Asianet Suvarna News Asianet Suvarna News

Work from mandap: ಮದ್ವೆ ದಿನವೂ ಲ್ಯಾಪ್‌ಟಾಪ್ ಹಿಡಿದು ಕೆಲಸ ಮಾಡಿದ ವರ !

ಕೊರೋನಾ ಸೋಂಕು ಹರಡುತ್ತಿದ್ದ ಸಂದರ್ಭದಲ್ಲಿ ಜಗತ್ತಿನಾದ್ಯಂತ ಹಲವು ಕಂಪೆನಿಗಳು ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಮ್ ಆಪ್ಶನ್ ನೀಡಿತ್ತು. ಆ ನಂತರದಿಂದ ಮನೆಯಿಂದಲೇ ಕೆಲ್ಸ ಅನ್ನೋ ಕಾನ್ಸೆಪ್ಟ್‌ ಸಾಮಾನ್ಯವಾಗಿ ಹೋಗಿದೆ. ಆಫೀಸ್ ಅಲ್ಲದೆ ಮನೆ, ಹೊಟೇಲ್‌, ರೆಸಾರ್ಟ್‌ ಹೀಗೆ ಹಲವು ಕಡೆಯಿಂದ ಜನರು ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ಕೋಲ್ಕೊತ್ತಾದಲ್ಲಿ ವರನೊಬ್ಬ ಮದುವೆ ಮಂಟಪದಿಂದಲೇ ಕೆಲಸ ಮಾಡಿದ್ದು ಫೋಟೋ ಎಲ್ಲೆಡೆ ವೈರಲ್ ಆಗಿದೆ.

Kolkata Groom Uses Laptop During Wedding Ceremony In Viral Photo Vin
Author
First Published Nov 30, 2022, 12:05 PM IST

ಕೊರೋನಾ ಸೋಂಕು ಹರಡುತ್ತಿರುವ ದಿನಗಳಲ್ಲಿ ಲಾಕ್‌ಡೌನ್ ಹೇರಿದ್ದ ಕಾರಣ ಹಲವು ಕಂಪೆನಿಗಳು ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಮ್ ಆಪ್ಶನ್ ನೀಡಿತ್ತು.ಕೊರೋನಾ ಸೋಂಕಿನ ಪ್ರಕರಣ ಇಳಿಕೆಯಾದ ನಂತರವೂ ಅನೇಕ ಕಂಪನಿಗಳು ವರ್ಕ್‌ ಫ್ರಂ ಹೋಮ್ ಆಪ್ಶನ್ ಮುಂದುವರಿಸಿವೆ. ಆಫೀಸ್ ಅಲ್ಲದೆ ಮನೆ, ಹೊಟೇಲ್‌, ರೆಸಾರ್ಟ್‌ ಹೀಗೆ ಹಲವು ಕಡೆಯಿಂದ ಜನರು ಕೆಲಸ (Work) ಮಾಡುತ್ತಿದ್ದಾರೆ. ಈ ಮಧ್ಯೆ ಕೋಲ್ಕೊತ್ತಾದಲ್ಲಿ ವರನೊಬ್ಬ (Groom) ಮದುವೆ ಮಂಟಪದಿಂದಲೇ ಕೆಲಸ ಮಾಡಿದ್ದು ಫೋಟೋ ಎಲ್ಲೆಡೆ ವೈರಲ್ ಆಗಿದೆ. ವರನೊಬ್ಬ ತನ್ನ ಮದುವೆ ಕಾರ್ಯಕ್ಕಿಂತ ಆಫೀಸ್‌ ಕೆಲಸವೇ ಮುಖ್ಯವೆಂದು ಲ್ಯಾಪ್‌ಟಾಪ್‌ ಹಿಡಿದು ಕೆಲಸ ಮಾಡುತ್ತಿರುವ ಪೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲಿ ಅವರು ಮದುವೆಯ (Marriage) ವಿಧಿವಿಧಾನಗಳ ನಡುವೆ ಲ್ಯಾಪ್‌ಟಾಪ್‌ನಲ್ಲಿ ಕಚೇರಿ (Office) ಕೆಲಸ ಮಾಡುತ್ತಿರುವುದು ಕಂಡುಬಂದಿದೆ.

