ವೈರಲ್ ವಿಡಿಯೋ: ಸಾಮಾಜಿಕ ಜಾಲತಾಣಗಳಲ್ಲಿ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಮಗಳು ಸೈಕಲ್ ಹಿಂದೆ ನಿಂತು ತಂದೆ ಬಿಸಿಲಿಗೆ ಸುಟ್ಟು ಹೋಗದಂತೆ ಛತ್ರಿ ಹಿಡಿದು ನಿಂತಿರುವುದನ್ನು ಕಾಣಬಹುದು.
ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ವೈರಲ್ ಆಗುತ್ತಿರುವ ಒಂದು ವಿಡಿಯೋ ಎಲ್ಲರ ಹೃದಯವನ್ನು ತಟ್ಟಿದೆ. ಈ ದೃಶ್ಯದಲ್ಲಿ ಪುಟ್ಟ ಮಗಳು ತನ್ನ ತಂದೆ ಬಿಸಿಲಿನಲ್ಲೂ ಸೈಕಲ್ ಓಡಿಸುತ್ತಿದ್ದಾಗ, ಅವರಿಗೆ ಶಾಖ ತಾಕದಂತೆ ತನ್ನ ಕೈಯಲ್ಲಿ ಛತ್ರಿ ಹಿಡಿದಿರುವುದು ಸಹಜವಾಗಿ ನೋಡುಗರ ಮನಸ್ಸನ್ನು ಗೆಲ್ಲುತ್ತದೆ. ಇದು ಕೇವಲ ಒಂದು ವಿಡಿಯೋ ಅಲ್ಲ. ಪೋಷಕರ ಮೇಲೆ ಮಕ್ಕಳಿಗಿರುವ ಪ್ರೀತಿ, ಗೌರವ ಮತ್ತು ಬಾಂಧವ್ಯದ ಸೂಚಕವಾಗಿದೆ.
ಈ ವೈರಲ್ ವಿಡಿಯೋದಲ್ಲಿ ಬಾಲಕಿ ಸೈಕಲ್‌ನ ಹಿಂದಿನ ಸೀಟಿನಲ್ಲಿ ನಿಂತಿರುವುದನ್ನು ಕಾಣಬಹುದು. ಅವಳ ಒಂದು ಕೈಯಲ್ಲಿ ಛತ್ರಿ ಇದೆ, ಇನ್ನೊಂದು ಕೈಯಲ್ಲಿ ಅವಳು ತನ್ನ ತಂದೆಯನ್ನು ಅಪ್ಪಿಕೊಂಡಿದ್ದಾಳೆ. ಮಗಳು ತನ್ನ ತಂದೆ ಬಿಸಲಿಗೆ ತಾಕದ ರೀತಿಯಲ್ಲಿ ಛತ್ರಿಯನ್ನು ಪದೇ ಪದೇ ಸರಿಹೊಂದಿಸುತ್ತಾಳೆ. ಮಗಳ ಈ ಮುಗ್ಧ ಮತ್ತು ಮುದ್ದಾದ ಕೆಲಸ ನೋಡಿ ತಂದೆ ನಗುತ್ತಿದ್ದಾರೆ ಮತ್ತು ಮಗಳು ಬೀಳದಂತೆ ಎಚ್ಚರಿಕೆಯಿಂದ ಸೈಕಲ್ ಸವಾರಿ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಮಾಡಲಾಗಿದೆ.
ವಿಡಿಯೋವನ್ನು @JaikyYadav16 ಎಂಬ ಟ್ವಿಟರ್/X ಬಳಕೆದಾರರು ಪೋಸ್ಟ್ ಮಾಡಿದ್ದು, ಇದುವರೆಗೆ ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿ ಶೇರ್ ಮಾಡಿದ್ದಾರೆ. ವಿಶೇಷವಾಗಿ ಈ ದೃಶ್ಯದಲ್ಲಿ ಯಾವುದೇ ಶಬ್ದವಿಲ್ಲದರೂ, ಮಗು ತನ್ನ ತಂದೆಗೆ ನೀಡಿದ ಪ್ರೀತಿಯ ಭಾವನೆ ಪ್ರತಿಯೊಬ್ಬರ ಮನಸ್ಸಿಗೆ ನೇರವಾಗಿ ತಲುಪುತ್ತದೆ. ಬಿಸಿಲಿನಲ್ಲೂ ಮಗು ಹಿಂಬದಿಯಲ್ಲಿ ನಿಂತುಕೊಂಡು, ತನ್ನ ಎತ್ತರಕ್ಕಿಂತ ದೊಡ್ಡ ಛತ್ರಿ ಹಿಡಿದುಕೊಂಡು, ತಂದೆಗೆ ಬಿಸಿಲಿನ ಶಾಖ ತಾಗದಂತೆ ರಕ್ಷಿಸುತ್ತಿರುವ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ಭಾವನಾತ್ಮಕ ಚರ್ಚೆಗೆ ಕಾರಣವಾಗಿದೆ.
