* ವ್ಯಕ್ತಿಗೆ ಮುಳುವಾಯ್ತು ಅಕ್ರಮ ಸಂಬಂಧ* ಹೆಂಡತಿ ಮಗನಿಗೆ ತಿಳಿಯದಂತೆ ಹುಡುಗಿ ಜೊತೆ ಸಂಬಂಧ* 'ಮಗನ ಮಾಜಿ ಪ್ರೇಯಸಿ ಜೊತೆಗೇ ರಿಲೇಷನ್‌ಶಿಪ್
ನವದೆಹಲಿ(ಜೂ.18): ಮಧ್ಯವಯಸ್ಕನೊಬ್ಬನಿಗೆ ತನ್ನ ಮಗನ ಮಾಜಿ ಗೆಳತಿಯ ಮೇಲೆ ಪ್ರೀತಿ ಹುಟ್ಟಿಕೊಂಡಿದೆ. ಪ್ರೀತಿ ಏಕಮುಖವಾಗಿರದೆ,ಆ ಯುವತಿಯೂ ಕೂಡ ಅವನನ್ನು ಸಮಾನವಾಗಿ ಪ್ರೀತಿಸುತ್ತಿದ್ದಾಳೆ. ಈ ವ್ಯಕ್ತಿ ಆಗಾಗ್ಗೆ ತನ್ನ ಹೆಂಡತಿಗೆ ಅಂದರೆ ಮಗನ ತಾಯಿಗೆ ಸುಳ್ಳು ಹೇಳಿ ಆ ಹುಡುಗಿಯನ್ನು ಭೇಟಿಯಾಗಲು ಹೋಗುತ್ತಿದ್ದ. ಇಬ್ಬರೂ ಒಂದೇ ಹಾಸಿಗೆಯಲ್ಲಿ ಅನೇಕ ರಾತ್ರಿಗಳನ್ನು ಒಟ್ಟಿಗೆ ಕಳೆದಿದ್ದಾರೆ. ಇನ್ನು ಅನೇಕ ಬಾರಿ ಮಗ ವಿದೇಶದಲ್ಲಿದ್ದ ಸಂದರ್ಭದಲ್ಲಿ ತಾನು ಆತನದ್ದೇ ಹಾಸಿಗೆಯಲ್ಲಿ ಆತನ ಮಾಜಿ ಪ್ರೇಯಸಿ ಜೊತೆ ರಾತ್ರಿಇ ಕಳೆದಿರುವುದಾಗಿಯೂ ಆತ ಹೇಳಿಕೊಂಡಿದ್ದಾನೆ.
ಇ-ಮೇಲ್ ಮೂಲಕ ಈ ವಿಚಾರವನ್ನು ಬಹಿರಂಗಪಡಿಸಲಾಗಿದೆ. ಅವರು ಈ ಇಮೇಲ್ ಅನ್ನು ಮಾಧ್ಯಮ ಕಂಪನಿಗೆ ಕಳುಹಿಸಿದ್ದಾರೆ. ನನ್ನ ಮಗನಿಗಿಂತ ಹೆಚ್ಚು ಸಂತೋಷವನ್ನು ಆಕೆ ನನ್ನಿಂದ ಪಡೆಯುತ್ತಾಳೆ ಎಂದು ಹುಡುಗಿ ಹೇಳುತ್ತಿದ್ದಾಳೆ ಎಂದು ಈ ವ್ಯಕ್ತಿ ಹೇಳಿದ್ದಾನೆ. ಆದಾಗ್ಯೂ, ತಾನು ಮಾಡುತ್ತಿರುವುದು ಸರಿಯಲ್ಲ ಎಂದು ವ್ಯಕ್ತಿ ಕೆಲ ಸಮಯದ ನಂತರ ಅರ್ಥಮಾಡಿಕೊಂಡಿದ್ದಾನೆ. ಆದರೆ ಅಷ್ಟರಲ್ಲೇ ಬಹಳ ತಡವಾಗಿದೆ. ಸಂಬಂಧವನ್ನು ಕೊನೆಗಾಣಿಸಲು ಅವನು ಹುಡುಗಿಯೊಂದಿಗೆ ಮಾತನಾಡಿದಾಗಲೆಲ್ಲಾ ಅವಳು ನಿರಾಕರಿಸಿದ್ದಾಳೆ. ಅಷ್ಟೇ ಅಲ್ಲ ಹಲವು ಬಾರಿ ಬ್ಲಾಕ್ ಮೇಲ್ ಕೂಡ ಮಾಡಿದ್ದಾಳೆ. ಈಗ ವ್ಯಕ್ತಿ ಪ್ರಪಂಚದಾದ್ಯಂತ ತಾನೇನು ಮಾಡಬಹುದು ಎಂದು ಸಲಹೆ ಕೇಳುತ್ತಿದ್ದಾನೆ. ಆದರೆ ಆತನ ಹೆಸರು ಅಥವಾ ಗುರುತನ್ನು ಬಹಿರಂಗಪಡಿಸದೆ ಇಂತಹ ಸಲಹೆ ಕೇಳಲಾರಂಭಿಸಿದ್ದಾನೆ.
