Relationship tips : ಪರ್ಫೆಕ್ಟ್ ಪತ್ನಿ ಅನಿಸಿಕೊಳ್ಳಬೇಕು ಅಂದ್ರೆ ಹೀಗ್ ಮಾಡಿ
ವೈವಾಹಿಕ ಜೀವನ ಎಂದ್ರೆ ಎರಡು ಜೀವಗಳು, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಂಡು, ಬೆಂಬಲವಾಗಿದ್ದುಕೊಂಡು ಸಂಸಾರ ಸಾಗಿಸುವುದಾಗಿದೆ. ಈ ಸಂದರ್ಭದಲ್ಲಿ ಅನೇಕ ಏಳು, ಬೀಳುಗಳು ಬರೋದು ಸಾಮಾನ್ಯ. ಏನೇ ಆದರೂ ಅದನ್ನು ಸರಿದೂಗಿಸಿಕೊಂಡು ಜೊತೆ ಸಾಗಿದಾಗಲೇ ದಾಂಪತ್ಯ ಜೀವನಕ್ಕೆ ಅರ್ಥ ಬರೋದು.
ಉತ್ತಮ ದಾಂಪತ್ಯ ಜೀವನದಲ್ಲಿ (married life) ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಂತೋಷ ಮತ್ತು ನೆಮ್ಮದಿಯಿಂದ ಇರೋದು ಮುಖ್ಯ. ಆದರೆ ಗಂಡನನ್ನು ಸಂತೋಷವಾಗಿ ಇಡೋದು ಹೇಗೆ ಎಂದು ನೀವು ಯೋಚನೆ ಮಾಡ್ತಿದ್ರೆ… ಇಲ್ಲಿದೆ ನೋಡಿ ನಿಮಗಾಗಿ ಟಿಪ್ಸ್..
ಪ್ರೀತಿಯನ್ನು ವ್ಯಕ್ತಪಡಿಸಿ
ಪ್ರತಿದಿನ ನಿಮ್ಮ ಪ್ರೀತಿಯನ್ನು(show your love ) ಅಲಂಕೃತ ರೀತಿಯಲ್ಲಿ ತೋರಿಸಬೇಕಾಗಿಲ್ಲ. ಆಗಾಗ್ಗೆ ಕೆನ್ನೆಗೆ ಚುಂಬಿಸುವುದು ಅಥವಾ ಹಣೆ ಮೇಲೆ ಕಿಸ್, ಆಗಾಗ್ಗೆ ಪತಿಯ ಫೆವರಿಟ್ ಆಹಾರ ತಯಾರಿಸೋದು. ಅಥವಾ ಒಟ್ಟಿಗೆ ಫಿಲಂ ನೋಡೋದು. ಇವೆಲ್ಲಾ ಪ್ರೀತಿಯನ್ನು ತೋರಿಸುವ ವಿಧಗಳು.
ಕೃತಜ್ಞತೆಯನ್ನು ತೋರಿಸಿ
ಅವನು ನಿಮಗಾಗಿ ಮತ್ತು ನಿಮ್ಮ ಪ್ರೀತಿಪಾತ್ರರಿಗಾಗಿ ಮಾಡುವ ಸಣ್ಣ ಕೆಲಸಗಳನ್ನು ನೀವು ಎಷ್ಟು ಮೆಚ್ಚುತ್ತೀರಿ ಎಂದು ಅವನಿಗೆ ತಿಳಿಸಿ. ಅವರು ಏನಾದರೂ ಉತ್ತಮ ಕೆಲಸ ಮಾಡಿದಾಗ ಅವರನ್ನು ಹೊಗಳಿ, ಅವರಿಗೆ ಕೃತಜ್ಞತೆ ತಿಳಿಸಿ. ಇದರಿಂದ ಅವರಿಗೆ ತುಂಬಾ ಸಂತೋಷವಾಗುತ್ತೆ.
