ಸಮಸ್ಯೆ ಇದೆ ಅಂತಲ್ಲ, ಕೆಲವೊಮ್ಮೆ ಲೈಂಗಿಕ ತಜ್ಞರ ಕನ್ಸಲ್ಟ್ ಮಾಡೋದು ಅನಿವಾರ್ಯವಾಗುತ್ತೆ!

ಲೈಂಗಿಕ ಜೀವನ, ಲೈಂಗಿಕ ಶಿಕ್ಷಣ ಎಲ್ಲವೂ ಮಡಿವಂತಿಕೆಯ ವಿಷ್ಯವಲ್ಲ.  ಆನಂದ, ಆರೋಗ್ಯ ಎರಡಕ್ಕೂ ಅಗತ್ಯವಿರುವ ಇದರ ಬಗ್ಗೆ ಸೂಕ್ತ ಮಾಹಿತಿ ಅಗತ್ಯವಿರುತ್ತದೆ. ನಿಮ್ಮಲ್ಲಿ ಅದ್ರ ಬಗ್ಗೆ ಸರಿಯಾದ ಜ್ಞಾನವಿಲ್ಲ ಎಂದಾಗ ನೀವು ತಜ್ಞರ ಭೇಟಿಯಾಗ್ಬಹುದು. 
 

In These Five Conditions Sex Therapy Can Help You To Have A Better Relationship roo

ಸೆಕ್ಸ್ ಬಗ್ಗೆ ಹಿಂದೆ ದಂಪತಿ ಮಧ್ಯೆಯೇ ಮಾತುಕತೆ ಆಗ್ತಿರಲಿಲ್ಲ. ಸೆಕ್ಸ್ ನಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ಬಗ್ಗೆ ಅವರೇ ಚರ್ಚಿಸುತ್ತಿರಲಿಲ್ಲ. ಕಾಲ ಬದಲಾಗಿದೆ. ಜನರು ಲೈಂಗಿಕ ಸಮಸ್ಯೆ ಬಗ್ಗೆ ತಮ್ಮ ಸಂಗಾತಿ, ಆಪ್ತರ ಜೊತೆ ಮಾತನಾಡ್ತಿದ್ದಾರೆ. ಅನೇಕ ಕಡೆ ಅದರ ಬಗ್ಗೆ ಸರ್ಚ್ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ. ಪರಾಕಾಷ್ಠೆ ಬಗ್ಗೆ, ಸಂಬಂಧದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ ಬಗ್ಗೆ, ಸೆಕ್ಸ್ ವೇಳೆ ಕಾಡುವ ನೋವು ಅಥವಾ ಮತ್ತ್ಯಾವುದೋ ಸಮಸ್ಯೆ ಬಗ್ಗೆ ಮಾಹಿತಿ ಪಡೆಯಲು ಆಸಕ್ತಿ ತೋರುತ್ತಿದ್ದಾರೆ.

ಸೆಕ್ಸ್ (Sex) ದಂಪತಿಯನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹತ್ತಿರ ತರುವ ಕೆಲಸ ಮಾಡುತ್ತದೆ. ಲೈಂಗಿಕ ಕ್ರಿಯೆ ನೈಸರ್ಗಿಕ ಕ್ರಿಯೆಯಾಗಿದೆ. ಹಾಗಂತ ಅಲ್ಲಿ ಕಾಡುವ ಸಮಸ್ಯೆಗಳನ್ನು ಬಾಯಿಮುಚ್ಚಿಕೊಂಡು ಸಹಿಸಿಕೊಳ್ಳಬೇಕಾಗಿಲ್ಲ. ಪರಾಕಾಷ್ಠೆ (Climax), ಸೆಕ್ಸ್ ವೇಳೆ ನೋವು, ಇಬ್ಬರ ಮಧ್ಯೆ ಸಾಮರ್ಥ್ಯದ ಕೊರತೆ ಸೇರಿದಂತೆ ನಿಮ್ಮ ಮಧ್ಯೆ ಕಾಣಿಸಿಕೊಳ್ಳುವ ಸಮಸ್ಯೆಯನ್ನು ನೀವೇ ಬಗೆರಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಾಗ ನೀವು ತಜ್ಞರನ್ನು ಭೇಟಿಯಾಗಬಹುದು. ಲೈಂಗಿಕ ಚಿಕಿತ್ಸಕರು ನಿಮಗೆ ಎಲ್ಲ ರೀತಿಯ ಮಾಹಿತಿ ನೀಡುತ್ತಾರೆ. ಥೆರಪಿ (Therapy) ಪಡೆಯುವುದು ಅಥವಾ ಬಿಡುವುದು ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದಾದ್ರೂ ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವ ತಜ್ಞರು ಇದ್ದಾರೆ ಎಂಬುದಾದ್ರೂ ನಿಮಗೆ ತಿಳಿದಿರಬೇಕು. ನಾವಿಂದು ಲೈಂಗಿಕ ಚಿಕಿತ್ಸಕರ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