ನಾನು ಆಕೆಯ ಈವರೆಗಿನ ಅತ್ಯುತ್ತಮ ಗೆಳೆಯ ಎನ್ನುತ್ತಾಳೆ ಹುಡುಗಿ
ಆ ವ್ಯಕ್ತಿ ತನ್ನ ಸಂಬಂಧದ ಬಗ್ಗೆ ಮತ್ತಷ್ಟಟು ಬರೆದಿದ್ದಿದ್ದು, ನಾನು ವ್ಯಾಪಾರಕ್ಕಾಗಿ ಹೊರಗೆ ಹೋಗುತ್ತಿದ್ದೇನೆ ಎಂದು ನನ್ನ ಹೆಂಡತಿಗೆ ಹೇಳುತ್ತಿದ್ದೆ. ನಾನು ಹೊಸ ವ್ಯವಹಾರವನ್ನು ಪ್ರಾರಂಭಿಸುತ್ತಿದ್ದೇನೆ ಎಂದು ಆಕೆ ಭಾವಿಸಿದ್ದಳು, ಆದರೆ ವಾಸ್ತವದಲ್ಲಿ ಅಂತಹದ್ದೇನೂ ಇಲ್ಲ. ನಾನು ನನ್ನ ಮಗನ ಮಾಜಿ ಗೆಳತಿಯನ್ನು ಭೇಟಿಯಾಗಲು ಹೋಗುತ್ತಿದ್ದೆ. ಮಗನೊಂದಿಗಿನ ಅನುಭವವು ಉತ್ತಮವಾಗಿಲ್ಲ ಎಂದು ಹುಡುಗಿ ನನ್ನ ಬಳಿ ಹೇಳಿದ್ದಳು. ಅಲ್ಲದೇ ನನ್ನೊಂದಿಗೆ ಸಂತೋಷ ಸಿಗುತ್ತದೇ ಎಂದೂ ಹೇಳುತ್ತಾಳೆ. ನಾನು ಅವಳ ಅತ್ಯುತ್ತಮ ಗೆಳೆಯ ಎಂದು ಅವಳು ಹೇಳುತ್ತಾಳೆ ಎಂದಿದ್ದಾರೆ. ಆದರೆ ಈ ಸಂಬಂಧದ ವಿಚಾರ ಆ ವ್ಯಕ್ತಿಯ ಪತ್ನಿಗಾಗಲಿ, ಮಗನಿಗಾಗಲಿ ತಿಳಿದಿಲ್ಲ.
ಸಂಬಂಧ ಮುರಿದುಕೊಳ್ಳುವ ವಿಚಾ ಬಂದಾಗೆಲ್ಲಾಆ ಹುಡುಗಿ ಸಿಟ್ಟಾಗುತ್ತಾಳೆ ಮತ್ತು ಬ್ಲಾಕ್ ಮೇಲ್ ಮಾಡುತ್ತಾಳೆ.
ತನಗೂ ಹುಡುಗಿಯ ಜೊತೆ ಇರಲು ಇಷ್ಟ ಎಂದು ಆ ವ್ಯಕ್ತಿ ಹೇಳಿದ್ದಾನೆ. ಅವಳು ಹತ್ತಿರದಲ್ಲಿದ್ದಾಗ ಸಮಾಧಾನ ಮತ್ತು ಅವಳು ದೂರವಾದಾಗ ಚಡಪಡಿಕೆ ಇರುತ್ತದೆ, ಆದರೆ ಅದು ಒಳ್ಳೆಯದಲ್ಲ. ನನ್ನ ಹೆಂಡತಿ ಮತ್ತು ಮಗನಿಗೆ ಈ ಸಂಬಂಧದ ಬಗ್ಗೆ ತಿಳಿದಾಗ, ಅವರು ಏನು ಯೋಚಿಸುತ್ತಾರೆ? ವಾಸ್ತವವಾಗಿ, ನಿಜವಾದ ಕೋಲಾಹಲ ಆಗ ಉಂಟಾಗುತ್ತದೆ. ಇದನ್ನು ಯೋಚಿಸುತ್ತಾ, ನಾನು ಹುಡುಗಿಯಿಂದ ದೂರವಿರಲು ಪ್ರಯತ್ನಿಸುತ್ತೇನೆ, ಆದರೆ ನನ್ನನ್ನು ತನ್ನಿಂದ ದೂರ ಹೀಗಲು ಆಕೆ ಬಿಡುವುದಿಲ್ಲ. ಈ ಬಗ್ಗೆ ಎಲ್ಲರಿಗೂ ತಿಳಿಸುತ್ತೇನೆ ಎಂದು ಬ್ಲಾಕ್ ಮೇಲ್ ಮಾಡುತ್ತಾಳೆ ಎಂದಿದ್ದಾನೆ.
