ಕ್ರಿಕೆಟರ್ ಸುನೀಲ್‌ ನರೈನ್ ಎರಡನೇ ಮದುವೆ... ಈ ಸಿಲ್ಲಿ ರೀಸನ್‌ಗೆ ಡಿವೋರ್ಸ್ ಕೊಟ್ರಾ?

ಊಟ ತಯಾರಿಸಿಲ್ಲ.ಕರೆದಲ್ಲಿಗೆ ಬಂದಿಲ್ಲ. ಹೀಗೆ ಸಣ್ಣಪುಟ್ಟ ವಿಷ್ಯಕ್ಕೂ ಈಗ ಜನರು ವಿಚ್ಛೇದನ ಪಡೆಯುತ್ತಿದ್ದಾರೆ. ಹೊಂದಿ ಬಾಳಿದ್ರೆ ಸುಖ ಜೀವನ ಎಂದು ನಂಬುವ ಜನರು, ಸ್ವಲ್ಪ ಎಚ್ಚರಿಕೆ ವಹಿಸಿದ್ರೆ ಅವರ ದಾಂಪತ್ಯ ಕಾಪಾಡಿಕೊಳ್ಬಹುದು. 
 

KKR Sunil Narine Separation With First Wife And Second Marriage roo

ಸೆಲೆಬ್ರಿಟಿಗಳ ವಿಷ್ಯ ಸದಾ ಸುದ್ದಿಯಲ್ಲಿರುತ್ತದೆ. ಅವರ ವೈಯಕ್ತಿಕ ವಿಷ್ಯಗಳನ್ನು ತಿಳಿದುಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿರುತ್ತಾರೆ. ಸದ್ಯ ಐಪಿಎಲ್ ನಡೆಯುತ್ತಿರುವ ಕಾರಣ ಅಲ್ಲಿನ ಆಟಗಾರರ ಮೇಲೆ ಕ್ರಿಕೆಟ್ ಪ್ರೇಮಿಗಳ ಕಣ್ಣಿದೆ. ಮೈದಾನದಲ್ಲಿ ಅವರು ಹೇಗೆ ಆಡ್ತಾರೆ ಅನ್ನೋದು ಒಂದು ಕಡೆಯಾದ್ರೆ ಅವರು ಮೈದಾನದ ಹೊರಗೆ ಹೇಗೆ ವರ್ತಿಸುತ್ತಾರೆ, ಅವರ ದಾಂಪತ್ಯ, ಮಕ್ಕಳ ಬಗ್ಗೆ ತಿಳಿಯುವ ಕುತೂಹಲ ಅಭಿಮಾನಿಗಳಿಗೆ ಒಂದು ಪಟ್ಟು ಹೆಚ್ಚಿರುತ್ತದೆ. ಐಪಿಎಲ್ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಸುನಿಲ್ ನರೈನ್ ಎರಡನೇ ಮದುವೆ ಆಗಿದ್ದಾರೆ. 2020ರಲ್ಲಿ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದ ಸುನಿಲ್ ನರೈನ್, ಟ್ರಿನಿಡಾಡ್‌ನ ಅತಿದೊಡ್ಡ ಫ್ಯಾಷನ್ ಬ್ರ್ಯಾಂಡ್‌ಗಳಲ್ಲಿ (Fashin Brand) ಒಂದಾದ ದಿ ಫ್ಯಾಶನ್ ಅಟೆಲಿಯರ್ ಮಾಲೀಕೆ ಆಂಜೆಲಿಯಾ ಕೈ ಹಿಡಿದ್ದಾರೆ. ಇಬ್ಬರಿಗೆ ಒಂದು ಮುದ್ದಾದ ಮಗು ಇದೆ. ಇದಕ್ಕೂ ಮುನ್ನ ಸುನಿಲ್ ನರೈನ್, ಟ್ರಿನಿಡಾಡ್ ಮೂಲದ ನಂದಿತಾ ಕುಮಾರ್ ಕೈ ಹಿಡಿದಿದ್ದರು. ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ ಇಬ್ಬರು ಸದ್ದಿಲ್ಲದೆ ವಿಚ್ಛೇದನ ಪಡೆದಿದ್ದರು. ಸುನಿಲ್ ನರೈನ್ ಮಾತ್ರವಲ್ಲ ಈಗಿನ ದಿನಗಳಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ.   

