ಯಾವಾಗ್ಲೂ ಜೊತೆಯಲ್ಲೇ ಇರೋ ಗಂಡನ ಸ್ನೇಹಿತೆಯರ ಬಗ್ಗೆ ಸಿಕ್ಕಾಪಟ್ಟೆ ಅನುಮಾನ..ಏನ್ಮಾಡ್ಲಿ ?

ವೈವಾಹಿಕ ಜೀವನ (Married Life) ಚೆನ್ನಾಗಿರಬೇಕೆಂದು ನೀವು ಬಯಸುವುದಾದರೆ, ನಿಮ್ಮ ಪತಿಯೊಂದಿಗೆ ನಿಮ್ಮ ಸಂಬಂಧ (Relationship) ವನ್ನು ಸುಧಾರಿಸಲು ಪ್ರಯತ್ನಿಸುವಾಗ, ಅವನ ಗೆಳತಿ (Girlfriend)ಯನ್ನು ಅನುಮಾನಿಸುವ ಅಭ್ಯಾಸವನ್ನು ಬಿಟ್ಟುಬಿಡಿ. ಹಾಗಿದ್ರೆ ಗಂಡನ (Husband) ಮಹಿಳ ಸ್ನೇಹಿತರ ಬಗ್ಗೆ ಅನುಮಾನ ಬಂದಾಗ ನೀವೇನು ಮಾಡ್ಬೋದು

If You Have Doubts About Your Husbands Female Friends These Tips Will Come In Handy Vin

ಈಗಿನ ಕಾಲದಲ್ಲಿ ಗಂಡು ಹೆಣ್ಣಿನ ನಡುವೆ ಸ್ನೇಹ ಇರುವುದು ಸಾಮಾನ್ಯ. ಆದರೂ ಕೆಲವೊಮ್ಮೆ ಗಂಡನನ್ನು ಹುಡುಗಿಯರ ಮಧ್ಯೆ ನೋಡಿದ ಹೆಂಡತಿ, ಹೆಂಡತಿಯನ್ನು ಪುರುಷ ಸಹೋದ್ಯೋಗಿಗಳ ಮಧ್ಯೆ ನೋಡುವ ಗಂಡ ಅನುಮಾನ ಪಡುವುದಿದೆ. ಅದೆಷ್ಟೋ ಬಾರಿ ಇದು ಮದುವೆ ಮುರಿದು ಬೀಳಲು ಸಹ ಕಾರಣವಾಗಿದೆ. ಹೀಗಾಗಿ ಗಂಡನ ಮಹಿಳಾ ಸ್ನೇಹಿತರ ಬಗ್ಗೆ ನಿಮಗೆ ಅನುಮಾನಗಳಿದ್ದರೆ ಅದನ್ನು ಸೂಕ್ತವಾಗಿ ಬಗೆಹರಿಸುವುದು ಮುಖ್ಯ. ಅಂತಹ ಪರಿಸ್ಥಿತಿಯಲ್ಲಿ, ವೈವಾಹಿಕ ಜೀವನ (Married Life) ಚೆನ್ನಾಗಿರಬೇಕೆಂದು ನೀವು ಬಯಸುವುದಾದರೆ, ನಿಮ್ಮ ಪತಿಯೊಂದಿಗೆ ನಿಮ್ಮ ಸಂಬಂಧ (Relationship)ವನ್ನು ಸುಧಾರಿಸಲು ಪ್ರಯತ್ನಿಸುವಾಗ, ಅವನ ಗೆಳತಿಯನ್ನು ಅನುಮಾನಿಸುವ ಅಭ್ಯಾಸ (Habit)ವನ್ನು ಬಿಟ್ಟುಬಿಡಿ. ಹಾಗಿದ್ರೆ ಗಂಡನ ಮಹಿಳಾ ಸ್ನೇಹಿತರ ಬಗ್ಗೆ ಅನುಮಾನ ಬಂದಾಗ ನೀವೇನು ಮಾಡ್ಬೋದು

