Asianet Suvarna News Asianet Suvarna News

'ಎಲ್ಲವೂ ಪ್ರೀತಿಗಾಗಿ..' ವಿದ್ಯಾರ್ಥಿನಿ ಮೇಲೆ ಲವ್‌, ಲಿಂಗ ಪರಿವರ್ತನೆ ಮಾಡಿಕೊಂಡು ಮದುವೆಯಾದ ಪಿಟಿ ಟೀಚರ್‌!

ಮೀರಾ ತನ್ನದೇ ಶಾಲೆಯ ವಿದ್ಯಾರ್ಥಿನಿ ಕಲ್ಪನಾಳನ್ನು ಪ್ರೀತಿ ಮಾಡುತ್ತಿದ್ದಳು. ಈ ಪ್ರೀತಿ ಎಷ್ಟರ ಮಟ್ಟಿಗೆ ಬೆಳೆದು ಬಿಟ್ಟಿತ್ತೆಂದರೆ, ದೈಹಿಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಮೀರಾ, ಲಿಂಗ ಪರಿವರ್ತನೆ ಮಾಡಿಕೊಂಡು ಗಂಡಾಗಿ ಬದಲಾಗಿದ್ದರು. ಎರಡು ದಿನಗಳ ಹಿಂದೆ ತಮ್ಮ ವಿದ್ಯಾರ್ಥಿನಿ ಕಲ್ಪನಾ ಅವರನ್ನು ವಿವಾಹವಾಗಿದ್ದಾರೆ.
 

in Bharatpur Rajasthan a female physical teacher got her gender changed married a schoolgirl san
Author
First Published Nov 7, 2022, 10:02 PM IST | Last Updated Nov 7, 2022, 10:02 PM IST

ಜೈಪುರ (ನ.7): ಪ್ರೀತಿಗಾಗಿ ಒಬ್ಬ ವ್ಯಕ್ತಿ ಏನು ಬೇಕಾದ್ರೂ ಮಾಡ್ತಾನೆ ಅನ್ನೋದು ಈಗಾಗಲೇ ಸಾಬೀತಾಗಿದೆ. ಪ್ರೀತಿಗಾಗಿ ತನ್ನ ಸರ್ವಸ್ವವನ್ನೇ ಕಳೆದುಕೊಂಡವರನ್ನು ನೋಡಿದ್ದೇವೆ, ಪಡೆದುಕೊಂಡವರನ್ನು ಕಂಡಿದ್ದೇವೆ. ಆದರೆ, ರಾಜಸ್ಥಾನದ ಭರತ್‌ಪುರದಲ್ಲಿ ಪ್ರೀತಿಗಾಗಿ ಶಾಲಾ ಶಿಕ್ಷಕಿಯೊಬ್ಬಳು ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾರೆ. ಲಿಂಗ ಪರಿವರ್ತನೆ ಮಾಡಿಕೊಂಡ ಗಂಡಾದ ಶಾಲಾ ಶಿಕ್ಷಕಿ, ತನ್ನ ಶಾಲೆಯ ವಿದ್ಯಾರ್ಥಿನಿಯನ್ನೇ ವಿವಾಹವಾಗಿದ್ದಾರೆ. ದೈಹಿಕ ಶಿಕ್ಷಕಿ ಮೀರಾ, ದೀಗ್ ಉಪವಿಭಾಗದ ಮೋತಿ ಕಾ ನಾಗ್ಲಾದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಶಾಲೆಯಲ್ಲಿ ಓದುತ್ತಿರುವ ಕಲ್ಪನಾ ಎಂಬ ವಿದ್ಯಾರ್ಥಿನಿಗೆ ಮೀರಾ ಕಬಡ್ಡಿ ಆಟವನ್ನು ಹೇಳಿಕೊಡುತ್ತಿದ್ದರು. ಅದಲ್ಲದೆ, ಅವರನ್ನು ರಾಜ್ಯಮಟ್ಟದ ಕಬಡ್ಡಿ ಪ್ಲೇಯರ್‌ ಮಾಡುವ ನಿಟ್ಟಿನಲ್ಲಿ ಮೀರಾ ಪ್ರಮುಖ ಪಾತ್ರ ವಹಿಸಿದ್ದರು. ಆಟವನ್ನು ಹೇಳಿಕೊಡುವ ಹೊತ್ತಿನಲ್ಲಿಯೇ ಕಲ್ಪನಾಳ ಮೇಲೆ ಮೀರಾಗೆ ಪ್ರೀತಿ ಹುಟ್ಟಿತ್ತು.

