ಕಾವೇರುವಂತೆ ಟ್ವೀಟ್ ಮಾಡೋ ಚೇತನ್ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕೂಲ್ ಕೂಲ್!
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಟ್ವೀಟ್‌ಗಳ ಮೂಲಕ ಪರ-ವಿರೋಧದ ಚರ್ಚೆ ಹುಟ್ಟುಹಾಕುವ ನಟ ಚೇತನ್ ಕುಮಾರ್ ಅಹಿಂಸಾ ಇತ್ತೀಚೆಗೆ ಪತ್ನಿ ಮೇಘಾ ಜೊತೆ ಕಾಶ್ಮೀರ ಟ್ರಿಪ್‌ಗೆ ಹೋಗಿ ಬಂದಿದ್ದಾರೆ.

ಸಮಾಜ ಸೇವಕ ಹಾಗೂ ನಟ ಚೇತನ್ ಕುಮಾರ್ ಅಹಿಂಸಾ ಫುಲ್ ಜಾಲಿ ಮೂಡ್‌ನಲ್ಲಿದ್ದಾರೆ. ಅದಕ್ಕೆ ಕಾರಣ ಇತ್ತೀಚಿಗಿನ ಅವರ ಕಾಶ್ಮೀರ ಟ್ರಿಪ್
ಏಪ್ರಿಲ್ ತಿಂಗಳ ಆರಂಭದಲ್ಲಿ ಚೇತನ್ ಕುಮಾರ್ ತಮ್ಮ ಪತ್ನಿ ಮೇಘಾ ಜೊತೆ ಕಾಶ್ಮೀರ ಪ್ರವಾಸ ಕೈಗೊಂಡಿದ್ದರು. ಇದರ ಚಿತ್ರಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
'ಪರ್ವತದಂತೆ ಬಲವಾಗಿರಿ ಮತ್ತು ದೊಡ್ಡ ನದಿಯಂತೆ ಹರಿಯಿರಿ..' ಎನ್ನುವ ಸಾಲಿನೊಂದಿಗೆ ಏಪ್ರಿಲ್ 10 ರಂದು ಕಾಶ್ಮೀರದ ಪಹಲ್ಗಾಮ್‌ನಿಂದ ಈ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದಾರೆ.
ಇನ್ನು ಚೇತನ್ ಕುಮಾರ್ ಅವರ ಪತ್ನಿ ಮೇಘಾ ಅವರ ಫೇಸ್‌ಬುಕ್ ಅಕೌಂಟ್‌ನಲ್ಲಿಯೂ ಕಾಶ್ಮೀರ ಟ್ರಿಪ್‌ನ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಚೇತನ್ ಕುಮಾರ್ ಅಹಿಂಸಾ ಅವರು ಕಾಶ್ಮೀರಕ್ಕೆ ಹೋಗಿ ಬಂದ ಅವರ ಟ್ವೀಟ್‌ಗಳ ವರಸೆಯೇ ಬದಲಾಗಿದೆ. ಮೊದಲಿನಂತೆ ಸರ್ಕಾರವನ್ನು ನೇರಾನೇರವಾಗಿ ವಿಡಂಬನೆ ಮಾಡುವಂಥ ಟ್ವೀಟ್‌ಗಳು ಕಾಣುತ್ತಿಲ್ಲ.
ಕಾಶ್ಮೀರದಲ್ಲಿ ಸಿಗುವ ಸ್ಥಳೀಯ ವಿವಿಧ ಬಗೆಯ ಖಾದ್ಯಗಳನ್ನೂ ಕೂಡ ಚೇತನ್ ಕುಮಾರ್ ಹಾಗೂ ಮೇಘಾ ಟ್ರೈ ಮಾಡಿದ್ದಾರೆ. ಇದರ ಮಾಹಿತಿಯನ್ನೂ ಅವರು ಹಂಚಿಕೊಂಡಿದ್ದಾರೆ.
ಗುಲ್ಮಾರ್ಗ್‌ನಲ್ಲಿ ಪತಿ-ಪತ್ನಿ ಇಬ್ಬರೂ ಸ್ಕೀಯಿಂಗ್ ಅನುಭವವನ್ನು ಪಡೆದುಕೊಂಡಿದ್ದಾರೆ. ಈ ಚಿತ್ರವನ್ನು ಹಂಚಿಕೊಂಡಿರುವ ಮೇಘಾ, ನನ್ನ ಜೀವನದಲ್ಲಿ ಮೊದಲ ಬಾರಿಗೆ ಸ್ಕೀಯಿಂಗ್ ಟ್ರೈ ಮಾಡಿದೆ ಎಂದಿದ್ದಾಋಏ.
ಮ್ಯಾಗಿ, ಖಾವಾ, ಮಕ್ಕಾ ಕೀ ರೋಟಿ ಜೊತೆಗೆ ಸಾರ್ಸೋ ಸಾಗ್, ಕಾಶ್ಮೀರಿ ಸಿಹಿ ಕುಲ್ಚಾ, ಕಾಶ್ಮೀರಿ ಖಾವಾ ಪಾಟ್‌ಅನ್ನು ಕಾಶ್ಮೀರದಲ್ಲಿ ಟ್ರೈ ಮಾಡಿದೆವು ಎಂದಿದ್ದಾರೆ.
ಚೇತನ್ ಅವರ ಪತ್ನಿ ಮೇಘಾ, ತಮ್ಮನ್ನು ತಾವು ಅಂಬೇಡ್ಕರ್ವಾದಿ, ವಿಚಾರವಾದಿ, ಇಂಟರ್ ಸೆಕ್ಷನಲ್ ಸ್ತ್ರೀವಾದಿ, ಅದರೊಂದಿಗೆ ಅಹಿಂಸೆಯಲ್ಲಿ ನಂಬಿಕೆ ಇರುವಂಥ ವ್ಯಕ್ತಿ ಎಂದು ಬರೆದುಕೊಂಡಿದ್ದಾರೆ.
ದೀರ್ಘಕಾಲದಿಂದ ಗೆಳೆಯರಾಗಿದ್ದ ಚೇತನ್ ಕುಮಾರ್ ಅಹಿಂಸಾ ಹಾಗೂ ಮೇಘಾ 2020ರ ಫೆಬ್ರವರಿ 2 ರಂದು ಬಹಳ ಸರಳವಾಗಿ ವಿವಾಹವಾಗಿದ್ದರು.
ಮದುವೆಯಾಗುವ ವೇಳೆಗೆ ಕಾನೂನು ವಿದ್ಯಾರ್ಥಿಯಾಗಿದ್ದ ಮೇಘಾ, ಬೆಂಗಳೂರಿನ ನಾಗರಭಾವಿಯಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್ ಮೂಲದವರಾದ ಮೇಘಾ, ಕಾನೂನು ವಿದ್ಯಾಭ್ಯಾಸ ಮಾಡುವ ಮುನ್ನ ಇಂಜಿನಿಯರಿಂಗ್ ಪದವಿಯನ್ನು ಓದಿದ್ದರು.
ಇನ್ನು ಚೇತನ್ ಕುಮಾರ್ ಅಮೆರಿಕದ ಷಿಕಾಗೋ ಮೂಲದವರಾಗಿದ್ದು, ಯಾಲೆ ವಿವಿಯಲ್ಲಿ ಫುಲ್‌ಬ್ರೈಟ್ ಸ್ಕಾಲರ್‌ಷಿಪ್‌ನ ಅಡಿಯಲ್ಲಿ ಭಾರತಕ್ಕೆ ವಾಪಾಸ್ ಆಗಿದ್ದರು.
2007ರಲ್ಲಿ ಬಿಡುಗಡೆಯಾಗಿದ್ದ ಆ ದಿನಗಳು ಸಿನಿಮಾದ ಮೂಲಕ ಆ ದಿನಗಳು ಚೇತನ್ ಎಂದೇ ಫೇಮಸ್ ಆಗಿದ್ದ ಇವರು, ಆಕ್ಟಿವಿಸ್ಟ್ ಆದ ಬಳಿಕ ಚೇತನ್ ಕುಮಾರ್ ಅಹಿಂಸಾ ಆಗಿಯೇ ಗುರುತಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.