Asianet Suvarna News Asianet Suvarna News

Viral Video: ಹುಲಿಯನ್ನ ವಾಕ್‌ ಮಾಡಿಸೋ ಬಾಲಕ, ಕೊನೆಗೆ ಆಗಿದ್ದೇನು? ಮೈ ಝಲ್‌ ಅನ್ನುತ್ತೆ!

ಸರಪಳಿ ಬಿಗಿದಿರುವ ಹುಲಿಯನ್ನು ಬಾಲಕನೊಬ್ಬ ಮನೆಯ ಹೊರಗೆ ವಾಕ್‌ ಮಾಡಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್‌ ಆಗಿದೆ. ಆದರೆ, ವೀಡಿಯೋದ ಕೊನೆಯಲ್ಲಿರುವ ದೃಶ್ಯ ಎಂಥವರನ್ನೂ ಒಮ್ಮೆ ಫ್ರೀಝ್‌ ಮಾಡಿಸುತ್ತದೆ. 

Little boy strolls with chained tiger video goes viral
Author
First Published Jan 1, 2024, 4:43 PM IST

ಮೈಮೇಲೆ ದಟ್ಟವಾದ ಕೂದಲುಗಳನ್ನು ಹೊಂದಿದ್ದು, ನೋಡಲು ಮುದ್ದುಮುದ್ದಾಗಿ ಕಾಣುವ ವನ್ಯಜೀವಿಗಳನ್ನು ನೋಡಿದರೆ ನಾವೂ ಸಾಕಬೇಕು, ಅವುಗಳ ಬಳಿ ಆಟವಾಡಬೇಕು ಎನ್ನುವ ಆಸೆ ಎಲ್ಲರಿಗೂ ಉಂಟಾಗುವುದು ಸಹಜ. ಅದರಲ್ಲೂ ಹುಲಿಯ ದಪ್ಪನೆಯ ಮೈ, ಸಿಂಹದ ಕೇಸರ, ಚಿರತೆಯ ನುಣ್ಣನೆಯ ಚರ್ಮ ಎಲ್ಲರನ್ನೂ ಆಕರ್ಷಿಸುತ್ತದೆ. ಆದರೆ, ಅವುಗಳ ನಿಸರ್ಗ ಸಹಜ ಹಿಂಸಾತ್ಮಕ ವರ್ತನೆಯನ್ನು ಅರಿತು ಯಾರೂ ಅವುಗಳ ಸಹವಾಸಕ್ಕೆ ಹೋಗುವುದಿಲ್ಲ. ಆದರೆ, ಕೆಲವರು ಮಾತ್ರ ಈ ವಿಚಾರದಲ್ಲಿ ತೀರ ರಿಸ್ಕ್‌ ತೆಗೆದುಕೊಳ್ಳುತ್ತಾರೆ. ಪಾಕಿಸ್ತಾನದ ಕಂಟೆಂಟ್‌ ಕ್ರಿಯೇಟರ್‌ ನೌಮನ್‌ ಹಸನ್‌ ಈ ವಿಚಾರದಲ್ಲಿ ಒಂದು ಕೈ ಮುಂದಿದ್ದಾರೆ. ಜನಪ್ರಿಯತೆ ಹೊಂದುವುದಕ್ಕೋಸ್ಕರ ತಾವು ಸಾಕಿರುವ ಹುಲಿಯ ವೀಡಿಯೋವನ್ನು ಆಗಾಗ ಹಂಚಿಕೊಳ್ಳುತ್ತಾರೆ. ವನ್ಯಜೀವಿಯಾಗಿರುವ ಹುಲಿಯನ್ನು ಸಾಕಿರುವುದೂ ಅಲ್ಲದೆ, ಅದನ್ನು ಪುಟ್ಟ ಬಾಲಕನೊಂದಿಗೆ ಇರುವ ವೀಡಿಯೋಗಳನ್ನು ಸಹ ಶೇರ್‌ ಮಾಡುತ್ತಾರೆ. ಬಹಳಷ್ಟು ಕಂಟೆಂಟ್‌ ಕ್ರಿಯೇಟರ್‌ ಗಳು ಹಾಡುವುದು, ನರ್ತಿಸುವುದು ಸೇರಿದಂತೆ ಹಲವು ರೀತಿಯಲ್ಲಿ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಿದರೆ ಈ ನೌಮನ್‌ ಹಸನ್‌ ಮಾತ್ರ ತಮ್ಮ ಸಾಕು ಹುಲಿಯೊಂದಿಗೆ ಇರುವ ಬಾಲಕನ ವೀಡಿಯೊ ಹಂಚಿಕೊಳ್ಳುವುದು ಇದೀಗ ಸಾಕಷ್ಟು ಚರ್ಚೆಯಲ್ಲಿದೆ. 

