ಪತ್ನಿ ನಿಷ್ಠೆಗೆ ಮನಸೋತ ಪತಿ! ಸಿಕ್ತು ಭರ್ಜರಿ ಗಿಫ್ಟ್
ನನ್ನ ಯಶಸ್ಸಿಗೆ ಪತ್ನಿ ಪಾತ್ರವಿದೆ ಎಂಬುದನ್ನು ಒಪ್ಪಿಕೊಳ್ಳೋದು ಅಪರೂಪ. ಒಪ್ಪಿಕೊಂಡ್ರೂ ಅದಕ್ಕೆ ಗೌರವ ಸಲ್ಲಿಸೋರು ಹುಡುಕಿದ್ರೆ ಸಿಗೋದಿಲ್ಲ. ಆದ್ರೆ ಇಲ್ಲೊಬ್ಬ ಪತ್ನಿ ಕೆಲಸಕ್ಕೆ ಮೆಚ್ಚಿ, ಮೆಚ್ಚುಗೆ ಮಾತನಾಡಿದ್ದಲ್ಲದೆ ಸರ್ಪ್ರೈಸ್ ಗಿಫ್ಟ್ ನೀಡಿದ್ದಾನೆ.
ಯಶಸ್ವಿ ಪುರುಷನ ಹಿಂದೆ ಮಹಿಳೆ ಇರ್ತಾಳೆ ಎನ್ನುವ ಮಾತೊಂದಿದೆ. ಇದು ಅನೇಕರ ಜೀವನದಲ್ಲಿ ಸತ್ಯವಾಗಿದೆ. ಪತಿ ದಿನವಿಡಿ ಮನೆಯಿಂದ ಹೊರಗೆ ದುಡಿಯುತ್ತಿದ್ದರೆ ಪತ್ನಿಯಾದವಳು ಆತನ ಪ್ರತಿಯೊಂದು ಹೆಜ್ಜೆಗೂ ಸಹಕರಿಸಿ, ಮಕ್ಕಳು, ಕುಟುಂಬವನ್ನು ನೋಡಿಕೊಂಡು, ಎಲ್ಲಿಯೂ ಯಾವುದೇ ಸಮಸ್ಯೆಯಾಗದಂತೆ, ಪತಿಗೆ ಹೆಚ್ಚುವರಿ ಚಿಂತೆ ಕಾಡದಂತೆ ಜವಾಬ್ದಾರಿ ಸಂಭಾಳಿಸುವ ಕೆಲಸವನ್ನು ಮಹಿಳೆ ಮಾಡ್ತಾಳೆ. ಮಹಿಳೆ ತೆರೆಯ ಹಿಂದಿರುವ ಕೆಲಸಗಾರ್ತಿ. ಪುರುಷನೊಬ್ಬ ಯಶಸ್ವಿಯಾದ್ರೆ, ಕೋಟ್ಯಾಧಿಪತಿಯಾದ್ರೆ ಆತನ ಶ್ರಮಕ್ಕೆ ಜನರು ಬೆಲೆ ನೀಡ್ತಾರೆಯೇ ವಿನಃ ಆತನ ಬೆಂಬಲಕ್ಕೆ ನಿಂತ ಪತ್ನಿಗಲ್ಲ. ಅನೇಕ ಪುರುಷರು ತಮ್ಮ ಸಾಧನೆಗೆ ಪತ್ನಿಯೂ ಕಾರಣ ಎಂಬುದನ್ನೇ ಮರೆತಿರುತ್ತಾರೆ. ಆದ್ರೆ ಬ್ರಿಟನ್ ನ ವ್ಯಕ್ತಿಯೊಬ್ಬ ಇದಕ್ಕೆ ಭಿನ್ನವಾಗಿ ನಿಲ್ಲುತ್ತಾನೆ. ತನ್ನ ಯಶಸ್ಸು, ಐಷಾರಾಮಿ ಜೀವನ, ಶ್ರೀಮಂತಿಕೆ ಹಿಂದೆ ಪತ್ನಿಯ ಸಹಭಾಗಿತ್ವ ಎಷ್ಟಿದೆ ಎಂಬುದನ್ನು ಆತ ಅರಿತಿದ್ದಾನೆ. ಹಾಗಾಗಿಯೇ ಆಕೆಗೆ ಗೌರವ ನೀಡುವ, ಆಕೆಗೆ ಉಡುಗೊರೆ ನೀಡುವ ಕೆಲಸ ಮಾಡಿದ್ದಾನೆ. ಪತ್ನಿಗೆ ಎರಡು ಕಾರು ಹಾಗೂ ಹಣವನ್ನು ಗಿಫ್ಟ್ ರೂಪದಲ್ಲಿ ನೀಡಿದ ವ್ಯಕ್ತಿ ಈಗ ಚರ್ಚೆಯಲ್ಲಿದ್ದಾನೆ.
