Asianet Suvarna News Asianet Suvarna News

ಕೋಲಾರ ಮತ್ತೊಂದು ಮರ್ಯಾದಾ ಹತ್ಯೆ: ಅನ್ಯ ಜಾತಿ ಯುವಕನ ಪ್ರೀತಿಸಿದ ಮಗಳನ್ನೇ ಕೊಲೆಗೈದ ವೆಂಕಟೇಶ್‌ಗೌಡ

ರಾಜ್ಯದ ಗಡಿಭಾಗ ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನ ನೆರೆಹೊರೆ ಜಿಲ್ಲೆಯಾಗಿರುವ ಕೋಲಾರದ ಜಿಲ್ಲೆಯಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ಪ್ರಕರಣ ನಡೆದಿದೆ.

Kolar another honour killing Vokkaliga community Venkateshgowda killed his own daughter sat
Author
First Published Aug 27, 2023, 11:12 AM IST

ಕೋಲಾರ (ಆ.27): ರಾಜ್ಯದ ಗಡಿಭಾಗ ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನ ನೆರೆಹೊರೆ ಜಿಲ್ಲೆಯಾಗಿರುವ ಕೋಲಾರದ ಜಿಲ್ಲೆಯಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ಪ್ರಕರಣ ನಡೆದಿದೆ. ಅನ್ಯ ಜಾತಿಯ ಯುವಕನನ್ನು ಪ್ರೀತಿಸತ್ತಿದ್ದ ಮಗಳು ಮೇಜರ್‌ ಆಗಿದ್ದು, ಮನೆಯವರ ಮಾತನ್ನು ಕೇಳದೇ ಹೋಗಿ ಮದುವೆ ಮಾಡಿಕೊಂಡು ಮರ್ಯಾದೆ ತೆಗೆಯುತ್ತಾಳೆಂದು ತಿಳಿದು ಸ್ವಂತ ಮಗಳನ್ನೇ ಕೊಲೆ ಮಾಡಿ ಜಮೀನಿನಲ್ಲಿ ಮಣ್ಣು ಮಾಡಿ ಬಂದಿದ್ದಾರೆ.

ತಂದೆಯಿಂದಲೇ ಮಗಳ ಬರ್ಬರ ಕೊಲೆ ನಡೆದಿರುವ ಘಟನೆ ಕೋಲಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ನಡೆದಿದೆ. ಆ.25ರ (ಶುಕ್ರವಾರ) ಬೆಳಗ್ಗಿನ ಜಾವ 2.30ರ ಸಮಯದಲ್ಲಿ ಕೊಲೆ ಮಾಡಲಾಗಿದೆ. ರಮ್ಯಾ (19) ತಂದೆಯಿಂದಲೇ ಕೊಲೆಯಾದ ಮಗಳು. ಇನ್ನು ರಮ್ಯಾ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಮೃತ ದುರ್ದೈವಿ ರಮ್ಯಾ ಒಕ್ಕಲಿಗ ಸಮುದಾಯದವಳಾಗಿದ್ದರೆ, ತಾನು ಪ್ರೀತಿ ಮಾಡುತ್ತಿದ್ದ ಯುವಕ ನಾಯಕ ಸಮುದಾಯದವನಾಗಿದ್ದನು. ಇನ್ನು ಯುವಕ ಕೂಡ ತನ್ನೇ ವಯಸ್ಸಿನವಾಗಿದ್ದನು. ಇನ್ನು ಈ ಯುವಕ ಪಕ್ಕದ ಗ್ರಾಮದವನಾಗಿದ್ದು, ಇಬ್ಬರೂ ಕೆಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು.

ಕೋಲಾರ ಮರ್ಯಾದಾ ಹತ್ಯೆ: ದಲಿತನನ್ನು ಪ್ರೀತಿಸಿದ್ದಕ್ಕೆ ಮಗಳನ್ನು ಉಸಿರುಗಟ್ಟಿಸಿ ಕೊಂದ ತಂದೆ!

ರಾತ್ರಿ 2.30ರ ವೇಳೆ ಫೋನಿನಲ್ಲಿ ಕದ್ದುಮುಚ್ಚಿ ಮಾತುಕತೆ: ಇನ್ನು ಮಗಳು ಮತ್ತು ಪಕ್ಕದ ಗ್ರಾಮದ ಯುವಕನ ಪ್ರೀತಿ ಮಾಡುವ ವಿಚಾರದ ಬಗ್ಗೆ ತಂದೆ ವೆಂಕಟೇಶಗೌಡನಿಗೆ ಮಾಹಿತಿ ತಿಳಿದಿದೆ. ಆಗ, ಮನೆಯಲ್ಲಿ ಮಗಳನ್ನು ಕೂರಿಸಿಕೊಂಡು ಮೊದಲು ಬುದ್ಧಿವಾದ ಹೇಳಿದ್ದಾನೆ. ನಂತರ, ಬೈದು-ಹೊಡೆದು ಪ್ರೀತಿ ಮಾಡುವುದನ್ನು ಬಿಟ್ಟುಬಿಡುವಂತೆ ಎಚ್ಚರಿಕೆಯನ್ನೂ ಕೊಟ್ಟಿದ್ದಾನೆ. ಆದರೂ, ಪ್ರೀತಿ ಮುಂದುವರೆಸಿದ ಪ್ರೇಮಿಗಳು ಕದ್ದು ಮುಚ್ಚಿ ರಾತ್ರಿ ವೇಳೆ ಫೋನಿನಲ್ಲಿ ಮಾತನಾಡುತ್ತಿದ್ದರು. 25ನೇ ತಾರೀಖು ಶುಕ್ರವಾರ ಬೆಳಗಿನ ಜಾವ 2.30ರಲ್ಲಿ ರಮ್ಯಾ ಯುವಕನ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದಳು. 

