Real Story: ತಂದೆಗೆ ಮಗಳಾಗ್ತಿದ್ದಾಳೆ ಈತ ಪ್ರೀತಿಸಿದ ಹುಡುಗಿ!
ಅನೇಕ ಬಾರಿ ನಾವು ಅಂದುಕೊಳ್ಳೋದು ಒಂದು, ಆಗೋದು ಇನ್ನೊಂದು. ಜೀವನದಲ್ಲಿ ಸಿಗುವ ಶಾಕ್ ನಿಂದ ಚೇತರಿಸಿಕೊಳ್ಳುವುದು ಕಷ್ಟ. ಆದ್ರೆ ಚೇತರಿಕೆ ಅನಿವಾರ್ಯವಾಗುತ್ತದೆ. ಈತ ಪ್ರೀತಿಸಿದ ಹುಡುಗಿ ಈಗ ಮಲ ಸಹೋದರಿಯಾಗಿ ಬರ್ತಿದ್ದಾಳೆ. ಅದನ್ನು ತಂದೆಗೆ ಹೇಳಲಾಗದೆ ತನ್ನ ಪ್ರೀತಿಯನ್ನೇ ತ್ಯಾಗ ಮಾಡಿದ್ದಾನೆ.
ಜೀವನ (Life ) ಅಂದ್ಮೇಲೆ ಸುಖ – ದುಃಖ, ಸಾವು- ನೋವು ಇದ್ದಿದ್ದೆ. ಯಾವಾಗ ಏನಾಗುತ್ತೆ ಎನ್ನುವುದು ತಿಳಿಯೋದಿಲ್ಲ. ಎಲ್ಲವನ್ನೂ ಎದುರಿಸಲು ಸಿದ್ಧವಾಗಿರಬೇಕು. ಜೀವನದಲ್ಲಿ ಅತ್ಯಂತ ಸುಂದರವಾದ ಹಾಗೂ ತೃಪ್ತಿಕರ ದಿನಗಳನ್ನು ಕಳೆಯುತ್ತಿರುವಾಗ್ಲೇ ಬರಸಿಡಿಲು ಬರಬಹುದು. ಅದ್ರಿಂದ ಚೇತರಿಸಿಕೊಂಡು ಮುಂದೆ ಸಾಗುವವನೇ ಬುದ್ಧಿವಂತ. ಈ ಯುವಕನ ಜೀವನದಲ್ಲೂ ಅದೇ ಆಗಿದೆ. ಪ್ರೀತಿ (Love) ಯ ಉತ್ತುಂಗದಲ್ಲಿದ್ದ ಹುಡುಗ ಒಂದೇ ಕ್ಷಣದಲ್ಲಿ ಪಾತಳಕ್ಕೆ ಬಿದ್ದಿದ್ದಾನೆ. ಇನ್ನೇನು ಪ್ರೀತಿಸ್ತಿದ್ದೇನೆ ಎಂದು ಹುಡುಗಿಗೆ ಹೇಳ್ಬೇಕು, ಆಗ್ಲೇ ಆತನ ಜೀವನಕ್ಕೆ ಹೊಸ ತಿರುವು ಸಿಕ್ಕಿದೆ. ಅಷ್ಟಕ್ಕೂ ಆತನ ಬಾಳಿನಲ್ಲಿ ನಡೆದ ಘಟನೆ ಏನು ಎಂಬುದನ್ನು ಇಲ್ಲಿ ಹೇಳ್ತೇವೆ.
ಆ ಹುಡುಗಿ (Girl) ತುಂಬಾ ಸುಂದರವಾಗಿದ್ದಳು : ಕೆಲ ತಿಂಗಳ ಹಿಂದೆ ಆತ ಸ್ನೇಹಿತನ ಜೊತೆ ಸುತ್ತಾಡಲು ಹೊರಗೆ ಹೋಗಿದ್ದ. ಆ ವೇಳೆ ಆತನ ಸ್ನೇಹಿತನ ಸ್ನೇಹಿತೆಯ ಪರಿಚಯವಾಗಿದೆ. ಈತನ ಬಳಿ ಬಂದು ಕೈ ಕುಲುಕಿದ ಹುಡುಗಿ ಸ್ಮೈಲ್ ಮಾಡಿದ್ದಾಳೆ. ಆಕೆಯ ಸುಂದರ ಕಣ್ಣಿಗೆ ಹುಡುಗ ಮನಸೋತಿದ್ದಾನೆ. ಆಪ್ತವಾಗಿ ಮಾತನಾಡಿದ ಹುಡುಗಿ ತನ್ನ ಹೆಸರು ಶೀಲಾ ಅಂತಾ ಪರಿಚಯ ಮಾಡಿಕೊಂಡಿದ್ದಾಳೆ.