ಬ್ರಿಟನ್ (Britain) ಈ ವ್ಯಕ್ತಿ ಹೆಸರು ಮ್ಯಾಟ್ ಫಿಡೆಸ್. ಮೈಕೆಲ್ ಜಾಕ್ಸನ್ (Michael Jackson) ಅವರ ಮಾಜಿ ಅಂಗರಕ್ಷಕನಾಗಿದ್ದ ಮ್ಯಾಟ್ ಫಿಡೆಸ್ (Matt Fiddes) ಮಾರ್ಷಲ್ ಆಟ್ಸ್ ತಜ್ಞನಾಗಿ ಕೆಲಸ ಮಾಡ್ತಿದ್ದಾನೆ. ತನ್ನ ಪತ್ನಿಯ ನಿಷ್ಠೆಗಾಗಿ ಮ್ಯಾಟ್ ಫಿಡೆಸ್ ಎರಡು ಕಾರುಗಳನ್ನು ಎಂಟು ತಿಂಗಳೊಳಗೆ ಉಡುಗೊರೆ ರೂಪದಲ್ಲಿ ನೀಡಿದ್ದಾನೆ. ಮ್ಯಾಟ್ ಫೈಂಡೆಸ್ ಪತ್ನಿ ಹೆಸರು ಮೋನಿಕ್. ಪತ್ನಿಗೆ ಮ್ಯಾಟ್ 2 ಫೆರಾರಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾನೆ. ಫೆರಾರಿ ಅಂದ್ರೆ ಮ್ಯಾಟ್ ಗೆ ಬಲು ಪ್ರೀತಿ. ಹೊಸ ಕಾರು ಮಾರುಕಟ್ಟೆಗೆ ಬರ್ತಿದ್ದಂತೆ ಅದನ್ನು ಖರೀದಿ ಮಾಡುವ ಅಭ್ಯಾಸ ಆತನಿಗಿದೆ.
ಗಂಡ-ಹೆಂಡ್ತಿ ಮಧ್ಯೆ ಜಗಳವಾದಾಗ ಪ್ಯಾಚಪ್ ಮಾಡ್ಕೊಳ್ಳೋದು ಹೇಗೆ?
ಮೋನಿಕ್ ಗೆ ಉಡುಗೊರೆ ನೀಡಿ ಮ್ಯಾಟ್ ಹೇಳಿದ್ದೇನು? : ಫೆರಾರಿ ಕಾರ್ ಹಾಗೂ ಹಣವನ್ನು ಗಿಫ್ಟ್ ರೂಪದಲ್ಲಿ ನೀಡಿದ ಮ್ಯಾಟ್, ಮೋನಿಕಾ ಇದಕ್ಕೆ ಅರ್ಹಳು ಎಂದಿದ್ದಾನೆ. ನನ್ನ ಹುಚ್ಚು ಪ್ರಪಂಚದಲ್ಲಿ ಈಕೆ ವಾಸ ಮಾಡ್ತಾಳೆ. ನನ್ನನ್ನು ಸಹಿಸಿಕೊಂಡಿದ್ದಾಳೆ. ನನ್ನ ಆರು ಮಕ್ಕಳನ್ನು ಈಕೆ ಸಂಭಾಳಿಸುತ್ತಾಳೆ. ಅಲ್ಲದೆ ನನ್ನ ಕಂಪನಿ ಕೆಲಸ ನೋಡಿಕೊಳ್ಳುವ ಜೊತೆಗೆ ದಿನದಲ್ಲಿ ಬಹುತೇಕ ಸಮಯವನ್ನು ಫೋನ್ ನಲ್ಲಿ ಕಳೆಯುತ್ತಾಳೆ. ನಾನು ಮಿಲಿಯನೇರ್ ಆಗಲು ಆಕೆ ಕಾರಣ ಎಂದು ಮ್ಯಾಟ್ ಹೇಳಿದ್ದಾನೆ.
