ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವತಾರಕ್ಕೆ ಪತ್ನಿ ಮಾತ್ರವಲ್ಲ ಜಗತ್ತೆ ಅಚ್ಚರಿಗೊಂಡಿದೆ. ಗಾಯಕ ಬೆನ್ಸನ್ ಬೂನಿ ಅವತಾರದಲ್ಲಿ ಕುಣಿದು ಕುಪ್ಪಳಿಸಿದ ಜುಕರ್‌ಬರ್ಗ್ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಅಷ್ಟಕ್ಕೂ ಪತ್ನಿಗೆ ಅಚ್ಚರಿ ನೀಡಲು ಮಾರ್ಕ್ ಜುಕರ್‌ಬರ್ಗ್ ಈ ಸಾಹಸಕ್ಕೆ ಕೈಹಾಕಿದ್ದು ಯಾಕೆ?
ವಾಶಿಂಗ್ಟನ್(ಮಾ.01) ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಕುರಿತು ಬಹುತೇಕ ಭಾರತೀಯರಿಗೆ ಗೊತ್ತೇ ಇದೆ. ಮೆಟಾ ಸಂಸ್ಥೆಯ ಫೇಸ್‌ಬುಕ್, ವ್ಯಾಟ್ಸಾಪ್, ಇನ್‌ಸ್ಟಾಗ್ರಾಂ ಬಹುತೇಕ ಭಾರತೀಯರು ಬಳಸುತ್ತಿದ್ದಾರೆ. ಮಾರ್ಕ್ ಜುಕರ್‌ಬರ್ಗ್ ಪಾಲ್ಗೊಂಡ ಕಾರ್ಯಕ್ರಮ, ಕಾನ್ಪರೆನ್ಸ್, ಭಾಷಣದ ವಿಡಿಯೋಗಳು ಎಲ್ಲೆಡೆ ಲಭ್ಯವಿದೆ. ಮಾರ್ಕ್ ಜುಕರ್‌ಬರ್ಗ್ ಎಲ್ಲಾ ಕಡೆ ಬಹುತೇಕ ಗಂಭೀರವಾಗಿ ಮಾತನಾಡುತ್ತಾರೆ. ನಡೆ ನುಡಿ ಎಲ್ಲವೂ ಗಂಭೀರ. ಆದರೆ ಪತ್ನಿಗೆ ಅಚ್ಚರಿ ನೀಡಲು ಮಾರ್ಕ್ ಜುಕರ್‌ಬರ್ಗ್, ಖ್ಯಾತ ಗಾಯಕ ಬೆನ್ಸನ್ ಜೇಮ್ಸ್ ಬೂನಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬೂನಿಯ ಜನಪ್ರಿಯ ಹಾಡನ್ನು ಹಾಡುತ್ತಾ ಮಾರ್ಕ್ ಜುಕರ್‌ಬರ್ಗ್ ಪತ್ನಿಗೆ ಅಚ್ಚರಿ ನೀಡಿದ್ದಾರೆ
ಮಾರ್ಕ್ ಜುಕರ್‌ಬರ್ಗ್ ಈ ಸಾಹಸ ಮಾಡಿದ್ದೇಕೆ?
ಮಾರ್ಕ್ ಜುಕರ್‌ಬರ್ಗ್ ಪತ್ನಿ ಪ್ರಿಸಿಲ್ಲಾ ಚಾನ್ 40ನ ಹುಟ್ಟು ಹಬ್ಬಕ್ಕೆ ಸರ್ಪ್ರೈಸ್ ನೀಡಲು ಈ ಸಾಹಸ ಮಾಡಿದ್ದಾರೆ. ಪತ್ನಿ ಮುಖದಲ್ಲಿ ನಗು ತರಿಸಲು ಮಾರ್ಕ್ ಜುಕರ್‌ಬರ್ಗ್ ತಮ್ಮ ಸಿಇಒ ಲುಕ್‌ನಿಂದ ಹೊರಬಂದು ಅಮೆರಿಕನ್ ಸಿಂಗರ್ ಬೆನ್ಸನ್ ಬೂನಿ ಅವರತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬೂನಿ ಲೈವ್ ಕಾರ್ಯಕ್ರಮಗಳಲ್ಲಿ ಧರಿಸುವ ಶಿನಿ ಬ್ಲೂ ಗ್ರ್ಯಾಮಿ ಜಮ್‌ಸೂಟ್ ಧರಿಸಿ ವೇದಿಕೆಯಿಂದ ಛಂಗನೆ ಜಿಗಿದು ಪತ್ನಿ ಹಾಗೂ ನೆರೆದಿದ್ದ ಗಣ್ಯರ ಮುಂದೆ ಹಾಡು ಹಾಡಿದ್ದಾರೆ.