ಕಬಡ್ಡಿ ಆಟವನ್ನು ಹೇಳಿಕೊಳ್ಳುವ ಸಮಯದಲ್ಲಿಯೇ ಮೀರಾ, ಕಲ್ಪನಾಳನ್ನು ಅತಿಯಾಗಿ ಪ್ರೀತಿ ಮಾಡಲು ಆರಂಭ ಮಾಡಿದ್ದಳು. ಪ್ರೀತಿ ಎಲ್ಲಿಯ ತನಕ ಹೋಗಿ ಮುಟ್ಟಿತ್ತೆಂದರೆ, ಮೀರಾ ತನ್ನ ಲಿಂಗ ಪರಿವರ್ತನೆ ಮಾಡಿಕೊಂಡು ಆರವ್‌ ಹೆಸರಿನ ಹುಡುಗನಾಗಿದ್ದ. ಎರಡು ದಿನಗಳ ಹಿಂದೆಯಷ್ಟೇ ಆರವ್‌ ಹಾಗೂ ಕಲ್ಪನಾಳ ವಿವಾಹವಾಗಿದ್ದು, ಅವರ ಚಿತ್ರಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮದುವೆಯ ಚಿತ್ರಗಳಲ್ಲಿ ಇಬ್ಬರು ಖುಷಿ ಖುಷಿಯಾಗಿ ಚಿತ್ರ ತೆಗೆಸಿಕೊಂಡಿದ್ದಾರೆ. ಮೀರಾ ಆರವ್‌ ಆಗಿ ಬದಲಾಗಿ ಕಲ್ಪನಾಳ ಕೈ ಹಿಡಿದ ಕಾರಣದಿಂದ ಇಬ್ಬರೂ ಕುಟುಂಬಗಳು ಖುಷಿಯಾಗಿದೆ. ಲಿಂಗ ಬದಲಾವಣೆ ಮಾಡಿಕೊಂಡ ನಂತರ ಮೀರಾ ತನ್ನ ಹೆಸರನ್ನು ಆರವ್‌ ಆಗಿ ಮಾಡಿಕೊಂಡಿರುವುದಾಗಿ ಹೇಳಿದ್ದು, ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿದ್ದೆ ಎಂದು ಹೇಳಿದ್ದರು. ಅದೇ ಗ್ರಾಮದ ವಿದ್ಯಾರ್ಥಿನಿ ಕಲ್ಪನಾ ಕಬಡ್ಡಿ ಆಟದಲ್ಲಿ ನಿಪುಣರಾಗಿದ್ದರು. ಆಟ ಹೇಳಿಕೊಡುತ್ತಾ ನಾವಿಬ್ಬರು ಪ್ರೀತಿಯಲ್ಲಿ ಬಿದ್ದುದಾಗಿ ಹೇಳಿದ್ದಾರೆ.

ಮಂಗಳಮುಖಿಯರ ಆಟಕ್ಕೆ ಹೈರಾಣದ ಯುವಕ: ಲಿಂಗಪರಿವರ್ತನೆ ಮಾಡಿ ಭಿಕ್ಷಾಟನೆಗೆ ಕಳುಹಿಸುತ್ತಾರಂತೆ!

