Asianet Suvarna News Asianet Suvarna News

ಅವನಿಗೆ ಅವಳು ಅರ್ಪಿಸಿಕೊಂಡು ಬಿಡಬೇಕೆಂದುಕೊಂಡಾಗ, ಬೇರೆಯವಳು ಸಿಕ್ಕಾಗಿತ್ತು!

ಅವನ ಮೇಲೆ ಅವಳಿಗೆ ಪ್ರೀತಿ ಇತ್ತು. ಆದರೆ ಹೇಳಿ ಕೊಳ್ಳಳು ಸಂಕೋಚ. ಲೈಫಲ್ಲಿ ಏನೇನೋ ಆಗಿ ಅವಳು ಇನ್ಯಾರನ್ನೋ ಮದ್ವೆಯಾಗೋ ಸಂದರ್ಭ ಬಂದಿತ್ತು. ಅವನಿಗೆ ಅವಳು ಬೇಕಾಗಿತ್ತು. ಯಾವಾಗ 

love should be express when it occurred there is chance of missig it
Author
First Published Aug 8, 2024, 5:03 PM IST | Last Updated Aug 8, 2024, 5:06 PM IST

ಋಣಾನು ಬಂಧ ರೂಪೇಣ ಪಶು ಪತ್ನಿ ಸುತಾಲಯ ಅರ್ಥಾತ್ ಋಣಗಳಿಂದ ಮಾತ್ರ ಪಶುಗಳು ಪತ್ನಿ  ಮಕ್ಕಳು ಮನೆ ಸಿಗೋದು. ಅಷ್ಟೇ ಅಲ್ಲ ಪ್ರತಿಯೊಂದು ಸಂಬಂಧ ಸ್ನೇಹ ಪ್ರೀತಿ ಜೀವನದಲ್ಲಿ ಬಂದು ಹೋಗೊದು... ಯಾಕ್ ಈ‌ ಮಾತು ಅಂದ್ರೆ ಒಂದು ಚಿಕ್ಕ ಕತೆ ಹೇಳ್ತಿನಿ ಸರಿನೋ‌ ತಪ್ಪೋ ಗೊತ್ತಿಲ್ಲ.  ಇದ್ನಾ ಬರಿಯೋಕೆ ಕಾರಣ ರಾತ್ರಿ 3 ಗಂಟೆ ಆಗೋಕ್ ಬಂದ್ರು ಇವತ್ ಆಗಿದ್ ಘಟನೆ ಮಲಗೋಕೆ ಬಿಡ್ತಿಲ್ಲ.

ಆಗಿದ್ದಿಷ್ಟೇ ಅಂದ್ರೆ ಒಂದು 9 ವರ್ಷದ್ ಕತೆ ಅಷ್ಟೇ ದೊಡ್ಡದೇನಲ್ಲ. ನಾನೂ ಕೆಲಸ ಅಂತಾ ಶುರುಮಾಡಿದಾಗ ಅವನು ಆ ಫೀಲ್ಡ್ ಗೆ ಹಳಬ. ಕೆಲಸ ಮಾಡ್ತಾ ಮಾಡ್ತಾ ಪರಿಚಯ ಸ್ನೇಹ ಆಯ್ತು. ಸರ್ ಅಂತಿದ್ದೊಳು ಹೋಗು ಬಾ ಅನ್ನೊಹಾಗಾಯ್ತು. ಅದು ಹೋಗ್ತಾ ಹೋಗ್ತಾ ಪ್ರೀತಿ ಆಗಿತ್ತು. ಪ್ರೀತಿ ಆಗಿದೆ ಅಂತಾ ಗೊತ್ತಿದ್ರು ಯಾಕೋ ಮನಸ್ಸು ಸುಮ್ಮನಿತ್ತು. " ಸಾಲುತಿಲ್ಲವೇ ಸಾಲುತಿಲ್ಲವೇ " ಅಂತಾ ಮನಸ್ಸುಗಳು ಗುನುಗುಡುತ್ತಿದ್ದರು ನಾನ್ಯಾಕೋ ಕಾಣೆ ಸುಮ್ನೆ ಇರ್ತಿದ್ದೆ. ಅಷ್ಟೊಂದ್ ಸುಮ್ನಿರೋಳಲ್ಲ ಒಮ್ಮೆ ಪಿಜಿ ನಲ್ಲಿ ನನ್ ರೂಂ ಬಾಗಿಲು ಲಾಕ್ ಆಗಿ ಬಿಟ್ಟಿತ್ತು. ಅದನ್ನ ತಗಿಯೋಕೆ ಯಾರೂ ಇರಲಿಲ್ಲ. ಆಗ ಅವನಿಗೆ ಕಾಲ್ ಮಾಡಿದೆ. ಅವನು ಬರುವ ಗ್ಯಾಪ್ ನಲ್ಲಿ  ಒಮ್ಮೆ ಟ್ರೈ ಮಾಡಿ ನೋಡೊಣ ಅಂತ ನೋಡಿದೆ. ಡೋರ್ ಪಟ್ ಅಂತಾ ಓಪನ್ ಆಗಿ‌ ಬಿಡೋದಾ.. ಅಯ್ಯೋ ಅಂದೋಳೆ ಮತ್ತೆ ಡೋರ್ ಲಾಕ್ ಮಾಡಿ ಬಿಟ್ಟೆ. ಅಂದುಕೊಂಡತೆ ಅವನು ಬಂದು ಲಾಕ್ ತೆಗೆದ. ಹಾಗೇ ಅವನನ್ನ ಒಮ್ಮೆ ತಪ್ಪಿ ಮಗುವಿನ ಹಾಗೇ ವಾಪಾಸ್ ಕಳಿಸಿಬಿಟ್ಟೆ. ಮನಸಲ್ಲಿ ಅವನಿದ್ದರು ಯಾಕೋ ಬೇಡ ಅನ್ನೊ ಭಾವನೆ ಅತಿಯಾಗಿ ಕಾಡುತ್ತಿತ್ತು.

