Viral Post: ಫುಲ್ ವೈರಲ್ ಆಗಿದೆ ಅಮ್ಮ ಮಗನ ವಾಟ್ಸ್ ಆ್ಯಪ್ ಸಂದೇಶ

ಜಗತ್ತಿನಲ್ಲಿ ನಮ್ಮನ್ನು ಅತಿ ಹೆಚ್ಚು ಪ್ರೀತಿಸೋರು ಪಾಲಕರು. ಮಕ್ಕಳ ಚಿಂತೆಯಲ್ಲಿಯೇ ಅವರು ಜೀವನ ಕಳೆಯುತ್ತಾರೆ. ಆದ್ರೆ ಮಕ್ಕಳಿಗೆ ಅವ್ರ ಮಹತ್ವ ತಿಳಿಯೋದು ಅವರು ಪಾಲಕರಾದ್ಮೇಲೆ. ಅದೇನೇ ಇರಲಿ, ಕೆಲ ಅಮ್ಮಂದಿರು ತಮ್ಮ ಮಕ್ಕಳಿಗೆ ಕ್ಯೂಟ್ ಕ್ಯೂಟ್ ಸಂದೇಶ ರವಾನೆ ಮಾಡಿ ಸುದ್ದಿಯಾಗ್ತಾರೆ.
 

Man Shares Whatsapp Conversation With Mother Netizens Go Emotional

ಕೆಲಸದಲ್ಲಿ ಬ್ಯುಸಿಯಿರುವಾಗ ಯಾರ ಮೆಸ್ಸೇಜ್ ಬಂದ್ರೂ ಕಿರಿಕಿರಿಯಾಗೋದು ಸಹಜ. ಸಾಮಾನ್ಯವಾಗಿ ಕೆಲಸದ ಸಮಯದಲ್ಲಿ ಪಾಲಕರು ಕರೆ ಮಾಡ್ತಿರುತ್ತಾರೆ, ಮೆಸ್ಸೇಜ್ ಮಾಡ್ತಿರುತ್ತಾರೆ. ಇದ್ರಿಂದ ಮಕ್ಕಳು ತೊಂದರೆ ಅನುಭವಿಸ್ತಾರೆ. ಕೆಲ ಮಕ್ಕಳು ಸಮಸ್ಯೆ ಅರ್ಥ ಮಾಡಿಕೊಂಡ್ರೆ ಇನ್ನು ಕೆಲ ಮಕ್ಕಳು, ಪಾಲಕರ ಪ್ರೀತಿಯನ್ನು ಕಡೆಗಣಿಸಿ, ಅವರಿಗೆ ಬೈದು ಫೋನ್ ಇಡ್ತಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ತಾಯಿ – ಮಗನ ಸಂದೇಶವೊಂದು ವೈರಲ್ ಆಗಿದೆ.

ವಾಟ್ಸ್ ಅಪ್ (Whats Up) ನಲ್ಲಿ ತಾಯಿ ಕಳುಹಿಸಿದ ಸಂದೇಶವನ್ನು ಮಗ ಟ್ವಿಟರ್ (Twitter) ನಲ್ಲಿ ಪೋಸ್ಟ್ ಮಾಡಿದ್ದಾನೆ. ಆತನ ಪೋಸ್ಟ್ ಗೆ ನೆಟ್ಟಿಗರು ಭಾವುಕರಾಗಿದ್ದಾರೆ. ಅಷ್ಟಕ್ಕೂ ಅಮ್ಮ – ಮಗನ ವಾಟ್ಸ್ ಅಪ್ ನಲ್ಲಿ ಏನು ಚರ್ಚೆ ನಡೆದಿದೆ ಎನ್ನುವುದು ಇಲ್ಲಿದೆ. ಹೃಷಿಕ್ ಸೂರಿ ಟ್ವಿಟರ್ ಖಾತೆಯಲ್ಲಿ ವಾಟ್ಸ್ ಅಪ್ ಸಂಭಾಷಣೆಯನ್ನು ಟ್ವಿಟ್ ಮಾಡಲಾಗಿದೆ. ತಾಯಿ, ಅವನಿಗೆ ಫೋನ್ ಮಾಡಿದ್ದಾಳೆ. ಮೀಟಿಂಗ್ ನಲ್ಲಿದ್ದ ಕಾರಣ ಏನಾದ್ರೂ ಅರ್ಜೆಂಟ್ ಕೆಲಸವಿದ್ಯಾ ಎಂದು ಮಗ ವಾಟ್ಸ್ ಅಪ್ ಮಾಡಿದ್ದಾನೆ. ಅದಕ್ಕೆ ತಾಯಿ ನೀಡಿರುವ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆದಿದೆ. 

Relationship tips : ಪರ್ಫೆಕ್ಟ್ ಪತ್ನಿ ಅನಿಸಿಕೊಳ್ಳಬೇಕು ಅಂದ್ರೆ ಹೀಗ್ ಮಾಡಿ

ನನ್ನ ಅಮ್ಮನನ್ನು ಬಹಳ ಪ್ರೀತಿ (Love) ಸುತ್ತೇನೆ ಎಂದು ಹೃಷಿಕ್ ಸೂರಿ ಟ್ವಿಟರ್ ಪೋಸ್ಟ್ ಗೆ ಶೀರ್ಷಿಕೆ ಹಾಕಿದ್ದಾರೆ. ಈ ಪೋಸ್ಟ್ ನಲ್ಲಿ ನೀವು ಸ್ಪಷ್ಟವಾಗಿ ನೋಡಬಹುದು, ಹೃಷಿಕ್ ಸೂರಿ, ಸಾರಿ ಅಮ್ಮ. ನಾನು ಮೀಟಿಂಗ್ ನಲ್ಲಿ ಇದ್ದೇನೆ. ಏನಾದ್ರೂ ಅರ್ಜೆಂಟ್ ಇತ್ತಾ ಎಂದು ಕೇಳಿದ್ದಾನೆ. ಅದಕ್ಕೆ ತಾಯಿ, ನನಗೆ ಅರ್ಥವಾಗುತ್ತದೆ. ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂಬುದನ್ನು ಹೇಳಲು ಬಯಸಿದ್ದೆ ಎಂದು ಪ್ರತಿಕ್ರಿಯೆ ನೀಡಿದ್ದಾಳೆ. 

