ಬಿಗ್‌ಬಾಸ್ ಮನೆಯೊಳಗಡೆ ಸ್ಪರ್ಧಿಗಳು ಎಲ್ಲೆ ಮೀರಿ ವರ್ತಿಸ್ತಿರೋದಕ್ಕೆ ಪ್ರೇಕ್ಷಕರು ಕಂಗಾಲಾಗಿದ್ದಾರೆ. ಹಗ್ಗಿಂಗ್, ಕಿಸ್ಸಿಂಗ್ ಅಂತ ಜೋಡಿಯ ರೋಮ್ಯಾನ್ಸ್ ಹೆಚ್ಚಾಗಿದ್ದು, ಫ್ಯಾಮಿಲಿಯಾಗಿ ಕುಳಿತು ಬಿಗ್‌ಬಾಸ್ ರಿಯಾಲಿಟಿ ಶೋವನ್ನು ನೋಡೋಕೆ ಸಾಧ್ಯಾನೇ ಇಲ್ಲಪ್ಪ ಅಂತಿದ್ದಾರೆ.
ಬಿಗ್‌ಬಾಸ್ ಮನೆಯೊಳಗೆ ನಡೆಯೋ ಹೈಡ್ರಾಮಾಗಳು ಒಂದೆರಡಲ್ಲ. ಫ್ರೆಂಡ್‌ಶಿಪ್ ಮಾಡ್ಕೊಳ್ಳೋದು, ಜಗಳವಾಡೋದು, ಲವ್ ಸ್ಟೋರಿ, ಬ್ರೇಕಪ್ ಎಲ್ಲವೂ ಸಾಮಾನ್ಯವಾಗಿದೆ. ಕೆಲವೊಮ್ಮೆ ಬಿಗ್‌ಬಾಸ್ ಮನೆಯೊಳಗೆ ಕಪಲ್ಸ್ ಮಧ್ಯೆ ನಡೆಯೋ ರೋಮ್ಯಾನ್ಸ್ ವೀಕ್ಷಕರನ್ನು ತಬ್ಬಿಬ್ಬು ಮಾಡುವುದೂ ಇದೆ. ಇತ್ತೀಚಿಗೆ ದೊಡ್ಮನೆಯಲ್ಲಿ ಸ್ಪರ್ಧಿಗಳ ಅಶ್ಲೀಲ ನಡವಳಿಕೆ, ರೋಮ್ಯಾನ್ಸ್ ಹೆಚ್ಚಾಗಿದೆ. ಅದರಲ್ಲೂ ಹಿಂದಿ ಬಿಗ್‌ಬಾಸ್ ಮನೆಯೊಳಗಡೆ ಸ್ಪರ್ಧಿಗಳು ಎಲ್ಲೆ ಮೀರಿ ವರ್ತಿಸ್ತಿರೋದಕ್ಕೆ ಪ್ರೇಕ್ಷಕರು ಕಂಗಾಲಾಗಿದ್ದಾರೆ. ಫ್ಯಾಮಿಲಿಯಾಗಿ ಕುಳಿತು ಬಿಗ್‌ಬಾಸ್ ರಿಯಾಲಿಟಿ ಶೋವನ್ನು ನೋಡೋಕೆ ಸಾಧ್ಯಾನೇ ಇಲ್ಲಪ್ಪ ಅಂತಿದ್ದಾರೆ.
ಕಿರುತೆರೆ ನಟ-ನಟಿಯರಾದ ಸಮರ್ಥ್ ಜುರೆಲ್ ಹಾಗೂ ಇಶಾ ಮಾಳವಿಯಾ ರೋಮ್ಯಾನ್ಸ್ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದಿ ಕಿರುತೆರೆಯ ಫೇಮಸ್ ನಟಿ ಕಾಮ್ಯಾ ಪಂಜಾಬಿ ಸಹ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಗ್ ಬಾಸ್‌ನ ಹೊಸ ಸೀಸನ್‌ನಲ್ಲಿ ಇಶಾ ಮಾಳವಿಯಾ ಮತ್ತು ಸಮರ್ಥ್ ಜುರೆಲ್ ಅವರ ಅತಿಯಾದ ರೋಮ್ಯಾನ್ಸ್ ಕಾರ್ಯಕ್ರಮವನ್ನು ಹಾಳು ಮಾಡಿದೆ ಕಾಮ್ಯಾ ಪಂಜಾಬಿ ಟ್ವೀಟ್ ಮಾಡಿದ್ದಾರೆ. ನಟ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ, ಇಶಾ ಮತ್ತು ಸಮರ್ಥ್ ಅವರ ವರ್ತನೆಯಿಂದಾಗಿ ನನ್ನ ನೆಚ್ಚಿನ ರಿಯಾಲಿಟಿ ಶೋವನ್ನು ಈಗ ಕುಟುಂಬ ಸಮೇತವಾಗಿ ಕುಳಿತು ನೋಡಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಚಪ್ಪಲಿ ಎಸೆದು ಸ್ಪರ್ಧಿಗಳ ಕಿತ್ತಾಟ; ಇದೆಲ್ಲಾ ಓವರ್ ಆಯ್ತು ಎಂದ ನೆಟ್ಟಿಗರು!