ಅವರ ಇಷ್ಟಗಳಲ್ಲಿ ಆಸಕ್ತಿ ತೋರಿಸಿ
ನಿಮ್ಮ ಗಂಡನ ಆಸಕ್ತಿಗಳು ಯಾವಾಗಲೂ ನಿಮಗೆ ಇಷ್ಟವಾಗದಿರಬಹುದು. ನಿಮ್ಮ ಗಂಡ ಮಾಡುವ ಕೆಲಸದ ಬಗ್ಗೆ ಆಸಕ್ತಿ (interests) ತೋರಿಸುವಾಗ ಅವರಿಗೆ ತುಂಬಾನೆ ಖುಷಿಯಾಗುತ್ತೆ. ಸ್ವಲ್ಪ ರಿಸರ್ಚ್ ಮಾಡಿ, ಅವರಿಗೆ ಏನು ಇಷ್ಟ ಅನ್ನೋದನ್ನು ತಿಳಿಯಿರಿ. ನಂತರ ಆ ಬಗ್ಗೆ ಅವರ ಜೊತೆ ಮಾತನಾಡಿದಾಗ ಅವರಿಗೆ ಸಂತೋಷವಾಗುತ್ತೆ.
ಸಪೋರ್ಟಿವ್ ಆಗಿರಿ
ವೃತ್ತಿಜೀವನ, ಹವ್ಯಾಸಗಳು ಅಥವಾ ಇತರ ಅನ್ವೇಷಣೆಗಳು ಸೇರಿದಂತೆ ಯಾವುದೇ ಪ್ರಯತ್ನಗಳು ಏನೇ ಇರಲಿ ನಿಮ್ಮ ಗಂಡನಿಗೆ ನಿಮ್ಮ ಬೆಂಬಲ (supportive) ಬೇಕು, ಅದನ್ನು ಅವರು ಬಯಸುತ್ತಾರೆ. ಅವರು ಒಂದು ಗುರಿಯನ್ನು ಸಾಧಿಸಿದಾಗ ಅಥವಾ ಭಯವನ್ನು ಎದುರಿಸಿದಾಗ ಮತ್ತು ಹೊಸದನ್ನು ಪ್ರಯತ್ನಿಸಿದಾಗಲೆಲ್ಲಾ ಅವರನ್ನು ಅಭಿನಂದಿಸುವುದು ಅಥವಾ ಹೊಗಳುವುದನ್ನು ಮಾಡಿ, ಅವರಿಗೆ ಬೆಂಬಲ ನೀಡಿ.
ಅವರು ಹೇಗಿದ್ದಾರೋ, ಹಾಗೆ ಅವರನ್ನು ಗೌರವಿಸಿ
ಎಲ್ಲರೂ ಪರ್ಫೆಕ್ಟ್ ಆಗಿರೋದಿಲ್ಲ, ನಿಮ್ಮ ಪತಿಯಲ್ಲಿಯೂ ಹಲವು ನಿಮಗೆ ಇಷ್ಟವಾಗದೇ ಇರೋ ಗುಣಗಳು ಇರಬಹುದು. ಹಾಗಂತ ನಿಮ್ಮ ಗಂಡನನ್ನು ಎಂದಿಗೂ ಅವಮಾನಿಸಬೇಡಿ, ಕೀಳಾಗಿ ನೋಡಬೇಡಿ. ಅವರು ಹೇಗಿದ್ದಾರೋ ಹಾಗೇ ಸ್ವೀಕರಿಸಿ.
ಮುಕ್ತ ಮತ್ತು ಪ್ರಾಮಾಣಿಕ ಮಾತುಕತೆ
ನಿಮ್ಮ ಮದುವೆ ಸೇರಿದಂತೆ ಯಾವುದೇ ಸಂಬಂಧಕ್ಕೆ ಮುಕ್ತ ಮತ್ತು ಪ್ರಾಮಾಣಿಕ ಸಂವಹನದ (honest communication) ಅಗತ್ಯವಿದೆ. ಹೆಂಡತಿಯಾಗಿ ನೀವು ನಿಮ್ಮ ಆಲೋಚನೆಗಳು ಮತ್ತು ಭಾವನೆಗಳನ್ನು ಗಂಡನ ಜೊತೆ ಹಂಚಿ., ಮತ್ತು ನಿಮ್ಮ ಪತಿ ಮಾತನಾಡುವಾಗ ಅದನ್ನು ಸರಿಯಾಗಿ ಕೇಳಿ. ಮುಕ್ತವಾಗಿ ಮಾತನಾಡಿದಾಗ ಮಾತ್ರ ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತೆ.