ಲವ್ ಮ್ಯಾರೇಜ್ (Love Marriage) ಇರಲಿ ಇಲ್ಲ ಅರೇಂಜ್ಡ್ ಮ್ಯಾರೇಜ್ ಇರಲಿ, ಮದುವೆಯಾದ ಜೋಡಿ ಕ್ಷುಲ್ಲಕ ಕಾರಣಕ್ಕೆ ದೂರವಾಗ್ತಿದೆ. ನಾವಿಂದು ಕ್ಷುಲ್ಲಕ ಕಾರಣಗಳು ಯಾವುವು ಎಂಬುದನ್ನು ನಿಮಗೆ ಹೇಳ್ತೇವೆ.

ವಿಚ್ಛೇದ (Divorce) ನಕ್ಕೆ ಕಾರಣವಾಗ್ತಿದೆ ಇವು :

ವೇಶ್ಯಾವಾಟಿಕೆ: 54 ವರ್ಷದ ಪ್ರಿಯಕರನ ನಗ್ನ ಡ್ಯಾನ್ಸ್ ವೀಡಿಯೋ ಪೋಸ್ಟ್ ಮಾಡಿದ 21ರ ಯುವತಿ ಅರೆಸ್ಟ್

ದುರಹಂಕಾರ : ಪ್ರತಿ ಸಂಬಂಧ ಗೌರವದ ಮೇಲೆ ನಿಂತಿರುತ್ತದೆ. ಪ್ರತಿಯೊಬ್ಬರಿಗೂ ಸಣ್ಣ ಅಹಂಕಾರವೊಂದಿರುತ್ತದೆ. ಆದ್ರೆ ಅದು ದುರಹಂಕಾರಕ್ಕೆ ತಿರುಗಿದಾಗ ಸಂಬಂಧ ಹಾಳಾಗುತ್ತದೆ. ದಂಪತಿ ಮಧ್ಯೆ ಯಾವುದೇ ಸಮಸ್ಯೆ ಬಂದ್ರೂ ಇಬ್ಬರು ಮಾತನಾಡಿ ಬಗೆಹರಿಸಿಕೊಳ್ಳಬೇಕು. ಆದ್ರೆ ನಾನ್ಯಾಕೇ ಮಾತನಾಡಬೇಕು, ನನ್ಯಾಕೆ ಹೊಂದಿಕೊಳ್ಳಬೇಕು ಎನ್ನುವ ದುರಹಂಕಾರ ಮಾತನಾಡಲು ಒತ್ತಾಯಿಸೋದಿಲ್ಲ. ಇದೇ ಮುಂದೆ ವಿಚ್ಛೇದನಕ್ಕೆ ಕಾರಣವಾಗುತ್ತದೆ. ದಂಪತಿ ಪ್ರತಿ ವಿಷ್ಯದಲ್ಲೂ ಹೊಂದಿಕೊಂಡು ಹೋಗುವುದು ಮುಖ್ಯವಾದ ಕಾರಣ ಸ್ವಾಭಿಮಾನ, ಅಹಂಕಾರವನ್ನು ದೂರ ಇಡಬೇಕು.

ವಿನಾಕಾರಣ ಗಲಾಟೆ : ಪ್ರತಿಯೊಬ್ಬರೂ ತಪ್ಪು ಮಾಡ್ತಾರೆ. ಮನೆ ಕೆಲಸ ಅಚ್ಚುಕಟ್ಟಾಗಿ ಮಾಡದೆ ಹೋದಾಗ, ಹುಟ್ಟುಹಬ್ಬದ ದಿನಾಂಕ ಮರೆತಾಗ ಕೋಪ ಬರೋದು ಸಹಜ. ಇಂಥ ವಿಷ್ಯಕ್ಕೆ ಗಲಾಟೆ ನಡೆದ್ರೂ ಅದನ್ನು ಅಲ್ಲಿಯೇ ಬಿಟ್ಟು ಮುಂದೆ ಹೋಗ್ಬೇಕು. ಆದ್ರೆ ಇದನ್ನೇ ನೀವು ದೊಡ್ಡ ಜಗಳಕ್ಕೆ ಕೊಂಡೊಯ್ದಲ್ಲಿ ವಿಚ್ಛೇದನ ಹತ್ತಿರವಾಗುತ್ತದೆ. ನಿಮ್ಮದೊಂದು ಕ್ಷಮೆ ನಿಮ್ಮ ಸಂಬಂಧವನ್ನು ಇನ್ನೊಂದು ವರ್ಷ ಉಳಿಸಬಹುದು ಎಂಬುದನ್ನು ಮರೆಯಬೇಡಿ.

