Asianet Suvarna News Asianet Suvarna News

ಬಾಯ್‌ಫ್ರೆಂಡ್‌ ಫೋಟೋ ರಿವೀಲ್ ಮಾಡಿದ ಇಲಿಯಾನಾ ಡಿಕ್ರೂಜ್‌, ಸಿಂಗಲ್ ಪೇರೆಂಟ್‌ ಅಲ್ಲ ಎಂದ ನಟಿ!

ಮೊದಲಿನಿಂದಲೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ರಹಸ್ಯ ಕಾಪಾಡಿಕೊಂಡು ಬಂದಿರುವ ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್. ಆಗಸ್ಟ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಇಲಿಯಾನಾ, ತಂದೆ ಯಾರೆಂಬುದನ್ನು ಸಹ ಬಹಿರಂಗಪಡಿಸಿರಲ್ಲಿಲ್ಲ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ತಾನು ಸಿಂಗಲ್ ಪೇರೆಂಟ್ ಅಲ್ಲ ಎಂದು ಹೇಳಿ, ಸಂಗಾತಿಯೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

Ileana DCruz finally shares photo of mystery man, reveals she is not a single parent Vin
Author
First Published Nov 25, 2023, 3:56 PM IST

ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್ ಇತ್ತೀಚೆಗೆ ಭಾರಿ ಸುದ್ದಿಯಲ್ಲಿರುವ ನಟಿ. ಇದಕ್ಕೆ ಕಾರಣ, ಆಕೆ ಮದುವೆಯಾಗದೆ ಗರ್ಭಿಣಿಯಾಗಿ ಮಗುವನ್ನು ಹೆತ್ತಿರೋದು. ಇಲ್ಲಿಯವರೆಗೂ ಆಕೆ ಮಗುವಿ ನ ತಂದೆ ಯಾರೆಂಬುದನ್ನು ಬಹಿರಂಗಪಡಿಸಿಲ್ಲ. ಈ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಹಾರಿಕೆ ಉತ್ತರ ಕೊಟ್ಟು ತಪ್ಪಿಸಿಕೊಳ್ಳುತ್ತಿದ್ದರು. ಕೆಲ ತಿಂಗಳ ಹಿಂದೆ ತಾವು ಗರ್ಭಿಣಿ ಎಂದು ಫೋಟೋ ಶೇರ್​ ಮಾಡಿಕೊಂಡು ಬೇಬಿ ಬಂಪ್​ ತೋರಿಸಿದಾಗಿನಿಂದಲೂ ಫ್ಯಾನ್ಸ್​ ಈಕೆಯ ಮಗುವಿನ ತಂದೆಯ ಬಗ್ಗೆ ತಲೆ ಕೆಡಿಸಿಕೊಂಡಿದ್ದರು. ಫಿಲ್ಮ್‌ಫೇರ್ ನಾಮನಿರ್ದೇಶನ ಪಾರ್ಟಿಯಲ್ಲಿ ಆಸ್ಟ್ರೇಲಿಯಾದ ಸ್ನೇಹಿತನೊಂದಿಗೆ ಇಲಿಯಾನಾ ಕಾಣಿಸಿಕೊಂಡಿದ್ದ ಸಂದರ್ಭದಲ್ಲಿ ನೀವಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ನಟಿಗೆ ಕೇಳಲಾಗಿತ್ತು.  ಆಗಲೂ  ಇಲಿಯಾನಾ ಡಿಕ್ರೂಜ್, ಇದರ ಬಗ್ಗೆ ಮಾತನಾಡಲು ಇದು ಸರಿಯಾದ ಸಮಯವಲ್ಲ ಎಂದು ನುಣುಚಿಕೊಂಡಿದ್ದರು. 

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ತಾನು ಸಿಂಗಲ್ ಪೇರೆಂಟ್ ಅಲ್ಲ ಎಂದು ಹೇಳಿ, ಸಂಗಾತಿಯೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನ ಕೊಶ್ಚನ್ ಆನ್ಸರ್‌ ಸೆಷನ್‌ನಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಇಲಿಯಾನ ಉತ್ತರಿಸಿದರು. 'ನೀವು ನಿಮ್ಮ ಮಗುವನ್ನು ಒಂಟಿಯಾಗಿ ಹೇಗೆ ಪೋಷಿಸುತ್ತಿದ್ದೀರಿ' ಎಂದು ಕೇಳಿದಾಗ, ನಟ ಮೈಕೆಲ್ ಡೋಲನ್ ಅವರೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. 'ನಾನು ಸಿಂಗಲ್‌ ಪೇರೆಂಟ್‌ ಅಲ್ಲ' ಎಂದು ಬರೆದಿದ್ದಾರೆ.

ತಮಿಳು ಚಿತ್ರರಂಗದಿಂದ ನಟಿ ಇಲಿಯಾನಾ ಡಿಕ್ರೂಜ್ ನಿಷೇಧ? ಕಾರಣವೇನು ಗೊತ್ತಾ?

