MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಲವ್ವಲ್ಲಿ ಬಿದ್ದಾಗ ಜಯಾ ಬಚ್ಚನ್ ಸ್ಟಾರ್ ನಟಿ, ಆದ್ರೆ ಬಚ್ಚನ್ ಸಾಬ್ ಅವಕಾಶಕ್ಕೆ ಅಲೆಯುತ್ತಿದ್ರಂತೆ!

ಲವ್ವಲ್ಲಿ ಬಿದ್ದಾಗ ಜಯಾ ಬಚ್ಚನ್ ಸ್ಟಾರ್ ನಟಿ, ಆದ್ರೆ ಬಚ್ಚನ್ ಸಾಬ್ ಅವಕಾಶಕ್ಕೆ ಅಲೆಯುತ್ತಿದ್ರಂತೆ!

ಸುಮಾರು 50 ವರ್ಷಗಳಿಂದ ಸುಂದರ ಸಂಸಾರ ನಡೆಸುತ್ತಿರುವ ಬಾಲಿವುಡ್ ಬಾದ್ ಷಾ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್, ಸುಂದರ ಪ್ರೇಮ ಕಾವ್ಯ ಶುರುವಾಗಿದ್ದು ಹೇಗೆ ಗೊತ್ತಾ?  

2 Min read
Author : Pavna Das
Published : Aug 08 2024, 04:42 PM IST
Share this Photo Gallery
  • FB
  • TW
  • Linkdin
  • Whatsapp
18

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ (Amitabh Bacchan) ಮತ್ತು ಜಯಾ ಬಚ್ಚನ್ ಜೋಡಿ ತುಂಬಾ ಜನಪ್ರಿಯತೆ ಪಡೆದ ಜೋಡಿ. ಸಿನಿಮಾ ಮೂಲಕ ಜೊತೆಯಾದ ಈ ಜೋಡಿ, ಲವ್, ಡೇಟಿಂಗ್ (Dating), ನಂತ್ರ ಮದುವೆನೂ ಆಗಿ 50 ವರ್ಷ ಯಶಸ್ವಿ ದಾಂಪತ್ಯ ಜೀವನ ನಡೆಸಿದ್ದಾರೆ. ಇವರ ಮುದ್ದಾದ ಲವ್ ಸ್ಟೋರಿ ಇಲ್ಲಿದೆ. 
 

28

ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ (Jaya Bacchan) ಮೊದಲ ಬಾರಿ ಭೇಟಿಯಾಗಿದ್ದು 1970 ರಲ್ಲಿ ಪುಣೆ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ.  ಆವಾಗ್ಲೇ ಬಿಗ್ ಬಿ ಅಮಿತಾಬ್ ಬಚ್ಚನ್ ಪರ್ಸನಾಲಿಟಿಯತ್ತ ಆಕರ್ಷಿತರಾಗಿದ್ದರಂತೆ ಸೂಪರ್ ಸ್ಟಾರ್ ಜಯಾ ಬಚ್ಚನ್
 

38

ಆ ಸಮಯದಲ್ಲಿ ಅಮಿತಾಬ್ ಬಚ್ಚನ್ ಇನ್ನೂ ಸಿನಿಮಾ ರಂಗದಲ್ಲಿ ನೆಲೆಯೂರಿರಲಿಲ್ಲ, ಸಿನಿಮಾದಲ್ಲಿ ಅವಕಾಶ ಪಡೆಯೋದಕ್ಕೆ ಕಷ್ಟಪಡುತ್ತಿದ್ದರು, ಆದರೆ ಜಯಾ ಆವಾಗ್ಲೇ ಸೂಪರ್ ಸ್ಟಾರ್ ನಟಿಯಾಗಿದ್ದರು (Super star actress). ಗುಡ್ಡಿ ಸಿನಿಮಾದ ಶೂಟಿಂಗ್ ಸೆಟ್ ನಲ್ಲಿ ಇಬ್ಬರು ಅಧಿಕೃತವಾಗಿ ಒಬ್ಬರಿಗೊಬ್ಬರು ಪರಿಚಿತರಾದರು. 
 

48

ಒಂದು ದಿನ ಅಮಿತಾಬ್ ಬಚ್ಚನ್ ಮ್ಯಾಗಝಿನ್ ಒಂದರ ಕವರ್ ಪೇಜಿನಲ್ಲಿ ಜಯಾ ಅವರ ಫೋಟೋ ನೋಡಿದರಂತೆ. ಅಂದು ಅಮಿತಾಬ್ ಕನಸಿನ (dream girl) ಹುಡುಗಿ ಹೇಗಿರಬೇಕು ಎಂದು ಬಯಸಿದ್ರೋ ಅದೇ ರೀತಿ ಜಯಾ ಕಂಡಿದ್ದರಂತೆ. ಆವಾಗ್ಲೇ ಮೊದಲ ಬಾರಿಗೆ ಅಮಿತಾಬ್‌ಗೆ ಜಯಾ ಇಷ್ಟ ಆಗಿದ್ದು. 
 

58

ಅಮಿತಾಬ್ ವಿಭಿನ್ನ ವ್ಯಕ್ತಿತ್ವದತ್ತ ಜಯಾ ಎಷ್ಟೊಂದು ಆಕರ್ಷಿತರಾಗಿದ್ರೂ ಅಂದ್ರೆ, ಸ್ವಲ್ಪ ಸಮಯದಲ್ಲೇ ಜಯಾ ಅಮಿತಾಬ್ ಪ್ರೀತಿಯಲ್ಲಿ ಬಿದ್ದಿದ್ದರಂತೆ. ಆದರೆ ಅಮಿತಾಬ್‌ಗೆ ಜಯಾ ಮೇಲೆ ಲವ್ ಆಗಿದ್ದು ಮಾತ್ರ ಏಕ್ ನಜರ್ ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ. ನಂತರ ಇಬ್ಬರು ಡೇಟಿಂಗ್ ಆರಂಭಿಸಿದ್ರು. 
 

