Asianet Suvarna News Asianet Suvarna News

Sexual Health: ಸಂಗಾತಿ ಜೊತೆ ಸಂಭೋಗದ ವೇಳೆ ಶಿಶ್ನ ಮುರಿತ, ವಿಚಿತ್ರ ನಡೆಯಲು ಇದೇ ಕಾರಣ

ಸಂಭೋಗ ಬೆಳೆಸುವ ವೇಳೆ ಅನೇಕ ಸಮಸ್ಯೆಗಳು ಕಾಡ್ತವೆ. ಅದ್ರಲ್ಲೂ ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಎಚ್ಚರಿಕೆ ವಹಿಸ್ಬೇಕು. ಇಲ್ಲವೆಂದ್ರೆ ಇಂಡೋನೇಷ್ಯಾದ ವ್ಯಕ್ತಿಯಂತೆ ನೀವೂ ಆಸ್ಪತ್ರೆ ಸೇರಬೇಕಾಗುತ್ತದೆ.
 

Man Diagnosed With Eggplant Deformity After Penis Fractures During Sex
Author
Bangalore, First Published Aug 11, 2022, 1:34 PM IST

ಸಂಭೋಗ, ದಂಪತಿಗೆ ಸುಖ ನೀಡುವ ಜೊತೆಗೆ ಸಂಬಂಧವನ್ನು ಮತ್ತಷ್ಟು ಬಿಗಿಗೊಳಿಸುತ್ತದೆ. ಸಂಭೋಗ ನಡೆಸುವಾಗ ಕೆಲವೊಂದು ಎಚ್ಚರಿಕೆ ತೆಗೆದುಕೊಳ್ಳಬೇಕಾಗುತ್ತದೆ. ಲೈಂಗಿಕ ಸೋಂಕಿನ ಜೊತೆಗೆ ಕೆಲವೊಂದು ವಿಚಿತ್ರ ಸಮಸ್ಯೆಗಳನ್ನು ಜನರು ಎದುರಿಸಬೇಕಾಗುತ್ತದೆ. ಅದಕ್ಕೆ ಇಂಡೋನೇಷ್ಯಾದ ವ್ಯಕ್ತಿಯೊಬ್ಬ ಉತ್ತಮ ನಿದರ್ಶನ. ಆತನಿಗೆ ಸೆಕ್ಸ್ ದುಬಾರಿಯಾಗಿ ಪರಿಣಮಿಸಿದೆ. ಇಂಡೋನೇಷ್ಯಾದಲ್ಲಿ 50 ವರ್ಷದ ವ್ಯಕ್ತಿ ಸಂಭೋಗದ ಸಮಯದಲ್ಲಿ ಅಪರೂಪದ ಶಿಶ್ನ ಮುರಿತಕ್ಕೊಳಗಾಗಿದ್ದಾರೆನೆ. ಇದರಿಂದ ಆ ವ್ಯಕ್ತಿಗೆ Eggplant Deformity ಸಮಸ್ಯೆ ಎದುರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರ ಪ್ರಕಾರ, ಇದು ಅಪರೂಪದ ಸ್ಥಿತಿಯಾಗಿದೆ. ಇದು ಸಾಮಾನ್ಯವಾಗಿ ಲೈಂಗಿಕ ಸಮಯದಲ್ಲಿ ಶಿಶ್ನಕ್ಕೆ ಗಾಯವಾದಾಗ ಸಂಭವಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಇಂಟರ್‌ನ್ಯಾಶನಲ್ ಜರ್ನಲ್ ಆಫ್ ಸರ್ಜರಿ ಕೇಸ್ ರಿಪೋರ್ಟ್ಸ್ (Reports) ನಲ್ಲಿ ಪ್ರಕಟವಾದ ವರದಿಯಲ್ಲಿ, ವ್ಯಕ್ತಿಯ ಈ ಸಮಸ್ಯೆಗೆ ಕಾರಣವೇನು ಎಂಬುದನ್ನು ಹೇಳಲಾಗಿದೆ. ಹಾಗೆಯೇ ಇದಕ್ಕೆ ಹೇಗೆ ಚಿಕಿತ್ಸೆ ನೀಡಲಾಯ್ತು ಎಂಬುದನ್ನು ಕೂಡ ತಿಳಿಸಲಾಗಿದೆ.  

