Asianet Suvarna News Asianet Suvarna News

Love Story : 10 ರೂ. ನೋಟ್ ಮೇಲೆ ಪ್ರೇಮ ನಿವೇದನ, ಲವ್ ಜಿಹಾದ್‌‌ ಎಂದ‌ ನೆಟ್ಟಿಗರು!

ಸಾಮಾಜಿಕ ಜಾಲತಾಣದಲ್ಲಿ ಹತ್ತು ರೂಪಾಯಿ ನೋಟು ವೈರಲ್ ಆಗಿದೆ. ಅದ್ರ ಮೇಲೆ ಪ್ರೀತಿ ಸಂದೇಶವೊಂದನ್ನು ಬರೆಯಲಾಗಿದೆ. ನಿಶಾಗೆ ಖಾನ್ ಹೆಸರಿನ  ವ್ಯಕ್ತಿ  ಬರೆದ ಸಂದೇಶ ನೆಟ್ಟಿಗರ ಕಣ್ಣುಕೆಂಪು ಮಾಡಿದೆ. 

love proposal on 10 rs note called love jihad netizens viral on social media roo
Author
First Published May 27, 2024, 12:19 PM IST

ಪ್ರೀತಿಗೆ (Love) ಜಗತ್ತನ್ನು ಸೋಲುತ್ತದೆ. ಹಿಂದೆ ಪ್ರೀತಿಸುವ ಇಬ್ಬರು ಪರಸ್ಪರ ಪತ್ರ ವಿನಿಮಯ (Love Exchange) ಮಾಡಿಕೊಳ್ತಿದ್ದರು. ಪ್ರೀತಿಸುವ ಹುಡುಗಿ ದೂರವಾದಾಗ ಅವರನ್ನು ಹುಡುಕಲು ಪ್ರೀತಿಸಿದ ಹುಡುಗ ಏಳು ಸಮುದ್ರವನ್ನು ದಾಟುತ್ತಿದ್ದ. ತನ್ನ ಸಂದೇಶವನ್ನು ಆಕೆಗೆ ತಲುಪಿಸಲು ಹರಸಾಹಸಪಡುತ್ತಿದ್ದ. ಈಗ ಕೈನಲ್ಲಿರುವ ಮೊಬೈಲ್ (Mobile), ಇಂಟರ್ನೆಟ್ (Internet) ಈ ಪ್ರೇಮಿಗಳ ಭೇಟಿ, ಮಾತುಕತೆಯನ್ನು ಸುಲಭಗೊಳಿಸಿದೆ. ಜನರು ಪತ್ರ ಬರೆಯುವ ಬದಲು ವಾಟ್ಸ್ ಅಪ್ (What's App), ಫೇಸ್ಬುಕ್ (Facebook) ಅಂತ ಸಾಮಾಜಿಕ ಜಾಲತಾಣದಲ್ಲಿ (Social Media) ಸಂದೇಶ ರವಾನೆ ಮಾಡಿ, ಪ್ರೇಮದ ಸಿಂಬಲ್ (Love Symbol) ಕಳುಹಿಸಿ ಪ್ರೇಮ ನಿವೇದನೆ ಮಾಡ್ತಾರೆ. ಹಿಂದೆ ನೀವು ನೋಟುಗಳ ಮೇಲೆಯೂ ಕೆಲ ಪ್ರೇಮ ಸಂದೇಶಗಳನ್ನು ಕಾಣ್ಬಹುದಿತ್ತು. ಈಗ ನೋಟಿನ ಮೇಲೆ ಬರೆಯೋದನ್ನು ನಿಷೇಧಿಸಲಾಗಿದೆ. ಆದ್ರೂ ಸಾಮಾಜಿಕ ಜಾಲತಾಣದಲ್ಲಿ ನೋಟಿನ ಮೇಲೆ ಬರೆದ ಪ್ರೇಮ ಸಂದೇಶ ಆಗಾಗ ವೈರಲ್ ಆಗ್ತಿರುತ್ತದೆ.

ಕೆಲ ದಿನಗಳ ಹಿಂದೆ ಹತ್ತು ರೂಪಾಯಿ ನೋಟಿ (Note) ನ ಮೇಲೆ ಸೋನಾಲ್ ಗುಪ್ತಾ ವಿಶ್ವಾಸದ್ರೋಹಿ ಎಂಬ ವಾಕ್ಯ ವೈರಲ್ ಆಗಿತ್ತು. ಈಗ ಇನ್ನೊಬ್ಬ ವ್ಯಕ್ತಿ ತನ್ನ ಪ್ರೇಮಿಗೆ ನೀಡಿದ ಸಂದೇಶ (Message) ವೊಂದು ಸುದ್ದಿ ಮಾಡಿದೆ.

ಮಗಳೇ ಎಂದು ಕರೆದಿದ್ದವಳನ್ನೇ ಮದುವೆಯಾಗಿ ಮಕ್ಕಳನ್ನು ಕೊಟ್ಟ ಸೈಫ್ ಅಲಿ ಖಾನ್! 

