Asianet Suvarna News Asianet Suvarna News

39 ವರ್ಷ ಹಿರಿಯ ಶಕ್ತಿ ಕಪೂರ್​ ಜತೆ ಪೂನಂ ಪಾಂಡೆಯ ಮಳೆಯಲ್ಲಿನ ಫಸ್ಟ್​ ನೈಟ್​ ಸೀನ್: ಬೆಚ್ಚಿಬಿದ್ದ ಪ್ರೇಕ್ಷಕರು!

 39 ವರ್ಷ ಹಿರಿಯ ಶಕ್ತಿ ಕಪೂರ್​ ಜತೆ ಪೂನಂ ಪಾಂಡೆಯ ಮಳೆಯಲ್ಲಿನ ಫಸ್ಟ್​ ನೈಟ್​ ಸೀನ್​ಗೆ ಬೆಚ್ಚಿಬಿದ್ದ ಪ್ರೇಕ್ಷಕರು! 
 

When Shakti Kapoor made the first night with 39 years younger actress Poonam Pandey suc
Author
First Published Nov 27, 2023, 12:11 PM IST

ಕೆಲವು ಸಿನಿಮಾಗಳಲ್ಲಿ ಸೆಕ್ಸ್​, ಬೋಲ್ಡ್​ ದೃಶ್ಯಗಳು ಎಗ್ಗಿಲ್ಲದೇ ನಡೆಯುತ್ತವೆ. ಕೆಲವು ನಟಿಯರು ಯಾವುದೇ ಮುಜುಗರ ಇಲ್ಲದೇ ಇಂಥ ದೃಶ್ಯಗಳಲ್ಲಿ ಖುಷಿಯಿಂದ ಪಾಲ್ಗೊಳ್ಳುತ್ತಾರೆ. ಹೀಗಿರುವಾಗ ನಟರ ವಿಷಯ ಕೇಳಬೇಕೆ? ಕೆಲವೇ ಕೆಲವು ನಟರು ಲಿಪ್​ಲಾಕ್​ ಹಾಗೂ ಸೆಕ್ಸ್​ ದೃಶ್ಯಗಳನ್ನು ಮಾಡುವುದಿಲ್ಲ ಎಂದು ಹೇಳುವವರೂ ಇದ್ದಾರೆ. ಇನ್ನು ನಾಯಕಿಯರ ವಿಷಯಕ್ಕೆ ಬಂದರೆ, ಸಿನಿ ಇಂಡಸ್ಟ್ರಿಯಲ್ಲಿ ನೆಲೆಯೂರಬೇಕು ಎಂದರೆ ಎಲ್ಲವೂ ಮಾಮೂಲು ಎನ್ನುವ ಮನಸ್ಥಿತಿ ಇರುವವರೇ ಹೆಚ್ಚಾಗಿದ್ದಾರೆ. ಚಿತ್ರಕ್ಕೆ ಅಗತ್ಯ ಬಿದ್ದರೆ ಯಾವ ಸೀನ್​ ಆದ್ರೂ ಮಾಡುತ್ತೇನೆ ಎಂದು ನಟಿಯರು ಆಗಾಗ್ಗೆ ಹೇಳುವುದೂ ಇದೆ. ಇಂಥ ಓರ್ವ ಬೋಲ್ಡ್​ ನಟಿ ಎಂದರೆ ಪೂನಂ ಪಾಂಡೆ. ಎಲ್ಲಾ ಮಿತಿಯನ್ನೂ ಮೀರಿ ಫೋಟೋಶೂಟ್​ ಮಾಡಿಸಿಕೊಳ್ಳುವಲ್ಲಿ ಫೇಮಸ್​ ಆದವರು ಪೂನಂ ಪಾಂಡೆ. 2011ರಲ್ಲಿ ವಿಶ್ವ ಕಪ್​ ಗೆದ್ದರೆ ಬೆತ್ತಲಾಗುತ್ತೇನೆ ಎಂದು ಹೇಳಿಕೆ ಕೊಟ್ಟರೂ ಹಲ್​ಚಲ್​ ಸೃಷ್ಟಿಸಿದ್ದರು. ನಂತರ ಬಿಸಿಸಿಯವರು ಅನುಮತಿ ನೀಡಲಿಲ್ಲ ಎಂದಿದ್ದರು. ಆದರೆ ಈಕೆ ಬಹುತೇಕ ನಗ್ನವಾಗಿರುವ ಹಲವಾರು ಫೋಟೋಶೂಟ್​ಗಳನ್ನು ಮಾಡಿಸಿಕೊಂಡಿದ್ದಾರೆ ಜೊತೆಗೆ ಕೆಲವು ಚಿತ್ರಗಳಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿಯೇ ಬೋಲ್ಡ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಅವರ ಅಂಥದ್ದೇ ಒಂದು ಸಿನಿಮಾದ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸದ್ದು ಮಾಡುತ್ತಿದೆ. ‘ನಶಾ’ ಚಿತ್ರದ ಮೂಲಕ ಬೋಲ್ಡ್​ ಸೀನ್​ಗಳಿಂದಲೇ ಫೇಮಸ್ ಆಗಿರುವ ನಟಿ ಪೂನಂ ಪಾಂಡೆ   'ದಿ ಜರ್ನಿ ಆಫ್ ಕರ್ಮ' ಚಿತ್ರದಲ್ಲಿ ಕೆಲಸ ಮಾಡಿದರು. ಈ ಚಿತ್ರದಲ್ಲಿ ನಟಿ ಧೈರ್ಯದ ಎಲ್ಲ ಮಿತಿಗಳನ್ನು ದಾಟಿದ್ದರು. ಪೂನಂ ಪಾಂಡೆ 39 ವರ್ಷದ ನಟ ಶಕ್ತಿ ಕಪೂರ್ ಅವರೊಂದಿಗೆ ಬೋಲ್ಡ್ ಶೈಲಿಯಲ್ಲಿ ಪ್ರೇಕ್ಷಕರನ್ನು ಮಾತ್ರವಲ್ಲದೇ, ಸಿನಿ ಉದ್ಯಮವನ್ನೂ ಬೆಚ್ಚಿಬೀಳಿಸಿದರು.