ನಾನೊಬ್ಬ ಹುಡುಗ ಎಂದು ಮೊದಲಿನಿಂದಲೂ ಅನಿಸಿತ್ತು: ಆರವ್‌ ಪ್ರಕಾರ ಮೊದಲಿನಿಂದಲೂ ತಾನೊಬ್ಬ ಹುಡುಗ ಎಂದು ಅನಿಸುತ್ತಿತ್ತಂತೆ. 'ನನಗೆ ಮೊದಲಿನಿಂದಲೂ ಲಿಂಗ ಬದಲಾಯಿಸಬೇಕೆಂಬ ಆಸೆ ಇತ್ತು. 2012ರಲ್ಲಿ ಯಾರೋ ಲಿಂಗ ಪರಿವರ್ತನೆ ಮಾಡಿದ್ದಾರೆ ಅಂತ ಸುದ್ದಿಯಲ್ಲಿ ಓದಿದ್ದೆ, ಅಂದಿನಿಂದ ಇದೆಲ್ಲಾ ಎಲ್ಲಿ ಹೇಗೆ ಆಗುತ್ತೆ ಅಂತ ಯೋಚಿಸ್ತಿದ್ದೆ. ಆಗ ಯೂಟ್ಯೂಬ್ ಮೂಲಕ ಇದಕ್ಕಾಗಿಯೇ ಒಬ್ಬರು ಡಾಕ್ಟರ್ ಇದ್ದಾರೆ ಅಂತ ಗೊತ್ತಾಯ್ತು. ದೆಹಲಿಯಲ್ಲಿ ಲಿಂಗ ಬದಲಾವಣೆ ಶಸ್ತ್ರ ಚಿಕಿತ್ಸೆ ಮಾಡುವವರಿದ್ದಾರೆ. ಅಲ್ಲಿಗೆ ಹೋಗಿ ಚಿಕಿತ್ಸೆ ಪಡೆದುಕೊಂಡೆ, ಚಿಕಿತ್ಸೆ 2019 ರಿಂದ ಪ್ರಾರಂಭವಾಯಿತು ಮತ್ತು ಕೊನೆಯ ಶಸ್ತ್ರಚಿಕಿತ್ಸೆ 2021 ರಲ್ಲಿ, ನಾನು ಹುಡುಗಿಯಾಗಿ ಜನಿಸಿದೆ ಆದರೆ ನಾನು ಹುಡುಗ ಎಂದು ಮೊದಲಿನಿಂದಲೂ ನನಗೆ ಅನಿಸಿತ್ತು. ನನ್ನ ಲಿಂಗವನ್ನು ಬದಲಾಯಿಸಿದೆ ಮತ್ತು ನನ್ನ ವಿದ್ಯಾರ್ಥಿನಿ ಕಲ್ಪನಾ ಅವರೊಂದಿಗೆ 2 ದಿನಗಳ ಹಿಂದೆ ವಿವಾಹವಾಯಿತು. ಈಗ ನಮ್ಮ ಕುಟುಂಬ ಸದಸ್ಯರು ಸಂತೋಷವಾಗಿದ್ದಾರೆ ಎಂದು ಆರವ್‌ ಹೇಳಿದ್ದಾರೆ.

ಸಲಿಂಗಿ ಮಗ, ಲಿಂಗ ಪರಿವರ್ತನೆ ಮಾಡಲು ಇಡೀ ಕುಟುಂಬವನ್ನು ಹತ್ಯೆಗೈದ!

ವಧು ಕಲ್ಪನಾ ಹೇಳೋದೇನು: "ನನ್ನ ಶಾಲೆಯಲ್ಲಿ ಮೀರಾ ದೈಹಿಕ ಶಿಕ್ಷಕಿ ಆಗಿ ಕೆಲಸ ಮಾಡುತ್ತಿದ್ದರು. ಅವರು 10 ನೇ ತರಗತಿಯಿಂದ ನನಗೆ ಆಟಕ್ಕೆ ಸಹಾಯ ಮಾಡಿದ್ದಾರೆ. ನನ್ನ ಕ್ರೀಡೆ ಕಬಡ್ಡಿ ಮತ್ತು ನಾನು ಇಂದು ಏನಾಗಿದ್ದರೂ ನನ್ನ ಪತಿಯಾದ ಆರವ್ ಕಾರಣ, ಆರಂಭದಿಂದಲೂ ಅವರು ನನ್ನ ಪಕ್ಕವೇ ಇರಬೇಕು ಎಂದು ನನಗೆ ಅನಿಸಿತ್ತು. ಹಾಗೇನಾದರೂ ಅವರು ಸರ್ಜರಿ ಮಾಡಿಸಿಕೊಂಡು ಹುಡುಗನಾಗದೇ ಇರುತ್ತಿದ್ದರೂ ಮೀರಾ ಹೆಸರಿನಲ್ಲೇ ಅವರನ್ನು ಮದುವೆಯಾಗುತ್ತಿದೆ.ನಾವು ಗುರುಗಳು ಮತ್ತು ಶಿಷ್ಯರು ಎಂದು ಜನರು ಹೇಳುವ ವಿಷಯವೂ ನಮ್ಮ ಮನಸ್ಸಿನಲ್ಲಿತ್ತು, ನಾವು ಮದುವೆಯಾದೆವು, ನಾವು ನಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದೇವೆ. ಮೀರಾ ನನಗಾಗಿ ಲಿಂಗ ಬದಲಾಯಿಸಿಕೊಂಡು ಹುಡಗರಾದರು. ಅತಿಯಾಗಿ ಪ್ರೀತಿ ಮಾಡುತ್ತಿದ್ದ ಕಾರಣ ಎರಡು ದಿನಗಳ ಹಿಂದೆ ಮದುವೆಯಾಗಿದ್ದೇವೆ.

Latest Videos
Follow Us:
Download App:
  • android
  • ios