ಲಂಡನ್(ಫೆ.15): ನಿನ್ನೆ(ಶುಕ್ರವಾರ) ಅಂತಾರಾಷ್ಟ್ರೀಯ ಪ್ರೇಮಿಗಳ ದಿನವನ್ನು ಇಡೀ  ಜಗತ್ತು ಅದ್ದೂರಿಯಾಗಿ ಆಚರಿಸಿತು.  ತಮ್ಮ ತಮ್ಮ ಅಂತಸ್ತಿಗೆ ಅನುಗುಣವಾಗಿ ಪ್ರೇಮಿಗಳ ದಿನವನ್ನು ಪ್ರೇಮಿಗಳು ಒಟ್ಟಾಗಿರುವ ಮೂಲಕ ಆಚರಿಸಿಕೊಂಡರು.

ಕೆಲವು ತಮ್ಮ ಪ್ರಿಯತಮೆ ಅಥವಾ ಪ್ರಿಯಕರನಿಗೆ ಒಂದು ಹೂವು ಕೊಟ್ಟು ಪ್ರೇಮಿಗಳ ದಿನವನ್ನು ಆಚರಿಸಿದರೆ, ಇನ್ನೂ ಕೆಲವರು ದುಬಾರಿ ಗಿಫ್ಟ್’ಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಅದ್ದೂರಿಯಾಗಿ ಆಚರಿಸಿದರು.

ಆದರೆ ಲಂಡನ್’ನ 22 ವರ್ಷದ ಚಾಂಟಲ್ ಬ್ಲೇಕಿ ಎಂಬಾಕೆ ಮಾತ್ರ ಪ್ರೇಮಿಗಳ ದಿನಕ್ಕಾಗಿ ತನ್ನ ಪ್ರಿಕರನಿಂದ ಅತ್ಯಂತ ದುಬಾರಿ ಗಿಫ್ಟ್’ಗಳನ್ನು ಬಯಸಿ ಸುದ್ದಿಯಾಗಿದ್ದಾಳೆ.

ಹೌದು ಚಾಂಟಲ್ ಬ್ಲೇಕಿ ಪ್ರೇಮಿಗಳ ದಿನಕ್ಕಾಗಿ ತನ್ನ ಪ್ರಿಯಕರ ತನಗೆ ನೀಡಬಾಕಾದ ಗಿಫ್ಟ್’ಗಳ ಪಟ್ಟಿಯನ್ನೇ ತಯಾರಿಸಿದ್ದು, ಈಕೆ ಬಯಸಿದ ಗಿಫ್ಟ್’ಗಳ ಒಟ್ಟು ಬೆಲೆಯೇ ಬರೋಬ್ಬರಿ 2,500 ಪೌಂಡ್’ಗಳಾಗುತ್ತವೆ.

ಮದುವೆಗೆ ಸಪ್ತಪದಿಯಾದ್ರೆ ಪ್ರೀತಿಗೆ ಸಪ್ತದಿನ; ವ್ಯಾಲೆಂಟೆನ್ಸ್ ವೀಕ್ ಬಗ್ಗೆ ನಿಮಗೇನು ಗೊತ್ತು?

ಕೇವಲ ಒಂದು ದಿನಕ್ಕಾಗಿ ಇಷ್ಟೊಂದು ಹಣ ಖರ್ಚು ಮಾಡುವಾತ ಮಾತ್ರ ನನ್ನ ಬಾಯ್’ಫ್ರೆಂಡ್ ಆಗಲು ಸಾಧ್ಯ ಎಂದಿರುವ ಚಾಂಟಲ್, ಇಲ್ಲದಿದ್ದರೆ ಸಂಬಂಧ ಕಡಿದುಕೊಳ್ಳಲು ಮೀನಮೇಷ ಎಣಿಸಲ್ಲ ಎಂದಿದ್ದಾಳೆ.

ಅಂದಹಾಗೆ ಚಾಂಟಲ್ ಹಣ ಖರ್ಚು ಮಾಡದ ಹಲವು ಬಾಯ್’ಫ್ರೆಂಡ್’ಗಳನ್ನು ಈಗಾಗಲೇ ಕೈ ಬಿಟ್ಟಿದ್ದು, ಇದೀಗ ಆಕೆಯ ಭಾವಿ ಪತಿ ಜೋಯಿ ಕೈಲಸ್’ಗೆ ತನ್ನ ಬಯಕಯೆ ಪಟ್ಟಿಯನ್ನು ನೀಡಿದ್ದಾಳೆ.

ಒಂದು ವೇಳೆ ಜೋಯಿ ಕೈಲಸ್ ಕೂಡ ತನ್ನ ಬೇಡಿಕೆ ಈಡೇರಿಸದಿದ್ದರೆ ಆತನನ್ನೂ ಕೈಬಿಡುವುದಾಗಿ ಚಾಂಟಲ್ ಹೇಳಿದ್ದಾಳೆ. ಒಟ್ಟಿನಲ್ಲಿ ಈಕೆಯ ಪ್ರೇಮಿಗಳ ದಿನದ ಬೇಡಿಕೆ ಪಟ್ಟಿ ಕಂಡು ಎಲ್ಲರೂ ದಂಗಾಗುವುದು ಸತ್ಯ.