ಇತ್ತೀಚೆಗೆ ಯುವಕರು ಡೇಟಿಂಗ್ ಆ್ಯಪ್‌ಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಅಂಕಿತ್ ಎಂಬ ವ್ಯಕ್ತಿಗೆ ಟಿಂಡರ್‌ನಲ್ಲಿ 10 ನಿಮಿಷಗಳಲ್ಲಿ 111 ಮ್ಯಾಚ್‌ಗಳು ಬಂದಿವೆ. ಈ ಬಗ್ಗೆ ಆತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ. ಆದರೆ, ಡೇಟಿಂಗ್ ಆ್ಯಪ್‌ಗಳಲ್ಲಿ ನಕಲಿ ಪ್ರೊಫೈಲ್‌ಗಳ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ.
ಯುವಕರ ಟೈಂಪಾಸ್ ಫ್ಲಾಟ್ಫಾರ್ಮ್ ಕೇವಲ ಇನ್ಸ್ಟಾ, ಎಕ್ಸ್, ಯುಟ್ಯೂಬ್ ಮಾತ್ರ ಅಲ್ಲ. ಇತ್ತೀಚಿನ ದಿನಗಳಲ್ಲಿ ಯುವಕರು ಡೇಟಿಂಗ್ ಅಪ್ಲಿಕೇಷನ್ (dating application)ಗಳಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ತಮ್ಮ ಪೊಫೈಲ್ಗಳನ್ನು ಡೇಟಿಂಗ್ ಅಪ್ಲಿಕೇಷನ್ಗೆ ಅಪ್ಲೋಡ್ ಮಾಡಿ, ಯಾರು ಮ್ಯಾಚ್ ಆಗ್ತಾರೆ, ಯಾರೆಲ್ಲ ಈ ಅಪ್ಲಿಕೇಷನ್ನಲ್ಲಿದ್ದಾರೆ ಎಂಬುದನ್ನು ಚೆಕ್ ಮಾಡ್ತಾ ಕುಳಿತಿರ್ತಾರೆ. ಈ ಡೇಟಿಂಗ್ ಅಪ್ಲಿಕೇಷನ್ ನಲ್ಲಿಯೂ ಸಾಕಷ್ಟು ಮೋಸ ನಡೆಯೋದಿದೆ. ಹಾಗೆಯೇ ಎಷ್ಟೇ ಚೆಂದದ, ಆಕರ್ಷಕ ಪ್ರೊಫೈಲ್ ಹಾಕಿದ್ರೂ ಒಂದೋ ಎರಡೋ ಮ್ಯಾಚ್ ಸಿಗೋದು ಅನೇಕರಿಗೆ ಕಷ್ಟ. ತಿಂಗಳುಗಟ್ಟಲೆ ಕಾದ್ಮೇಲೆ ಒಂದೆರಡು ಮ್ಯಾಚ್ ಸಿಗುತ್ತೆ. ಆದ್ರೆ ಮತ್ತೆ ಕೆಲವರ ಅದೃಷ್ಟ ಭಿನ್ನವಾಗಿರುತ್ತೆ. ಅವ್ರು ಟೈಂ ಪಾಸಿಗೆ ಅಂತ ಡೇಟಿಂಗ್ ಪ್ರೊಫೈಲ್ ಓಪನ್ ಮಾಡಿದ್ರೂ ಹುಡುಗಿಯರು ಮುತ್ತಿಕೊಳ್ತಾರೆ.
ಅದಕ್ಕೆ ಎಕ್ಸ್ ಖಾತೆ (X account)ಯಲ್ಲಿ ಪೋಸ್ಟ್ ಹಾಕಿರುವ ವ್ಯಕ್ತಿ ಉತ್ತಮ ಉದಾಹರಣೆ. ಅಂಕಿತ್ ಎನ್ನುವ ವ್ಯಕ್ತಿ, ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಟೈಂ ಪಾಸ್ ಮಾಡಲು ಟಿಂಡರ್ ಡೇಟಿಂಗ್ ಅಪ್ಲಿಕೇಷನ್ ಬಳಸಿದ್ದಾನೆ. ಆದ್ರೆ ಇಲ್ಲೊಂದು ಮ್ಯಾಜಿಕ್ ನಡೆದಿದೆ. ಓಪನ್ ಮಾಡಿದ 10 ನಿಮಿಷದಲ್ಲಿ ಆತನಿಗೆ 111 ಹುಡುಗಿಯರ ಪ್ರೊಫೈಲ್ ಮ್ಯಾಚ್ ಆಗಿದೆ. ಇದನ್ನು ನೋಡಿ ಖುಷಿಯಾದ ವ್ಯಕ್ತಿ, ಸೋಶಿಯಲ್ ಮೀಡಿಯಾದಲ್ಲಿ ಇದ್ರ ಬಗ್ಗೆ ಹೇಳ್ಕೊಂಡಿದ್ದಾನೆ.
