Asianet Suvarna News Asianet Suvarna News

ಅನಾದಿ ಕಾಲದಿಂದಲೂ ಭಾರತದಲ್ಲಿ ಲವ್ ಮ್ಯಾರೇಜ್, ಲಿವ್ ಇನ್ ರಿಲೇಷನ್‌ಶಿಪ್ ಇತ್ತಲ್ವಾ!

ಲವ್‌ ಮ್ಯಾರೇಜ್ ಮತ್ತು ಲಿವ್ ಇನ್ ರಿಲೇಷನ್‌ಶಿಪ್‌ಗಳಿಗೆ ಭಾರತೀಯ ಪುರಾಣ ಕಾವ್ಯಗಳಿಂದ ಹಲವಾರು ಉದಾಹರಣೆಗಳನ್ನು ನೀಡಬಹುದು. 

Love marriage and Live in are not new to Indian culture was existed earlier
Author
Bengaluru, First Published Jul 7, 2021, 4:53 PM IST

ಸಂಪ್ರದಾಯವಾದಿಗಳಾದ ಹಲವರು ಲವ್ ಮ್ಯಾರೇಜ್ ಮತ್ತು ಲಿವ್ ಇನ್ ರಿಲೇಷನ್‌ಶಿಪ್ ಎಂದರೆ ಮೂಗು ಮುರಿಯುವುದುಂಟು. ಹೆಣ್ಣು ಅಥವಾ ಗಂಡು, ತಾವು ಮೆಚ್ಚಿ ಪ್ರೀತಿಸಿದವರನ್ನು ಕುಟುಂಬದ ಒಪ್ಪಿಗೆ ಇಲ್ಲದೆ ಮದುವೆಯಾಗುವುದು ಲವ್ ಮ್ಯಾರೇಜ್‌ನಲ್ಲಿ ಹಾಗೂ ಮದುವೆಯ ಸಾಂಪ್ರದಾಯಿಕ ವಿಧಿ ವಿಧಾನಗಳಿಲ್ಲದೆ ಒಟ್ಟಿಗೇ ಬದುಕುವುದು ಲಿವ್‌ ಇನ್‌ ಸಂಬಂಧದಲ್ಲಿ ಇರುವುದರಿಂದ, ಇಲ್ಲಿ ಫ್ಯಾಮಿಲಿಯವರೆಲ್ಲರೂ ಗೌಣವೇ ಆಗಿರುವುದರಿಂದ, ಈ ಪ್ರತಿರೋಧ ಹೆಚ್ಚಾಗಿ ವ್ಯಕ್ತವಾಗುತ್ತಿರಬಹುದು. ಅಥವಾ ಕುಲ- ಜಾತಿ- ಧರ್ಮ ಎಂಬ ಭೇದಗಳೂ ಈ ವಿರಸಗಳಿಗೆ ಇನ್ನೊಂದು ಕಾರಣವಾಗಿವೆ.

ಆದರೆ ನಿಮಗೆ ಗೊತ್ತೇ- ಪ್ರಾಚೀನ ಭಾರತದಲ್ಲಿ ಲಿವ್ ಇನ್ ಸಂಬಂಧಗಳು ಹಾಗೂ ಲವ್ ಮ್ಯಾರೇಜ್‌ಗಳು ಸಾಮಾನ್ಯವಾಗಿದ್ದವು! ಇದಕ್ಕೆ ಹಲವಾರು ಉದಾಹರಣೆಗಳನ್ನೂ ಕೊಡಬಹುದು. ಇವುಗಳನ್ನು ಗಾಂಧರ್ವ ವಿವಾಹಗಳೆಂದು ಕರೆಯುತ್ತಿದ್ದರು. ಯಾವುದೇ ಜನಾಂಗದ ಯುವಕ ಅಥವಾ ಯುವತಿ, ಊರಿನ ಜಾತ್ರೆ, ಸಂತೆ ಅಥವಾ ದೇವಾಲಯದ ಉತ್ಸವಗಳಲ್ಲಿ, ವಸಂತೋತ್ಸವಗಳಲ್ಲಿ, ಹಬ್ಬಗಳಲ್ಲಿ ಮುಕ್ತವಾಗಿ ಪಾಲ್ಗೊಳ್ಳುತ್ತಿದ್ದರು. ಅಲ್ಲಿ ತಮಗೆ ಇಷ್ಟವಾದ ಸಂಗಾತಿಯನ್ನು ಕಂಡು ಮಾತಾಡಿಸಿ, ತಮಗೆ ಜೋಡಿಯಾಗುವಂತೆ ಮನವೊಲಿಸುತ್ತಿದ್ದರು. ಕೆಲವೊಮ್ಮೆ ಹಾಗೇ ಕಾಡಿಗೆ ಓಡಿಹೋಗುತ್ತಿದ್ದರು, ಅಲ್ಲಿ ಕಾಮಕ್ರೀಡೆ ನಡೆಸುತ್ತಿದ್ದರು. ಊರಿನ ಹಂಗು ತೊರೆದು ನಂದನವನಗಳಲ್ಲಿ ವಿಹರಿಸುತ್ತಿದ್ದರು.  

