ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಕಾರಣಕ್ಕೆ ಮುರಿದು ಬಿತ್ತು ಮದುವೆ!

ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮನತಾದ, ಮತ ಎಣಿಕೆ ಎಲ್ಲ ನಡೆದು, ಅಧ್ಯಕ್ಷರ ಆಯ್ಕೆಯಾಗಿದೆ. ಈ ಗಲಾಟೆ ಮಧ್ಯೆಯೇ ಒಂದು ಪೋಸ್ಟ್ ವೈರಲ್ ಆಗಿದೆ. ಅದ್ರಲ್ಲಿ ವಧು, ಮದುವೆ ಮುರಿದುಕೊಳ್ಳುವ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾಳೆ. 
 

Marriage broke because of US Presidential election roo

ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ (US presidential election) ನಡೆದು ಫಲಿತಾಂಶ ಕೂಡ ಹೊರಬಿದ್ದಿದೆ. ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ (Kamala Harris) ಸೋಲಿಸಿ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ (Donald Trump), ಅಮೆರಿಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಲ್ಲೆಡೆ ಸಂಭ್ರಮಾಚರಣೆ ನಡೆಯುತ್ತಿದೆ. ಈ ಮಧ್ಯೆ ಮಹಿಳೆಯೊಬ್ಬಳ ಪೋಸ್ಟ್ ವೇಗವಾಗಿ ವೈರಲ್ ಆಗಿದೆ. ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಬರುವ ಮೊದಲೇ ಅಂದ್ರೆ ಮತದಾನದ ಸಂದರ್ಭದಲ್ಲಿ ಮಹಿಳೆ ಈ ಪೋಸ್ಟ್ ಹಾಕಿದ್ದಾಳೆ. ಇದು ಆಕೆ ಮದುವೆಗೆ ಸಂಬಂಧಿಸಿದ್ದು. ಮತದಾನ ಮಾಡದ ಭಾವಿ ಪತಿಯಿಂದ ದೂರವಾಗುವ ನಿರ್ಧಾರಕ್ಕೆ ಮಹಿಳೆ ಬಂದಂತಿದೆ. 

ನವೆಂಬರ್ 5 ರಂದು 47 ನೇ ಅಧ್ಯಕ್ಷರ ಚುನಾವಣೆಗೆ ಮತದಾನ ನಡೆದಿದೆ. ಈ ವೇಳೆ ಮಹಿಳೆ ಭಾವಿ ಪತಿ, ಮತದಾನಕ್ಕೆ ಮುಂದಾಗಿಲ್ಲ. ಇದು ಮಹಿಳೆಗೆ ನೋವು ತಂದಿದೆ. ಈ ಸಮಯದಲ್ಲಿ ರೆಡ್ಡಿಟ್ ನಲ್ಲಿ ಮಹಿಳೆ ಪೋಸ್ಟ್ ಹಂಚಿಕೊಂಡಿದ್ದಾಳೆ. ಮತದಾನ ಮಾಡದ ತನ್ನ ನಿಶ್ಚಿತ ಪತಿ ಜೊತೆ ನಿಶ್ಚಿತಾರ್ಥ ಮುರಿದುಕೊಳ್ಳುವ ಆಲೋಚನೆ ಮಾಡುತ್ತಿದ್ದೇನೆ ಎಂದು ಬರೆದಿದ್ದಾಳೆ. ಆಕೆಯ 26 ವರ್ಷದ ಭಾವಿ ಪತಿ, ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನ ಮಾಡಿಲ್ಲ. ಇದು ನನ್ನನ್ನು ನೈತಿಕ ಸಂಕಷ್ಟಕ್ಕೆ ನೂಕಿದೆ ಎಂದು ಮಹಿಳೆ ಬರೆದುಕೊಂಡಿದ್ದಾಳೆ.

ಒಬ್ಳು ಪತ್ನಿ, 4 ಗರ್ಲ್‌ ಫ್ರೆಂಡ್ಸ್..‌ ಫ್ಲರ್ಟ್‌ ಮಾಡ್ತಿದ್ದ ಬ್ಯುಸಿನೆಸ್‌ ಮ್ಯಾನ್ ಅಸಲಿಗೆ ಯಾರು ಗೊತ್ತಾ?