ಗೆಳತಿಯರೊಂದಿಗೆ ಗಂಡನ ಸ್ನೇಹ: ಗಂಡನನ್ನು ಹುಡುಗಿಯರ ಗುಂಪಿನಲ್ಲಿ ಕಂಡ ತಕ್ಷಣ ನೀವು ಅನುಮಾನಪಡಬೇಕಿಲ್ಲ. ಆಫೀಸಿನ ಸಹೋದ್ಯೋಗಿಗಳು ಸಲುಗೆಯಿಂದ ವರ್ತಿಸಿದರೂ ಭಯಪಡಬೇಕಿಲ್ಲ. ಆಫೀಸ್ ವಾತಾವರಣದಲ್ಲಿ ಎಲ್ಲರೂ ಒಂದು ಕುಟುಂಬದಂತಿರುವುದು ಸಹಜವಾಗಿರುತ್ತದೆ. ಇದು ಅಪ್ಪಟ ಸ್ನೇಹವೂಬ ಆಗಿರಬಹುದು. ನಿಮ್ಮ ಗಂಡನ ಸ್ನೇಹಿತೆಯರಾಗಿರುವ ಹುಡುಗಿಯ ಬಗ್ಗೆ ನಿಮಗೆ ಅನುಮಾನವಿದ್ದರೆ ಆಗಾಗ, ನೀವು ಸಹ  ಆ ಸ್ನೇಹಿತೆಯರೊಂದಿಗೆ ಸ್ನೇಹ ಬೆಳೆಸಬೇಕು.

Divorce Tricks: ನಿಮ್ಮಿಂದ ದೂರವಾಗೋಕೆ ಸಂಗಾತಿ ಈ ತಂತ್ರ ಅನುಸರಿಸ್ತಾ ಇರ್ಬೋದು

ನೆನಪಿಡಿ ನೀವು ಆ ಸ್ನೇಹಿತೆಯರನ್ನು ಗೆಳತಿಯನ್ನಾಗಿ ಮಾಡದ ಹೊರತು, ನಿಮ್ಮ ಪತಿ ಮತ್ತು ಅವಳ ಸಂಬಂಧವನ್ನು ನೀವು ಅರ್ಥಮಾಡಿಕೊಳ್ಳುವುದು ಕಷ್ಟ. ಬಹುಶಃ ಈ ಮಹಿಳೆಯರೊಂದಿಗೆ ಸ್ನೇಹಿತರಾಗುವ ಮೂಲಕ, ನಿಮ್ಮ ಪತಿ ಅವರನ್ನು ಏಕೆ ಸ್ನೇಹಿತರು ಎಂದು ಕರೆಯುತ್ತಾರೆ ಎಂದು ನಿಮಗೆ ತಿಳಿಯುತ್ತದೆ. ಈ ಮಹಿಳೆಯರೊಂದಿಗಿನ ಸಂಬಂಧವನ್ನು ಅವನು ಏಕೆ ಗೌರವಿಸುತ್ತಾನೆ ಎಂಬುದು ಅರ್ಥವಾಗುತ್ತದೆ. ಅದಕ್ಕಾಗಿಯೇ ಅವರ ಜೊತೆ ಸ್ನೇಹ ಬೆಳೆಸುವುದು ಮುಖ್ಯ.

ದೃಷ್ಟಿಕೋನ ತಪ್ಪಾಗಿರಬಹುದು: ಕಾಲ ಬದಲಾಗಿದೆ. ಯೋಚನೆಗಳು ಬದಲಾಗಿದೆ. ಜೊತೆಗೆ ನಾವೂ ಬದಲಾಗಬೇಕು. ಗಂಡನಿಗೆ ಹುಡುಗಿಯರು ಸ್ನೇಹಿತೆಯರು ಇದ್ದಾರೆ ಎಂದ ತಕ್ಷಣ ಆತ ಸರಿಯಿಲ್ಲ ಎಂಬುದು ಅರ್ಥವಲ್ಲ. ಅವರನ್ನು ನಿಮ್ಮ ಗಂಡ ತಂಗಿ, ಅಕ್ಕನ ಸ್ಥಾನದಲ್ಲಿಯೂ ನೋಡುತ್ತಿರಬಹುದು. ಅಥವಾ ಎಲ್ಲಾ ಸಮಸ್ಯೆಗಳನ್ನು ಹಂಚಿಕೊಳ್ಳ ನಿಜವಾದ ಸ್ನೆಹಿತೆಯೂ ಆಗಿರಬಹುದು. ಹೀಗಾಗಿ ಗಂಡ ಇನ್ಯಾರೋ ಹುಡುಗಿಯಲ್ಲಿ ಮಾತನಾಡಿದ್ದನ್ನು ನೋಡಿದ ತಕ್ಷಣ, ಅನೈತಿಕ ಸಂಬಂಧ ಎಂದು ಅಂದುಕೊಂಡು ರಂಪ ರಾಮಾಯಣ ಮಾಡಿಬಿಡಬೇಡಿ. ಇದು ನಿಮ್ಮ ಕಲ್ಪನೆಯಾಗಿರಬಹುದು.ಈಗ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಗಂಡ ನಿಮ್ಮ ದೃಷ್ಟಿಕೋನವನ್ನು ಗೌರವಿಸಿದರೆ, ಅವನ ಮನಸ್ಸನ್ನು ಬದಲಾಯಿಸುವ ಬದಲು ಅವನ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

