Asianet Suvarna News Asianet Suvarna News
breaking news image

ಲವ್‌ ಮ್ಯಾರೇಜ್‌ ನಂತ್ರ ಹೆಂಡ್ತಿಗೆ ಓದಿಸಿದ ಪತಿ, ಸರ್ಕಾರಿ ಕೆಲಸ ಸಿಗ್ತಿದ್ದಂತೆ ಗಂಡಂಗೆ ಕೈಕೊಟ್ಟ ಪತ್ನಿ!

ಕಷ್ಟಪಟ್ಟು ಪತ್ನಿಗೆ ಹೆಚ್ಚಿನ ಶಿಕ್ಷಣ ಕೊಡಿಸಿದ  ಪತಿಯೊಬ್ಬ ಈಗ ಪರದಾಡುತ್ತಿದ್ದಾನೆ. ಸರ್ಕಾರಿ ನೌಕರಿ ಸಿಗ್ತಿದ್ದಂತೆ ಪತ್ನಿ ಕೈ ಎತ್ತಿದ್ದು, ಪತ್ನಿಗಾಗಿ ಪತಿ ಪೊಲೀಸ್ ಠಾಣೆ ಅಲೆಯುತ್ತಿದ್ದಾನೆ.

Jhansi Wife Got Lekhpal Joining Letter Dumps Husband After Five Years Love Marriage roo
Author
First Published Jul 11, 2024, 12:33 PM IST

ಝಾನ್ಸಿ ವ್ಯಕ್ತಿಯೊಬ್ಬ ತನ್ನ ಪತ್ನಿಗಾಗಿ ಪೊಲೀಸ್ ಠಾಣೆ ಅಲೆಯುತ್ತಿದ್ದಾನೆ. ಆತ ಪ್ರೀತಿಸಿ ಮದುವೆ ಆಗಿದ್ದ. ಕೂಲಿ ಕೆಲಸ ಮಾಡಿ ಪತ್ನಿಗೆ ಓದಿಸಿದ್ದ. ಪತ್ನಿಗೆ ಸರ್ಕಾರಿ ನೌಕರಿ ಸಿಗ್ತಿದ್ದಂತೆ ಆಕೆ ಈತನನ್ನು ಬಿಟ್ಟಿದ್ದಾಳೆ. ಬುಧವಾರ ಪತ್ನಿಗೆ ಕಲೆಕ್ಟರ್ ಹುದ್ದೆಗೆ ನೇಮಕಾತಿ ಪತ್ರ ಸಿಗುವುದಿತ್ತು. ಹಾಗಾಗಿ ಪತಿ ಅಲ್ಲಿಗೆ ಹೋಗಿದ್ದ. ಆದ್ರೆ ಅಲ್ಲಿ ಪತ್ನಿ ಸಿಗಲಿಲ್ಲ. ಫೋನ್ ಮೂಲಕ ಮಾಧ್ಯಮದವರು ಮಾತನಾಡಿದ್ರೆ, ಕ್ಯಾಮರಾ ಮುಂದೆ ಬರಲು ನಿರಾಕರಿಸಿದ ಪತ್ನಿ, ನನಗೆ ಮದುವೆ ಆಗಿಲ್ಲ ಎನ್ನುತ್ತಿದ್ದಾಳೆ.

