ಮದ್ವೆಯಾದ ಮೊದಲ ದಿನವೇ ವಧುವಿಗೆ ಕನ್ಯತ್ವ ಪರೀಕ್ಷೆ, ಬಿಳಿ ಬೆಡ್‌ಶೀಟ್‌ನಲ್ಲಿ ರಕ್ತದ ಕಲೆಯಾಗದಿದ್ರೆ ಕಾದಿದೆ ಘೋರ ಶಿಕ್ಷೆ !
ಸಮಾಜ (Society) ಅದೆಷ್ಟೇ ಮುಂದುವರಿದರೂ ಕೆಲವೊಂದು ಅನಿಷ್ಟ ಪದ್ಧತಿಗಳು ಮಾತ್ರ ಬದಲಾಗುವುದೇ ಇಲ್ಲ. ಹೆಣ್ಣನ್ನು (Woman) ಹೀಗಳೆಯುವ, ಅವಮಾನ ಮಾಡುವ ಪದ್ಧತಿಗೆ ಕೊನೆಯಿಲ್ಲ. ರಾಜಸ್ಥಾನ (Rajasthan)ದಲ್ಲೂ ಇಂಥಾ ಅನಿಷ್ಟ ಪದ್ಧತಿಯೊಂದು ಜಾರಿಯಲ್ಲಿದೆ. ಇಲ್ಲಿ ವಧುವಿಗೆ (Bride) ಮದುವೆಯಾದ ಮೊದಲ ರಾತ್ರಿಯೇ ಕನ್ಯತ್ವ ಪರೀಕ್ಷೆ (virginity test) ಮಾಡಲಾಗುತ್ತದೆ. ಇದರಲ್ಲಿ ತಪ್ಪಿತಸ್ಥರು ಎಂದು ಕಂಡುಬಂರೆ ಶಿಕ್ಷೆ ಗ್ಯಾರಂಟಿ
ಗಂಡು ಮೊದಲ ಸಲ ಸಂಭೋಗದಲ್ಲಿ (Sex) ಪಾಲ್ಗೊಂಡಾಗ ದೈಹಿಕವಾಗಿ (Physical) ಅಥವಾ ಮಾನಸಿಕವಾಗಿ (Mentaly) ಬದಲಾವಣೆ ಆಗುತ್ತಾ ಇಲ್ವಾ ಅನ್ನೋದರ ಬಗ್ಗೆ ತಿಳಿಯೋದು ಕಡಿಮೆ. ಆದರೆ ಹೆಣ್ಣಿನ ವಿಚಾರದಲ್ಲಿ ಹಾಗಲ್ಲ. ಮೊದಲ ಸಲದ ಸಂಭೋಗ ಅಥವಾ ಆಕೆ ವರ್ಜಿನಿಟಿ ಕಳೆದುಕೊಂಡ ಸಂದರ್ಭ ಅವಳ ದೇಹ (Body) ಹಾಗೂ ಮನಸ್ಸಿನಲ್ಲಿ ಬದಲಾವಣೆಗಳು (Changes) ಆಗಿಯೇ ಆಗುತ್ತವೆ. ಕನ್ಯತ್ವವನ್ನು ಕಳೆದುಕೊಳ್ಳುವುದು ಹಲವಾರು ಸಾಮಾಜಿಕ ಮತ್ತು ಭಾವನಾತ್ಮಕ ಬದಲಾವಣೆಗೆ ಕಾರಣ ಆಗುತ್ತೆ. ಮೊದಲ್ಲೆಲ್ಲಾ ಹೆಣ್ಣು ಋತುಮತಿಯಾದ ತಕ್ಷಣ ಮದುವೆ (Marriage) ಮಾಡಿಕೊಡಲಾಗುತ್ತಿತ್ತು. ಹುಡುಗಿ ಕನ್ಯೆಯಾಗಿ ಇರುವಾಗಲೇ ಮದುವೆ ಮಾಡಿಕೊಡಬೇಕು ಎಂಬ ಅಲಿಖಿತ ನಿಯಮವಿತ್ತು. ಗಂಡು ಎಷ್ಟು ಮಂದಿಯೊಂದಿಗಾದರೂ ರಾಸಲೀಲೆಯಾಡಿದರೂ ಸರಿ, ಹೆಣ್ಣು ಕನ್ಯೆಯಾಗಿದ್ದಾಳಾ ಎಂದು ಕನ್ಯತ್ವ ಪರೀಕ್ಷೆ ((virginity test)ಯನ್ನು ಮಾಡಲಾಗುತ್ತಿತ್ತು.
