ಮನೆಯಿಂದ ಕೆಲಸ ಮಾಡಿ ಬೋರಾಯ್ತಾ... ಇನ್ಮೇಲೆ ಬಾರಲ್ಲೂ ಕೂತು ಕೆಲ್ಸ ಮಾಡ್ಬಹುದು ನೋಡಿ
ಕೆಲಸದ ಸ್ಥಳ ಒಂತರ ಮಜಾವಾಗಿರಬೇಕು. ಅಲ್ಲೇ ಇರೋಣ ಅನಿಸಬೇಕು ಎಂದೆಲ್ಲಾ ಅನಿಸ್ತಿದೆಯೇ? ಹೌದು ಎಂದಾದರೆ ನಿಮಗೊಂದು ಗುಡ್‌ನ್ಯೂಸ್ ಇಲ್ಲಿದೆ.
ಮುಂಬೈ: ವರ್ಕ್ ಫ್ರಂ ಹೋಮ್ ಅಥವಾ ಮನೆಯಿಂದಲೇ ಕೆಲಸ ಮಾಡುವುದು ಇದು ಅನೇಕರ ಪಾಲಿಗೆ ಕೋವಿಡ್ ನೀಡಿದ ಅದ್ಭುತ ಕೊಡುಗೆ. ಅನೇಕರ ಪಾಲಿಗೆ ಇದು ಬದುಕಿನ ಶೈಲಿಯನ್ನೇ ಬದಲಿಸಿದೆ. ಉದ್ಯೋಗ ಕ್ಷೇತ್ರಗಳಿಗೂ ಇದು ಹೊಸದೊಂದು ಸಾಧ್ಯತೆ ಬಗ್ಗೆ ಬೆಳಕು ಚೆಲ್ಲುವಂತೆ ಮಾಡಿದ ಹೀಗೂ ಕೆಲಸ ಮಾಡಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟ ಹೊಸದೊಂದು ಅವಕಾಶ ಎಂದು ಹೇಳಿದರೆ ತಪ್ಪಾಗಲಾರದು. ಆದರೆ ಈ ವರ್ಕ್ ಫ್ರಂ ಹೋಮ್ ಎಲ್ಲರಿಗೂ ಖುಷಿ ನೀಡಿಲ್ಲ. ಕೆಲವರಿಗೆ ಅದೂ ಕೂಡ ಬೋರೆನಿಸಿದೆ. ಕೆಲವರಿಗೆ ವರ್ಕ್ ಫ್ರಂ ಹೋಮ್ ಮನೆಯ ನೆಮ್ಮದಿ ಕೆಡಿಸಿದೆಯಂತೆ. ನಿಮಗೂ ಏನಾದರೂ ಹೀಗೆ ವರ್ಕ್ ಫ್ರಂ ಹೋಮ್ ಮಾಡಿ ಬೇಜಾರೆನಿಸಿದೆ. ಹಾಗಂತ ಆಫೀಸ್‌ಗೆ ಹೋಗೋದಕ್ಕೆ ಮನಸ್ಸಿಲ್ಲ. ಇನ್ನೇನಾದ್ರೂ ಇದೇ ರೀತಿಯ ಸ್ವಲ್ಪ ಡಿಫರೆಂಟ್ ಎನಿಸಿದ ಕೆಲಸದ ವಾತಾವರಣ ಬೇಕು. ಕೆಲಸದ ಸ್ಥಳ ಒಂತರ ಮಜಾವಾಗಿರಬೇಕು. ಅಲ್ಲೇ ಇರೋಣ ಅನಿಸಬೇಕು ಎಂದೆಲ್ಲಾ ಅನಿಸ್ತಿದೆಯೇ? ಹೌದು ಎಂದಾದರೆ ನಿಮಗೊಂದು ಗುಡ್‌ನ್ಯೂಸ್ ಇಲ್ಲಿದೆ.