ವಿಡಿಯೋದಲ್ಲಿರುವ ದೃಶ್ಯ ನೋಡಿದಾಗ ತಂದೆ-ಮಗಳು ಇಬ್ಬರೂ ತಮ್ಮ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ. ಪುಟ್ಟ ಮಗಳು ತನ್ನ ಅಕ್ಕಪಕ್ಕದಲ್ಲಿ ಏನೇ ನಡೆಯುತ್ತಿದ್ದರೂ, ಅದಾವುದನ್ನು ಗಮನಿಸದೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿರುವುದನ್ನ ಈ ದೃಶ್ಯ ಸಾಬೀತುಪಡಿಸುತ್ತದೆ.
ನೆಟ್ಟಿಗರಿಂದ ಹರಿದು ಬಂದ ಪ್ರತಿಕ್ರಿಯೆ
ವಿಡಿಯೋಗೆ "ಮಗಳು ತನ್ನ ತಂದೆಯಿಂದ ಭಾಗ (ಹಕ್ಕು, ಆಸ್ತಿಯ ಪಾಲು) ಕೇಳುವುದಿಲ್ಲ; ಏಕೆಂದರೆ ಮಗಳು ತಾನೇ ತನ್ನ ತಂದೆಯ ಒಂದು ಭಾಗ ಎಂದು ಭಾವಿಸುತ್ತಾಳೆ ಎಂದು ಶೀರ್ಷಿಕೆ ಕೊಡಲಾಗಿದೆ. ಸದ್ಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದ್ದು, ಹಲವಾರು ನೆಟ್ಟಿಗರು ತಮ್ಮ ಭಾವುಕ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ದೃಶ್ಯವು ತಂದೆ-ಮಗಳ ನಡುವಿನ ಪ್ರೀತಿಯ ಬಾಂಧವ್ಯವನ್ನು ತೋರಿಸುತ್ತಿದ್ದು, ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಒರ್ವ ಬಳಕೆದಾರರು ಟ್ವೀಟ್‌ನಲ್ಲಿ " ಪುತ್ರಿಯರು ಹೀಗೆ ಇರುತ್ತಾರೆ" ಎಂದು ಮಗಳ ಕಾಳಜಿಯ ತುಂಬಿದ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು "ಈ ವಿಡಿಯೋ ನನ್ನ ಮನಸ್ಸನ್ನು ಮಾತ್ರವಲ್ಲ, ಆತ್ಮವನ್ನೂ ತಟ್ಟಿದೆ" ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಈ ರೀತಿಯ ಪ್ರತಿಕ್ರಿಯೆಗಳು ವಿಡಿಯೋದಲ್ಲಿರುವ ಭಾವನಾತ್ಮಕ ಸಂಬಂಧವನ್ನು ಸ್ಪಷ್ಟಪಡಿಸುತ್ತವೆ. ವಿಡಿಯೋಗೆ ಪ್ರತಿಕ್ರಿಯಿಸಿದ ಹಲವು ಜನರು "ಇದು ಪಿತೃತ್ವದ ನಿಜವಾದ ರೂಪ", "ಇಂಥ ಪ್ರೀತಿ ಯಾವುದೇ ಬೆಲೆಗೆ ಸಿಗುವುದಿಲ್ಲ" ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಈ ವಿಡಿಯೋವು ತಂದೆ-ಮಗಳ ನಡುವಿನ ಪ್ರೀತಿಯ ನಿಜವಾದ ರೂಪವನ್ನು ತೋರಿಸುತ್ತಿದ್ದು, ಹಲವರು ತಮ್ಮ ತಂದೆ-ಮಗಳ ಅನುಭವಗಳನ್ನು ನೆನೆದು ಭಾವುಕರಾಗಿದ್ದಾರೆ. ಇದು ಕುಟುಂಬದ ಮೌಲ್ಯಗಳು ಮತ್ತು ಪರಸ್ಪರ ಕಾಳಜಿಯ ಮಹತ್ವವನ್ನು ನೆನಪಿಸುತ್ತಿದೆ. ಒಟ್ಟಾರೆ ವಿಡಿಯೋದಲ್ಲಿರುವ ದೃಶ್ಯವು ನಮ್ಮೆಲ್ಲರ ಮನಸ್ಸನ್ನು ತಟ್ಟಿದ್ದು, ಸರಳವಾದ ಪ್ರೀತಿಯ ಪ್ರಬಲ ರೂಪವನ್ನು ತೋರಿಸಿದೆ. ಇದು ನಮ್ಮ ಜೀವನದಲ್ಲಿ ಸಣ್ಣ ಸನ್ನಿವೇಶಗಳಲ್ಲಿಯೂ ಎಷ್ಟು ಪ್ರೀತಿ ಮತ್ತು ಕಾಳಜಿ ಅಡಗಿರಬಹುದು ಎಂಬುದನ್ನು ನಮಗೆ ನೆನಪಿಸುತ್ತದೆ.