ಹತ್ತು ರೂಪಾಯಿ ನೋಟು ವೈರಲ್ : ಈಗ ವೈರಲ್ ಆದ ಹತ್ತು ರೂಪಾಯಿ (Ten Rupees) ನೋಟಿನ ಮೇಲೆ ವ್ಯಕ್ತಿಯೊಬ್ಬ ನಿಶಾ ಹೆಸರಿನ ಹುಡುಗಿಗೆ ಸಂದೇಶ ರವಾನೆ ಮಾಡಿದ್ದಾನೆ. ಈ ವ್ಯಕ್ತಿಯ ಮದುವೆ ಜೂನ್ 10 ರಂದು ನಡೆಯಲಿದೆ. ಆದರೆ ಈ ಮದುವೆಯಲ್ಲಿ ಆತನಿಗೆ ಸಂತೋಷವಿಲ್ಲ. ಅವನು ತನ್ನ ಗೆಳತಿಗೆ  ಓಡಿ ಹೋಗಲು ವಿಳಾಸ ನೀಡಿದ್ದಾನೆ. ಆಕೆಗೆ ಕರೆ ಮಾಡಲು ಸಾಧ್ಯವಾಗದ ಕಾರಣ ಹತ್ತು ರೂಪಾಯಿ ನೋಟಿನಲ್ಲಿ ವಿಳಾಸ ಬರೆದು ವೈರಲ್ ಮಾಡಿದ್ದಾನೆ.  

ಹತ್ತು ರೂಪಾಯಿ ನೋಟಿನ ಮೇಲೆ ಏನಿದೆ? : ವೈರಲ್ ಆಗುತ್ತಿರುವ ಈ ಹತ್ತು ರೂಪಾಯಿ ನೋಟಿನ ಮೇಲೆ ವ್ಯಕ್ತಿ, ನಿಶಾ ಜೂನ್ ಹತ್ತರಂದು ನನ್ನ ಮದುವೆ. ಆದ್ರೆ ನಿನ್ನ ಬಿಟ್ಟು ನಾನು ಜೀವಂತವಾಗಿರಲು ಸಾಧ್ಯವಿಲ್ಲ. ಇಂದು ರಾತ್ರಿ 9 ಗಂಟೆಗೆ ನುಹ್ ಬಸ್ ನಿಲ್ದಾಣದಲ್ಲಿ ನಿನಗಾಗಿ ಕಾಯುತ್ತೇನೆ. ಖಾನ್ ಎಂದು ಬರೆಯಲಾಗಿದೆ. 

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ : its_khalid_0.7 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ. ಖಾನ್ ಗೆ ನಿಶಾ ಸಿಗೋವರೆಗೂ ಈ ಪೋಸ್ಟ್ ಶೇರ್ ಮಾಡಿ ಎಂದು ಶೀರ್ಷಿಕೆ ಹಾಕಲಾಗಿದೆ. ಈಗಾಗಲೇ ಲಕ್ಷಾಂತರ ಮಂದಿ ಈ ಪೋಸ್ಟ್ ವೀಕ್ಷಿಸಿದ್ದಾರೆ. ಸಾವಿರಾರು ಮಂದಿ ಈ ಪತ್ರಕ್ಕೆ ಕಮೆಂಟ್ ಮಾಡಿದ್ದಾರೆ.

ಮಗ ಹೈದರಾಬಾದ್‌ನಲ್ಲಿ, ತಾಯಿ ಅಮೆರಿಕಾದಲ್ಲಿ; ನಾಗ ಚೈತನ್ಯ ತಾಯಿ ಇಲ್ಲದ ತಬ್ಬಲಿ!

ಕಣ್ಣು ಕೆಂಪು ಮಾಡಿದ ನೆಟ್ಟಿಗರು : ನಿಶಾಗೆ ಖಾನ್ ಬರೆದಿರುವ ಪ್ರೇಮ ಪತ್ರಕ್ಕೆ ನೆಟ್ಟಿಗರು ಕೋಪಗೊಂಡಂತಿದೆ. ನಿಶಾ ಹಿಂದು, ಹಿಂದು ಹುಡುಗನನ್ನು ಮದುವೆ ಆಗ್ತಾಳೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಇದು ಲವ್ ಜಿಹಾದ್ ಎಂದು ಕಮೆಂಟ್ ಮಾಡಿದ ಜನರ ಸಂಖ್ಯೆ ಕಡಿಮೆ ಏನಿಲ್ಲ. ಇದು ಲವ್ ಜಿಹಾದ್ ಆಗಿದ್ದು, ನಿಶಾ ಫ್ರಿಜ್ ನಲ್ಲಿ ಸಿಗ್ತಾಳೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಯಾಕೆ ಹತ್ತು ರೂಪಾಯಿ ನೋಟಿನಲ್ಲಿ ಪ್ರೇಮ ಸಂದೇಶ ಕಳುಹಿಸುತ್ತೀರಿ, 2 ಸಾವಿರ ಇಲ್ಲ 500 ರೂಪಾಯಿ ನೋಟಿನ ಮೇಲೂ ಬರೆಯಿರಿ ಎಂದು ಒಬ್ಬರು ತಮಾಷೆ ಕಮೆಂಟ್ ಹಾಗಿದ್ದಾರೆ. ನನ್ನ ಹೆಸರಿಗೇಕೆ ಮಸಿ ಎಳೆಯುತ್ತಿದ್ದೀರಿ ಎಂದು ನಿಶಾ ಹೆಸರಿನ ಹುಡುಗಿಯೊಬ್ಬಳು ಕಮೆಂಟ್ ಮಾಡಿದ್ದಾಳೆ. ಅನೇಕರು ನಿಶಾ ಹೆಸರಿನ ಸ್ನೇಹಿತೆಗೆ ಈ ಪೋಸ್ಟ್ ಶೇರ್ ಮಾಡಿದ್ದಾರೆ.

Latest Videos
Follow Us:
Download App:
  • android
  • ios