ಬೆಚ್ಚಿದ ಯುವಕ, ತನ್ನ ಬಿಟ್ಟು ಹೋದವಳು ಅಪ್ಪನನ್ನೇ ಮದುವೆಯಾದಳು! ...

ಮಹಾಭಾರತದಲ್ಲಿ ಬರುವ ಭೀಮಸೇನ- ಹಿಡಿಂಬೆಯರ ಕತೆ ಹೀಗಿದೆ. ಸುರಸುಂದರಾಂಗ ಭೀಮನನ್ನು ಕಂಡ ರಾಕ್ಷಸಿ ಹಿಡಿಂಬೆ ಮನಸೋಲುತ್ತಾಳೆ. ಮಾಯಾರೂಪದಿಂದ ಚೆಲುವೆಯಾಗಿ ಬಂದು, ತನ್ನನ್ನು ಕೂಡು ಎಂದು ಒತ್ತಾಯಿಸುತ್ತಾಳೆ. ಆಗ ಇತರ ಪಾಂಡವರು ನಿದ್ರಿಸುತ್ತಿರುತ್ತಾರೆ. ಆಕೆಯ ಅಣ್ಣ ಹಿಡಿಂಬ ಬಂದು ಆಕೆಯನ್ನು ಆಕ್ಷೇಪಿಸುತ್ತಾನೆ. ಆಗ ಭೀಮ ಆತನನ್ನು ಕೊಲ್ಲುತ್ತಾನೆ. ನಂತರ ಪಾಂಡವರು ಎಚ್ಚರಗೊಳ್ಳುತ್ತಾರೆ. ತನ್ನೊಡನೆ ಸೇರುವಂತೆ ಒತ್ತಾಯಿಸುತ್ತಿರುವ ಹಿಡಿಂಬೆಯನ್ನು ಸೇರುವುದು ಕ್ಷತ್ರಿಯನಾದ ಭೀಮನಿಗೆ ತಪ್ಪಲ್ಲವೆಂದೂ, ಆಕೆಯ ಜೊತೆ ಸಕಲ ಸುಖಭೋಗ ಅನುಭವಿಸಬಹುದು ಎಂದೂ ಭೀಮನ ಅಣ್ಣ ಧರ್ಮರಾಯ ಮತ್ತು ತಾಯಿ ಕುಂತಿ ಒಪ್ಪಿದರು. ಹಾಗೆಯೇ ಭೀಮ ಮತ್ತು ಹಿಡಿಂಬೆ ಜೊತೆಯಾಗಿ ಆ ವನದಲ್ಲಿ ತಮಗೆ ಬೇಕಾದಷ್ಟು ಕಾಲ ಸುತ್ತಾಡಿ, ಹಿಡಿಂಬೆಯ ಗುಹೆಯಲ್ಲಿ ಅನಂದವನ್ನು ಸವಿಯುತ್ತಾರೆ. ಮುಂದೆ ಭೀಮನಿಂದ ಹಿಡಿಂಬೆಗೆ ಒಬ್ಬ ಮಗನೂ ಜನಿಸುತ್ತಾನೆ- ಆತನೇ ಘಟೋತ್ಕಚ.
ವಾಸ್ತವವಾಗಿ ಪಾಂಡವರ ತಾಯಿ ಕುಂತಿಯೇ ಕೈಹಿಡಿದ ಗಂಡ ಪಾಂಡು ಮಾತ್ರವಲ್ಲದೆ ಮೂವರ ಜೊತೆ ಲಿವ್- ಇನ್ ಮಾಡಿದ್ದಳು. ಇಂದ್ರ, ಯಮ ಹಾಗೂ ವಾಯು. ಇವರಿಂದ ಅರ್ಜುನ, ಧರ್ಮರಾಯ ಹಾಗೂ ಭೀಮ ಹುಟ್ಟಿದ್ದರು, ಮಾದ್ರಿ ಕೂಡ ಅಶ್ವಿನಿ ದೇವತೆಗಳ ಜೊತೆ ಲಿವ್ ಇನ್ ಮಾಡಿದವಳು. ಅವರಿಂದ ಹುಟ್ಟಿದವರೇ ನಕುಲ ಸಹದೇವರು.   

ಕಾಲು ಮುರಿದರೂ, ಹೃದಯಾಘಾತ ಆದರೂ ಈ ಜೋಡಿ ಜಗತ್ತು ಸುತ್ತೋದು ಬಿಡಲಿಲ್ಲ! ...