ಪ್ರೀತಿಗಿ ತಿರುಗಿದ ಸ್ನೇಹ : ಪರಿಚಯ ಸ್ನೇಹವಾಗಿದೆ. ಇಬ್ಬರೂ ಫೋನ್ ನಲ್ಲಿ ಮಾತುಕತೆ ಶುರು ಮಾಡಿದ್ದಾರೆ. ಆಗಾಗ ಭೇಟಿ, ವಿಡಿಯೋ ಕಾಲ್ ಹೀಗೆ ಇಬ್ಬರ ಮಧ್ಯೆ ಮಾತು ಮುಂದುವರೆದಿದೆ. ಸ್ನೇಹ ನಿಧಾನವಾಗಿ ಪ್ರೀತಿಗೆ ತಿರುಗಿದೆ. ತನ್ನನ್ನೂ ಪ್ರೀತಿಸುವ ಜನರು ಜಗತ್ತಿನಲ್ಲಿದ್ದಾರೆ ಎಂಬ ಖುಷಿ ಹುಡುಗಿಗಾಗಿದೆ. ಇಡೀ ದಿನ ಆಕೆ ಬಗ್ಗೆ ಆಲೋಚನೆ ಮಾಡ್ತಿದ್ದ ಹುಡುಗ, ಪ್ರೀತಿ ನಿವೇದನೆಗೆ ಸಿದ್ಧತೆ ನಡೆಸಿದ್ದ.
ಕರ್ತವ್ಯದ ಕರೆ: ಪ್ರತಿದಿನ ಪುಟ್ಟ ಕಂದನೊಂದಿಗೆ ಕಚೇರಿಗೆ ಬರುವ ಮಹಿಳಾ ಪೊಲೀಸ್
ತಂದೆ – ತಾಯಿ ಸಂಬಂಧ : ಪ್ರೀತಿಗೆ ಬಿದ್ದವನು ತನ್ನ ತಂದೆ – ತಾಯಿ ಸಂಬಂಧವನ್ನು ಮರೆತಿದ್ದಾನೆ. ಐದು ವರ್ಷಗಳ ಹಿಂದೆ ಈತನ ಪಾಲಕರು ಬೇರೆಯಾಗಿದ್ದಾರೆ. ಇಡೀ ದಿನ ತಂದೆ – ತಾಯಿ ಕಚ್ಚಾಟ, ಜಗಳ ನೋಡಿದ್ದ ಹುಡುಗ, ಪ್ರೀತಿ ಮೇಲಿನ ಭರವಸೆ ಕಳೆದುಕೊಂಡಿದ್ದ. ಆದ್ರೆ ಶೀಲಾ ಬಂದ್ಮೇಲೆ ಮತ್ತೊಂದು ಜೀವನ ಶುರುವಾಗಿತ್ತು.
ಅಮ್ಮನ ಜೊತೆಗಿದ್ದ ಶೀಲಾ : ಶೀಲಾ ಕೂಡ ಅಮ್ಮನ ಜೊತೆ ವಾಸವಾಗಿದ್ದಳು. ಆಕೆ 8 ವರ್ಷದಲ್ಲಿದ್ದಾಗ್ಲೇ ಆಕೆ ತಂದೆ – ತಾಯಿ ಬೇರೆಯಾಗಿದ್ದರಂತೆ. ಹುಡುಗನಿಗಿಂತ ಒಂದು ವರ್ಷ ದೊಡ್ಡವಳಾಗಿದ್ದರೂ ಶೀಲಾ ಆತನಿಗೆ ಇಷ್ಟವಾಗಿದ್ದಳು.
ಮದುವೆಗೆ ಸಿದ್ಧನಾಗಿದ್ದ ತಂದೆ : ಈ ಎಲ್ಲದರ ಮಧ್ಯೆ, ಹುಡುಗನ ತಂದೆ ಘೋಷಣೆಯೊಂದನ್ನು ಮಾಡಿದ್ದರು. ನಾನು ಮತ್ತೆ ಮದುವೆಯಾಗ್ತೇನೆ ಎಂದಿದ್ದರು. ಇಷ್ಟು ದಿನ ಪ್ರೀತಿಯಿಂದ ವಂಚಿತವಾಗಿದ್ದ ತಂದೆಗೆ ಮತ್ತೆ ಪ್ರೀತಿ ಸಿಗ್ತಿದೆ ಎಂಬ ಸುದ್ದಿ ಕೇಳಿ ಹುಡುಗ ಖುಷಿಯಾಗಿದ್ದ. ಎರಡನೇ ಮದುವೆಗೆ ಒಪ್ಪಿಗೆ ನೀಡಿದ್ದ.