ಬ್ರಿಟನ್‌ನ ಪಬ್‌ಗಳು ಹೀಗೆ ಬೋರಾದ ಉದ್ಯೋಗಿಗಳಿಗೆ ವರ್ಕ್ ಫ್ರಂ ಪಬ್ ಅವಕಾಶ ನೀಡುತ್ತಿದೆ. ಜಗತ್ತಿನಾದ್ಯಂತ ಆರ್ಥಿಕ ಹಿಂಜರಿತದಿಂದಾಗಿ ಜೀವನ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಲವೆಡೆ ಜೀವನ ನಡೆಸುವುದೇ ಅನೇಕರಿಗೆ ಕಷ್ಟವಾಗಿದೆ. ಇದೇ ಕಾರಣಕ್ಕೆ ದೂರದ ಬೇರೆ ದೇಶಗಳ ಉದ್ಯೋಗಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಬ್ರಿಟನ್‌ನ ಪಬ್‌ಗಳು ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿವೆ. ವರ್ಕ್ ಫ್ರಂ ಪಬ್‌ನ ಅವಕಾಶ ನೀಡಲು ಶುರು ಮಾಡಿವೆ.
ಈ ಹೊಸ ಸೇವೆಗೆ ವರ್ಕ್ ಫ್ರಂ ಪಬ್ ಹೆಸರಿಡಲಾಗಿದೆ. ಗಾರ್ಡಿಯನ್ (The Guardian) ವರದಿಯ ಪ್ರಕಾರ, ಬ್ರಿಟನ್‌ನಲ್ಲಿರುವ ಬಹುತೇಕ ಪಬ್‌ಗಳು ಗ್ರಾಹಕರಿಗೆ ಈ ಹೊಸ ಆಫರ್ ನೀಡುತ್ತಿವೆ. ಈ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಯೋಜನೆ ರೂಪಿಸಿಕೊಂಡಿವೆ. ಬ್ರಿಟನ್‌ನಲ್ಲಿ ಫುಲ್ಲರ್ (Fuller) ಸಂಸ್ಥೆಗೆ ಸೇರಿದ ಒಟ್ಟು 380 ಪಬ್‌ಗಳು ಹೀಗೆ ಗ್ರಾಹಕರಿಗೆ ವರ್ಕ್ ಫ್ರಮ್ ಪಬ್ ಅವಕಾಶ ನೀಡಲು ಮುಂದಾಗಿವೆ. ಇವುಗಳು ಊಟ ಪಾನೀಯ ಸೇರಿ ದಿನವೊಂದಕ್ಕೆ ಇಲ್ಲಿ ವರ್ಕ್ ಫ್ರಮ್ ಹೋಮ್ ಮಾಡುವವರಿಗೆ ತಗಲುವ ವೆಚ್ಚ 11 ಡಾಲರ್ ಅಂದರೆ ಭಾರತದ 905 ರೂಪಾಯಿಗಳು. ಹಾಗೆಯೇ ಯಂಗ್ಸ್ (Young's) ಸಂಸ್ಥೆಯ ಕೆಳಗೆ ಹೀಗೆ ವರ್ಕ್ ಫ್ರಮ್ ಹೋಮ್‌ಗೆ ಅವಕಾಶ ನೀಡಿದ 185 ಪಬ್‌ಗಳಿವೆ. ಇಲ್ಲಿ ಕೆಲಸ ಮಾಡಬೇಕಾದರೆ ದಿನವೊಂದಕ್ಕೆ 17 ಡಾಲರ್ ಅಂದರೆ 1,399 ರೂಪಾಯಿ ನೀಡಬೇಕಾಗುತ್ತದೆ. ಹೀಗೆ ಒಂದು ಪಬ್‌ನಿಂದ ಮತ್ತೊಂದು ಪಬ್‌ಗೆ ಈ ದರದಲ್ಲಿ ಹಾಗೂ ನೀಡುವ ಕೊಡುಗೆಯಲ್ಲಿ ವ್ಯತ್ಯಾಸವಿರಬಹುದು. ಆದರೆ ಸಾಮಾನ್ಯವಾಗಿ ಒಂದು ಸ್ಯಾಂಡ್ವಿಚ್ ಊಟ, ಟೀ ಕಾಫಿ ಸಾಮಾನ್ಯವಾಗಿ ಎಲ್ಲೆಡೆಯೂ ಇರಲಿದೆಯಂತೆ.
ಭಾರತದಲ್ಲಿ Work from Home ಮುಂದುವರೆಯುತ್ತಾ, ಸಮೀಕ್ಷೆ ಹೇಳೋದೇನು?
