Asianet Suvarna News Asianet Suvarna News

ತ್ರೀ ಈಡಿಯಟ್ಸ್ ಸಿನಿಮಾ ಶೈಲಿಯಲ್ಲಿ, ಲವರ್‌ಗಾಗಿ ಹಸೆಮಣೆಯಿಂದ ಎದ್ದುಹೋದ ಧೈರ್ಯಗಿತ್ತಿ

ಹಿಂದಿಯ 3 ಈಡಿಯಟ್ಸ್‌ ಸಿನಿಮಾ ಶೈಲಿಯಲ್ಲಿ ಇನ್ನೇನು ತಾಳಿ ಕಟ್ಟೋಬೇಕು ಎನ್ನುವಷ್ಟರಲ್ಲಿ ಮದುವೆ ನಿರಾಕರಿಸಿ ಎದ್ದುಹೋಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

Like movie 3 Idiots Tumkur young woman has left marriage for her lover sat
Author
First Published Aug 27, 2023, 1:43 PM IST

ತುಮಕೂರು (ಆ.27): ಇತ್ತೀಚೆಗೆ ತುಂಬಾ ವೈರಲ್‌ ಆಗಿರುವ ತೆಲುಗಿನ 'ಬೇಬಿ' ಸಿನಿಮಾದಲ್ಲಿ ನಾಯಕಿ ತಾನು ಪ್ರೀತಿಸಿದ ಹುಡುಗನನ್ನು ಬಿಟ್ಟು ಮೂರನೇ ವ್ಯಕ್ತಿಯನ್ನು ಮದುವೆಯಾಗುತ್ತಾಳೆ. ಈ ಸಿನಿಮಾದ ದೃಶ್ಯವನ್ನು ಹಲವು ಯುವಕರು ಹಂಚಿಕೊಂಡು ವೈರಲ್‌ ಮಾಡಿದ್ದರು. ಇದೇ ರೀತಿ ತುಮಕೂರಿನ ಹುಡುಗಿ ತಾನು ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಯುವಕನಿಗೆ ಕೈಕೊಟ್ಟು ಮದುವೆಯಾಗಲು ಮುಂದಾಗಿದ್ದಾಳೆ. ಆದರೆ, ತಾಳಿ ಕಟ್ಟುವ ವೇಳೆ ತ್ರೀ ಈಡಿಯಟ್ಸ್‌ ಸಿನಿಮಾ ಶೈಲಿಯಲ್ಲಿ ಹುಡುಗನಿಕೆ ಕೈಕೊಟ್ಟು, ಪ್ರೀತಿಸಿದವನೇ ಬೇಕು ಎಂದು ಹಸೆಮಣೆಯಿಂದ ಎದ್ದು ಹೋಗಿದ್ದಾಳೆ.

ಹೌದು, ಕಳೆದೊಂದು ತಿಂಗಳಿಂದ ಮನೆಯವರು ಭರ್ಜರಿ ಮದುವೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು ನಿನ್ನೆ ರಾತ್ರಿ ವೇಳೆ ಆರತಕ್ಷತೆ ನಡೆದಿದ್ದು, ಯುವತಿ ಕೂಡ ನಗು ನಗುತ್ತಲೇ ವರನೊಂದಿಗೆ ಫೋಟೋಗೆ ಪೋಸ್‌ ಕೊಟ್ಟು ಮನೆಯವರಿಂದ ಸೈ ಎನಿಸಿಕೊಂಡಿದ್ದಾಳೆ. ಇಂದು ಬೆಳಗ್ಗೆ ತಾಳಿ ಕಟ್ಟುವುದಕ್ಕೂ ಮುನ್ನ ಮಾಡುವ ಎಲ್ಲ ಶಾಸ್ತ್ರಗಳನ್ನು ಮಾಡಿ, ಮಂತ್ರವನ್ನೂ ಹೇಳಲಾಗಿದೆ. ಇನ್ನೇನು ತಾಳಿ ಕಟ್ಟವುದಕ್ಕೆ ಗಟ್ಟಿಮೇಳ ವಾದ್ಯದ ಶಬ್ದ ಹೊರಹೊಮ್ಮುತ್ತಿದ್ದು, ಎಲ್ಲರೂ ಎದ್ದುನಿಂತು ಅಕ್ಷತೆಗಳನ್ನು ಹಾಕಲು ಸಿದ್ಧವಾಗಿದ್ದಾರೆ. ವಧುವಿನ ಕುತ್ತಿಗೆಗೆ ಇನ್ನೇನು ತಾಳಿ ಕಟ್ಟಬೇಕು ಎನ್ನುವಾಗ, ಕೂಡಲೇ ಕೈ ಅಡ್ಡ ಹಿಡಿದು ತನಗೆ ಈ ಮದುವೆ ಬೇಡ ಎಂದು ಹಸೆಮಣೆಯಿಂದ ಎದ್ದು ಹೋಗಿದ್ದಾಳೆ.