ಆಕೆ ಪೋಸ್ಟ್ ಪ್ರಕಾರ, ಆಕೆ ವರ ಮತಹಾಕಿಲ್ಲ. ಎರಡೂ ಪಕ್ಷದ ಅಭ್ಯರ್ಥಿಗಳು, ಅವರ ಭರವಸೆ ಆತನಿಗೆ ಇಷ್ಟವಾಗಿಲ್ಲ. ಈಗ ಇಷ್ಟಕಷ್ಟಗಳನ್ನು ನೋಡಲು ಸಾಧ್ಯವಿಲ್ಲ. ಅಭ್ಯರ್ಥಿಗಳ ಬದಲಾವಣೆ ನಮ್ಮಿಂದ ಆಗುವ ಕೆಲಸವಲ್ಲ. ಹಾಗಿರುವಾಗ, ನಮ್ಮ ಆಲೋಚನೆಗೆ ಯಾರು ಹತ್ತಿರವಾಗ್ತಾರೋ ಅವರಿಗೆ ಮತದಾನ ಮಾಡುವ ಮೂಲಕ, ನಮ್ಮ ಕರ್ತವ್ಯ ಮಾಡ್ಬೇಕು ಎಂಬುದು ಮಹಿಳೆ ವಾದ. ಆದ್ರೆ ಭಾವಿ ಪತಿ ಇದಕ್ಕೆ ಒಪ್ಪುತ್ತಿಲ್ಲ. 26 ವರ್ಷದ ಮಹಿಳೆ ಇನ್ನು ನಾಲ್ಕು ತಿಂಗಳಲ್ಲಿ  ಮದುವೆಯಾಗಲಿದ್ದಾಳೆ. ಆದ್ರೆ ಭಾವಿ ಪತಿ, ಮತಚಲಾಯಿಸಿಲ್ಲ ಎಂದಾಗ, ಮನಸ್ಪೂರ್ತಿಯಾಗಿ ಅವರನ್ನು ಮದುವೆಯಾಗೋದು ಕಷ್ಟ. ಅವರ ವರ್ತನೆ ನಮ್ಮ ಸಂಬಂಧದ ಬಗ್ಗೆ ಅನುಮಾನ ಮೂಡಿಸಿದೆ. ನಮ್ಮ ರಾಜಕೀಯ ದೃಷ್ಟಿಕೋನಗಳು ಬಹಳಷ್ಟು ಹೋಲುತ್ತವೆ. ಇಷ್ಟಾದ್ರೂ ಅವರು ಯಾಕೆ ಹೀಗೆ ಆಲೋಚನೆ ಮಾಡ್ತಿದ್ದಾರೆ ಎಂಬುದು ನನಗೆ ಅರ್ಥವಾಗ್ತಿಲ್ಲ. ಮತ ಹಾಕಿಲ್ಲ ಎನ್ನುವ ಕಾರಣಕ್ಕೆ ನಾನು ಸಂಬಂಧ ಮುರಿದುಕೊಳ್ತೇನೆ ಎಂಬುದನ್ನು ಹೇಳುವುದು ಕೂಡ ಭಯಾನಕವಾಗ್ಬಹುದೇ ಎಂದು ಆಕೆ ಪ್ರಶ್ನೆ ಕೇಳಿದ್ದಾಳೆ. 

₹ 40 ಲಕ್ಷ ಇನ್ಸೂರೆನ್ಸ್ ಹಣಕ್ಕಾಗಿ ಹೆಣ ಕೆಡವಿದ ಸಂಬಂಧಿಕ!

ರೆಡ್ಡಿಟ್ ಪೋಸ್ಟ್ ವೈರಲ್ ಆಗಿದೆ. ಇದಕ್ಕೆ ಅನೇಕರು ಕಮೆಂಟ್ ಮಾಡಿದ್ದಾರೆ. ಅವರಿಗೆ ಅಲ್ಟಿಮೇಟಮ್ ನೀಡಬೇಡಿ ಎಂದು ಕೆಲವರು ಸಲಹೆ ನೀಡಿದ್ದಾರೆ. ನೀವು ಅವರ ನಡವಳಿಕೆ, ವರ್ತನೆಯನ್ನು ಬದಲಿಸಲು ಸಾಧ್ಯವಿಲ್ಲ. ಮತ ಚಲಾಯಿಸೋದು ನಿಮಗೆ ಅತ್ಯಂತ ಅಗತ್ಯವಿನ್ನಿಸಿದ್ರೆ ನಿಶ್ಚಿತಾರ್ಥ ಮುರಿದುಕೊಳ್ಳಿ. ಸಂಬಂಧ ಮುರಿದುಕೊಳ್ಳುವ ಎಲ್ಲ ಹಕ್ಕೂ ನಿಮಗೆ ಇದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಸಂಬಂಧದಿಂದ ಹೊರಗೆ ಬರಲು ನೀವು ಯಾವುದೇ ಕಾರಣವನ್ನು ಹೇಳಬಹುದು ಎಂದು ಮತ್ತೊಬ್ಬರು ಹೇಳಿದ್ದಾರೆ. ಇದು ವಿಚಿತ್ರವಾಗಿದೆ. ನೀವು ಯಾಕೆ ಅವರಿಂದ ದೂರವಾಗ್ತಿದ್ದೀರಿ ಎಂಬ ಕಾರಣವನ್ನು ಅವರಿಗೆ ಸರಿಯಾಗಿ ವಿವರಿಸಿ. ಆದ್ರೆ ಅವರನ್ನು ಬದಲಿಸಲು ಸಾಧ್ಯವಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ. ದೇಶದ ತಿ ಮುಖ್ಯ ಚುನಾವಣೆಗೆ ಮತ ಚಲಾಯಿಸುವುದನ್ನು ಅವರು ಯಾಕೆ ತಪ್ಪಿಸಿಕೊಳ್ತಿದ್ದಾರೆ ಎಂದು ಕೆಲವರು ಕೇಳಿದ್ರೆ, ನಿಮಗೆ ಅವರಿಂದ ದೂರವಾಗ್ಬೇಕು. ಅದಕ್ಕೆ ಕಾರಣ ಹುಡುಕುತ್ತಿದ್ದೀರಿ. ಯಾವುದೇ ಚಿಂತೆಯಿಲ್ಲದೆ ಅವರಿಂದ ದೂರವಾಗಿ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ. 

My (26f) fiance (26m) isn’t planning on voting for the US Presidential elections. I am having a moral crisis. Is ending our engagement over this dramatic?
byu/throwawaysadfaceidk inrelationship_advice
Latest Videos
Follow Us:
Download App:
  • android
  • ios