68

ಇದಾಗಿ ಸ್ವಲ್ಪ ಸಮಯದಲ್ಲಿ ಬಿಗ್ ಬಿ ಮತ್ತು ಅವರ ಸ್ನೇಹಿತರು ಒಟ್ಟಾಗಿ ಸೇರಿ ಚಾಲೆಂಜ್ ಒಂದು ವೇಳೆ ಜಂಝೀರ್ ಸಿನಿಮಾ ಸೂಪರ್ ಹಿಟ್ ಆದ್ರೆ, ಜಯಾ ಸೇರಿ ಎಲ್ಲಾ ಸ್ನೇಹಿತರು ಜೊತೆಯಾಗಿ ಲಂಡನ್‌ಗೆ ಹೋಗೋದಾಗಿ ನಿರ್ಧರಿಸಿದ್ದರಂತೆ. ಆದರೆ ಬಿಗ್ ಬಿ ತಂದೆ ಮಾತ್ರ ಯಾವುದೆ ಹುಡುಗಿ ಜೊತೆ ಲಂಡನ್‌ಗೆ ಹೋಗಬಾರದು, ಮದುವೆಯಾದ್ರೆ ಮಾತ್ರ ಹುಡುಗಿಯನ್ನ ಕರೆದುಕೊಂಡು ಹೋಗಬಹುದು ಎಂದು ಕಂಡೀಷನ್ ಹಾಕಿದ್ರಂತೆ. 
 

78

ಬಿಗ್ ಬಿಗೆ ತಾವು ಒಂದಲ್ಲ ಒಂದು ದಿನ ಜಯಾ ಅವರನ್ನೇ ಮದುವೆಯಾಗೋದಾಗಿ ಗೊತ್ತಿತ್ತು. ಹಾಗಾಗಿ ಅವರು ನೇರವಾಗಿ ಜಯಾ ಮುಂದೆ ಮದುವೆ ಪ್ರಪೋಸಲ್ ಇಟ್ರಂತೆ, ಅದಕ್ಕೆ ಜಯಾ ಕೂಡ ಖುಷಿಯಿಂದಲೇ ಒಪ್ಪಿಕೊಂಡರು.  ಜಯಾ ಮತ್ತು ಅಮಿತಾಬ್ ಬಚ್ಚನ್ ಜೂನ್ 3, 1973 ರಲ್ಲಿ ಸಪ್ತಪದಿ ತುಳಿದರು. ಅಷ್ಟೇ ಅಲ್ಲ ಮದ್ವೆಯಾದ ಅದೇ ದಿನ ಲಂಡನ್‌ಗೆ ತೆರಳಿದ್ದರು.
 

88

ಇಬ್ಬರ ಪ್ರೀತಿ, ವೈವಾಹಿಕ ಜೀವನ ಚೆನ್ನಾಗಿಯೇ ಇತ್ತು. ಆದರೆ ಯಾವಾಗ ಅಮಿತಾಬ್ ಜೊತೆ ರೇಖಾ ಹೆಸರು ಕೇಳಿ ಬಂತು, ಇಬ್ಬರ ವೈವಾಹಿಕ ಜೀವನದಲ್ಲಿ ಏರಿಳಿತಗಳು ಶುರುವಾದವು. ಆದರೆ ಎಲ್ಲವನ್ನೂ ಮೆಟ್ಟಿ ನಿಂತು, ಜೀವನದಲ್ಲಿ ಬಂದ ಎಲ್ಲಾ ಸಮಸ್ಯೆಗಳನ್ನು ಜೊತೆಯಾಗಿ ಎದುರಿಸಿದ ಈ ಜೋಡಿ ಕಳೆದ 50 ವರ್ಷಗಳಿಂದ ಸುಂದರವಾದ ಸಂಸಾರ ನಡೆಸಿಕೊಂಡು ಬರುವ ಮೂಲಕ, ಯಶಸ್ವಿ ದಾಂಪತ್ಯ ಜೀವನಕ್ಕೆ(successfull married life) ಪ್ರೇರಣೆಯಾಗಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಮದುವೆ
ಸಂಬಂಧಗಳು

Latest Videos
Recommended Stories
Recommended image1
ಕೆಜಿಎಫ್-ಆರ್‌ಆರ್‌ಆರ್ ದಾಖಲೆ ಅಳಿಸಿ ಹಾಕಿದ ಧುರಂಧರ್.. ಟಾಪ್‌ ಸ್ಥಾನಕ್ಕೇರಲು 3 ಸಿನಿಮಾಗಳಷ್ಟೇ ಬಾಕಿ!
Recommended image2
ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಸಮಾರಂಭದಲ್ಲಿ ಪ್ರಿಯಾಂಕಾ ಚೋಪ್ರಾ-ನಿಕ್ ಜೋನಾಸ್ ಜೋಡಿಯ ಮಿಂಚಿನ ಸಂಚಾರ!
Recommended image3
'ಅಂಕಿತಾ ಜೊತೆ ಡಿಸೆಂಬರ್‌ನಲ್ಲಿ ಪಕ್ಕಾ ಮದುವೆ' ಎಂದಿದ್ದ ಸುಶಾಂತ್ ಸಿಂಗ್ ರಜಪೂತ್! ಆದರೆ.. ಆಮೇಲೇನಾಯ್ತು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved