ಸಲಿಂಗಿ ಮಗ, ಲಿಂಗ ಪರಿವರ್ತನೆ ಮಾಡಲು ಇಡೀ ಕುಟುಂಬವನ್ನು ಹತ್ಯೆಗೈದ!
ರೋಹ್ಟಕ್ ಕುಸ್ತಿಪಟು ಕುಟುಂಬ ಕೊಲೆ ಪ್ರಕರಣದಲ್ಲಿ ಹಲವು ಆಘಾತಕಾರಿ ಸಂಗತಿಗಳು ಬಹಿರಂಗವಾಗಿವೆ. 8 ದಿನಗಳ ಹಿಂದೆ ಆಗಸ್ಟ್ 27 ರಂದು ತನ್ನ ಸ್ವಂತ ಕುಟುಂಬದ 4 ಜನರನ್ನು ಕೊಲೆ ಮಾಡಿದ ಆರೋಪಿ, ಮಗ ಅಭಿಷೇಕ್ ರಿಮಾಂಡ್ ಇಂದಿಗೆ ಪೂರ್ಣಗೊಳ್ಳುತ್ತಿದೆ. ಆತನನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಆದರೆ ಆತ ಪೊಲೀಸರ ಮುಂದೆ ಬಹಿರಂಗಪಡಿಸಿದ ಮಾಹಿತಿ ಮಾತ್ರ ಬೆಚ್ಚಿ ಬೀಳಿಸುವಂತಹದ್ದು. ಆರೋಪಿ ಮಗ ಸಲಿಂಗಕಾಮಿಯಾಗಿದ್ದು, ನಾಲ್ಕು ವರ್ಷಗಳ ಕಾಲ ತನ್ನ ಲಿವ್-ಇನ್ ಸಂಗಾತಿಯೊಂದಿಗೆ ಸಂಬಂಧ ಹೊಂದಿದ್ದ. ಇಬ್ಬರ ನಡುವೆ ಸಂಬಂಧವಿತ್ತು. ಆದರೆ ಈ ವಿಚಾರದಲ್ಲಿ ಕುಟುಂಬ ಮಧ್ಯೆ ಬಂದಾಗ ಆತ ತನ್ನ ತಾಯಿ, ಸಹೋದರಿ, ತಂದೆ ಮತ್ತು ಅಜ್ಜಿಯನ್ನು ಕೊಂದಿದ್ದಾನೆ.
Crime
ಆರೋಪಿ ಅಭಿಷೇಕ್ ಅಲಿಯಾಸ್ ಮೋನುಗೆ ಕೇವಲ 20 ವರ್ಷ
ರೋಹ್ಟಕ್ ಪೊಲೀಸ್ ಕಸ್ಟಡಿಯ ಕೊನೆಯ ದಿನವಾದ ಭಾನುವಾರ, ಅಭಿಷೇಕ್ ಘಟನೆಯ ಸಂಪೂರ್ಣ ವಿವರ ನೀಡಿದ್ದಾನೆ. ತನ್ನ ಕುಟುಂಬ ಸದಸ್ಯರನ್ನು ಕೊಂದಿದ್ದು ಯಾಕೆ? ಎಂಬುವುದನ್ನು ತಿಳಿಸಿದ್ದಾನೆ. ತಾನು ತನ್ನ ಪುರುಷ ಪ್ರೇಮಿಯೊಂದಿಗೆ ಇರಲು ತನ್ನ ಲಿಂಗ ಬದಲಾಯಿಸಲು ಬಯಸಿದ್ದರೆ. ಇಂಟರ್ನೆಟ್‌ನಲ್ಲಿ ಇಂತಹ ಚಿಕಿತ್ಸಾಲಯಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರೆ, ಮಾತ್ರವಲ್ಲ, ಲಿಂಗ ಬದಲಾಯಿಸಲು ವಿದೇಶದಲ್ಲಿರುವ ತನ್ನ ಸ್ನೇಹಿತನೊಂದಿಗೆ ಓಡಿಹೋಗಲು ಯೋಜನೆ ರೂಪಿಸಿದ್ದ. ಇಬ್ಬರೂ ಮದುವೆಯಾಗಲು ಬಯಸಿದ್ದರು, ಇಬ್ಬರೂ ಒಟ್ಟಿಗೆ ಬದುಕಲು ಮತ್ತು ಸಾಯುವ ಪ್ರತಿಜ್ಞೆ ಮಾಡಿದ್ದರು.
ಆರೋಪಿ ಅಭಿಷೇಕ್ ಲಿಂಗ ಬದಲಿಸಲು ಮತ್ತು ಮದುವೆಯಾಗಲು ಯೋಜಿಸಿದ್ದ. ಆದರೆ ಅವರ ಕುಟುಂಬ ಸದಸ್ಯರು ಇದನ್ನು ವಿರೋಧಿಸಿದ್ದರು. ಇದಷ್ಟೇ ಅಲ್ಲದೇ, ಆರೋಪಿಗಳು ಹಲವು ದಿನದಿಂದ ಸುಮಾರು 5 ಲಕ್ಷ ರೂಪಾಯಿ ಕೊಡುವಂತೆ ಕುಟುಂಬ ಮಂದಿಗೆ ಬೇಡಿಕೆ ಇಟ್ಟಿದ್ದರು. ಆದರೆ ತಂದೆ ಕೊಡಲು ನಿರಾಕರಿಸಿದ್ದರು. ಇದರ ನಂತರ ಆರೋಪಿಗಳು ಪೋಷಕರು, ಸಹೋದರಿ ಮತ್ತು ಅಜ್ಜಿಯನ್ನು ಕೊಲ್ಲಲು ಭೀಕರ ಸಂಚು ರೂಪಿಸಿದ್ದರು.
