿದೆ. ಕನ್ನಡ ನಾಡು ಹಾಗೂ ನಾಡಿನ ಗಡಿಯಾಚೆಗೆ ನೆಲೆಸಿರುವ ಕನ್ನಡಿಗರ ಪಾಲಿಗೆ ರಾಜ್ಯೋತ್ಸವ ವಿಶೇಷ ದಿನ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆದಾಯ ಇಲಾಖೆ ಪಣಜಿ ಉಪ ಆಯುಕ್ತೆ ಪ್ರಿಯಾಂಕಾ ಕಾಂಬಳೆ, ಲೇಖಕಿ ಸುಕನ್ಯಾ ದೇಸಾಯಿ, ಗೋವಾ ಸರ್ಕಾರದ ನಿವೃತ್ತ ನಿರ್ದೇಶಕ ಸುರೇಶ್ ಶಾನಭಾಗ, ಪ್ರಾಧ್ಯಾಪಕ ಮಹಾಬಲ ಭಟ್, ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣ್ ಕುಮಾರ್, ಕನ್ನಡ ಸಮಾಜದ ಸದಸ್ಯ ಚಿನ್ಮಯ ಎಂ. ಸಿ. ಹಾಗೂ ಗೋವಾ ಕನ್ನಡ ಸಮಾಜದ ಕಾರ್ಯದರ್ಶಿ ಶ್ರೀಕಾಂತ್ ಲೋಣಿ ಉಪಸ್ಥಿತರಿದ್ದರು.