ವರ್ಕ್ ಫ್ರಂ ಮದುವೆ ಮಂಟಪ
ವರ ಮಂಟಪದಲ್ಲಿ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವುದನ್ನು ಪೋಟೊದಲ್ಲಿ ಕಾಣಬಹುದಾಗಿದ್ದು, ಇದನ್ನು 'ಕಲ್ಕತ್ತಾ ಇನ್‌ಸ್ಟಾಗ್ರಾಮರ್ಸ್' ಹೆಸರಿನ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ ಹಂಚಿಕೊಂಡಿದ್ದಾರೆ. ವರ ಲ್ಯಾಪ್‌ಟಾಪ್‌ನಲ್ಲಿ ನಿಖರವಾಗಿ ಏನು ಕೆಲಸ ಮಾಡುತ್ತಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಮಂಟಪದಲ್ಲೂ ಕೆಲಸ ಮಾಡಬೇಕಾದರೆ ಕಚೇರಿಯ ಕಾರ್ಯವೇ ಇರಬೇಕೆಂದು ನೆಟ್ಟಿಗರು ಹೇಳುತ್ತಿದ್ದಾರೆ. 

ಏನು ಮಾಯೆಯೋ.. 19ರ ತರುಣಿ ಮದ್ವೆ ಆಗಿ ರೋಮ್ಯಾನ್ಸ್‌ಗೆ ವಯಸ್ಸು ಮುಖ್ಯವಲ್ಲ ಎಂದ 70ರ ತಾತ

ಕೆಲಸ ಮಾಡುತ್ತಿರುವ ವರನನ್ನು ಆಶೀರ್ವದಿಸಿದ ಪುರೋಹಿತರು
ವರ ಲ್ಯಾಪ್‌ಟಾಪ್‌ನಲ್ಲಿ ನಿರತರಾಗಿರುವ ಕಾರಣ ಪುರೋಹಿತರು ವರನನ್ನು ಆಶೀರ್ವದಿಸುತ್ತಿರುವುದನ್ನು ಕಾಣಬಹುದು. ಆದರೆ ವರ ಪುರೋಹಿತರ ಕಡೆಗೆ ನೋಡದೇ ಆತ ತನ್ನ ಲ್ಯಾಪ್‍ಟಾಪ್‌ನಲ್ಲಿ ಕೆಲಸ ಮಾಡುತ್ತ ಮಗ್ನನಾಗಿದ್ದಾನೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ (Social media) ಹರಿದಾಡುತ್ತಿದೆ. ವೈರಲ್ ಆದ ಫೋಟೋ, 10,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಈ ಫೋಟೋವನ್ನು ಹಂಚಿಕೊಂಡಿರುವ ಇನ್‍ಸ್ಟಾಗ್ರಾಮ್ ಪೇಜ್‌ ಮದುವೆ ಸಮಯದಲ್ಲೂ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುವ ಸ್ನೇಹಿತನನ್ನು ಟ್ಯಾಗ್ ಮಾಡಿ ಎಂದು ತಿಳಿಸಿದೆ. ಇದಕ್ಕೆ ನೆಟ್ಟಿಗರು ಹಲವಾರು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ವೈರಲ್‌ ಫೋಟೋಗೆ ನಟ್ಟಿಗರಿಂದ ಕಾಮೆಂಟ್‌
ಒಬ್ಬ ಬಳಕೆದಾರ, 'ಇಂಥಾ ಸಂಸ್ಕೃತಿಯನ್ನು ಪ್ರಚಾರ ಮಾಡಬೇಡಿ, ಇದು ಹೆಮ್ಮೆಪಡುವಂಥದ್ದಲ್ಲ' ಎಂದಿದ್ದಾರೆ. ಮತ್ತೊಬ್ಬರು ಹೀಗೆ ಬರೆದಿದ್ದಾರೆ, 'ಇದು ನಿಜವೇ ಎಂದು ನನಗೆ ಖಚಿತವಿಲ್ಲ. ಆದರೆ ಸ್ಪಲ್ಪ ಮಟ್ಟಿಗೆ ತಮಾಷೆಯಾಗಿದೆ. ಆದರೆ ನಮ್ಮ ಸಂಸ್ಕೃತಿಯು ಇಂಥಾ ನಡವಳಿಕೆಯನ್ನು ಉತ್ತೇಜಿಸುವುದಿಲ್ಲ' ಎಂದು ಹೇಳಿದ್ದಾರೆ. ಮತ್ತೊಬ್ಬರು 'ನನಗೆ ಇದು ತಮಾಷೆಯಾಗಿ ಕಾಣುತ್ತಿಲ್ಲ. ಯಾವುದೇ ಸಂಸ್ಥೆಯು ಉದ್ಯೋಗಿಯನ್ನು ಅವರ ಮದುವೆಯ ದಿನಗಳಲ್ಲಿ ಕೆಲಸ ಮಾಡಲು ಕೇಳುವುದಿಲ್ಲ, ಇದು ನಿಜವಾಗಿದ್ದರೆ, ಈ ವ್ಯಕ್ತಿಯು ಜೀವನವನ್ನು ಪಡೆಯಬೇಕು ಮತ್ತು ಕೆಲಸದ ಜೀವನ ಸಮತೋಲನವನ್ನು ಕಲಿಯಬೇಕು' ಎಂದಿದ್ದಾರೆ. ಕೆಲವರು ಈ ಫೋಟೋ ನೋಡಿ ಹಾಸ್ಯ ಮಾಡಿದ್ದರೇ, ಇನ್ನೂ ಕೆಲವರು ಟೀಕಿಸಿದ್ದಾರೆ. ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದು, ಈ ವ್ಯಕ್ತಿಗೆ ತನ್ನ ಸ್ವಂತ ವಿವಾಹವನ್ನು ಆನಂದಿಸಲು ಸಹ ಆಗುತ್ತಿಲ್ಲ ಎಂದು ಹೇಳಿದ್ದಾರೆ.