ಅಂದಹಾಗೆ, ದಿ ಜರ್ನಿ ಆಫ್ ಕರ್ಮ' ಚಿತ್ರ ಬಿಡುಗಡೆಯಾಗಿದ್ದದು 2018ರಲ್ಲಿ. ಆಗ ನಟಿ ಪೂನಂ ಪಾಂಡೆ ಅವರಿಗೆ 27 ವರ್ಷ ವಯಸ್ಸಾಗಿದ್ದರೆ, ಶಕ್ತಿ ಕಪೂರ್​ ಅವರಿಗೆ 66 ವರ್ಷ ವಯಸ್ಸಾಗಿತ್ತು. ಈ ಚಿತ್ರವು ಆರ್ಥಿಕವಾಗಿ ದುರ್ಬಲವಾಗಿರುವ ತಾಯಿ ಮತ್ತು ಮಗಳ ಕಥೆ. ಹುಡುಗಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಕ್ಕೆ ಹೋಗಲು ಬಯಸುತ್ತಾಳೆ. ಆದರೆ ಆರ್ಥಿಕ ಪರಿಸ್ಥಿತಿಯೇ ದೊಡ್ಡ ಸಮಸ್ಯೆಯಾಗಿದೆ. ಆಗ ನಾಯಕಿ ಪೂನಂ ಪಾಂಡೆಯನ್ನು ಭೇಟಿಯಾಗುತ್ತಾನೆ ಶ್ರೀಮಂತ ನಾಯಕ. ಆ ನಾಯಕನ ಪಾತ್ರದಲ್ಲಿ  ಶಕ್ತಿ ಕಪೂರ್ ನಟಿಸಿದ್ದಾರೆ. ಇವರ ಮದುವೆಯಾಗಿ ಫಸ್ಟ್​ನೈಟ್​ ಸೀನ್​ ತೋರಿಸಲಾಗಿದೆ. ಅದೂ ಮಳೆಯಲ್ಲಿ ನೆನೆಯುತ್ತಾ ಈ ದೃಶ್ಯ ಮಾಡಲಾಗಿದೆ. 

ತಮನ್ನಾರನ್ನು ಮದ್ವೆಯಾಗೋದು ನಿಜನಾ ಕೇಳಿದ್ರೆ ವಿಜಯ್​ ವರ್ಮಾ ಹೀಗ್​ ಹೇಳೋದಾ? ಉಫ್​ ಅಂತಿದ್ದಾರೆ ಫ್ಯಾನ್ಸ್​!