ಸಲ್ಮಾನ್ ಖಾನ್‌ಗೆ ಭಾರತದಲ್ಲಿ ಹುಡುಗಿ ಸಿಗಲಿಲ್ವಾ? ಪಾಕ್ ನಟಿ ಮದುವೆಯಾಗುವ ರಹಸ್ಯ ರಿವೀಲ್
ಅಂಕಿತ್ ತನ್ನ ಖಾತೆಯಲ್ಲಿ ಡೇಟಿಂಗ್ ಅಪ್ಲಿಕೇಷನ್ ನಲ್ಲಿ 10 ನಿಮಿಷಕ್ಕೆ 111 ಪ್ರೊಫೈಲ್ ಮ್ಯಾಚ್ ಆಗಿದ್ದನ್ನು ಪೋಸ್ಟ್ ಮಾಡಿದ್ದಾನೆ. ಡೇಟಿಂಗ್ ಅಪ್ಲಿಕೇಶನ್ ಮತ್ತು ಮ್ಯಾಚಿಂಗ್ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾನೆ. ಬೋರಾ ಆದಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 10 ನಿಮಿಷಗಳ ಕಾಲ ಸ್ವೈಪ್ ಮಾಡಿದ್ರೆ ಸಾಕು ಎಂದು ಶೀರ್ಷಿಕೆ ಹಾಕಿರುವ ಅಂಕಿತ್, ಚಾಟ್ಸ್, ಯುವರ್ ಮ್ಯಾಚಸ್ ಎನ್ನುವ ಸ್ಕ್ರೀನ್ ಶಾಟ್ ಹಾಕಿದ್ದಾನೆ. ಅದ್ರಲ್ಲಿ ಹುಡುಗಿಯರ ಫೋಟೋಗಳಿವೆ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಹುಡುಗಿಯರ ಫೋಟೋ ಬಹಿರಂಗಪಡಿಸಲು ಇಷ್ಟಪಡದ ಅಂಕಿತ್, ಇಮೋಜಿಗಳನ್ನು ಹಾಕಿ, ಫೋಟೋ ಮುಚ್ಚಿದ್ದಾನೆ.
ಅಂಕಿತ್ ಎಕ್ಸ್ ಪೋಸ್ಟ್ ವೈರಲ್ ಆಗಿದೆ. ಬಳಕೆದಾರರು ತಮ್ಮದೇ ಅಭಿಪ್ರಾಯ ಮುಂದಿಟ್ಟಿದ್ದಾರೆ. ಪರ್ಫಾರ್ಮೆನ್ಸ್ ಮಾರ್ಕೆಟಿಂಗ್ ಎಂದು ಒಬ್ಬರು ಕಮೆಂಟ್ ಮಾಡಿದ್ರೆ, ಇದು ಒಳ್ಳೆಯ ಕೇಸ್ ಸ್ಟಡಿ ಆಗ್ಬಹುದು ಎಂದು ಇನ್ನೊಬ್ಬರು ಹೇಳಿದ್ದಾರೆ. ಇವರೆಲ್ಲ ಹುಡುಗಿಯರಾ ಎಂಬುದು ನನಗೆ ಅನುಮಾನ ಎಂದು ಇನ್ನೊಬ್ಬರು ಕಮೆಂಟ್ ಹಾಕಿದ್ದಾರೆ. 111 ಮ್ಯಾಚ್, ಇದು ಸಾಧ್ಯವೇ ಎಂದು ಇನ್ನೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದ್ರಲ್ಲಿ ಶೇಕಡಾ 99.99 ಜನರು ನಕಲಿ ಖಾತೆಗಳನ್ನು ಹೊಂದಿರುವ ಸ್ಕ್ಯಾಮರ್‌ಗಳಾಗಿರುತ್ತಾರೆ, ವಂಚಕರಿಗೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ತಿಳಿದಿದೆ ಎಂದು ಮತ್ತೊಬ್ಬರು ಬರೆದ್ರೆ, ಇಷ್ಟೊಂದು ದೊಡ್ಡ ಲೀಸ್ಟ್ ಇದ್ರೆ ಯಾರನ್ನು ಸ್ವೈಫ್ ಮಾಡ್ಬೇಕು, ಯಾರನ್ನು ಸ್ವೈಫ್ ಮಾಡ್ಬಾರದು ತಿಳಿಯೋದಿಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ. ಪ್ರೊಫಲ್ನಲ್ಲಿ ಅಂಥ ವಿಶೇಷ ಏನಿದೆ, ನಮಗೂ ತಿಳಿಸಿ ಅಂತ ಮತ್ತೆ ಕೆಲವರು ಅಂಕಿತ್ ಸಲಹೆ ಕೇಳಿದ್ದಾರೆ. ಅನೇಕ ಕಮೆಂಟ್ಗೆ ಅಂಕಿತ್ ಉತ್ತರ ಕೂಡ ನೀಡಿದ್ದಾರೆ.
ಭಾರತೀಯರ ಆತಿಥ್ಯಕ್ಕೆ ಮನಸೋತ ರಷ್ಯಾದ ಪ್ರವಾಸಿಗ; ನೀವೊಮ್ಮೆ ಭಾರತಕ್ಕೆ ಬನ್ನಿ ಎಂದು
ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಅಪ್ಲಿಕೇಶನ್‌ಗಳಾದ ಬಂಬಲ್ ಮತ್ತು ಟಿಂಡರ್‌ಗಳ ಜನಪ್ರಿಯತೆ ಹೆಚ್ಚುತ್ತಿದೆ. ಜನರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡ್ತಿದ್ದಾರೆ. ತಮಗೆ ಸರಿ ಹೊಂದುವ ಸಂಗಾತಿ ಇದ್ರಲ್ಲಿ ಸಿಗ್ಬಹುದು ಎಂಬ ನಿರೀಕ್ಷೆಯಲ್ಲಿ ಯುವಕರಿದ್ದಾರೆ. ಆದ್ರೆ ಒಂದೇ ಬಾರಿ ಈ ಪ್ರೊಫೈಲ್ ನಂಬೋ ಮೂರ್ಖತನ ಮಾಡ್ಬೇಡಿ. ನಕಲಿ ಫೋಟೋ, ಮಾಹಿತಿಯನ್ನು ಹಂಚಿಕೊಳ್ಳುವ ಜನರ ಸಂಖ್ಯೆ ಸಾಕಷ್ಟಿದೆ.