ಲವ್ವಲ್ಲಿ ಬಿದ್ದಾಗ ಜಯಾ ಬಚ್ಚನ್ ಸ್ಟಾರ್ ನಟಿ, ಆದ್ರೆ ಬಚ್ಚನ್ ಸಾಬ್ ಅವಕಾಶಕ್ಕೆ ಅಲೆಯುತ್ತಿದ್ರಂತೆ!

ಕಾಲಾ ನಂತರ ನನ್ ಜೀವನದಲ್ಲಿ ಮದುವೇ ಆಯ್ತು.  ನಾನೊಂಥರಾ ಹಂಗೆ ಹಿಂಗೆ. ಮದ್ವೆ ಆದ್ಮೇಲೆ ಅವನಿಂದ ದೂರಾ. ಆವಾಗಾವಾಗ ಎಲ್ಲೊ ಒಂದು ಮೂಲೇಲಿ ಚಾಟಿಂಗ್ ಅಷ್ಟೇ. ಸತಿ ಧರ್ಮ ಪರ ಪುರುಷರ ಜೊತೆ ಸಲುಗೆ ಒಳ್ಳೆಯದಲ್ಲ ಅಂತಾ ದೂರಾನೇ ಇದ್ದೆ. ಅವನು ಆಗಾಗ್ಗ ಒಂದು ಭೇಟಿ ಕೇಳ್ತಾನೆ ಇದ್ದ. ಹಾಗಂತ ಒಂದೇ ಒಂದು ಕ್ಷಣವು ನನಗೆ ಅವನ ಮೇಲೆ ಬೇಸರ ಇರಲಿಲ್ಲ. ಬೇಕು ಅನ್ನೊದು‌ ಮನದಲ್ಲಿದ್ದರು, ಪರಿಸ್ಥಿತಿ ಸರಿ ಇರಲಿಲ್ಲ. ಹೀಗಾಗಿ ಅವನಲ್ಲಿ... ನಾನಿಲ್ಲಿ... ಅನ್ಕೊಂಡ್ ಸುಮ್ಮನಿದ್ದೆ.. 

