Asianet Suvarna News Asianet Suvarna News

KBC: ಅತ್ತೆ ಮನೆ ಸಪೋರ್ಟ್ ಇಲ್ಲದೇ, ಮಗಳ ಜೀವ ಉಳಿಸಲು ಹೋರಾಡ್ತಿರೋ ಸ್ಪರ್ಧಿ!

ಹುದ್ದೆ ಯಾವುದೇ ಇರಲಿ ಮಹಿಳೆ ಕೆಲ ಸಂದರ್ಭದಲ್ಲಿ ನೋವು ಅನುಭವಿಸ್ತಾಳೆ. ಎಲ್ಲ ಕಡೆಯಿಂದ ಆಕೆಗೆ ಬೆಂಬಲ ಸಿಗೋದಿಲ್ಲ. ಮಗಳು ಅನಾರೋಗ್ಯದಿಂದ ಬಳಲುತ್ತಿದ್ದರೂ ಗಂಡನ ಮನೆಯವರ ಬೆಂಬಲ ಸಿಗದ ಮಹಿಳೆಯೊಬ್ಬಳು ಕೆಬಿಸಿಯಲ್ಲಿ ತನ್ನ ನೋವು ತೋಡಿಕೊಂಡಿದ್ದಾಳೆ. 
 

Kaun Banega Crorepati Contestant Akanksha Talks About Her Baby Girl Undergoing Several Surgeries  roo
Author
First Published Sep 9, 2023, 1:47 PM IST

ಭಾರತದಲ್ಲಿ ಅನೇಕ ಧೈರ್ಯವಂತ ಮಹಿಳೆಯರಿದ್ದಾರೆ. ಅವರ ಸಾಧನೆ ನಮಗೆಲ್ಲ ಸ್ಪೂರ್ತಿಯಾಗಿದೆ. ಎಷ್ಟೇ ಕಷ್ಟ ಬಂದ್ರೂ ಎದೆಗುಂದದೆ ಹೋರಾಡುವ ಮಹಿಳೆಯರು ಅನೇಕರ ಬದುಕು ಬದಲಿಸಿದ್ದಾರೆ. ಕೈನಲ್ಲಿ ಸಾಧ್ಯವಿಲ್ಲವೆಂದು ಹತಾಶೆಯಾಗಿ ಮನೆಯಲ್ಲಿ ಕುಳಿತುಕೊಳ್ಳದೆ, ಅವರಿವರ ಸಹಾಯ ಬಯಸ್ತಾ, ಬೇರೆಯವರನ್ನು ಹೀಗಳೆಯುತ್ತಾ, ನನ್ನ ಅದೃಷ್ಟ ಸರಿಯಿಲ್ಲವೆಂದು ನೊಂದುಕೊಳ್ತಾ ಜೀವನ ಸಾಗಿಸುವ ಮಹಿಳೆಯರ ಮಧ್ಯೆ ಕೆಲ ಮಹಿಳೆಯರು ಎಲ್ಲರ ಗಮನ ಸೆಳೆಯುತ್ತಾರೆ. ಯಾರ ಸಹಾಯವಿಲ್ಲದೆ ನಾನೊಬ್ಬನೇ ಎಲ್ಲವನ್ನೂ ನಿಭಾಯಿಸಬಲ್ಲೆ ಎನ್ನುವುದನ್ನು ತೋರಿಸುವ ಮೂಲಕ ಮಹಿಳೆ ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಸಾಧಿಸಬಲ್ಲಳು ಎಂಬುದನ್ನು ಮತ್ತೆ ಮತ್ತೆ ಸಾಭೀತು ಪಡಿಸುತ್ತಾರೆ. ಇದಕ್ಕೆ ಆಕಾಂಕ್ಷಾ ಸಿಂಗ್ ಕೂಡ ಉದಾಹರಣೆ.