ಆರ್ಥಿಕ ಸ್ಥಿತಿ (Financial Condition) : ಮದುವೆಗೆ ಮುನ್ನ ಖರ್ಚು ಕಡಿಮೆ ಇರುತ್ತದೆ. ಮದುವೆ, ಮಕ್ಕಳಾದ್ಮೇಲೆ ಖರ್ಚು ಹೆಚ್ಚು. ಈ ಸಮಯದಲ್ಲಿ ಎಲ್ಲ ಖರ್ಚನ್ನು ಒಬ್ಬರೇ ತಲೆ ಮೇಲೆ ಹೊತ್ತುಕೊಳ್ಳದೆ ಅದನ್ನು ಸಂಗಾತಿ ಜೊತೆ ಹಂಚಿಕೊಳ್ಳಬೇಕು. ಸಾಧ್ಯವಾದ್ರೆ ಇಬ್ಬರ ಹಣವನ್ನು ಮನೆಯ ಖರ್ಚಿಗೆ ಬಳಸಿಕೊಳ್ಳಬೇಕು. ಇಲ್ಲವೆಂದ್ರೆ ಒಟ್ಟಿಗೆ ಕುಳಿತು ಖರ್ಚು ಕಡಿಮೆ ಮಾಡುವ ವಿಧಾನದ ಬಗ್ಗೆ ಚರ್ಚಿಸಬೇಕೇ ವಿನಃ ಖರ್ಚು ಹೆಚ್ಚಾಗಿದೆ ಎನ್ನುವ ಕಾರಣಕ್ಕೆ ನೀವು ವಿಚ್ಛೇದನದ ಆಲೋಚನೆ ಮಾಡ್ತಿದ್ದರೆ ಅದು ಮೂರ್ಖತನವಾಗುತ್ತದೆ. 

ಹೆಚ್ಚು ಮಕ್ಕಳಿರೋರಿಗೆ ಆಸ್ತಿ ಹಂಚಿ! ಕೋಟ್ಯಾಧಿಪತಿ ವಿಲ್ ನೋಡಿ ಸರ್ಕಾರವೇ ದಂಗು

ಧಾರ್ಮಿಕ ಭಾವನೆಯಲ್ಲಿ ಹೊಂದಾಣಿಕೆ (Religious Compatibility) : ಪ್ರೇಮ ವಿವಾಹದಲ್ಲಿ ಜಾತಿ, ಧರ್ಮವನ್ನು ಆರಂಭದಲ್ಲಿ ಪರಿಗಣಿಸೋದಿಲ್ಲ. ಆದ್ರೆ ಮದುವೆಯಾದ ಕೆಲ ತಿಂಗಳ ನಂತ್ರ ಇದೂ ಒಂದು ಸಮಸ್ಯೆಯಾಗಿ ಕಾಡಲು ಶುರುವಾಗುತ್ತದೆ. ಬೇರೆ ಧರ್ಮದವರ ಜೊತೆ ನೀವು ದಾಂಪತ್ಯ ಜೀವನ ನಡೆಸಲು ಮುಂದಾಗಿದ್ದರೆ ಅವರ ಧರ್ಮಕ್ಕೂ ಗೌರವ ನೀಡಿ. ಅವರ ನಂಬಿಕೆಯನ್ನು ಅರ್ಥ ಮಾಡಿಕೊಂಡು ನಡೆಯಲು ಪ್ರಯತ್ನಿಸಿ. ಯಾವುದೇ ಕಾರಣಕ್ಕೂ ಅವರ ಧರ್ಮ, ಜಾತಿಯ ನಿಂದನೆ ಬೇಡ. 

Latest Videos
Follow Us:
Download App:
  • android
  • ios