ಇಂದಿಗೂ ಹಲವೆಡೆ ಇಂಥಾ ಅನಿಷ್ಟ ಪದ್ಧತಿ ಜಾರಿಯಲ್ಲಿದೆ. ಶತ ಶತಮಾನಗಳಿಂದ ಮಹಿಳೆಯರ ಮೇಲೆ ನಡೆದು ಬಂದಿರುವ ಈ ಅವಮಾನ, ಇನ್ನೂ ಸಮಾಜದಲ್ಲಿ ಉಳಿದು ಕೊಂಡಿದೆ. ರಾಜಸ್ಥಾನದಲ್ಲಿ ಆಚರಣೆಯಲ್ಲಿರುವ ಅರ್ಥಹೀನ ಆಚರಣೆಯಲ್ಲಿ ಕುಕ್ಡಿ ಪದ್ಧತಿ ಹೆಸರಿನಲ್ಲಿ ವಧುವಿಗೆ ಕನ್ಯತ್ವ ಪರೀಕ್ಷೆ ಪರೀಕ್ಷೆ ಮಾಡಿಸಲಾಗುತ್ತದೆ. ಆ ಅನಿಷ್ಟ ಪದ್ಧತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Virginity ಕಳೆದುಕೊಂಡಾಗ ಯಾವೆಲ್ಲ ಅನುಭವಗಳಾಗುತ್ತೆ ಗೊತ್ತಾ?
ಮದುವೆಯಾದ ಮೊದಲ ದಿನವೇ ಕನ್ಯತ್ವ ಪರೀಕ್ಷೆ
ಮದುವೆಯಾದ ತಕ್ಷಣವೇ ಗಂಡನ ಕೋಣೆಗೆ ಹೋಗುವ ವಧು ಕನ್ಯತ್ವ ಪರೀಕ್ಷೆಗೊಳಪಡುತ್ತಾಳೆ. ಹಾಸಿಗೆ ಮೇಲೆ ರಕ್ತದ ಕಲೆಗಳು ಇರುವುದು ಕಂಡು ಬಂದರೆ, ಪರೀಕ್ಷೆಯಲ್ಲಿ ಪಾಸ್ ಆಗಿದ್ದಾಳೆಂದು ಒಪ್ಪಿಕೊಳ್ಳುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡಿರುವ ಗುಪ್ತ ಪದ್ಧತಿ. ಬದಲಾಗುತ್ತಿರುವ ಕಾಲದಲ್ಲೂ ರಾಜಸ್ಥಾನದ ಭಿಲ್ವಾರ ಎಂಬಲ್ಲಿ ಇಂತಹದೊಂದು ಅನಿಷ್ಟ ಪದ್ಧತಿ ಜಾರಿಗೆ ಇರುವುದು ಕಂಡು ಬಂದಿದೆ. ಇದರ ಮೂಲಕ ವಧು ಮೊದಲ ರಾತ್ರಿ ಗಂಡನೊಂದಿಗೆ ದೈಹಿಕ ಸಂಪರ್ಕ ನಡೆಸಿದಾಗ ಬಿಳಿಯ ಹಾಸಿಗೆ (ರಕ್ತ) ಕಲೆಯಾಗಬೇಕು. ಇದನ್ನ ಬೆಳಗ್ಗೆ ಗ್ರಾಮದ ಎಲ್ಲರಿಗೂ ತೋರಿಸಲೇಬೇಕು. ಅದರ ಮೂಲಕ ಆಕೆಗೆ ಶೀಲದ ಸರ್ಟಿಫಿಕೇಟ್ ನೀಡುವುದರ ಜೊತೆಗೆ, ಗಂಡನ ಮನೆಯಲ್ಲಿ ಇಟ್ಟುಕೊಳ್ಳುವ ಬಗ್ಗೆ ಅಂತಿಮ ಮುದ್ರೆ ಹಾಕುತ್ತಾರೆ.
ರಾಜಸ್ಥಾನದ ಬಿಲ್ವಾರದಲ್ಲಿ ವಾಸವಾಗಿದ್ದ ಯುವತಿಯೊಬ್ಬಳ ಮೇಲೆ ಕಳೆದ ಕೆಲ ದಿನಗಳ ಹಿಂದೆ ಅತ್ಯಾಚಾರ ನಡೆದಿತ್ತು. ಘಟನೆ ಬಗ್ಗೆ ಯಾರಿಗಾದ್ರೂ ಹೇಳಿದರೆ ಸಹೋದರನ ಕೊಲೆ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿದ್ದನು. ಹೀಗಾಗಿ, ಸಂತ್ರಸ್ತೆ ಅತ್ಯಾಚಾರದ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಪ್ರಕರಣ ನಡೆದು, ಕೆಲ ದಿನಗಳ ನಂತರ ಯುವತಿಗೆ ಮದುವೆಯಾಗಿದೆ.