ಸಂಗಾತಿ ಜೊತೆ ಸಂಬಂಧ ಬೆಳೆಸುವ ವೇಳೆ ಸಮಸ್ಯೆ : ರೋಗಿ (Patient) ಯು ತನ್ನ ಸಂಗಾತಿಯೊಂದಿಗೆ ಶಾರೀರಿಕ ಸಂಬಂಧ (Physical Relationship ) ಬೆಳೆಸುವಾಗ ಶಿಶ್ನ (penis) ದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆತ ತನ್ನ ನಿಮಿರುವಿಕೆ ಕಳೆದುಕೊಂಡಿದ್ದಾನೆ ಮತ್ತು ಅವನ ಖಾಸಗಿ ಭಾಗಗಳಲ್ಲಿ ರಕ್ತ ಸಂಗ್ರಹವಾಗಿದೆ ಎಂದು ಆತ ಭಾವಿಸಿದ್ದನಂತೆ. ಆದ್ರೆ ವೈದ್ಯರು ಪರೀಕ್ಷೆ ನಡೆಸಿದಾಗ ಸಮಸ್ಯೆ ತಿಳಿದಿದೆ. 
ವೈದ್ಯರು ವ್ಯಕ್ತಿಯ ಖಾಸಗಿ ಅಂಗವನ್ನು ಪರೀಕ್ಷಿಸಿದಾಗ, ಶಿಶ್ನದ ತುದಿಯಿಂದ ಸ್ಕ್ರೋಟಮ್ ವರೆಗೆ ರಕ್ತ ಹೆಪ್ಪುಗಟ್ಟುವುದು ತಿಳಿದಿದೆ.   ಇದಲ್ಲದೆ ಮೂತ್ರನಾಳದಲ್ಲಿ ಬಿರುಕು ಕೂಡ ಕಂಡುಬಂದಿದೆ. ಚಿಕಿತ್ಸೆ ನೀಡದೆ ಹೋದ್ರೆ ಮೂತ್ರ ವಿಸರ್ಜನೆ ಕಷ್ಟವಾಗ್ತಿತ್ತು ಎಂದು ವೈದ್ಯರು ಹೇಳಿದ್ದಾರೆ. 

ಇದನ್ನೂ ಓದಿ: Real Stories: ಮನೆಯಲ್ಲಿ ನಗ್ನವಾಗಿರ್ತಾರೆ ಅಮ್ಮ ಮಗಳು…! ಬೆತ್ತಲಾಗಿರೋದೆ ಖುಷಿಯಂತೆ!

ಕೆಲ ಚಿಕಿತ್ಸೆ ನಂತ್ರ ದ್ರವ ಸೋರಿಕೆ ಅಥವಾ ಬಾಗಿದ ಶಿಶ್ನದಂತಹ ಯಾವುದೇ ತೊಂದರೆ ಕಾಣಿಸಿಲ್ಲವೆಂದು ವೈದ್ಯರು ಹೇಳಿದ್ದಾರೆ. ಐದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತ್ರ ಮನೆಗೆ ಕಳುಹಿಸಿದ್ದಾರೆ. 21 ದಿನಗಳವರೆಗೆ ಕೃತಕ ಮೂತ್ರ ವಿಸರ್ಜನೆ ನಾಳ ಬಳಸುವಂತೆ ವೈದ್ಯರು ವ್ಯಕ್ತಿಗೆ ಸೂಚನೆ ನೀಡಿದ್ದಾರೆ.  ಈ ಘಟನೆ ಸಮಾಜದಲ್ಲಿ ಅದರಲ್ಲೂ ಯುವಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. 