ನಿಮ್ಮ ಅಗತ್ಯಗಳ ಬಗ್ಗೆ ಮಾತನಾಡಿ.
ನಿಮ್ಮ ಅಗತ್ಯಗಳು ಮತ್ತು ಬಯಕೆಗಳನ್ನು ನಿಮ್ಮ ಗಂಡನಿಗೆ ತಿಳಿಸುವುದು ಉತ್ತಮ ಹೆಂಡತಿಯಾಗಲು ನಿಮಗೆ ಸಹಾಯ ಮಾಡುವ ಕೌಶಲ್ಯವಾಗಿದೆ. ನಿಮ್ಮ ಪತಿ ನಿಮ್ಮಿಂದ ದೂರವಿದ್ದರೆ, ನಿರಾಶೆಗೊಂಡಿದ್ದರೆ ಅದರ ಅರ್ಥ, ಅವರಿಗೆ ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು. ಹಾಗಾಗಿ ನಿಮ್ಮ ಅಗತ್ಯಗಳು ಬಯಕೆಗಳ ಬಗ್ಗೆ ಮಾತನಾಡಿ.
ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಿ
ಗಂಡ ಮತ್ತು ಹೆಂಡತಿಗೆ ಆರೋಗ್ಯಕರ ಜೀವನಶೈಲಿಯನ್ನು (Healthy lifestyles) ಹೊಂದುವುದು, ಉತ್ತಮ ದಾಂಪತ್ಯ ಜೀವನಕ್ಕೆ ದಾರಿದೀಪವಾಗುತ್ತೆ. ಈ ಕಾರಣದಿಂದಾಗಿ, ಪರ್ಫೆಕ್ಟ್ ಹೆಂಡತಿಯಾಗುವುದು ಹೇಗೆ ಎಂದು ಕಲಿಯುವ ಮೂಲಕ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ನಿಮ್ಮ ಸಂಗಾತಿಯನ್ನು ನೀವು ಪ್ರೇರೇಪಿಸಬಹುದು. ಜೊತೆಯಾಗಿ ಇಬ್ಬರು ಕೆಲಸ ಮಾಡಿದಾಗ ಜೀವನ ಚೆನ್ನಾಗಿರುತ್ತೆ. .
ಸ್ಪಾರ್ಕ್ ಅನ್ನು ಜೀವಂತವಾಗಿರಿಸಿ
ಆರೋಗ್ಯಕರ ವೈವಾಹಿಕ ಜೀವನಕ್ಕಾಗಿ ನೀವು ಅನ್ಯೋನ್ಯತೆಗೆ (intimacy) ಸಮಯವನ್ನು ಮೀಸಲಿಡಬೇಕು. ಸಂತೃಪ್ತ ಲೈಂಗಿಕ ಜೀವನವು ಗಂಡನೊಂದಿಗಿನ ನಿಮ್ಮ ಸಂಬಂಧವನ್ನು ಆಳಗೊಳಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಭಾವನಾತ್ಮಕ ಮತ್ತು ದೈಹಿಕ ಆರೋಗ್ಯವನ್ನು ಹೆಚ್ಚಿಸುತ್ತದೆ.
ಹಣಕಾಸಿನ ಜವಾಬ್ದಾರಿಗಳನ್ನು ಹಂಚಿಕೊಳ್ಳಿ (Financial Responsibilities)
ಹಣಕಾಸಿನ ಬಾಧ್ಯತೆಗಳನ್ನು ಹಂಚಿಕೊಳ್ಳುವುದು ಉತ್ತಮ ಹೆಂಡತಿಯ ಅಗತ್ಯ ಭಾಗಗಳಲ್ಲಿ ಒಂದಾಗಿದೆ. ನಿಮ್ಮ ಹಣಕಾಸಿನ ನಿರೀಕ್ಷೆಗಳು ಮತ್ತು ಗುರಿಗಳ ಬಗ್ಗೆ ಪತಿಯೊಂದಿಗೆ ಮುಕ್ತವಾಗಿ ಮಾತನಾಡಿ. ಮನೆಯ ಹಣಕಾಸು ವ್ಯವಸ್ಥೆ ಜೊತೆಯಾಗಿ ಸೇರಿ ಮಾಡಿದ್ರೆ ಸಮಸ್ಯೆ ಇರೋಲ್ಲ.