ಆಕಾಂಕ್ಷಾ ಸಿಂಗ್ ಭೋಪಾಲ್ (Bhopal) ನಿವಾಸಿ. ಕೌನ್ ಬನೇಗಾ ಕರೋಡ್ಪತಿ 15 ರ ಇತ್ತೀಚಿನ ಸಂಚಿಕೆಯಲ್ಲಿ ಫಾಸ್ಟೆಸ್ಟ್ ಫಿಂಗರ್ ಫಸ್ಟ್ ಸುತ್ತಿನಲ್ಲಿ ಹಾಟ್ ಸೀಟ್‌ನಲ್ಲಿ ಆಕಾಂಕ್ಷಾ ಸಿಂಗ್ (Akanksha Singh) ಕುಳಿತುಕೊಂಡಿದ್ದರು. ಈ ಸಮಯದಲ್ಲಿ, ಆಕಾಂಕ್ಷಾ ತನ್ನ ಮಗಳ ಆರೋಗ್ಯದ ಬಗ್ಗೆ ಬಿಗ್ ಬಿ ಜೊತೆ ಅನೇಕ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಗಂಡನ ಮನೆಯವರ  ಸಹಾಯವಿಲ್ಲದೆ ತನ್ನ ಮಗಳನ್ನು ಹೇಗೆ ನೋಡಿಕೊಳ್ಳುತ್ತಿದ್ದೇನೆ ಎಂಬುದನ್ನು ಹೇಳಿದ್ದಾರೆ. ಅವರ ಮಾತಿಗೆ ಬಿಗ್ ಬಿ ಅಮಿತಾಬ್ ಬಚ್ಚನ್ (Amitabh Bachchan) ಭಲೇ ಎಂದಿದ್ದಾರೆ.

ಟಾಪ್‌ ನಟಿಯಾದರೇನು, ಕತ್ರೀನಾಗೂ ಮಗು ಮಾಡಿಕೊಳ್ಳಲು ತಪ್ಪಿಲ್ಲ ಫ್ಯಾಮಿಲಿ ಪ್ರೇಷರ್!

ಆಕಾಂಕ್ಷಾ ಮಗಳಿಗೆ ನಡೆದಿದೆ ಇಷ್ಟೊಂದು ಶಸ್ತ್ರಚಿಕಿತ್ಸೆ :  ಆಕಾಂಕ್ಷಾ ಅವರು ಮಧ್ಯಪ್ರದೇಶದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ರಾಜ್ಯ ತೆರಿಗೆ ಸಹಾಯಕ ಆಯುಕ್ತರಾಗಿ ಕೆಲಸ ಮಾಡ್ತಿದ್ದಾರೆ. ಕಾರ್ಯಕ್ರಮದಲ್ಲಿ ಆಕಾಂಕ್ಷಾ ಅವರ ಜೀವನಕ್ಕೆ ಸಂಬಂಧಿಸಿದ ವೀಡಿಯೊ ಮಾಂಟೇಜ್  ತೋರಿಸಲಾಗಿದೆ. ಅವರ ಮಗಳು ಅನಾರೋಗ್ಯಕ್ಕೆ ಒಳಗಾದಾಗ ವಿಡಿಯೋವನ್ನು ನಾವಲ್ಲಿ ನೋಡ್ಬಹುದು. ಆಕಾಂಕ್ಷಾ ಇಷ್ಟುದೊಡ್ಡ ಹುದ್ದೆಯಲ್ಲಿದ್ರೂ ಅವರ ಸಂಸಾರಿಕ ಜೀವನ ಸರಿಯಾದ ದಾರಿಯಲ್ಲಿ ಸಾಗ್ತಿಲ್ಲ. ಅತ್ತೆ ಮನೆ ಕಡೆಯಿಂದ ಆಕಾಂಕ್ಷಾಗೆ ಯಾವುದೇ ಬೆಂಬಲ ಸಿಗ್ತಿಲ್ಲ. ಹಾಗಾಗಿ ಅವರು  ತಮ್ಮ ತಾಯಿ ಮತ್ತು ಮಗಳೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ.   