ಇದಷ್ಟೇ ಅಲ್ಲ, ಆರೋಪಿ ಮತ್ತು ಆತನ ಸಂಗಾತಿ ಕಾರ್ತಿಕ್ ಲತ್ವಾಲ್ ಇಬ್ಬರ ಅನೈತಿಕ ವಿಡಿಯೋಗಳು ಕೂಡ ವೈರಲ್ ಆಗಿವೆ. ತನಿಖೆ ವೇಳೆ ತಮ್ಮಿಬ್ಬರ ಸ್ನೇಹ ನಾಲ್ಕು ವರ್ಷ ಹಳೆಯದ್ದು, ದೆಹಲಿಯಲ್ಲಿ ಕ್ಯಾಬಿನ್ ಕ್ರೂ ಅಧ್ಯಯನದ ವೇಳೆ ಪರಸ್ಪರ ಪರಿಚಯವಾಗಿತ್ತು ಎಂದಿದ್ದಾರೆ. ಇಬ್ಬರೂ ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದರು, ಅವರ ನಡುವೆ ಗಂಡ ಮತ್ತು ಹೆಂಡತಿಯಂತಹ ಸಂಬಂಧವಿತ್ತು ಎಂದೂ ಬಾಯ್ಬಿಟ್ಟಿದ್ದಾರೆ.
ಎಲ್ಲರನ್ನೂ ಗುಂಡು ಹಾರಿಸಿ ಕೊಂದ ಮಗ
ಕುಟುಂಬ ಸದಸ್ಯರನ್ನು ಕೊಲ್ಲುವ ಯೋಜನೆ ರೂಪಿಸಲು ಕ್ರೈಂ ಸೀರೀಸ್ ನೊಡುತ್ತಿದ್ದೆ. ಅವಕಾಶವನ್ನು ನೋಡಿ, ಆಗಸ್ಟ್ 27 ರಂದು, ತಾಯಿ ಬಬ್ಲಿ, ಸಹೋದರಿ ತಮನ್ನಾ, ತಂದೆ ಪ್ರದೀಪ್ ಅಲಿಯಾಸ್ ಬಬ್ಲು ಪೆಹೆಲ್ವಾನ್ ಮತ್ತು ಅಜ್ಜಿ ರೋಶ್ನಿ ಅವರ ತಲೆಗೆ ಗುಂಡು ಹಾರಿಸಿದೆ. ದರೋಡೆ ಮಾಡಲು ಬಂದವರು ಕೊಲೆ ಮಾಡಿದ್ದಾರೆಂಬ ಅನುಮಾನ ಹುಟ್ಟಿಕೊಳ್ಳಲು ಎಲ್ಲರ ಮೈಮೇಲಿದ್ದ ಆಭರಣ ತೆಗೆದೆವು ಎಂದಿದ್ದಾರೆ. ಇನ್ನು ಅಪರಾಧ ಕೃತ್ಯವೆಸಗಿದ ಬಳಿಕ ಆರೋಪಿ ಸ್ಥಳದಿಂದ ಓಡಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. ಸದ್ಯ ಅಲ್ಲಿನ ಸಿಸಿಟಿವಿ ಪೊಲೀಸರ ಕೈಯಲ್ಲಿದೆ. ಅದರ ಆಧಾರದ ಮೇಲೆ ಪೊಲೀಸರು ಇಡೀ ಪ್ರಕರಣವನ್ನು ಬೇಧಿಸಿದ್ದಾರೆ.
ಹತ್ಯೆ ನಡೆಸಿ ಹೋಟೆಲ್‌ಗೆ ಬಂದಿದ್ದ
ಅಚ್ಚರಿ ಎಂದರೆ ತನ್ನ ಇಡೀ ಕುಟುಂಬವನ್ನು ಯಾರಿಗಾಗಿ ಅಭಿಷೇಕ್ ಕೊಂದಿದ್ದನೋ, ಆ ತನ್ನ ಪುರುಷ ಪ್ರೇಮಿಗೆ ಘಟನೆಯ ಬಗ್ಗೆ ಏನೂ ತಿಳಿಸಿರಲಿಲ್ಲ. ಈ ಕೊಲೆಗಳ ಬಗ್ಗೆ ಆರೋಪಿ ತನ್ನ ಸಹಚರನಿಗೆ ಏನನ್ನೂ ಹೇಳಿಲ್ಲ. ಪ್ರಸ್ತುತ ಪೊಲೀಸರು ಇಡೀ ವಿಷಯವನ್ನು ತನಿಖೆ ಮಾಡುತ್ತಿದ್ದಾರೆ. ಈ ಹತ್ಯೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ವಿಚಾರಣೆಯ ಸಮಯದಲ್ಲಿ, ಆರೋಪಿ ತನ್ನ ಕುಟುಂಬ ಸದಸ್ಯರನ್ನು ಕೊಂದಿರುವುದಕ್ಕೆ ತನಗೆ ಯಾವುದೇ ವಿಷಾದವಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ನನಗೆ ಬೇಕಾಗಿರುವುದು ನನ್ನ ಜೀವನ, ನಾನು ಅವನ ಬಳಿಗೆ ಹೋಗಬೇಕು, ಅವನು ನನ್ನ ಜೀವನ ಎಂದಿದ್ದಾನೆ. ಪೋಲಿಸರು ಅವನನ್ನು ಥಳಿಸಿದರೂ ಆತ ಕಣ್ಣೀರು ಹಾಕಿಲ್ಲ. ಆದರೆ ತನ್ನ ಗೆಳೆಯನನ್ನು ನೆನಪಿಸಿಕೊಂಡು ಆತ ಬೇಕೆಂದು ಕನವರಿಸುತ್ತಿರುತ್ತಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.