ಇತ್ತೀಚೆಗೆ ನೌಮನ್‌ ಹಸನ್‌ ಒಂದು ವೀಡಿಯೋ (Video) ಹಂಚಿಕೊಂಡಿದ್ದು, ಅದರಲ್ಲಿ ಐದಾರು ವರ್ಷದ ಬಾಲಕನೊಬ್ಬ ಸರಪಳಿಯಿಂದ (Chain) ಬಂಧಿಸಿರುವ ಹುಲಿಯನ್ನು (Tiger) ಹಿಡಿದುಕೊಂಡಿರುವ ದೃಶ್ಯವಿದೆ.

ರೆಡ್‌ಬುಲ್‌ನೊಂದಿಗೆ ಕಾಣಿಸಿಕೊಂಡ ಸೋನುಗೌಡ: ಗೂಳಿ ಗುಮ್ತದೆ ಹುಷಾರು ಎಂದ ಫ್ಯಾನ್ಸ್!

ಆತ ಪಾರ್ಕ್‌ ನಲ್ಲೋ ಅಥವಾ ಮನೆಯ ಹೊರಾಂಗಣ ಪ್ರದೇಶದಲ್ಲೋ ಆ ಹುಲಿಯನ್ನು ವಾಕ್‌ (Walk) ಮಾಡಿಸುವಂತೆ ಓಡಾಡುತ್ತಿರುವುದು ವೀಡಿಯೋದಲ್ಲಿದೆ. ಆದರೆ, ಕೆಲ ಕ್ಷಣಗಳ ಬಳಿಕ ಆ ಬಾಲಕನ ಕೈಯಿಂದ ಸರಪಳಿಯ ಹಿಡಿತ ತಪ್ಪಿ ಹೋಗುತ್ತದೆ. ಆಗ ಹುಲಿ ಒಮ್ಮೆಲೆ ಹಿಂದಕ್ಕೆ ತಿರುಗಿ ಬಾಲಕನನ್ನು ನೋಡುತ್ತ ಹೆದರಿಸುತ್ತದೆ. ದಾಳಿ (Attack) ಮಾಡುವಂತೆ ವರ್ತಿಸುತ್ತದೆ. ಬಾಲಕನೂ ಸಹ ಸರಪಳಿ ಕೈಬಿಟ್ಟು ಗಾಬರಿಯಾಗುತ್ತಾನೆ. ಆದರೆ, ತಕ್ಷಣ ಅಲ್ಲಿದ್ದ ತರಬೇತುದಾರರು (Trainers) ಮಧ್ಯೆ ಪ್ರವೇಶಿಸಿ ಹುಲಿಯನ್ನು ನಿಯಂತ್ರಣಕ್ಕೆ (Control) ತರುತ್ತಾರೆ. ಆದರೆ, ಕೆಲವೇ ಕ್ಷಣಗಳ ಈ ವೀಡಿಯೋ ನಮ್ಮೆದೆಯನ್ನು ಒಮ್ಮೆ ಝಲ್‌ ಎನಿಸುವಂತೆ ಮಾಡುತ್ತದೆ. ಹೇಳಿಕೇಳಿ ವೈಲ್ಡ್‌ (Wild) ಗುಣಧರ್ಮದ ಹುಲಿ ತಿರುಗಿ ಬಿದ್ದರೆ ಅಲ್ಲಿರುವ ಯಾರೂ ಸಹ ಉಳಿಯಲಾರರು. ಅದರಲ್ಲೂ ಆ ಪುಟ್ಟ ಬಾಲಕನಿಗೆ ಹುಲಿಯ ತರಬೇತಿ ನೀಡುತ್ತಿರುವುದು ತೀವ್ರ ಚರ್ಚೆಗೆ ಒಳಗಾಗಿದೆ. 