ಆಕಾಂಕ್ಷಾ ಮಗಳಿಗೆ ಕೆಲವು ಜನ್ಮಜಾತ ಸಮಸ್ಯೆಗಳಿವೆ. ಆಕೆಯ ಮೊದಲ ಶಸ್ತ್ರಚಿಕಿತ್ಸೆ ಆಕೆ 3 ತಿಂಗಳ ಮಗುವಾಗಿದ್ದಾಗ ನಡೆಯಿತು. ಆಕೆಗೆ ಈಗ 1 ವರ್ಷ 3 ತಿಂಗಳು. ಅವಳು ಈಗಾಗಲೇ ಎರಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಹೆಚ್ಚಿನ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಮಗಳು ಯಾವ ರೋಗದಿಂದ ಬಳಲುತ್ತಿದ್ದಾಳೆ ಆಕೆಯನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಆಕಾಂಕ್ಷಾ ನಿಧಾನವಾಗಿ ಕಲಿಯುತ್ತಿದ್ದಾರಂತೆ.  

ಆಕರ್ಷಕವಾಗಿ ಕಾಣ್ಬೇಕೆಂದ್ರೆ ವ್ಯಕ್ತಿತ್ವ ಹೀಗಿರಬೇಕು, ಈ ಹವ್ಯಾಸ ರೂಢಿಸಿಕೊಳ್ಳಿ!

ಮಗಳನ್ನು ನೋಡಿ ಕಣ್ಣಿರು ಹಾಕಿದ ತಾಯಿ : ಮಗಳು ಹುಟ್ಟಿದಾಗಿನಿಂದ ಚಿಕಿತ್ಸೆ ಪಡೆಯುತ್ತಿರುವುದು ನೋವಿನ ಸಂಗತಿ ಎಂದು ಆಕಾಂಕ್ಷಾ ಹೇಳಿದ್ದಾರೆ. ಇಷ್ಟೆಲ್ಲ ಚಿಕಿತ್ಸೆ ನಡೆಯುತ್ತಿದ್ದರೂ ಮಗಳು ಸದಾ ಖುಷಿಯಾಗಿ ಇರ್ತಾಳೆ. ಆಕೆ ಧೈರ್ಯವಂತೆ. ಆಕೆ ಜೀವನ ಹಸನಾಗಿರಲಿ ಎಂದು ನಾನು ಬಯಸ್ತೇನೆಂದು ಆಕಾಂಕ್ಷಾ ಕಣ್ಣೀರು ಹಾಕಿದ್ದಾರೆ.

ಸಾಂತ್ವಾನ ಹೇಳಿದ ಬಿಗ್ ಬಿ – ಸಹಾಯಕ್ಕೆ ಬಂದ ತಾಯಿ : ಆಕಾಂಕ್ಷಾ ನೋವಿನ ಮಾತುಗಳನ್ನು ಕೇಳಿದ ಬಿಗ್ ಬಿ ಮಗಳು ಆದಷ್ಟು ಬೇಗ ಗುಣಮುಖಳಾಗಲಿ ಎಂದು ಆಶೀರ್ವದಿಸಿದ್ದಾರೆ.
ಆಕಾಂಕ್ಷಾ ತಾಯಿ ಕೂಡ ಮಗಳ ಬೆಂಬಲಕ್ಕೆ ನಿಂತಿದ್ದಾರೆ. ಮೊಮ್ಮಗಳ ಆರೋಗ್ಯ ನನಗೆ ಮುಖ್ಯ. ಮೊಮ್ಮಗಳ ಉತ್ತಮ ಭವಿಷ್ಯಕ್ಕೆ ನಾನು ಮಗಳನ್ನು ಬೆಂಬಲಿಸುತ್ತೇನೆಂದು ಆಕಾಂಕ್ಷಾ ತಾಯಿ ಹೇಳಿದ್ದಾರೆ. 

ಆಕಾಂಕ್ಷಾ ಗೆದ್ದ ಹಣ ಎಷ್ಟು? : ಕೌನ್ ಬನೇಗಾ ಕರೋಡ್ ಪತಿಯಲ್ಲಿ ಪಾಲ್ಗೊಂಡಿದ್ದ ಆಕಾಂಕ್ಷಾ ಎರಡು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದರು. ಮೂರನೇ ಪ್ರಶ್ನೆಗೆತಪ್ಪು ಉತ್ತರ ನೀಡಿದ್ದ ಕಾರಣ  10,000 ರೂಪಾಯಿ ಪಡೆದು ಮರಳಿದ್ದಾರೆ. 
 

Follow Us:
Download App:
  • android
  • ios