Eggplant Deformity ಎಂದರೇನು? : ವೈದ್ಯರ ಪ್ರಕಾರ, ಹೆಮೆಟೋಮಾದಿಂದಾಗಿ ಶಿಶ್ನ ಮುರಿತ ಸಂಭವಿಸಿದಾಗ, ಶಿಶ್ನ ಮತ್ತು ಸ್ಕ್ರೋಟಮ್ ಬಳಿ ರಕ್ತ ಸಂಗ್ರಹಗೊಳ್ಳುತ್ತದೆ. ಇದು Eggplant Deformity ಗೆ  ಕಾರಣವಾಗುತ್ತದೆ. Eggplant Deformity ಶಿಶ್ನದ ಉರಿಯೂತವಾಗಿದೆ. ಇದು ಶಿಶ್ನವನ್ನು ಬಲವಂತವಾಗಿ ಬಾಗಿಸುವುದ್ರಿಂದ ಉಂಟಾಗುತ್ತದೆ. ಹೆಮೆಟೋಮಾವು ಶಿಶ್ನವನ್ನು ಕಪ್ಪಾಗಿಸುತ್ತದೆ. ಮತ್ತು ಅದು ಊದಿಕೊಳ್ಳುತ್ತದೆ. 

ಶಿಶ್ನ ಮುರಿತವನ್ನು ತಪ್ಪಿಸಲು ಮುನ್ನೆಚ್ಚರಿಕೆಗಳು ಯಾವುವು?
ತಜ್ಞರ ಪ್ರಕಾರ, ಸಂಭೋಗದ ವೇಳೆ ಎಚ್ಚರಿಕೆ ವಹಿಸಬೇಕು. ಸೆಕ್ಸ್ ವೇಳೆ ಒತ್ತಡ ಹೇರಬಾರದು. ವಿಶೇಷವಾಗಿ ಮಹಿಳೆಯರ ಮೇಲಿನ ಸ್ಥಾನದಲ್ಲಿರುವ ಭಂಗಿಯಲ್ಲಿ ಸಂಭೋಗ ಬೆಳೆಸಬಾರದು.  

ಇದನ್ನೂ ಓದಿ: Love Tips: ಪ್ರೀತಿ ಮಾಡಿ ತಪ್ಪೇನಿಲ್ಲ, ನಿಮ್ಮತನವನ್ನು ಬಿಟ್ಟು ಕೊಡ್ಬೇಡಿ

ಈ ಅಪರೂಪದ ಕಾಯಿಲೆಯಿಂದ ಎಷ್ಟು ಜನರು ಬಳಲುತ್ತಿದ್ದಾರೆ? :  ಶಿಶ್ನದ ಮುರಿತಗಳು ತುಂಬಾ ಸಾಮಾನ್ಯವಲ್ಲ ಎನ್ನುತ್ತಾರೆ ವೈದ್ಯರು. ವರ್ಷಕ್ಕೆ 3 ರಿಂದ 4 ಇಂತ ಪ್ರಕರಣಗಳು ಬರುತ್ತವೆ ಎನ್ನುತ್ತಾರೆ ಅವರು. ಇದು ಬಹಳ ಅಪರೂಪ ಮತ್ತು ಯುವ ಜೋಡಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎನ್ನುವ ವೈದ್ಯರು, ವೈದ್ಯರ ಬಳಿ ಬರುವುದು 3ರಿಂದ ನಾಲ್ಕು ಪ್ರಕರಣ ಮಾತ್ರ. ಆದ್ರೆ ವರ್ಷಕ್ಕೆ ಸುಮಾರು 200 ಜನರು ಶಿಶ್ನ ಮುರಿತ ಸಮಸ್ಯೆ ಎದುರಿಸುತ್ತಾರೆ. ಆದ್ರೆ ವೈದ್ಯರ ಬಳಿ ಬರುವುದು ಅಪರೂಪ ಎನ್ನುತ್ತಾರೆ ವೈದ್ಯರು. 

Follow Us:
Download App:
  • android
  • ios