ಮನೆಯಿಂದ ಕೆಲಸ ಮಾಡಿ ಬೋರಾಯ್ತಾ... ಇನ್ಮೇಲೆ ಬಾರಲ್ಲೂ ಕೂತು ಕೆಲ್ಸ ಮಾಡ್ಬಹುದು ನೋಡಿ

ಸಿಗ್ನಲ್‌ನಲ್ಲಿ ಬೈಕ್‌ನಲ್ಲಿ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡಿದ್ದ ವ್ಯಕ್ತಿ
ಈ ಹಿಂದೆ ಬೆಂಗಳೂರಿನಲ್ಲಿ ಬೈಕ್ ಓಡಿಸುವಾಗ ವ್ಯಕ್ತಿಯೊಬ್ಬ ತನ್ನ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವ ಫೋಟೋ ಇಂಟರ್ನೆಟ್‌ನಲ್ಲಿ ವೈರಲ್‌ ಆಗಿತ್ತು. ಲಿಂಕ್ಡ್‌ಇನ್ ಬಳಕೆದಾರ ಹರ್ಷಮೀತ್ ಸಿಂಗ್ ಈ ಮಾಹಿತಿ ಹಂಚಿಕೊಂಡಿದ್ದರು. 'ಬೆಂಗಳೂರು ಉತ್ತಮವಾಗಿದೆಯೇ ಅಥವಾ ಕೆಟ್ಟದ್ದಾಗಿದೆಯೇ? ರಾತ್ರಿ 11 ಗಂಟೆಗೆ, ಬೆಂಗಳೂರು ನಗರದ ಅತ್ಯಂತ ಜನನಿಬಿಡ ಫ್ಲೈಓವರ್‌ಗಳಲ್ಲಿ ಒಂದಾಗಿದೆ, ಮತ್ತು ಇಲ್ಲಿ ಒಬ್ಬ ಪಿಲಿಯನ್ ರೈಡರ್ ತನ್ನ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ' ಎಂದು ಸಿಂಗ್ ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದರು.

Follow Us:
Download App:
  • android
  • ios