39 ವರ್ಷ ಹಿರಿಯ ಶಕ್ತಿ ಕಪೂರ್​ ಜತೆ ಪೂನಂ ಪಾಂಡೆಯ ಮಳೆಯಲ್ಲಿನ ಫಸ್ಟ್​ ನೈಟ್​ ಸೀನ್: ಬೆಚ್ಚಿಬಿದ್ದ ಪ್ರೇಕ್ಷಕರು!

ಲೈಂಗಿಕ ಚಿಕಿತ್ಸಕರು ಅಂದರೆ ಯಾರು? : ಲೈಂಗಿಕ ಚಿಕಿತ್ಸಕರು ಲೈಂಗಿಕತೆಯಲ್ಲಿ ವಿಶೇಷ ತರಬೇತಿ ಮತ್ತು ಶಿಕ್ಷಣವನ್ನು ಹೊಂದಿರುತ್ತಾರೆ. ಅವರು ಪರವಾನಗಿ ಪಡೆದ ಚಿಕಿತ್ಸಕರಾಗಿರುತ್ತಾರೆ.  ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ, ಅಕಾಲಿಕ ಉದ್ಗಾರ, ಯೋನಿಸ್ಮಸ್ ಮತ್ತು ಲೈಂಗಿಕ ಆಘಾತ ಸೇರಿದಂತೆ ಲೈಂಗಿಕ ಅಪಸಾಮಾನ್ಯ ಕ್ರಿಯೆ ಮತ್ತು ಅಸ್ವಸ್ಥತೆಗಳನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಅವರಿಗೆ ತರಬೇತಿ ನೀಡಲಾಗುತ್ತದೆ. 

ಅಧ್ಯಯನ ಒಂದರ ಪ್ರಕಾರ ಶೇಕಡಾ 43 ರಷ್ಟು ಮಹಿಳೆಯರು ಮತ್ತು ಶೇಕಡಾ 31 ರಷ್ಟು ಪುರುಷರು, ಲೈಂಗಿಕ ಅಪಸಾಮಾನ್ಯ ಕ್ರಿಯೆಯಿಂದ ಬಳಲುತ್ತಿದ್ದಾರೆ ಎಂಬುದು ಪತ್ತೆಯಾಗಿದೆ. ಶೇಕಡಾ 30ರಷ್ಟು ಮಹಿಳೆಯರು ಮತ್ತು ಶೇಕಡಾ 15 ರಷ್ಟು ಪುರುಷರು ಲೈಂಗಿಕ ಬಯಕೆಯ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ವರದಿ ಹೇಳುತ್ತದೆ. ಅಂಥವರು ಲೈಂಗಿಕ ತಜ್ಞರ ಬಳಿ ಚಿಕಿತ್ಸೆ ಪಡೆಯುವ ಅಗತ್ಯವಿರುತ್ತದೆ.

ಮುಖೇಶ್ ಅಂಬಾನಿ ಕೋಪ ಇಳಿಸಲು ಮಡದಿ ನೀತಾ ಅಂಬಾನಿ ಟಿಪ್ಸ್ ಇದು!

