ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿ ಪ್ರೀತಿಸುತ್ತಿದ್ದ ಹುಡುಗಿಯನ್ನು ಭೇಟಿ ಮಾಡಲು ಹೋದ ಹುಡುಗನನ್ನು ಹಿಡಿದು ಗ್ರಾಮಸ್ಥರು, ಆತನ ತಂದೆ-ತಾಯಿಯನ್ನು ಕರೆಸಿದ್ದಾರೆ. ನಂತರ, ಗ್ರಾಮಸ್ಥರೇ ಹೊಸ ಬಟ್ಟೆ ಹಾಗೂ ಚಿನ್ನದ ತಾಳಿಯನ್ನು ಮಾಡಿಸಿ ಇಬ್ಬರಿಗೂ ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದಾರೆ.

ಇಲ್ಲೊಬ್ಬ ಯುವಕ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಒಬ್ಬ ಹುಡುಗಿಯನ್ನು ಪ್ರೀತಿಸಿ, ಆಕೆಯನ್ನು ನೋಡುವುದಕ್ಕೆ ಅವರ ಹಳ್ಳಿಗೆ ಹೋಗಿದ್ದಾನೆ. ಆದರೆ, ಗ್ರಾಮಸ್ಥರು ಆತನನ್ನು ಹಿಡಿದು ಹುಡುಗಿಯೊಂದಿಗೆ ಮದುವೆ ಮಾಡಿ ಆತನೊಂದಿಗೆ ಹುಡುಗಿಯನ್ನು ಕಳುಹಿಸಿದ್ದಾರೆ.

ಈ ಘಟನೆ ಬಿಹಾರದ ಕಟಿಹಾರ್‌ನಲ್ಲಿ ನಡೆದದ್ದು ಕೇವಲ ಒಂದು ಸಿನಿಮಾ ಕಥೆಯಂತಿದೆ. ಇಲ್ಲಿ ಒಬ್ಬ ಪ್ರೇಮಿ ತನ್ನ ಗೆಳತಿಯನ್ನು ಭೇಟಿಯಾಗಲು ಅವಳ ಹಳ್ಳಿಗೆ ಬಂದಿದ್ದಾನೆ. ಆದರೆ ಗ್ರಾಮಸ್ಥರು ಯಾರೋ ಅಪರಿಚಿತ ಯುವಕ ತಮ್ಮ ಗ್ರಾಮಕ್ಕೆ ಬಂದಿರುವುದನ್ನು ಗಮನಿಸಿ ಹಿಡಿದಿದ್ದಾರೆ. ನಂತರ, ಆ ಯುವಕ ಬಂದಿರುವ ಉದ್ದೇಶವನ್ನು ತಿಳಿದುಕೊಂಡು ಆತನನ್ನು ಬೈಯುವುದು ಹೊಡೆಯುವುದನ್ನು ಮಾಡದೇ ಆತನೊಂದಿಗೆ ಪ್ರೀತಿ ಮಾಡಿದ ಯುವತಿಯನ್ನು ದೇವಸ್ಥಾನಕ್ಕೆ ಕರೆದೊಯ್ದು ಮದುವೆ ಮಾಡಿಸಿದ್ದಾರೆ.

ಬಿಹಾರ ರಾಜ್ಯದ ಕತಿಹಾರ್‌ನ ಬಿನೋದ್‌ಪುರದ ಹುಡುಗಿ 'ಲಾಡೋ' ಮತ್ತು ಮಕೈಪುರದ 'ಸಂಜೀತ್ ಚೌಹಾಣ್' ಮದುವೆಯಾದ ಜೋಡಿಗಳು. ಇವರಿಬ್ಬರ ಪ್ರೇಮಕಥೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಿಂದ ಪ್ರಾರಂಭವಾಯಿತು. ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದರು ಮತ್ತು ಸ್ನೇಹವು ಪ್ರೀತಿಗೆ ತಿರುಗಿತು. ಅವರು ಗಂಟೆಗಟ್ಟಲೆ ಫೋನ್‌ನಲ್ಲಿ ಮಾತನಾಡುತ್ತಿದ್ದರು, ಆದರೆ ಈ ಪ್ರೀತಿ ಮಿತಿ ಮೀರಿ ಹೆಚ್ಚಾಗಲು ಪ್ರಾರಂಭಿಸಿದಾಗ, ಸಂಜೀತ್ ತನ್ನ ಗೆಳತಿಯನ್ನು ಭೇಟಿಯಾಗಲು ಬಿನೋದ್‌ಪುರವನ್ನು ತಲುಪಿದನು. ಇಬ್ಬರೂ ರಹಸ್ಯವಾಗಿ ಭೇಟಿಯಾಗುತ್ತಿದ್ದರು. ಆದರೆ, ಗ್ರಾಮಸ್ಥರು ಅವರನ್ನು ಗಮನಿಸಿ ಹಿಡಿದರು.