ಮ್ಯಾಟ್ ಫೈಂಡಸ್ ತನ್ನ ಪತ್ನಿಗೆ 3.37 ಕೋಟಿ ಮೌಲ್ಯದ ಹಳದಿ ಬಣ್ಣದ ಫೆರಾರಿ ಸ್ಪೈಡರ್ ಎಫ್8 ಕಾರನ್ನು ಉಡುಗೊರೆಯಾಗಿ ನೀಡಿದ್ದ. ಇನ್ಸ್ಟಾಗ್ರಾಮ್ ನಲ್ಲಿ ಇದ್ರ ವಿಡಿಯೋವನ್ನು ಹಂಚಿಕೊಂಡಿದ್ದ. ಇದಕ್ಕೂ ಮುನ್ನ ತನ್ನ ಮದುವೆಯ ಹನ್ನೊಂದನೆ ವಾರ್ಷಿಕೋತ್ಸವದ ಸಂದರ್ಭದಲ್ಲೂ ಮ್ಯಾಟ್, ಫೆರಾರಿ ಕಾರನ್ನು ಪತ್ನಿಗೆ ಉಡುಗೊರೆಯಾಗಿ ನೀಡಿದ್ದ. ಎಂಟು ತಿಂಗಳಲ್ಲಿ ಮ್ಯಾಟ್ ತನ್ನ ಪತ್ನಿಗೆ ನೀಡಿದ ದುಬಾರಿ ಕಾರಿಗಾಗಿಯೇ 600,000 ಪೌಂಡ್‌ಗಿಂತ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾನೆ. ವಿ ಕ್ಲಾಸ್ ಮರ್ಸಿಡಿಸ್ ಕೂಡ ಮ್ಯಾಟ್ ಹೊಂದಿದ್ದಾನೆ. ಮ್ಯಾಟ್ ಮನೆಯಲ್ಲಿ ನಾಲ್ಕು ಫೆರಾರಿ ಕಾರುಗಳಿವೆ. ಇಪ್ಪತ್ತು ವರ್ಷಗಳ ಹಿಂದೆ ಖರೀದಿ ಮಾಡಿದ್ದ ಒಂದು ಕಾರನ್ನು ಮ್ಯಾಟ್ ಮಾರಾಟ ಮಾಡಿದ್ದಾನೆ.
ಹೆಂಡ್ತಿನ ಕಂಟ್ರೋಲಲ್ಲಿ ಇಡಲು ಹೋಗಿ ಡಿವೋರ್ಸ್ ಆಯ್ತಾ: ಸಮಂತಾ ಪೋಸ್ಟ್ ಹೇಳ್ತಿರೋದೇನು?
ಇನ್ಸ್ಟಾಗ್ರಾಮ್ ನಲ್ಲಿ ಮ್ಯಾಟ್ ಹಂಚಿಕೊಂಡ ಹೊಸ ಫೆರಾರಿ ಕಾರ್ ಮತ್ತು ಹೆಂಡತಿಗೆ ನೀಡಿದ ಸರ್ಪ್ರೈಸ್ ಜೊತೆ ಹೆಂಡತಿ ಬಗ್ಗೆ ಆತ ಬರೆದ ವಾಕ್ಯಗಳು ಬಳಕೆದಾರರ ಮನಮುಟ್ಟಿವೆ. ಮಾರ್ಷಲ್ ಆಟ್ಸ್ ನಲ್ಲಿ ಪ್ರಸಿದ್ಧಿ ಪಡೆದಿರುವ ಮ್ಯಾಟ್ ಫೈಂಡರ್, ಕೇವಲ 100 ಪೌಂಡ್ ಗೆ ಮಾರ್ಷಲ್ ಆಟ್ಸ್ ವ್ಯವಹಾರ ಶುರು ಮಾಡಿದ್ದ. ಈಗ ಮ್ಯಾಟ್ ಬಳಿ 120 ಮಿಲಿಯನ್ ಪೌಂಡ್‌ಗಳ ನಿವ್ವಳ ಮೌಲ್ಯವಿದೆ.