ಇವರಿಗೆ ಬೇಕು ಲೈಂಗಿಕ ಚಿಕಿತ್ಸಕರ ಸಲಹೆ : ಲೈಂಗಿಕ ಚಿಕಿತ್ಸಕರ ಬಳಿ ಹೋಗಲು ನೀವು ನಾಚಿಕೊಳ್ಳುವ ಅಗತ್ಯವಿಲ್ಲ. ಅವರು ನಿಮ್ಮ ಗುರುತನ್ನು ಎಲ್ಲಿಯೂ ಬಿಟ್ಟುಕೊಡುವುದಿಲ್ಲ. ನಿಮ್ಮೆಲ್ಲ ಮಾಹಿತಿ ಅವರ ಬಳಿ ಗೌಪ್ಯವಾಗಿರುತ್ತದೆ. ಹಾಗೆಯೇ ನೀವು ಯಾರ ಅಪಹಾಸ್ಯಕ್ಕೂ ಈಡಾಗುವುದಿಲ್ಲ. ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ನೀಡುವ ಪ್ರಯತ್ನವನ್ನು ಲೈಂಗಿಕ ಚಿಕಿತ್ಸಕರು ಮಾಡ್ತಾರೆ. ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ, ಅಕಾಲಿಕ ಸ್ಖಲನ, ಲೈಂಗಿಕ ಸಮಯದಲ್ಲಿ ನೋವು (Pain during Sexual Intercourse), ಕಡಿಮೆ ಲೈಂಗಿಕ ಬಯಕೆ (No Sexual Eagerness) ಅಥವಾ ಲೈಂಗಿಕತೆಯ ಬಗ್ಗೆ ಮಾತನಾಡಲು ತೊಂದರೆ ಸೇರಿದಂತೆ ಸೆಕ್ಸ್ ಗೆ ಸಂಬಂಧಿಸಿದ ಸಮಸ್ಯೆ ನಿಮ್ಮಲ್ಲಿದ್ದು, ಸದಾ ನೀವು ಅದ್ರ ಬಗ್ಗೆ ಆಲೋಚನೆ ಮಾಡ್ತಿದ್ದರೆ ನೀವು ತಜ್ಞರನ್ನು ಭೇಟಿಯಾಗುವುದು ಸೂಕ್ತ.

ಲೈಂಗಿಕ ಸಮಸ್ಯೆಗಳು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರುತ್ತಿದ್ದರೆ, ಇಬ್ಬರ ಮಧ್ಯೆ ಗಲಾಟೆ, ಅಂತರ ಹೆಚ್ಚಾಗ್ತಿದ್ದರೆ ನೀವು ಲೈಂಗಿಕ ತಜ್ಞರನ್ನು ಭೇಟಿಯಾಗಿ ಪರಿಹಾರ ಕಂಡುಕೊಳ್ಳಬಹುದು.
ನಿಮ್ಮ ಸಂಗಾತಿ ಮುಂದೆ ನಿಮ್ಮ ಬಯಕೆ, ಕಷ್ಟಗಳು, ಗಡಿಗಳ ಬಗ್ಗೆ ಮಾತನಾಡಲು ಸಾಧ್ಯವಾಗ್ತಿಲ್ಲ ಎಂದಾದ್ರೆ ನೀವು ಲೈಂಗಿಕ ತಜ್ಞರನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ.  

ಹಿಂದೆ ನಡೆದ ಅಹಿತಕರ ಘಟನೆಗಳು ಈಗ ನಿಮ್ಮ ಆನಂದಕ್ಕೆ ಅಡ್ಡಿಯುಂಟುಮಾಡುತ್ತಿದ್ದರೆ ಅದರಿಂದ ಹೊರಬರಲು ಲೈಂಗಿಕ ತಜ್ಞರು ನಿಮಗೆ ಸಹಾಯ ಮಾಡುತ್ತಾರೆ. ಲೈಂಗಿಕ ಜೀವನದ (Sexual Life) ಬಗ್ಗೆ ನಿಮಗೆ ಸರಿಯಾದ ಮಾಹಿತಿ, ಶಿಕ್ಷಣವಿಲ್ಲದೆ ಹೋದ್ರೆ ತೊಂದರೆ ಅನುಭವಿಸಬೇಕಾಗುತ್ತದೆ. ಅಂಥವರು ಅವಶ್ಯವಾಗಿ ಲೈಂಗಿಕ ತಜ್ಞರನ್ನು ಭೇಟಿಯಾಗಬೇಕು. 
 

Latest Videos
Follow Us:
Download App:
  • android
  • ios