ಕೋಲಾರ ಮತ್ತೊಂದು ಮರ್ಯಾದಾ ಹತ್ಯೆ: ಅನ್ಯ ಜಾತಿ ಯುವಕನ ಪ್ರೀತಿಸಿದ ಮಗಳನ್ನೇ ಕೊಲೆಗೈದ ವೆಂಕಟೇಶ್‌ಗೌಡ

ತಾಳಿ ಕಟ್ಟಬೇಡಿ ಎಂದು ಹಸೆಮಣೆಯಿಂದ ಎದ್ದ ವಧು: ಇನ್ನು ತಾಳಿ ಕಟ್ಟುವ ಶುಭವೇಳೆ ಹಸೆಮಣೆಯಿಂದ ಎದ್ದುಹೋದ ಯುವತಿಗೆ ಪೋಷಕರು ಹಾಗೂ ವರನ ಕಡೆಯವರು ಮದುವೆ ಬೇಡ ಎನ್ನುವುದಕ್ಕೆ ಕಾರಣ ಕೇಳಿದಾಗ ತಾನು ಇನ್ನೊಬ್ಬ ಹುಡುಗನನ್ನು ಪ್ರೀತಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾಳೆ. ಆದ್ದರಿಂದ ಈ ಮದುವೆ ತಾಳಿ ಕಟ್ಟುವ ಶುಭ ವೇಳೆಯಲ್ಲಿ ಮುರಿದು ಬಿದ್ದಿದೆ. ಈ ಘಟನೆ ತುಮಕೂರು ಜಿಲ್ಲೆ‌, ಕೊರಟಗೆರೆ ತಾಲೂಕಿನ ಕೊಳಾಲ ಗ್ರಾಮದಲ್ಲಿ ನಡೆದಿದೆ. ಮದುವೆ ನಿರಾಕರಿಸಿದ ವಧುವನ್ನು ದಿವ್ಯ ಎಂದು ಹೇಳಲಾಗುತ್ತಿದೆ.