ಭದ್ರತಾ ಸಲಹಾ ಸಂಸ್ಥೆಯಲ್ಲಿ ನಿರ್ದೇಶಕರಾಗಿರುವ ವರ್ಕ್ ಫ್ರಮ್ ಪಬ್‌ನ ಗ್ರಾಹಕರೊಬ್ಬರು, ಈ ಬಗ್ಗೆ ಗಾರ್ಡಿಯನ್ ಪತ್ರಿಕೆಗೆ ನೀಡಿದ ಹೇಳಿಕೆಯಂತೆ 10 ಬ್ರಿಟಿಷ್ ಪೌಂಡ್‌ಗಳನ್ನು ಪಾವತಿಸಿದರೆ ನೀವು ದಿನವೊಂದಕ್ಕೆ ಸ್ಯಾಂಡ್ವಿಚ್, ಪ್ಲಗ್ ಇರುವ ಟೇಬಲ್, ಉಚಿತ ಹಾಗೂ ಬೇಕಾದಷ್ಟು ಬಾರಿ ಟೀ ಅಥವಾ ಕಾಫಿ ಪಡೆಯಬಹುದು ಎಂದು ಅವರು ಹೇಳಿದ್ದಾರೆ. ಆದರೆ ಪಬ್‌ನಲ್ಲಿ ಕೆಲಸದ ಬಗ್ಗೆ ಗಮನ ಕೇಂದ್ರೀಕರಿಸುವ ಬಗ್ಗೆ ಕೇಳಿದಾಗ ಅಲ್ಲಿ ಅಂತಹ ಯಾವುದೇ ಗೊಂದಲ ಇಲ್ಲ. ಆರಾಮವಾಗಿ ಕೆಲಸ ಮಾಡಬಹುದು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಭದ್ರತಾ ಸಲಹಾ ಸಂಸ್ಥೆಯಲ್ಲಿ ನಿರ್ದೇಶಕರಾಗಿರುವ WFP ಗ್ರಾಹಕರು ದಿ ಗಾರ್ಡಿಯನ್‌ಗೆ "10 ಕ್ವಿಡ್‌ಗಳಿಗೆ ನೀವು ಬೇಕನ್ ಸ್ಯಾಂಡ್‌ವಿಚ್ (sandwich), ದಿನಕ್ಕೆ ಪ್ಲಗ್ ಹೊಂದಿರುವ ಟೇಬಲ್(table) ಮತ್ತು ಉಚಿತ ಅನಿಯಮಿತ ಚಹಾ ಮತ್ತು ಕಾಫಿಯನ್ನು (tea and coffee) ಪಡೆಯುತ್ತೀರಿ" ಎಂದು ಹೇಳಿದರು. ಅವರು ಪಬ್‌ನಲ್ಲಿ ಕೇಂದ್ರೀಕರಿಸುವುದು ಸವಾಲಿನ ವಿಚಾರವನ್ನು ನಿರಾಕರಿಸಿದರು, "ತೋಟಗಾರಿಕೆ, ಫ್ರಿಜ್ ಮತ್ತು ಬೆಕ್ಕುಗಳು" ನಂತಹ ಯಾವುದೇ ಗೊಂದಲಗಳಿಲ್ಲದ ಕಾರಣ ಅಲ್ಲಿ ಕೇಂದ್ರೀಕರಿಸುವುದು ಸರಳವಾಗಿದೆ ಎಂದು ಪ್ರತಿಪಾದಿಸಿದರು.
ಎಲ್ಲಿಂದ ಬೇಕಾದ್ರು ಕೆಲ್ಸ ಮಾಡಿ, ಸ್ಯಾಲರಿ ಕಡಿಮೆ ಮಾಡಲ್ಲ: ಉದ್ಯೋಗಿಗಳಿಗೆ Airbnb ಆಫರ್
ನೀವು ಅತ್ಯಂತ ವೈಭವದ ಜೀವನಶೈಲಿ ನಡೆಸಲು ಬಯಸುತ್ತೀರಿ ಕೈಯಲ್ಲೊಂದು ಸಖತ್ ಆಗಿರುವ ಉದ್ಯೋಗ ಇದೆ. ಲಕ್ಷಗಟ್ಟಲೇ ಸಂಬಳ ಬರುತ್ತಿದೆ ಎಂದಾದರೆ ಪಕ್ಕಾ ನೀವು ಈ ಆಯ್ಕೆಯನ್ನು ಬಳಸಿಕೊಳ್ಳಬಹುದಾಗಿದೆ. ಆದರೆ ಪಬ್‌ನಲ್ಲಿ ಕೂತು ಕೆಲಸ ಮಾಡ್ತೀರೋ ಬಿಡ್ತಿರೋ ಅನ್ನೋದು ನಿಮ್ಮ ಕೈಯಲ್ಲೇ ಇದೆ.