ಬದುಕು ಹೀಗೆ ಇರಲ್ಲ. ನನ್ನ ಸಂಸಾರದಲ್ಲು ಸಾವಿರ ಒಡಕು. ಸಾಲದು ಅನ್ನೊಹಾಗೇ ನನ್ನ ಗಂಡನ ಜೀವನದಲ್ಲಿ ಬೇರೆ ಹುಡುಗಿಯರ ಗೆಜ್ಜೆಯ ನಿನಾದ. ನಾನು ಆಗ್ಲೇ ಹೇಳಿದ್ನಲ್ಲ ನಾನೊಂತರಾ ವಿಚಿತ್ರ ಅಂತಾ. ನೋಡೊವರೆಗೂ ನೋಡಿ ಸುಮ್ಮನಾದೇ‌. ಗಂಡ ಸತ್ತು ಹೋಗಿದ್ದಾನೆ ಅಂತಾ ಮನಸ್ಸಿಗೆ ಸಮಾಧಾನ ಹೇಳಿ ತೆಪ್ಪಗಾದೆ.

ಪ್ರಿಯತಮೆ ತೆಕ್ಕೆಯಲ್ಲಿರುವಾಗ ಪ್ರಜ್ಞೆ ತಪ್ಪಿದ ಗಂಡನ ಲೈಫ್ ಸಪೋರ್ಟ್ ತೆಗೆದ ಪತ್ನಿ!

ಆದ್ರೆ ಅದ್ಯಾಕೋ ಒಂದು ತಿಂಗಳಿಂದ ಹಳೆಯ ಗೆಳಯನ‌ ನೆನಪು. ಅವನ ತೋಳಲ್ಲಿ ಬಂದಿಯಾಗಬೇಕು. ಅವನ ಪ್ರೀತಿಯನ್ನ ಸ್ವೀಕರಿಸಿ ಅವನ ಗುಂಗಲ್ಲಿ ಬದುಕಿಬಿಡೋಣ ಅಂತ. ಆದ್ರೆ ಈಗ ಅದ್ನಾ ಹೇಳಿದ್ರೆ ಅವನು ಸಾವಿರ ಪ್ರಶ್ನೆ ಮಾಡಬಹುದು. ನನ್ ಬಗ್ಗೆ ಕೆಟ್ಟ ಅಭಿಪ್ರಾಯ ಬರಬಹುದು ಅಂತಾ ಸುಮ್ಮನಿದ್ದೆ. ನಾನು ಹಾಗೆಲ್ಲಾ ವಾಟ್ಸ್ ಆ್ಯಪ್ ನಲ್ಲಿ ಯಾರ ಸ್ಟೇಟಸ್ ನೋಡಲ್ಲ. ಆದ್ರೆ ಸಡನ್ ಅವನ ಸ್ಟೇಟಸ್ ನೋಡಿದೆ. ಹೋ ಬರ್ತಡೇ ಅಲ್ವಾ ಅಂತಾ ಒಂದು ಕಾಲ್ ಮಾಡಿದೆ. ಮಾತಾಡುವಾಗ ಮನದಲ್ಲಿರೋ ಆಸೇ ಹೇಳೇ ಬಿಟ್ಟೆ. ನಾ ನಿಂಗೆ ಸಿಗಬೇಕು ಅನ್ಕೊಂಡಿದ್ದೀನಿ. ಇದು ನಿನಗೆ ನನ್ ಕಡೆಯಿಂದ ಗಿಫ್ಟ್ ಅಂತಾ.  ಸಹಜವಾಗಿ ಅವನಿಗೆ ಶಾಕ್ ಆಯ್ತು. ಆದ್ರೆ ವಿಪರ್ಯಾಸ ಅಂದ್ರೆ ಅವನಿಗಿಂತ ನನಗೆ ದೊಡ್ಡ ಶಾಕ್ ಅವನ ಉತ್ತರ."ಊಹೂಂ ನಂಗೆ ಬೇಡ.." 

ಎರಡು ದಿನದ ನಂತರ ನಂಗೆ ಅದಕ್ಕೆ ಕೇಳಿ ಬಂದ ಕಾರಣ. ಅವನ ಜೀವನದಲ್ಲಿ ಆಗತಾನೇ ಅವನ ಗೆಳತಿಯ ಆಗಮನ... ಕೇಳಿ ಖುಷಿ ಪಟ್ಟೆ. ಆದ್ರೆ ಅದರ ಜೊತೆ ನಾನೂ ಸಿಕ್ಕಾಪಟ್ಟೆ ಕೆಟ್ಟವಳು ಅನ್ನೊ ಅಳುಕಿನಲ್ಲೆ ಬಿದ್ದು ಸತ್ತೆ..
 

Latest Videos
Follow Us:
Download App:
  • android
  • ios