ಇದನ್ನೂ ಓದಿ: ಮಗಳನ್ನೇ ಮದ್ವೆಯಾದ ಷಹಜಹಾನ್​ ತಾಜ್​ಮಹಲ್​ ಕಟ್ಟಿದ್ದು ಹೇಗೆ? ಎಐ ವಿಡಿಯೋದಲ್ಲಿದೆ ರೋಚಕ ಇತಿಹಾಸ...

ಗ್ರಾಮಸ್ಥರು ಇಬ್ಬರನ್ನೂ ಹಿಡಿದು ವಿಚಾರಣೆ ಮಾಡಲು ಪ್ರಾರಂಭಿಸಿದರು. ಪ್ರೇಮಿಗಳು ತಮ್ಮ ಪ್ರೇಮಕಥೆಯನ್ನು ಬಹಿರಂಗವಾಗಿ ಹೇಳಿ ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ನಂತರ ಈ ವಿಷಯ ಗ್ರಾಮದ ಪಂಚಾಯಿತಿ ಮೆಟ್ಟಿಲೇರಿತು. ಆಗ ಪಂಚಾಯತಿಯಲ್ಲಿ ಹಿರಿಯರು ಕೂತು ಚರ್ಚೆ ಮಾಡಿ ಪ್ರೀತಿ ಮಾಡುವ ಇಬ್ಬರನ್ನು ಮದುವೆ ಮಾಡಬೇಕೆಂದು ನಿರ್ಧರಿಸಿತು. ಹುಡುಗನ ಕುಟುಂಬದವರನ್ನು ಕರೆಸಿ ವರದಕ್ಷಿಣೆಗೆ ಬೇಡಿಕೆ ಇಡಬಾರದು ಎಂಬ ಷರತ್ತನ್ನು ವಿಧಿಸಲಾಯಿತು. ಎರಡೂ ಕುಟುಂಬಗಳು ಒಪ್ಪಿಕೊಂಡಾಗ, ಗ್ರಾಮಸ್ಥರು ತಕ್ಷಣವೇ ಮದುವೆಗೆ ಸಿದ್ಧತೆಗಳನ್ನು ಪ್ರಾರಂಭಿಸಿದರು.

Scroll to load tweet…

ಗ್ರಾಮಸ್ಥರು ಮದುವೆಗೆ ಬೇಕಾದ ಬಟ್ಟೆ ಮತ್ತು ಇತರ ಅಗತ್ಯ ವಸ್ತುಗಳನ್ನು ತಂದು ಗ್ರಾಮದ ಸರಸ್ವತಿ ದೇವಸ್ಥಾನದಲ್ಲಿ ಮದುವೆ ಮಾಡಿದರು. ಸಂಜೀತ್ ತನ್ನ ಗೆಳತಿಯ ಹಣೆಗೆ ಸಿಂಧೂರ ಇಟ್ಟನು. ಈ ಪ್ರೇಮ ವಿವಾಹದ ಬಗ್ಗೆ ಭಾರತೀಯ ಸಮಾಜದಲ್ಲಿ ವಿರೋಧಗಳಿದ್ದರೂ ಈ ಕತಿಹಾರ್ ಗ್ರಾಮದಲ್ಲಿ ಮಾತ್ರ ಪ್ರೀತಿಸಿದವರನ್ನು ಪಂಚಾಯಿತಿಯ ಕಟ್ಟೆಯಲ್ಲಿ ಮದುವೆ ಮಾಡಲು ನಿರ್ಧರಿಸಿ ಮದುವೆ ಮಾಡಿಸಿದ್ದು ಮಾತ್ರ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ ಎಂದು ಹೇಳಬಹುದು.

ಇದನ್ನೂ ಓದಿ: ವಾಕ್ ಮಾಡಲು ಸುಂದರ ಹುಡುಗಿ ಬೇಕು: ಸ್ಯಾಲರಿ 10 ಸಾವಿರ: ಜಾಹೀರಾತು ಸಖತ್ ವೈರಲ್