ಒಂದೇ ದಿನ ಇಬ್ಬರ ಮದುವೆಯಾದ ಕಿಲಾಡಿ: ಬೆಳಗ್ಗೆ ಪ್ರೇಯಸಿ, ಸಂಜೆ ಪೋಷಕರು ನೋಡಿದ ಹುಡುಗಿ ಜೊತೆ ಮದ್ವೆ

ಇಲ್ಲೊಂದು ಕಡೆ ಯುವಕನೋರ್ವ ಒಂದೇ ದಿನ ಎರಡೆರಡು ಮದ್ವೆಯಾಗಿದ್ದಾನೆ. ಬೆಳಗ್ಗೆ ಪ್ರೇಯಸಿಯನ್ನು ಮದುವೆಯಾದ ಯುವಕ ಸಂಜೆಯ ವೇಳೆಗೆ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ. ಉತ್ತರ ಪ್ರದೇಶದ ಗೋರಖ್‌ಪುರದ ಹರ್‌ಪುರ್ ಬುಧಾತ್ ಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 

Man Marries Two Women in One Day First Wife Files Complaint

ವಿವಾಹಕ್ಕೆ ಸಂಬಂಧಿಸಿದ ಅನೇಕ ವಿಚಿತ್ರ ಸುದ್ದಿಯನ್ನು ನಾವು ಕೇಳಿದ್ದೇವೆ.  ಸಾಮಾನ್ಯವಾಗಿ ಮದುವೆ ಮಂಟಪದಲ್ಲೇ ವಧುಗಳು ಮದುವೆಯಾಗಲು ನಿರಾಕರಿಸಿ ಎದ್ದು ಹೋದಂತಹ ಹಲವು ಘಟನೆಗಳು ಈ ಹಿಂದೆ ನಡೆದಿದ್ದು, ಆದರೆ ಇಲ್ಲೊಂದು ಕಡೆ ಯುವಕನೋರ್ವ ಒಂದೇ ದಿನ ಎರಡೆರಡು ಮದ್ವೆಯಾಗಿದ್ದಾನೆ. ಬೆಳಗ್ಗೆ ಪ್ರೇಯಸಿಯನ್ನು ಮದುವೆಯಾದ ಯುವಕ ಸಂಜೆಯ ವೇಳೆಗೆ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ. ಉತ್ತರ ಪ್ರದೇಶದ ಗೋರಖ್‌ಪುರದ ಹರ್‌ಪುರ್ ಬುಧಾತ್ ಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 

ಒಬ್ಬ ಯುವಕ ಬೆಳಗ್ಗೆ ಒಬ್ಬ ಯುವತಿಯನ್ನು ಮತ್ತು ಸಂಜೆ ಮತ್ತೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ.  ಈತ ನಾಲ್ಕು ವರ್ಷಗಳಿಂದ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದನಂತೆ. ಆ ಹುಡುಗಿಯನ್ನು ಬೆಳಗ್ಗೆ ಮದುವೆಯಾಗಿದ್ದಾನೆ. ಆದರೆ, ಅದೇ ದಿನ ಸಂಜೆ ತನ್ನ ಕುಟುಂಬದವರು ತನಗಾಗಿ ಹುಡುಕಿದ ಹುಡುಗಿಯನ್ನು ಆತ ಮದುವೆಯಾಗಿದ್ದಾನೆ. ಆತನೇನೋ ಮನೆಯವರಿಗೂ ಓಕೆ ತನ್ನ ಪ್ರೇಯಸಿಗೂ ಸಮಾಧಾನವಾಗಬೇಕು ಎಂದು ಯೋಚಿಸಿದ್ದಾನೆ. ಆದರೆ ಪ್ರೇಯಸಿ ಬಿಡಬೇಕಲ್ಲ, 2ನೇ ಮದುವೆಯ ವಿಚಾರ ತಿಳಿದ ಕೂಡಲೇ ರೌದ್ರವತಾರ ತಾಳಿದ ಆಕೆ ಸೀದಾ ಹೋಗಿ ಪೊಲೀಸರಿಗೆ ದೂರು ನೀಡಿದ್ದಾಳೆ. 

ಈಕೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಾನು ಯುವಕನೊಂದಿಗೆ ನಾಲ್ಕು ವರ್ಷಗಳಿಂದ ಪ್ರೀತಿಯಲ್ಲಿದ್ದೆ ಮತ್ತು ಎರಡು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದೇನೆ ಎಂದು ಯುವತಿ ಪೊಲೀಸರಿಗೆ ಹೇಳಿದ್ದಾಳೆ. ಮತ್ತೆ ಗರ್ಭಿಣಿಯಾದಾಗ ಒಂದು ನರ್ಸಿಂಗ್ ಹೋಮ್‌ಗೆ ಕರೆದುಕೊಂಡು ಹೋಗಿದ್ದ ಹೆರಿಗೆಯ ನಂತರ ಮಗುವನ್ನು ಆಸ್ಪತ್ರೆಯ ನರ್ಸ್‌ಗೆ ನೀಡಿದ ಎಂದು ಯುವತಿ ಆರೋಪಿಸಿದ್ದಾಳೆ. 

ಯುವಕನ ಮನೆಯವರು ಮತ್ತೊಬ್ಬ ಮಹಿಳೆಯೊಂದಿಗೆ ಆತನ ಮದುವೆಯನ್ನು ನಿಶ್ಚಯಿಸಿರುವುದು ತಿಳಿದಾಗ ಆಕೆಗೆ ಕೋಪ ಬಂದಿದೆ. ಅವನನ್ನು ಪ್ರಶ್ನಿಸಿದಾಗ, ಕೋರ್ಟ್ ಮ್ಯಾರೇಜ್ ಆದರೆ ನಮ್ಮ ಸಂಬಂಧವನ್ನು ಮನೆಯವರು ಒಪ್ಪಿಕೊಳ್ಳುತ್ತಾರೆ ಎಂದು ಆತ ಯುವತಿಗೆ ಮಾತು ಕೊಟ್ಟಿದ್ದನಂತೆ. ಆದರೆ ಆತ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮನೆಯವರು ಆತನ ಮದುವೆಯನ್ನು ನಿಶ್ಚಯಿಸಿದ ಅದೇ ದಿನಾಂಕದಂದು ಪ್ರೇಯಸಿಯನ್ನು ಮದುವೆಯಾಗಿದ್ದಾನೆ. ಆತ ಈ ರೀತಿ ಮದುವೆಯಾಗುತ್ತಾನೆ ಎಂದು ತನಗೆ ತಿಳಿದಿರಲಿಲ್ಲ ಎಂದು ಯುವತಿ ಆರೋಪಿಸಿದ್ದಾಳೆ. 

ಬೆಳಗ್ಗೆ ಯುವಕ ಪ್ರೇಯಸಿಯನ್ನು ಮದುವೆಯಾಗಿದ್ದಾನೆ, ದೇವಸ್ಥಾನದಲ್ಲಿ ಪ್ರೇಯಸಿ ಜೊತೆಗಿನವಿವಾಹ ಕಾರ್ಯಕ್ರಮಗಳು ನಡೆದವು. ಆದರೆ ರಾತ್ರಿ ಯುವಕ ಮನೆಯವರು ನಿಶ್ಚಿಯಿಸಿದ ಮತ್ತೊಬ್ಬ ಯುವತಿಯನ್ನು ಸಾಂಪ್ರದಾಯಿಕವಾಗಿದ್ದಾನೆ. ಬೆಳಗ್ಗೆ ಮದುವೆಯಾದ ಪ್ರೇಯಸಿ ಆತನ ಮನೆಗೆ ಬಂದಾಗ ಯುವಕನ ಮನೆಯವರು ತನ್ನನ್ನು ಅವಮಾನಿಸಿದರು ಮತ್ತು ಮನೆಯಿಂದ ಹೊರಗೆ ಹಾಕಿದರು ಎಂದು ಯುವತಿ ಆರೋಪಿಸಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ನೀಡಿದ ದೂರನ್ನು ಸ್ವೀಕರಿಸಲಾಗಿದೆ ಮತ್ತು ಯುವತಿ ಮಾಡಿದ ಆರೋಪಗಳು ಸರಿ ಎಂದು ಕಂಡುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಜಿತೇಂದ್ರ ಕುಮಾರ್ ಶ್ರೀವಾಸ್ತವ ಹೇಳಿದ್ದಾರೆ.

Latest Videos
Follow Us:
Download App:
  • android
  • ios