ಸಿನಿಮಾಗಳಲ್ಲಿ ತೋರಿಸುವ ಎಲ್ಲಾ ಫಸ್ಟ್​ನೈಸ್​ ಸೀನ್​ಗಳನ್ನು ಮೀರಿ ಈ ದೃಶ್ಯ ಚಿತ್ರೀಕರಿಸಲಾಗಿದೆ. ಶಕ್ತಿ ಕಪೂರ್ ಮತ್ತು ಪೂನಂ ಪಾಂಡೆ ಅವರ ಈ ಸೀನ್​ ನೋಡಿ ಉದ್ಯಮದವರೇ ಬೆಚ್ಚಿಬಿದ್ದಿದ್ದಾರೆ. ಇದರಲ್ಲಿನ ಸೆಕ್ಸ್ ದೃಶ್ಯಗಳು ಮಿತಿ ಮೀರಿವೆ.  ಶಕ್ತಿ ಕಪೂರ್ ತಮಗಿಂತ 39 ವರ್ಷ ಚಿಕ್ಕವಳಾದ ಪೂನಂ ಪಾಂಡೆಯೊಂದಿಗೆ ಬೋಲ್ಡ್ ದೃಶ್ಯವನ್ನು ಮಾಡಿದ್ದು ಮಾತ್ರವಲ್ಲದೇ, ಅವರು ಫಸ್ಟ್​ ನೈಟ್​ ಸೀನ್​ನಲ್ಲಿ ನಟಿಯ ಪ್ರತಿಯೊಂದ ಅಂಗವನ್ನೂ ಚುಂಬಿಸಿರುವುದನ್ನು ನೋಡಬಹುದು. ಈ ದೃಶ್ಯ ಸಾಕಷ್ಟು ಟೀಕೆಗೂ ಒಳಗಾಯಿತು. ಆದರೆ ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ  ಶಕ್ತಿ ಕಪೂರ್​,  ಈ ದೃಶ್ಯಗಳಲ್ಲಿ ಯಾವುದೇ ಅಶ್ಲೀಲತೆ ಇಲ್ಲ, ಅದನ್ನು ಸ್ವತಃ ಹೈಲೈಟ್ ಮಾಡಬೇಕು ಎಂದಿದ್ದಾರೆ.
 
ಇನ್ನು ಪೂನಂ ಪಾಂಡೆ ಕುರಿತು ಹೇಳುವುದಾದರೆ, ಈಕೆ  ಬಿಹಾರದಲ್ಲಿ ಜನಿಸಿ ಮುಂಬೈನಲ್ಲಿ ಬೆಳೆದವರು. ಪಿಯುಸಿವರೆಗೆ ವಿಧ್ಯಾಭ್ಯಾಸ ಮುಗಿಸಿ ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದರು. 2010 ರ ಗ್ಲಾಡ್ರಾಗ್ಸ್ ಸ್ಫರ್ಧೆಯಲ್ಲಿ ಟಾಪ್ 8 ಸ್ಫರ್ಧಿಯಾಗಿ ಫ್ಯಾಷನ್ ಮ್ಯಾಗಜೀನ್ ಕವರ್ ಪೇಜನಲ್ಲಿ ಕಾಣಿಸಿಕೊಂಡರು. 2011 ರಲ್ಲಿ ಸುಮಾರು 29 ಕ್ಯಾಲೆಂಡರಗಳಿಗೆ ಪೋಟೋಶೂಟ್ ನೀಡಿದರು. 2012 ರ ಕಿಂಗಫಿಷರ್ ಕ್ಯಾಲೆಂಡರ್ ನಲ್ಲಿ ಕೂಡ ಕಾಣಿಸಿಕೊಂಡರು. ಕನ್ನಡದಲ್ಲಿ ಹಳ್ಳಿ ಹೈದ ಪ್ಯಾಟೆಗೆ ಬಂದ ಖ್ಯಾತಿ ರಾಜೇಶ್ ರ `ಲವ್ ಇಸ್ ಪಾಯಸನ್' ಎಂಬ ಚಿತ್ರದ ಒಂದು ಹಾಡಿನಲ್ಲಿ ನೃತ್ಯ ಮಾಡಿದ್ದಾರೆ.  

ಬಿಗ್​ಬಾಸ್​ ಮನೆಯಲ್ಲೇ ಗರ್ಭಿಣಿಯಾದೆ ಎಂದಿದ್ದ ನಟಿಯ ಪರೀಕ್ಷಾ ರಿಪೋರ್ಟ್​ ಕೊನೆಗೂ ಬಂತು: ಫ್ಯಾನ್ಸ್​ ಫುಲ್​ ಖುಷ್​!

Follow Us:
Download App:
  • android
  • ios