ಮಲ ತಾಯಿ ಭೇಟಿಗೆ ಹೊರಟ ಕುಟುಂಬ : ಮುಹೂರ್ತ ಫಿಕ್ಸ್ ಮಾಡಿ, ತಂದೆ ಮದುವೆಯಾಗ್ತಿರುವ ಎರಡನೇ ತಾಯಿ ಭೇಟಿಗೆ ಈತ ಹೊರಟಿದ್ದ. ಎಲ್ಲರೂ ಹೊಟೇಲ್ ನಲ್ಲಿ ಭೇಟಿಯಾಗಿದ್ದರು. ಮಹಿಳೆ ತುಂಬಾ ಸುಂದರವಾಗಿದ್ದಳು. ಶಾಂತ ಸ್ವಭಾವದ ಮಹಿಳೆಗೆ ಕರೆಯೊಂದು ಬಂದಿದೆ. ಆಗ್ಲೇ ಹುಡುಗನಿಗೆ ತಿಳಿದಿದ್ದು, ಈಕೆಗೆ ಒಬ್ಬಳು ಮಗಳಿದ್ದಾಳೆ ಎನ್ನುವ ಸಂಗತಿ. ತನಗೊಬ್ಬಳು ಸಹೋದರಿ ಸಿಗ್ತಾಳೆ ಎಂಬ ಖುಷಿಯಲ್ಲಿ ಹುಡುಗನಿದ್ದ. ಎಲ್ಲರ ಒತ್ತಾಯದ ಮೇರೆಗೆ ಆಕೆ ಮಗಳು ಅಲ್ಲಿಗೆ ಬಂದಿದ್ದಾಳೆ. ಆದ್ರೆ ಇಬ್ಬರು ಪರಸ್ಪರ ನೋಡಿ ದಂಗಾಗಿದ್ದಾರೆ. ಆಕೆ ಬೇರೆ ಯಾರೂ ಅಲ್ಲ ಶೀಲಾ.
Happy family : ಅವಿಭಕ್ತ ಕುಟುಂಬದಲ್ಲಿದೆ ಇಷ್ಟೊಂದು ಲಾಭ
ಪರಸ್ಪರ ದೃಢ ನಿರ್ಧಾರ : ಮೊದಲೇ ಪರಿಚಯವಿದೆ ಎಂಬುದನ್ನು ತೋರಿಸದ ಇಬ್ಬರು, ಮತ್ತೊಮ್ಮೆ ಪರಿಚಯ ಮಾಡಿಕೊಂಡಿದ್ದಾರೆ. ನಂತ್ರ ಮನೆಗೆ ಬಂದು ಸಂದೇಶ ಕಳುಹಿಸಿದ್ದಾರೆ. ತಂದೆ ಪ್ರೀತಿಗಾಗಿ ತನ್ನ ಪ್ರೀತಿ ತ್ಯಾಗ ಮಾಡಲು ಮುಂದಾದ ಹುಡುಗ, ಆಕೆಗೆ ಪ್ರೀತಿ ವಿಷ್ಯ ಹೇಳಲಿಲ್ಲ. ಹಾಗೆಯೇ ಆಕೆ ಕೂಡ ಬೆಸ್ಟ್ ಫ್ರೆಂಡ್ ರೀತಿಯಲ್ಲಿ ವರ್ತಿಸುತ್ತಿದ್ದಾಳೆ. ಮದುವೆಗೆ ತಯಾರಿ ನಡೆದಿದೆ. ಹಳೆಯದನ್ನು ಮರೆತು, ಕನಸಿನ ಹುಡುಗಿಗಾಗಿ ಕಾಯ್ತಿದ್ದೇನೆ ಎನ್ನುತ್ತಾನೆ ಹುಡುಗ. ತಂದೆ – ತಾಯಿ ಪ್ರೀತಿಗಾಗಿ ಇಬ್ಬರೂ ಪ್ರೀತಿ ತ್ಯಾಗ ಮಾಡಿದ್ದಾರೆ.