ಝಾನ್ಸಿ (Jhansi) ನಗರದ ಕೊಟ್ವಾಲಿ ಹೊರಗಿನ ಬಾಬಾ ಕಾ ಅಟ್ಟಾದಲ್ಲಿ ವಾಸಿಸುವ ನೀರಜ್ ವಿಶ್ವಕರ್ಮ ಪೀಡಿತ ವ್ಯಕ್ತಿ. ನೀರಜ್ ವಿಶ್ವಕರ್ಮ ಬಡಗಿ ಕೆಲಸ ಮಾಡುತ್ತಾರೆ. ಸುಮಾರು 5 ವರ್ಷಗಳ ಹಿಂದೆ ಝಾನ್ಸಿಯ ಸತ್ಯಂ ಕಾಲೋನಿ ನಿವಾಸಿ ರಿಚಾ ಸೋನಿ ಅವರನ್ನು ಸ್ನೇಹಿತೆಯೊಬ್ಬರ ಮನೆಯಲ್ಲಿ ಭೇಟಿಯಾಗಿದ್ದ. ಅಲ್ಲಿಂದ ಶುರುವಾದ ಸ್ನೇಹ (friendship) ಪ್ರೀತಿಗೆ ತಿರುಗಿತ್ತು. ಇಬ್ಬರೂ 2022ರಲ್ಲಿ ದೇವಸ್ಥಾನ (Temple) ಕ್ಕೆ ಹೋಗಿ ಮದುವೆಯಾಗಿದ್ದರು. ಈ ಸಮಯದಲ್ಲಿ ರಿಚಾ ಸೋನಿ, ಚಿಕ್ಕ ಮಕ್ಕಳಿಗೆ ಪಾಠ ಹೇಳ್ತಿದ್ದಳು. ಮದುವೆಯಾದ್ಮೇಲೆ ಇಬ್ಬರೂ ಖುಷಿಯಲ್ಲಿದ್ದರು. ಒಂದು ದಿನ ಇಬ್ಬರ ಮಧ್ಯೆ ಜಗಳ ನಡೆದಿತ್ತು. ಕೋಪಗೊಂಡ ರೀಚಾ ತವರಿಗೆ ಹೋಗಿದ್ದಳು. ನಂತ್ರ ಮತ್ತೆ ಮನೆಗೆ ವಾಪಸ್ ಬಂದ ಆಕೆ,  ನಾನು ಹೆಚ್ಚು ಓದಬೇಕೆಂದು ಪತಿಗೆ ಹೇಳಿದ್ದಳು. ಇದನ್ನು ಕೇಳಿದ ಪತಿ ವಿಶ್ವಕರ್ಮ, ಪತ್ನಿಗೆ ಓದಿಸಲು ಮುಂದಾಗಿದ್ದಾನೆ. ಕೂಲಿ ಮಾಡಿ ಆಕೆಯ ಶುಲ್ಕ ಪಾವತಿ ಮಾಡಿದ್ದಾನೆ. ರೀಚಾ ಸೋನಿಗೆ ಸರ್ಕಾರಿ ನೌಕರಿ ಸಿಕ್ಕಿದೆ. ಅಕೌಂಟೆಂಡ್ ಕೆಲಸ ಸಿಗ್ತಿದ್ದಂತೆ ಆಕೆ ಗಂಡನ ಮನೆ ಬಿಟ್ಟಿದ್ದಾಳೆ. ಅಲ್ಲಿಂದ ಇಲ್ಲಿಯವರೆಗೂ ಪತಿಯನ್ನು ಸಂಪರ್ಕಿಸುವ ಪ್ರಯತ್ನ ಮಾಡಲಿಲ್ಲ.

ಬೇಬಿ ರಥಿ ಆಗಮನದ ನಿರೀಕ್ಷೆಯಲ್ಲಿ ಧ್ರುವ ರಥಿ, ಮೋದಿ ಟೀಕಿಸಲು ಮತ್ತೊಬ್ಬ ಬರುತ್ತಿದ್ದಾನೆಂದ ಸೋಶಿಯಲ್ ಮೀಡಿಯಾ?

ಬುಧವಾರ ಆಕೆಗೆ ಕಲೆಕ್ಟರ್ ಹುದ್ದೆ ಸಿಗ್ತಿದೆ ಎಂಬುದು ವಿಶ್ವಕರ್ಮಗೆ ತಿಳಿದಿದೆ. ಹಾಗಾಗಿ ಅಲ್ಲಿಗೆ ಹೋಗಿದ್ದಾನಾದ್ರೂ ಬರಿಗೈನಲ್ಲಿ ಮನೆಗೆ ಬಂದಿದ್ದಾನೆ. ಪತ್ನಿಯನ್ನು ಓದಿಸಲು ನಾನು ಕಷ್ಟಪಟ್ಟಿದ್ದೆ ಎಂದು ವಿಶ್ವಕರ್ಮ ಹೇಳ್ತಿದ್ದಾನೆ. ನಾನು ಬಡಗಿ ಕೆಲಸ ಮಾಡ್ತೇನೆ. ದಿನಕ್ಕೆ 400 -500 ರೂಪಾಯಿ ದುಡಿಯುತ್ತಿದ್ದೆ. ಈ ಎಲ್ಲ ಹಣವನ್ನು ಆಕೆ ಶಿಕ್ಷಣಕ್ಕೆ ಮೀಸಲಿಟ್ಟಿದ್ದೆ ಎಂದಿದ್ದಾನೆ. ಆಕೆ ಶಿಕ್ಷಣಕ್ಕಾಗಿ ನಾನು ಅನೇಕರ ಬಳಿ ಕೈಯೊಡ್ಡಿ ಸಾಲ ಕೇಳಿದ್ದೆ. ಪ್ರತಿ ದಿನ ಆಕೆಯನ್ನು ನೆನೆಯುತ್ತೇನೆ. ರಾತ್ರಿ ನಿದ್ರೆ ಬರ್ತಿಲ್ಲ. ಆದ್ರೆ ಆಕೆ ತನಗೆ ಮದುವೆ ಆಗಿಲ್ಲ ಎನ್ನುತ್ತಿದ್ದಾಳೆಂದು ಮಾಧ್ಯಮದ ಮುಂದೆ ಆತ ನೋವು ತೋಡಿಕೊಂಡಿದ್ದಾನೆ. 