ಸಿನಿಮಾಗಿಂತ ಕ್ರೂರವಾಗಿ ಕೊಲೆ: ಈ ವೇಳೆ ಫೋನ್‌ ಕಿತ್ತುಕೊಂಡು ನಿನಗೆ ಬೇರೆ ಸಂಬಂಧ ನೋಡುತ್ತಿದ್ದೇವೆ ಮದುವೆ ಮಾಡುತ್ತೇವೆ ಎಂದಿದ್ದಾರೆ. ಮದುವೆ ಬೇಡ ಎಂದು ರಮ್ಯಾ ತನ್ನ ಮನೆಯವರ ಜೊತೆ ಗಲಾಟೆ ಮಾಡಿದ್ದಾಳೆ. ಈ ವೇಳೆ ತಂದೆಯ ಕೋಪ ವಿಕೋಪಕ್ಕೆ ಹೋಗಿ ರಮ್ಯಾಳ ಕುತ್ತಿಗೆ ಮೇಲೆ ಕಾಲು ಇಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಇನ್ನು ರಮ್ಯಾಳ ಮೇಲೆ ಮಾರಣಾಂತಿಕ ಹಲ್ಲೆ ಸಹ ಆಗಿರುವ ಅನುಮಾನ ವ್ಯಕ್ತವಾಗುತ್ತಿದೆ. ಕೊಲೆ ಆದ ಬಳಿಕ ಸಂಬಂಧಿಕರ ಸಹಾಯ ಪಡೆದು ಯಾರಿಗೂ ತಿಳಿಸದೆ ಅಂತ್ಯಕ್ರಿಯೆ ಮಾಡಿ ಮುಗಿಸಲಾಗಿದೆ.

ತಂಗಿಯ ಮದ್ವೆ ಮಾಡಿ ಕಳಿಸೋ ವೇಳೆ ಬಿಕ್ಕಿ ಬಿಕ್ಕಿ ಅತ್ತ ಆರ್‌ಸಿಬಿ ಆಟಗಾರ

ಬೆಳಗಾಗುವಷ್ಟರಲ್ಲಿ ಮಗಳ ಅಂತ್ಯಕ್ರಿಯೆ ಮಾಡಿದರು: ಮಗಳನ್ನು ಕೊಲೆ ಮಾಡಿದ ವೆಂಕಟೇಶ್‌ಗೌಡನ ಅಣ್ಣ ಮೋಹನ್‌ಗೌಡ, ತಮ್ಮ ಚೌಡೇಗೌಡ ಹಾಗೂ ಬಾಮೈದ ಆಂಜನೇಯರೆಡ್ಡಿ ಸಹಾಯ ಪಡೆದು ಅಂತ್ಯಕ್ರಿಯೆ ಮಾಡಲಾಗಿದೆ. ತಮ್ಮ ಜಮೀನಿನಲ್ಲಿ ಅವರಸರದಲ್ಲಿ ಕುಟುಂಬಸ್ಥರು ಮಣ್ಣು ಮಾಡಿ ಬಂದಿದ್ದಾರೆ. ಈ ಬಗ್ಗೆ ಅಕ್ಕಪಕ್ಕದ ಮನೆಯವರು ವಿಚಾರ ಮಾಡಿದರೂ ಯಾರೊಬ್ಬರೂ ಬಾಯಿಬಿಟ್ಟಿಲ್ಲ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಪೊಲೀಸರು ಗೌಪ್ಯ ತನಿಖೆ ಮಾಡಿದಾಗ ಸತ್ಯ ಹೊರಬಂದಿದೆ. ಇನ್ನು ಮಗಳನ್ನು ಕೊಲೆ ಮಾಡಿದ ಆರೋಪಿ ತಂದೆ ಹಾಗೂ ಮಣ್ಣು ಮಾಡಲು ಸಹಕರಿಸಿದವರನ್ನು ಸೇರಿಸಿ ಒಟ್ಟು 4 ಜನರ ವಿರುದ್ಧವೂ ಎಫ್‌ಐಆರ್‌ ದಾಖಲಿಸಿ ಬಂಧನ ಮಾಡಲಾಗಿದೆ.

ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ: ಇನ್ನು ಮಗಳನ್ನು ಕೊಲೆ ಮಾಡುವ ಮುನ್ನ ಸಾಕಷ್ಟು ದೈಹಿಕ ಹಲ್ಲೆ ಮಾಡಿದ ಬಗ್ಗೆಯೂ ಅನುಮಾನವಿದೆ. ಆದ್ದರಿಂದ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ತಯಾರಿ ಮಾಡುತ್ತಿದ್ದಾರೆ. ತಹಶೀಲ್ದಾರ್ ಹರ್ಷವರ್ಧನ್ ನೇತೃತ್ವದಲ್ಲಿ ನಡೆಯುವ ಮರಣೋತ್ತರ ಪರೀಕ್ಷೆ ನಡೆಯಲಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

Follow Us:
Download App:
  • android
  • ios