ಈ ಹಿಂದೆಯೂ ನೌಮನ್‌ ಹಸನ್‌ ಇದೇ ರೀತಿ, ಬಾಲಕ (Boy) ಹಾಗೂ ಹುಲಿಯ ವೀಡಿಯೋ ಶೇರ್‌ ಮಾಡಿದ್ದರು. ಹುಲಿಯನ್ನು ಸಾಕುವ ಬೋನಿನಂತಹ ಸ್ಥಳದಲ್ಲಿ ಇದೇ ಬಾಲಕ ಹುಲಿಯನ್ನು ಸರಪಳಿಯಿಂದ ಹಿಡಿದುಕೊಂಡು ಓಡಾಡಿಸುತ್ತಿರುವ ವೀಡಿಯೋ ಹಂಚಿಕೊಂಡಿದ್ದರು. ಅದಕ್ಕೂ ಸಹ ಬಹಳಷ್ಟು ಜನ ಪ್ರತಿಕ್ರಿಯೆ (Reactions) ನೀಡಿದ್ದು, ಇಂತಹ ಅಪಾಯ ಸಲ್ಲದು ಎಂದು ಕಿವಿಮಾತು ಹೇಳಿದ್ದರು. 

ಆದರೆ, ಕೆಲವೇ ದಿನಗಳಲ್ಲಿ ಮತ್ತೆ ಹೊಸ ವೀಡಿಯೋ ಶೇರ್‌ ಮಾಡಿಕೊಂಡಿರುವ ಹಸನ್‌ ಬಗ್ಗೆ ಈಗ ನೆಟ್ಟಿಗರಿಂದ ತೀಕ್ಷ್ಣವಾದ ಕಾಮೆಂಟ್‌ ಗಳು ಬಂದಿವೆ. ಸುರಕ್ಷತಾ (Security) ಕ್ರಮಗಳ ಕುರಿತು ಎಚ್ಚರಿಕೆ ನೀಡಿರುವ ಜತೆಗೆ, ಪ್ರಾಣಿಹಿಂಸೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತವಾಗಿದೆ. ಒಬ್ಬರು, ಇದು ತೀರ ಹಾಸ್ಯಾಸ್ಪದ (Ridiculous) ಎಂದು ಹೇಳಿದ್ದರೆ, ಮತ್ತೊಬ್ಬರು, “ಮಾನವ ಬುದ್ಧಿವಂತಿಕೆಯ ಅತಿ ಮೂರ್ಖತನದ (Idiot) ಕೆಲಸʼ ಎಂದು ಹೇಳಿದ್ದಾರೆ. 

ಮುಂಬೈ ಟ್ರಾಫಿಕ್ ನಿಂದ ಪಾರಾಗಲು ರೈಲಿನಲ್ಲಿ ಪ್ರಯಾಣಿಸಿದ ಬಿಲಿಯನೇರ್;ಉದ್ಯಮಿ ಸರಳತೆಗೆ ನೆಟ್ಟಿಗರ ಶಬ್ಬಾಸ್ ಗಿರಿ

ಯಾರೋ ಒಬ್ಬರು, “ವಿಶ್ವದಲ್ಲಿ ಮೂರ್ಖ ಜನರಿಗೆ ಕೊರತೆಯಿಲ್ಲʼ ಎಂದು ಹೇಳಿದ್ದರೆ, ಮತ್ತೊಬ್ಬರು, “ಇದರ ಅಗತ್ಯವೇನು?ʼ ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಹಲವಾರು ಮಂದಿ ವನ್ಯಜೀವಿಗಳನ್ನು ಮನುಷ್ಯ ಸಾಕುತ್ತಿರುವ ಔಚಿತ್ಯದ ಬಗ್ಗೆಯೂ ಪ್ರಶ್ನಿಸಿದ್ದಾರೆ. ಜತೆಗೆ, ಇಂತಹ ವೀಡಿಯೋಗಳನ್ನು ಶೂಟ್‌ ಮಾಡುವ ಸಮಯದಲ್ಲಿ ಎದುರಾಗುವ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. 

Follow Us:
Download App:
  • android
  • ios