ವಿಶ್ವಕರ್ಮ, ಪೊಲೀಸ್ ಠಾಣೆ, ಹಿರಿಯ ಅಧಿಕಾರಿಗಳು ಸೇರಿದಂತೆ ಅನೇಕರನ್ನು ಭೇಟಿಯಾಗಿ, ಪತ್ನಿಯನ್ನು ಮನೆಗೆ ಕಳುಹಿಸುವಂತೆ ವಿನಂತಿ ಮಾಡಿದ್ದಾನೆ. ಆದ್ರೆ ಇದ್ರಿಂದ ಯಾವುದೇ ಪ್ರಯೋಜನವಾಗಿಲ್ಲ. ಇತ್ತ ರೀಚಾ ಸೋನಿ, ನನಗೆ ಮದುವೆ ಆಗಿಲ್ಲ. ವಿಶ್ವಕರ್ಮನ ಜೊತೆ ನಾನು ಯಾವುದೇ ಮದುವೆ ಬಂಧನದಲ್ಲಿ ಬಿದ್ದಿಲ್ಲ. ನನ್ನ ಹೆಸರು ಹಾಳು ಮಾಡಲು ಈ ರೀತಿ ಮಾಡಲಾಗ್ತಿದೆ ಎಂದು ಆರೋಪ ಮಾಡಿದ್ದಾಳೆ. 

ಆಷಾಢ ನೆಪದಲ್ಲಿ ತವರು ಸೇರಿ ಇವ್ರ ಜೊತೆ ರೊಮಾನ್ಸಾ? ಅಮೃತಧಾರೆ ಭೂಮಿಕಾ ಕಾಲೆಳೆದ ನೆಟ್ಟಿಗರು!

ಇಂಥ ಪ್ರಕರಣ ಹೊಸದೇನಲ್ಲ. ಅನೇಕ ಪ್ರಕರಣಗಳು ಈಗಾಗಲೇ ದಾಖಲಾಗಿವೆ. ಅದ್ರಲ್ಲಿ ಯುಪಿಯ ಖ್ಯಾತ ಪಿಸಿಎಸ್ ಅಧಿಕಾರಿ ಜ್ಯೋತಿ ಮೌರ್ಯ ಪ್ರಕರಣ ಕೂಡ ಸೇರಿದೆ. ಜ್ಯೋತಿ ಮೌರ್ಯ ವಿಷ್ಯ ಹಿಂದಿನ ವರ್ಷ ಹೆಚ್ಚು ಚರ್ಚೆಯಾಗಿತ್ತು. ಜ್ಯೋತಿ ಮೌರ್ಯ ಅವರ ಪತಿ ಅಲೋಕ್ ಮೌರ್ಯ, ಪತ್ನಿ ವಿರುದ್ಧ ದೂರು ದಾಖಲಿಸಿದ್ದರು. ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರದ ಮೂಲಕ ಅಪಾರ ಸಂಪತ್ತು ಗಳಿಸಿದ್ದಾರೆ ಎಂಬ ಆರೋಪ ಮಾಡಿದ್ದರು. 

Latest Videos
Follow Us:
Download App:
  • android
  • ios