ನೆಟ್ಟಿಗರ ಹೃದಯ ಗೆದ್ದ ಸಂಭಾಷಣೆ : ತಾಯಿ – ಮಗನ ವಾಟ್ಸ್ ಅಪ್ ಸಂದೇಶ ಅನೇಕರ ಮನಸ್ಸು ಗೆದ್ದಿದೆ. ಅವರು ದೀರ್ಘ ಹಾಗೂ ಆರೋಗ್ಯಕರ, ಸಮೃದ್ಧ ಜೀವನ ನಡೆಸಲಿ ಎಂದು ಬಳಕೆದಾರರೊಬ್ಬರು  ಕಮೆಂಟ್ ಮಾಡಿದ್ದಾರೆ. ಎಷ್ಟು ಅಮೂಲ್ಯವಾಗಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

Trending Video: ತಮಾಷೆಗೆ ಮಾಡಿದ ವಿಡಿಯೋ ವಿವಾದ ಹೊತ್ತು ತಂತು!

ಹೃಷಿಕ್ ಸೂರಿಯಂತೆ ನಾನೂ ಕೂಡ ಅದೃಷ್ಟವಂತ. ನನ್ನ ತಾಯಿಯೂ ಹಾಗೆ, ತನ್ನ ಪ್ರತಿ ಉಸಿರಿನಲ್ಲೂ ನಮ್ಮನ್ನು ಉಳಿಸಿಕೊಳ್ಳುವ ತಾಯಂದಿರನ್ನು ಪಡೆದ ನಾವೆಲ್ಲರೂ ಅದೃಷ್ಟವಂತರು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ Jeevansathi.com ಕೂಡ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದೆ. ನನ್ನಮ್ಮ ಯಾವಾಗ್ಲೂ ಐ ಲವ್ ಯು ಅಂತಾ ಹೇಳಿಲ್ಲ. ಬದಲಿಗೆ ನಾನು ಏನು ಅಡುಗೆ ಮಾಡ್ಲಿ ಎಂದು ಕೇಳ್ತಾಳೆ. ಆದ್ರೆ ಅದ್ರಲ್ಲೂ ಕ್ಯೂಟ್ನೆಸ್ ಇದೆ ಎಂದು ಇನೊಬ್ಬರು ಬರೆದಿದ್ದಾರೆ.

ನಿಮ್ಮ ತಾಯಿ ಭಾರತದವರಾ ಅಂತಾ ಕೆಲವರು ಪ್ರಶ್ನೆ ಮಾಡಿದ್ರೆ ಮತ್ತೆ ಕೆಲವರು ಈ ಮಗನ ಪ್ರೀತಿ ಸುಳ್ಳು ಎಂದಿದ್ದಾರೆ. ಟ್ವಿಟರ್ ಮಾಡುವ ಮೊದಲು ಐ ಲವ್ ಯು ಟೂ ಅಂತ ಮೆಸ್ಸೇಜ್ ಕಳುಹಿಸಬೇಕಿತ್ತು. ಇಲ್ಲವೆ ಕರೆ ಮಾಡ್ಬೇಕಿತ್ತು. ಆದ್ರೆ ನೀವು ಮಾಡಿರೋದಿಲ್ಲ ಎಂದು ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನು ಕೆಲವರು ತಮಾಷೆ ಮಾಡಿದ್ದಾರೆ. ಒಬ್ಬ ಬಳಕೆದಾರ ತನ್ನ ತಾಯಿ ವಾಟ್ಸ್ ಅಪ್ ನಲ್ಲಿ ಏನೆಲ್ಲ ಮೆಸ್ಸೇಜ್ ಮಾಡ್ತಾರೆ ಎಂಬುದನ್ನು ಪಟ್ಟಿ ಮಾಡಿದ್ದಾರೆ. ಮದುವೆ ಯಾವಾಗ ಆಗ್ತೀಯಾ, ನಾನು ನಿನಗೆ ಏನು ಮಾಡ್ಬೇಕು, ಆಫೀಸ್ ನಿಂದ ಯಾಕೆ ಬೇಗ ಬರೋದಿಲ್ಲ, ಚಿಕ್ಕಮ್ಮನಿಗೆ ಒಂದು ಫೋಟೋ ಕಳಿಹಿಸು, ಒಬ್ಬ ಹುಡುಕಿ ಇದ್ದಾಳಂತೆ, ನನ್ನ ನಂತ್ರ ನಿನ್ನನ್ನು ನೋಡಿಕೊಳ್ಳೋರು ಯಾರು ಎಂದು ತಾಯಿ ಮೆಸ್ಸೇಜ್ ಮಾಡ್ತಾಳೆ ಎಂದು ನೋವು ತೋಡಿಕೊಂಡಿದ್ದಾರೆ.
 

Latest Videos
Follow Us:
Download App:
  • android
  • ios