Marriage Life : ದಾಂಪತ್ಯ ಹಾಳ್ಮಾಡುತ್ತೆ ಈ ಕೆಟ್ಟ ಅಭ್ಯಾಸ

ಗಂಡನ ಬಳಿ ಮಾತನಾಡಿ: ಆಗಾಗ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಗಂಡನಲ್ಲಿ ಹೇಳದೆ ತಾವೇ ಏನೇನೋ ಅಂದುಕೊಂಡು ಎಲ್ಲವನ್ನೂ ತಮ್ಮ ಸ್ನೇಹಿತರಿಗೆ ಹೇಳಿಕೊಳ್ಳುತ್ತಾರೆ. ನಿಮ್ಮ ಗಂಡನ ಗೆಳತಿಯೊಂದಿಗೆ ನಿಮಗೆ ಸಮಸ್ಯೆ ಇದ್ದರೆ, ನೇರವಾಗಿ ಮಾತನಾಡಿ. ಅವರ ಸಂಬಂಧದ ಬಗ್ಗೆ ನಿಮಗೆ ಕೆಲವೊಮ್ಮೆ ಅನುಮಾನವಿದೆ ಎಂದು ಹೇಳಿ. ಅವರು ನಿಮ್ಮನ್ನು ಕೇಳಿದಾಗ, ಅವರು ಖಂಡಿತವಾಗಿಯೂ ನಿಮ್ಮ ಅನುಮಾನಗಳನ್ನು ನಿವಾರಿಸಲು ಪ್ರಯತ್ನಿಸುತ್ತಾರೆ. ಅವರು ತಮ್ಮ ಸಂಬಂಧ ಮತ್ತು ಸ್ನೇಹದ ಕಾರಣಗಳ ಬಗ್ಗೆ ಸತ್ಯವನ್ನು ನಿಮಗೆ ತಿಳಿಸುತ್ತಾರೆ. ಮಾತನಾಡಿ ಬಗೆಹರಿಸಬಹುದಾದ ಸಮಸ್ಯೆಯನ್ನು ಅನುಮಾನದಿಂದಲೇ ದೊಡ್ಡದಾಗಿ ಮಾಡಿ ಕೌಟುಂಬಿಕ ಕಲಹಕ್ಕೆ ಕಾರಣವಾಗಬೇಡಿ.

ಅಸೂಯೆ ಪಡಬೇಡಿ: ಪತಿಗೆ ಹುಡುಗಿಯರು ಸ್ನೇಹಿತರಾಗಿರುವ ಬಗ್ಗೆ ಯಾವತ್ತೂ ಅಸೂಯೆಪಟ್ಟುಕೊಳ್ಳಬೇಡಿ. ಸ್ನೇಹಿತೆಯಾಗಿರುವ ಅವರು ಎಂದಿಗೂ ನಿಮ್ಮ ಸ್ಥಾನವನ್ನು ಆವರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಇನ್‌ ಸೆಕ್ಯೂರ್ ಭಾವನೆಯನ್ನು ಇಟ್ಟುಕೊಳ್ಳಿ. ಸಹೋದ್ಯೋಗಿಗಳು, ಸ್ನೇಹಿತರ ಸಂಬಂಧವನ್ನು ಗೌರವಿಸಿ. ಅಸೂಯೆ ಯಾವುದೇ ಸಂಬಂಧವನ್ನು ಹಾಳುಮಾಡುತ್ತದೆ. ಹೀಗಾಗಿ ಗಂಡನ ಸ್ನೇಹಿತರ ಮೇಲಿನ ಸಿಟ್ಟಿನಿಂದ ಗಂಡನ ಜತೆ ಸರಿಯಾಗಿ ಮಾತನಾಡದಿರುವುದು, ಮುನಿಸಿಕೊಳ್ಳುವುದು ಮಾಡಬೇಡಿ. ಇದು ದಾಂಪತ್ಯದಲ್ಲಿ ಸಮಸ್ಯೆಗೆ ಕಾರಣವಾಗುತ್ತದೆಯಷ್ಟೆ. ಬದಲು ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.

Latest Videos
Follow Us:
Download App:
  • android
  • ios