.ಫೇಸ್‌ಬುಕ್‌ನಲ್ಲಿ ಉದ್ಯೋಗವಕಾಶ, ಈ ತಂತ್ರಜ್ಞಾನ ಗೊತ್ತಿದ್ದರೆ ಸ್ಯಾಲರಿಯಲ್ಲಿ ಚೌಕಾಸಿ ಇಲ್ಲ
ಮಾರ್ಕ್ ಜುಕರ್‌ಬರ್ಗ್ ಸಾಹಸಕ್ಕೆ ನಿಜಕ್ಕೂ ಪ್ರಿಸಿಲಾ ಚಾನ್ ಅಚ್ಚರಿಗೊಂಡಿದ್ದಾರೆ. ಇಷ್ಟೇ ಅಲ್ಲ ಸಿಇಒ ಆಗಿ ಮಾತ್ರ ನೋಡಿದ್ದ ಜನ ಏಕಾಏಕಿ ಹೊಸ ಅವತಾರದಲ್ಲಿ ಕಂಡು ಅಚ್ಚರಿಗೊಂಡಿದ್ದಾರೆ. ಹೊಸ ಅವತಾರದಲ್ಲಿ ಮಾರ್ಕ್ ಜುಕರ್‌ಬರ್ಗ್ ನೋಡಿ ಪತ್ನಿ ಹೌಹಾರಿದ್ದಾರೆ. ಮಾರ್ಕ್ ಜುಕರ್‌ಬರ್ಗ್ ಜೋಶ್ ನೋಡಿ ನೆರೆದಿದ್ದವರೂ ಅಚ್ಚರಿಗೊಂಡಿದ್ದಾರೆ. ಮೆಟಾ ಸಿಇಒ ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.
ಪತ್ನಿ ಬರ್ತ್‌ಡ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಪತ್ನಿ ಪ್ರಿಸಿಲ್ಲಾ ಚಾನ್ ಕೇಕ್ ಕತ್ತರಿಸಲು ಸಜ್ಜಾಗಿದ್ದರು. ಆಹ್ವಾನಿತ ಗಣ್ಯರು ಕುಳಿತಿದ್ದರು. ಇದರ ಮುಂಭಾಗದಲ್ಲಿ ಮಾರ್ಕ್ ಜುಕರ್‌ಬರ್ಗ್ ಕೂಡ ಕುಳಿತಿದ್ದರು. ಸೂಟ್ ಬೂಟ್ ಹಾಕಿ ಸಿಇಒ ಲುಕ್‌ನಲ್ಲೇ ಇದ್ದರು. ಇತ್ತ ವೇದಿಕೆಯಲ್ಲಿ ಸಂಗೀತ ರಸ ಸಂಜೆಗೆ ಸಂಗೀತಗಾರರು ನಿಂತಿದ್ದರು. ಏಕಾಏಕಿ ಏದ್ದ ಜುಕರ್‌ಬರ್ಗ್, ತಮ್ಮ ಉಡುಪು ಕಳಚಿದರು. ಒಳಗೆ ಧರಿಸಿದ್ದ ಬೂನಿ ಶೈಲಿಯ ಜಂಪ್‌ಸೂಟ್‌ನಲ್ಲಿ ವೇದಿಕೆ ಏರಿ ಹಾಡು ಆರಂಭಿಸಿದ್ದಾರೆ. ಬಳಿಕ ವೇದಿಕೆಯಿಂದ ಕೆಳಗ್ಗೆ ಜಿಗಿದು ಬೂನಿ ಶೈಲಿಯಲ್ಲೇ ಅಬ್ಬರಿಸಿದ್ದಾರೆ. ಜುಕರ್‌ಬರ್ಗ್ ಸ್ಟೇಜ್ ಮೇಲೆ ಒಂದು ರೊಮ್ಯಾಂಟಿಕ್ ಹಾಡು ಹೇಳಿ ಹೆಂಡ್ತಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.