ಆ ಸಮುದಾಯದಲ್ಲಿ ಆಚರಣೆ ಇರುವ ಪ್ರಕಾರ ಮೊದಲ ರಾತ್ರಿ ಗಂಡನೊಂದಿಗೆ ದೈಹಿಕ ಸಂಪರ್ಕದ ವೇಳೆ ಕುಕ್ಡಿ ಪದ್ಧತಿ ನಡೆಸಲಾಗಿದ್ದು, ವಧು ತಪ್ಪಿತಸ್ಥೆ ಎಂದು ಕಂಡು ಬಂದಿದೆ. ಈ ವೇಳೆ, ವಿಚಾರಣೆ ನಡೆಸಿದಾಗ, ನಡೆದ ಘಟನೆ ಬಗ್ಗೆ ಹೇಳಿಕೊಂಡಿದ್ದಾಳೆ. ವಧುವಿನ ಕುಟುಂಬಕ್ಕೆ ಶಿಕ್ಷೆ ವಿಧಿಸಲು ಗ್ರಾಮದ ಪಂಚರು ಮುಂದಾಗಿದ್ದಾರೆ. ಈ ವೇಳೆ ಪ್ರಶ್ನೆ ಮಾಡಿ ಸಂತ್ರಸ್ತೆ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
Cheating Wife: ಮದುವೆ ದಿನವೇ ಮೈದುನನ ಜೊತೆ ಮಲಗಿದ ಹೆಂಡತಿ ..! ಪಶ್ಚಾತ್ತಾಪವೂ ಇಲ್ಲವಂತೆ
ಕುಕ್ಡಿ ಪದ್ಧತಿ ಎಂದರೇನು ?
ರಾಜಸ್ಥಾನದ ಸಾನ್ಸಿ ಸಮುದಾಯದಲ್ಲಿ ಕುಕ್ಡಿ ಪದ್ಧತಿ ಈ ಹಿಂದಿನಿಂದಲೂ ಜಾರಿಯಲ್ಲಿದೆ. ಮದುವೆಯಾದ ನಂತರ ಪತಿ-ಪತ್ನಿಯರ ನಡುವೆ ಈ ಆಚರಣೆ ನಡೆಯುತ್ತದೆ. ಈ ವೇಳೆ, ಮಹಿಳೆ ತಾನು ಶೀಲವಂತೆ ಎಂದು ತೋರಿಸಬೇಕು. ಮೊದಲ ರಾತ್ರಿಯ ಶಾರೀರಿಕ ಸಂಬಂಧದ ವೇಳೆ ಬಿಳ್ಳಿಯ ಬೆಡ್ಶೀಟ್ ಹಾಕಲಾಗುತ್ತದೆ. ಅದರ ಮೇಲೆ ರಕ್ತದ ಕಲೆಯಾಗಬೇಕು. ಅದನ್ನ ಮರುದಿನ ಎಲ್ಲರಿಗೂ ತೋರಿಸಲಾಗುತ್ತದೆ. ಅದರ ಮೇಲೆ ರಕ್ತದ ಕಲೆಗಳು ಇದ್ದರೆ ಮಾತ್ರ ಆಕೆಯನ್ನ ಹೆಂಡತಿಯಾಗಿ ಸ್ವೀಕರಿಸಲಾಗುತ್ತದೆ. ರಕ್ತದ ಕುರುಹು ಇಲ್ಲದಿದ್ದರೆ, ಈ ಮೊದಲು ಬೇರೆಯವರೊಂದಿಗೆ ಸಂಬಂಧ ಹೊಂದಿದ್ದಾಗಿ ನಂಬಲಾಗುತ್ತದೆ. ಈ ವೇಳೆ, ಪಂಚಾಯ್ತಿ ಸೇರಿಸಿ, ಆಕೆಯನ್ನ ಮನೆಯಿಂದ ಹೊರಹಾಕುವ ಅಥವಾ, ಹೆಚ್ಚಿನ ವರದಕ್ಷಿಣೆ ಕೇಳುವ ಕೆಲಸ ಅಥವಾ ಸಮುದಾಯದಿಂದಲೇ ಬಹಿಷ್ಕಾರ ಹಾಕುವ ಕೆಲಸ ಮಾಡುತ್ತಾರೆ.
ಹಿಂದಿನಿಂದಲೂ ಈ ಪದ್ಧತಿ ಜಾರಿಯಲ್ಲಿರುವ ಕಾರಣ ಅನೇಕ ಬಡ ಕುಟುಂಬಗಳು ತಮ್ಮ ಮನೆ, ಜಮೀನು ಮಾರಾಟ ಮಾಡಿ ಹೆಚ್ಚಿನ ವರದಕ್ಷಿಣೆ ನೀಡಿರುವ ಉದಾಹರಣೆಗಳಿವೆ. ತಪ್ಪಿತಸ್ಥರು ಎಂದು ಕಂಡುಬರುವ ಕುಟುಂಬಕ್ಕೆ 5ರಿಂದ 10 ಲಕ್ಷ ರೂ ದಂಡ ವಿಧಿಸುವ ಕೆಲಸ ಮಾಡಲಾಗುತ್ತದೆ. ಅದೇನೆ ಇರ್ಲಿ ಸಮಾಜ ಇಷ್ಟೊಂದು ಮುಂದುವರಿದಿರುವಾಗಲೂ ಇಂಥಾ ಅನಿಷ್ಟ ಪದ್ಧತಿ ಇವತ್ತಿಗೂ ನಡೆಯುತ್ತಿರುವುದು ನಿಜವಾಗಲೂ ನಾಚಿಕೆಗೇಡಿನ ಸಂಗತಿ.