ಬಿಗ್‌ಬಾಸ್ ಮನೆಯಲ್ಲಿ ಮಿತಿ ಮೀರ್ತಿರೋ ರೋಮ್ಯಾನ್ಸ್‌ಗೆ ಆಕ್ರೋಶ
ಟ್ವೀಟ್‌ನಲ್ಲಿ, 'ಈಶಾ ಮತ್ತು ಸಮರ್ಥ್ ಅವರಿಗೆ ಧನ್ಯವಾದಗಳು, ಈಗ ನನ್ನ ನೆಚ್ಚಿನ ಕಾರ್ಯಕ್ರಮವನ್ನು ನನ್ನ ಕುಟುಂಬದೊಂದಿಗೆ ವೀಕ್ಷಿಸಲು ಸಾಧ್ಯವಿಲ್ಲ. ದಯವಿಟ್ಟು ನೀವಿಬ್ಬರೂ ಮನೆಯಿಂದ ಹೊರ ಹೋಗಿ ಮತ್ತು ಒಂದು ಪ್ರತ್ಯೇಕ ಬೆಡ್‌ರೂಮ್ ಹುಡುಕಿಕೊಳ್ಳಿ' ಎಂದಿದ್ದಾರೆ. ಇದಕ್ಕೆ Biggboss ಹಾಗೂ Colorshindiಯನ್ನು ಟ್ಯಾಗ್ ಮಾಡಿದ್ದಾರೆ. ನಟಿ ಕಾಮ್ಯಾ ಪಂಜಾಬಿ ಟ್ವೀಟ್‌ಗೆ ಸಾಕಷ್ಟು ಲೈಕ್ಸ್ ಹಾಗೂ ಕಾಮೆಂಟ್‌ಗಳು ಬಂದಿವೆ.
ಒಬ್ಬ ಬಳಕೆದಾರರು, 'ಕುಟುಂಬ ಸಮೇತವಾಗಿ ಕುಳಿತು ನೋಡಬಹುದಾಗಿದ್ದ ಈ ರಿಯಾಲಿಟಿ ಶೋ ಈಗ ಅಸಹ್ಯವಾಗಿದೆ' ಎಂದು ಬರೆದಿದ್ದಾರೆ, ಇನ್ನೊಬ್ಬರು, 'ಇಂಥಾ ದೃಶ್ಯಗಳನ್ನು ಕಟ್ ಮಾಡಿ ಪ್ರಸಾರ ಮಾಡುವ ಅವಕಾಶವಿದೆ. ಆದರೂ ಇವರು ಮಾಡುತ್ತಿಲ್ಲ. ಯಾಕೆಂದರೆ ಟಿಆರ್‌ಪಿಗಾಗಿ ಅವರೂ ಇಂಥದನ್ನು ಬಯಸುತ್ತಾರೆ' ಎಂದು ಕಮೆಂಟಿಸಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ಮೇಡಂ ಇದು 16+ ಕಾರ್ಯಕ್ರಮ. ಆದ್ದರಿಂದ ಇದು ಖಂಡಿತವಾಗಿಯೂ ಕುಟುಂಬ ಪ್ರೇಕ್ಷಕರಿಗೆ ಅಲ್ಲ' ಎಂದು ತಿಳಿಸಿದ್ದಾರೆ.
ಬಿಗ್‌ಬಾಸ್ ಮನೆಯಲ್ಲೇ ಗರ್ಭಿಣಿಯಾದೆ ಎಂದಿದ್ದ ನಟಿಯ ಪರೀಕ್ಷಾ ರಿಪೋರ್ಟ್ ಕೊನೆಗೂ ಬಂತು: ಫ್ಯಾನ್ಸ್ ಫುಲ್ ಖುಷ್!