ಆಗಸ್ಟ್ 5ರಂದು ಇಲಿಯಾನಾ ಡಿಕ್ರೂಜ್ ಗಂಡು ಮಗುವಿಗೆ ಜನ್ಮ ನೀಡಿದ್ದಾಗಿ ಹೇಳಿಕೊಂಡಿದ್ದರು. Instagramನಲ್ಲಿ ಮಗುವಿನ ಫೋಟೋವನ್ನು ಪೋಸ್ಟ್ ಮಾಡಿಕೊಂಡು, ಮಗುವಿನ ಹೆಸರು 'Koa Pheonix Dolan'ಎಂದು ತಿಳಿಸಿದ್ದರು. ಪೋಸ್ಟ್‌ನಲ್ಲಿ 'ನಮ್ಮ ಪ್ರೀತಿಯ ಮಗುವನ್ನು ಜಗತ್ತಿಗೆ ಸ್ವಾಗತಿಸಲು ನಾವು ತುಂಬಾ ಸಂತೋಷವಾಗಿದ್ದೇವೆ. ಇದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಹೃದಯಗಳು ತುಂಬಿವೆ' ಎಂದು ಬರೆದುಕೊಂಡಿದ್ದರು. ಮಗುವಿನ ತಂದೆ ಯಾರೆಂದು ಫ್ಯಾನ್ಸ್ ಹಲವಾರು ಬಾರಿ ಪ್ರಶ್ನಿಸಿದ್ದರೂ ಇಲಿಯಾನ ಉತ್ತರಿಸಿರಲ್ಲಿಲ್ಲ.

ನಂತರ ಎರಡು ತಿಂಗಳ ಹಿಂದೆ ಈಕೆ  ಮೊದಲ ಬಾರಿಗೆ ಇಲಿಯಾನಾ ಬಾಯ್‌ಫ್ರೆಂಡ್ ಜೊತೆ ಫೋಟೋ ಹಂಚಿಕೊಂಡಿದ್ದರು. ಹಾಗಂತ ಆತ ಯಾರೆಂದು ರಿವೀಲ್ ಮಾಡಿರಲಿಲ್ಲ.  ಬಾಯ್‌ಫ್ರೆಂಡ್ ಜೊತೆ ಸುತ್ತಾಡುತ್ತಿರುವ ಇಲಿಯಾನಾ ಆತನ ಕೈ ಮೇಲೆ ತಮ್ಮ ಕೈ ಇಟ್ಟಿರುವ ಫೋಟೋವನ್ನು ಶೇರ್ (Photo share) ಮಾಡಿದ್ದರು. ಇಲಿಯಾನಾ ಫೋಟೋ ಶೇರ್ ಮಾಡುವ ಮೂಲಕ ಮಗುವಿನ ತಂದೆ ಇವರೇ ಎಂದು ಹೇಳುತ್ತಿದ್ದಾರಾ ಎನ್ನುವುದು ಇನ್ನೂ ಗೊಂದಲ ಮೂಡಿಸಿತ್ತು. ಆದರೆ ಆತ ಯಾರೆಂದು ಬಹಿರಂಗ ಪಡಿಸಿರಲ್ಲಿಲ್ಲ

 Ileana D'Cruz ಬ್ಯಾಕ್ ದಪ್ಪ ಸೊಂಟ ಸಣ್ಣ; ನೆಗೆಟಿವ್ ಕಾಮೆಂಟ್ ಮಾಡ್ರಿ ಉತ್ತರ ಕೊಡ್ತೀನಿ ಎಂದೇಳಿದ ನಟಿ

ಕತ್ರಿನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಅವರೊಂದಿಗೆ ಇಲಿಯಾನಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಈ ಹಿಂದೆ ಸುದ್ದಿ ಹರಿದಾಡಿತ್ತು. ಇಲಿಯಾನಾ ಈ ಹಿಂದೆ ಛಾಯಾಗ್ರಾಹಕ ಆಂಡ್ರ್ಯೂ ನೀಬೋನ್ ಅವರೊಂದಿಗೆ ದೀರ್ಘಾವಧಿಯ ಸಂಬಂಧವನ್ನು ಹೊಂದಿದ್ದರು. ಆದರೆ ಆಕೆಯ ಬಾಯ್‌ಫ್ರೆಂಡ್ ಯಾರೆಂಬುದು ಪ್ರಶ್ನಾರ್ಥಕವಾಗಿಯೇ ಉಳಿದಿತ್ತು.

ಇಲಿಯಾನಾ ಡಿಕ್ರೂಜ್ ಬಾಲಿವುಡ್ ಪ್ರಾಜೆಕ್ಟ್‌ಗಳಲ್ಲೂ ಬಿಝಿಯಾಗಿದ್ದು, ಅವರು ಅಭಿಷೇಕ್ ಬಚ್ಚನ್ ಎದುರು 'ದಿ ಬಿಗ್ ಬುಲ್' ನಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಅವರು ರಣದೀಪ್ ಹೂಡಾ ಅವರೊಂದಿಗೆ 'ಅನ್‌ಫೇರ್ & ಲವ್ಲಿ' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. 

Ileana DCruz finally shares photo of mystery man, reveals she is not a single parent Vin

Follow Us:
Download App:
  • android
  • ios