ಮಾರ್ಕ್ ಜುಕರ್‌ಬರ್ಗ್ ಈ ವಿಡಿಯೋನ ಶೇರ್ ಮಾಡಿ, ನಿಮ್ಮ ಹೆಂಡ್ತಿ ಒಂದ್ಸಲ ಮಾತ್ರ 40 ವರ್ಷದವ್ರಾಗ್ತಾರೆ! ಬೆನ್ಸನ್ ಬೂನ್‌ಗೆ ಜಂಪ್‌ಸೂಟ್‌ಗೆ ಥ್ಯಾಂಕ್ಸ್ ಎಂದು ಬರೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ, ಜನ ಜುಕರ್‌ಬರ್ಗ್ ಅವ್ರ ಶೈಲಿಗೆ ಭರ್ಜರಿ ಕಮೆಂಟ್ ಮಾಡಿದ್ದಾರೆ. ಮಾರ್ಕ್ ಜುಕರ್‌ಬರ್ಗ್ ಎಂದು ನಂಬಲು ಸಾಧ್ಯವಾಗುತ್ತಿಲಲ ಎಂದಿದ್ದಾರೆ. ಹೆಂಡ್ತಿಗೋಸ್ಕರ ಏನ್ ಬೇಕಾದ್ರೂ ಮಾಡ್ತಾರೆ ಅಂತ ನೋಡೋಕೆ ತುಂಬಾ ಖುಷಿ ಆಗ್ತಿದೆ! ನಿಜವಾಗ್ಲೂ ಲವ್ ಒಂದು ಬ್ಯೂಟಿಫುಲ್ ಥಿಂಗ್ ಎಂದು ಬರೆದಿದ್ದಾರೆ.
ಮುಂಚೆನೂ ದೊಡ್ಡ ಸರ್ಪ್ರೈಸ್ ಕೊಟ್ಟಿದಾರೆ
ಜುಕೆರ್‌ಬರ್ಗ್ ಹೆಂಡ್ತಿಗೋಸ್ಕರ ದೊಡ್ಡ ಸರ್ಪ್ರೈಸ್ ಕೊಡೋದು ಇದೇ ಫಸ್ಟ್ ಟೈಮ್ ಅಲ್ಲ. ಕಳೆದ ವರ್ಷ ಆಗಸ್ಟ್‌ನಲ್ಲಿ ಅವ್ರು ಒಂದು ದೊಡ್ಡ ಮೂರ್ತಿ (Giant Sculpture) ಮಾಡಿಸಿ ಅವ್ರ ಮನೆ ಗಾರ್ಡನ್‌ನಲ್ಲಿ ಇಟ್ಟಿದ್ರು, ಅದನ್ನ ಫೇಮಸ್ ಆರ್ಟಿಸ್ಟ್ ಡ್ಯಾನಿಯಲ್ ಆರ್ಶಮ್ (Daniel Arsham) ರೆಡಿ ಮಾಡಿದ್ರು.
300 ಕೋಟಿ ರೂ ಜೆಟ್, 40 ಕೋಟಿ ಮನೆ; ದಿಗ್ಗಜರಿಂದ ಅನಂತ್ ರಾಧಿಕಾಗೆ ಸಿಕ್ಕಿದೆ ಭರ್ಜರಿ ಗಿಫ್ಟ್!