ಪ್ರೇಕ್ಷಕರ ಹುಬ್ಬೇರುವಂತೆ ಮಾಡಿದ ಕಪಲ್ಸ್ ರೋಮ್ಯಾನ್ಸ್
ಸಮರ್ಥ್ ಹಾಗೂ ಇಶಾ, ಬಿಗ್‌ಬಾಸ್ ಮನೆಯಲ್ಲಿ ಯಾವಾಗಲೂ ಜೊತೆಯಾಗಿ ಓಡಾಡುವುದು, ಮಲಗುವುದು ಮಾಡುತ್ತಿದ್ದಾರೆ. ಅದರಲ್ಲೂ ಇತ್ತೀಚಿಗೆ ಇವರಿಬ್ಬರ ವರ್ತನೆ ಮಿತಿ ಮೀರ್ತಿದೆ ಅಂತಿದ್ದಾರೆ ಪ್ರೇಕ್ಷಕರು. ಇಬ್ಬರೂ ಹೋದಲ್ಲಿ, ಬಂದಲ್ಲಿ ಕಿಸ್ ಮಾಡಿಕೊಳ್ಳುವುದು, ಹಗ್ ಮಾಡುವುದು ಮಾಡುತ್ತಿದ್ದಾರೆ. ಅದಲ್ಲದೆ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಹೊಸ ವೀಡಿಯೊ ಕ್ಲಿಪ್‌ನಲ್ಲಿ ಸಮರ್ಥ್ ಇಶಾ ಅವರ ಸೀರೆಯನ್ನೆತ್ತಿ ಸೊಂಟಕ್ಕೆ ಕಿಸ್ ಮಾಡಲು ಯತ್ನಿಸಿದ್ದರು. ಬಾತ್‌ರೂಮ್‌ನಲ್ಲಿ ಸಮರ್ಥ್, ಇಶಾಳನ್ನು ಎಳೆದಾಡಿಕೊಂಡು ಕಿಸ್ ಮಾಡಲು ಯತ್ನಿಸುತ್ತಿದ್ದರು.
ಸಮರ್ಥ್ ಹಾಗೂ ಇಶಾ ಇಬ್ಬರೂ ಬೆಡ್ ಮೇಲೆ ಕುಳಿತಿರುತ್ತಾರೆ. ಸಮರ್ಥ್, ಇಶಾಗೆ ಯಾವುದೋ ವಿಚಾರಕ್ಕಾಗಿ ಸಮಾಧಾನ ಮಾಡುತ್ತಿರುತ್ತಾನೆ. ಈ ಸಂದರ್ಭದಲ್ಲಿ ಆಕೆಯ ಮುಖ, ಭುಜವನ್ನು ಚುಂಬಿಸುತ್ತಾನೆ. ಸೀರೆಯನ್ನು ಸರಿಸಿ ಸೊಂಟಕ್ಕೆ ಕಿಸ್ ಮಾಡಲು ಸಹ ಪ್ರಯತ್ನಿಸುವುದನ್ನು ವೀಡಿಯೋದಲ್ಲಿ ನೋಡಬಹುದು.
ಬಿಗ್‌ಬಾಸ್‌ನ ಈ ವೀಡಿಯೋ ನೋಡಿ ಪ್ರೇಕ್ಷಕರು ಕಿಡಿಕಾರಿದ್ದಾರೆ. ಸಮರ್ಥ್ ವರ್ತನೆಯನ್ನು ಟೀಕಿಸಿದ್ದಾರೆ. ಒಬ್ಬ ಬಳಕೆದಾರರು, 'ಆತನನ್ನು ಟೆಂಪ್ಟೇಶನ್ ಐಲ್ಯಾಂಡ್ ಶೋಗೆ ಕಳುಹಿಸಿ' ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ. ಮತ್ತೊಬ್ಬರು, 'ಈ ವ್ಯಕ್ತಿಯನ್ನು ಲಸ್ಟ್ ಸ್ಟೋರಿಗಳಿಗೆ ಕಳುಹಿಸಿ. ಅವರು ಬಿಗ್ ಬಾಸ್ ಅನ್ನು ಲವ್ ಹಾಸ್ಟೆಲ್ ಮಾಡಿದ್ದಾರೆ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು 'ಸಮರ್ಥ್‌ನ್ನು ಹುಡುಗಿಯರಿಂದ ದೂರವಿಡಿ' ಎಂದಿದ್ದಾರೆ.