ಅರತಕ್ಷತೆಯಲ್ಲಿ ನಗುತ್ತಿಲೇ ಪೋಸ್‌ ಕೊಟ್ಟು, ತಾಳಿ ಕಟ್ಟೋವೇಳೆ ಅವಾಂತರ: ನಾನು ಬೇರೆ ಹುಡುಗನನ್ನ ಪ್ರೀತಿಸುತ್ತಿದ್ದೇನೆ. ಹೀಗಾಗಿ ಮದುವೆ ಬೇಡ ಎಂದು ಕ್ಯಾನ್ಸಲ್ ಮಾಡಿ ಎಂದು ದಿವ್ಯಾ ಹಠ ಹಿಡಿದಿದ್ದಾಳೆ. ಕೊಳಾಲ ಗ್ರಾಮದ ಕೆ.ಸಿ.ಎನ್. ಕನ್ವೆನ್ಷನ್ ಹಾಲ್ ನಲ್ಲಿ ಮದುವೆ ನಡೆಯುತ್ತಿತ್ತು. ರಾತ್ರಿ ವಿವಾಹ ಆರತಕ್ಷತೆಯಲ್ಲಿ ನಗುನಗುತ್ತಲೇ ಫೋಟೋಗೆ ಪೋಸ್ ಕೊಟ್ಟಿದ್ದ ದಿವ್ಯಾ, ವರ ವೆಂಕಟೇಶ್‌ ಜೊತೆಯಲ್ಲಿ ಮದುವೆಯಾಗಿ ಸುಖವಾಗಿ ಜೀವನ ಮಾಡುತ್ತಾಳೆ ಎಂದು ಪೋಷಕರು ನಂಬಿಕೊಂಡಿದ್ದರು. ಆದರೆ, ತಾಳಿ ಕಟ್ಟುವ ವೇಳೆ ಪ್ರೀತಿಸಿದ ಯುವಕನೇ ನನಗೆ ಬೇಕು, ಆತನನ್ನು ಬಿಟ್ಟು ಬೇರೆ ಮದುವೆ ಆಗುವುದಿಲ್ಲ ಎಂದು ಹಠ ಮಾಡಿದ್ದು, ಮದುವೆ ಮುರಿದಿದ್ದಾಳೆ.

ಪಿಎಸ್‌ಐ ಪುತ್ರನೇ ಕಳ್ಳ? ಜನರಿಗೊಂದು ನ್ಯಾಯ, ಪೊಲೀಸರ ಮಕ್ಕಳಿಗೊಂದು ನ್ಯಾಯವೇ?

ಪೊಲೀಸ್‌ ಠಾಣೆಯಲ್ಲಿ ಮಾತುಕಥೆ: ಮತ್ತೊಂದೆಡೆ ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡಿದ್ದ ದೊಡ್ಡಬಳ್ಳಾಪುರದ ತಾಲೂಕಿನ ಮೂಡ್ಲಕಾಳೇನಹಳ್ಳಿಯ ಸಿದ್ದಮ್ಮ ಮತ್ತು ಗೋವಿಂದರಾಜು ಪುತ್ರ ವೆಂಕಟೇಶ್ (ವರ) ಸ್ಥಿತಿ ತೀವ್ರ ಗೊಂದಲಕ್ಕೆ ಸಿಲುಕಿದೆ. ಹುಡುಗಿ ಉಲ್ಟಾ ಹೊಡೆಯುತ್ತಿದ್ದಂತೆ ಕಲ್ಯಾಣ ಮಂಟಪದಲ್ಲಿ ಗದ್ದಲ ಶುರುವಾಗಿದೆ. ಕೆಲವರು ಯುವತಿಯನ್ನು ಮನವೊಲಿಸಲು ಮುಂದಾಗಿದ್ದರೂ, ಎಷ್ಟೇ ಬುದ್ಧಿ ಹೇಳಿದರೂ ಯುವತಿ ಮಾತ್ರ ತನಗೆ ಈ ಮದುವೆ ಬೇಡವೆಂದು ನಿರಾಕರಣೆ ಮಾಡಿದ್ದಾಳೆ. ಇನ್ನು ಎರಡೂ ಮನೆಯವರ ನಡುವೆಯೂ ಮಾತಿನ ಚಕಮಕಿ ನಡೆದಿದೆ. ಈಗ ಮದಿವೆ ಸಂಬಂಧ ಕೊಳಾಲ‌ ಪೊಲೀಸ್‌ ಠಾಣೆಯಲ್ಲಿ ಎರಡೂ ಮನೆಯವರನ್ನು ಕೂರಿಸಿ ಮಾತುಕಥೆ ಮಾಡಲಾಗುತ್ತಿದೆ.

Follow Us:
Download App:
  • android
  • ios