ಹಾಗೇ ಪುರಾಣದಲ್ಲಿ ಬರುವ ಇನ್ನೊಂದು ಜನಪ್ರಿಯ ನಿದರ್ಶನ ಎಂದರೆ ದುಷ್ಯಂತ- ಶಕುಂತಲೆ. ದುಷ್ಯಂತ ಬೇಟೆಗಾಗಿ ಕಾಡಿಗೆ ಬರುತ್ತಾನೆ. ಅಲ್ಲಿ ಕಣ್ವರ ಋಷ್ಯಾಶ್ರಮದಲ್ಲಿ ಸಾಕಲ್ಪಟ್ಟ ಸುಂದರಿ ಶಕುಂತಲೆಯನ್ನು ಕಾಣುತ್ತಾನೆ. ಬಗೆಬಗೆಯಲ್ಲಿ ಆಕೆಯ ಮುಂದೆ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತಾನೆ. ಮುಂದೆ ರಾಜ್ಯಕ್ಕೆ ಹೋದ ಬಳಿಕ ನಿನ್ನನ್ನು ಕರೆಸಿಕೊಳ್ಳುತ್ತೇನೆ ಎಂದು ಮಾತು ಕೊಟ್ಟು ಆಕೆಯನ್ನು ಅಲ್ಲೇ ಆ ಕಾಡಿನಲ್ಲೇ ಮೋಹಿಸುತ್ತಾನೆ, ಪ್ರೇಮಿಸುತ್ತಾನೆ. ಅಲ್ಲೇ ಅವರು ಕೂಡುತ್ತಾರೆ. ಮುಂದೆ ಆಕೆಗೆ ದುಷ್ಯಂತನಿಂದಾಗಿ ಭರತ ಜನಿಸುತ್ತಾನೆ ಹಾಗೂ ಅವನಿಂದಲೇ ಈ ದೇಶಕ್ಕೆ ಭರತಖಂಡ ಎಂಬ ಹೆಸರೂ ಬರುತ್ತದೆ. ಇಲ್ಲೂ ಅವರಿಬ್ಬರು ಆದದ್ದು ಗಾಂಧರ್ವ ವಿವಾಹವೇ. ಇಲ್ಲೂ ಈ ವಿವಾಹಕ್ಕೆ ಋಷಿ ಕಣ್ವರು ಮತ್ತು ಆಶ್ರಮದ ಇತರ ಹಿರಿಯರು ಒಪ್ಪಿಗೆ ಸೂಚಿಸಿದ್ದರು.

Love marriage and Live in are not new to Indian culture was existed earlier


ಭಾಗವತದಲ್ಲಿ ಬರುವ ಇನ್ನೊಂದು ಕತೆ ಎಂದರೆ ಶ್ರೀಕೃಷ್ಣನದು. ಶ್ರೀಕೃಷ್ಣ ಮತ್ತು ರಾಧೆಯರದು ಒಂದು ಬಗೆಯ ಪ್ರೇಮ ಹಾಗೂ ಕಾಮೋತ್ಕಟತೆಯ ಸಂಬಂಧ. ರಾಧೆಯನ್ನು ಹುಡುಕುವ ಕೃಷ್ಣ, ಕೃಷ್ಣನನ್ನು ಹುಡುಕುವ ರಾಧೆ- ಭಾರತೀಯ ಶೃಂಗಾರ ಸಾಹಿತ್ಯದಲ್ಲಿ ಹೇರಳವಾಗಿದೆ. ರಾಧೆ ಮೊದಲೇ ವಿವಾಹಿತೆಯಾಗಿದ್ದರೂ, ಕೃಷ್ಣನೊಂದಿಗೆ ಇರಲು ಹಂಬಲಿಸುತ್ತಿದ್ದಳಂತೆ. ಇವರ ಪ್ರೇಮವನ್ನು ಜಗತ್ತು ಒಪ್ಪಿತ್ತು. ಇವರ ಪ್ರೇಮದ ಬಗ್ಗೆ ನಾನಾ ಕಾವ್ಯಗಳೂ ಸೃಷ್ಟಿಯಾಗಿವೆ.  
ಸಂಸ್ಕೃತ ಕಾವ್ಯದಲ್ಲಿ ಇಂಥ ಪ್ರೇಮೋತ್ಕಟ ಕ್ಷಣಗಳು, ಸನ್ನಿವೇಶಗಳು ಸಾಕಷ್ಟು ಸೃಷ್ಟಿಯಾಗಿವೆ. ಅಲ್ಲಿ ವಯಸ್ಸಿಗೆ ಬಂದು ತನಗೆ ಅನುಕೂಲ ಗಂಡನ್ನು ಹುಡುಕುತ್ತಿರುವ ಯುವತಿಯಲ್ಲಿ ಪತಿವೇದನೋತ್ಕಟೆ, ಅಭಿಸಾರಿಕೆ ಎಂದು ವರ್ಣಿಸಲಾಗಿದೆ. ಗಂಡು- ಹೆಣ್ಣಿನ ಸಮಾಗಮದ ಸಂದರ್ಭವನ್ನು ವರ್ಣಿಸುವ ಸೂಕ್ತಿಗಳೂ ಸಾಕಷ್ಟಿವೆ. 

ಪುರುಷರ ಈ 7 ಅಭ್ಯಾಸಗಳು ಲೈಂಗಿಕ ಜೀವನದಲ್ಲಿ ಅದ್ಭುತ ಸೃಷ್ಟಿಸುತ್ತೆ ...

Follow Us:
Download App:
  • android
  • ios