Relationship Tips: ಕ್ಷಮೆಯಲ್ಲಿದೆ ಸಂತೋಷದ ಗುಟ್ಟು

ದ್ವೇಷ ಮನಸ್ಸಿಗೆ ನೋವು ನೀಡುತ್ತದೆ. ಮನಸ್ಸಿನ ಶಾಂತಿ ಹಾಳು ಮಾಡುತ್ತದೆ. ಸಂಬಂಧ ಕೆಡಿಸುವ ಜೊತೆಗೆ ಕ್ರೌರ್ಯಕ್ಕೆ ದಾರಿಮಾಡಿ ಕೊಡುತ್ತದೆ. ಅದೇ ಕ್ಷಮೆ ಇಡೀ ಜೀವನವನ್ನು ಬದಲಿಸುತ್ತದೆ. ಸಂತೋಷ ಸದಾ ನೆಲೆಸಿರಲು ಕಾರಣವಾಗುತ್ತದೆ. 
 

If You Face Problem To Forgive Someone Then Follow These Five Tricks

ಜೀವನದಲ್ಲಿ ಅನೇಕರು ಬಂದು ಹೋಗ್ತಾರೆ. ಒಬ್ಬಬ್ಬರ ಸ್ವಭಾವ ಒಂದೊಂದು ರೀತಿಯಲ್ಲಿರುತ್ತದೆ. ಕೆಲವರು ತಿಳಿದೋ ತಿಳಿಯದೆಯೋ ನಮಗೆ ನೋವುಂಟು ಮಾಡಿರ್ತಾರೆ. ನಮಗೆ ಆ ವ್ಯಕ್ತಿಯ ಮೇಲೆ ನಿರೀಕ್ಷೆ, ಪ್ರೀತಿ ಹೆಚ್ಚಿರುತ್ತದೆ. ಆದ್ರೆ ಆತನ ಸ್ವಭಾವ ನೋವುಂಟು ಮಾಡಿರುತ್ತದೆ. ಆತನಿಂದ ಮೋಸ ಹೋಗಿರ್ತೇವೆ. ಆತ ನಮಗೆ ನೀಡಿದ ನೋವಿನಿಂದ ಹೊರಬರಲು ಕಷ್ಟವಾಗುತ್ತದೆ. ಕ್ಷಮೆ ಜೀವನದಲ್ಲಿ ಬಹಳ ಮುಖ್ಯ. ಕ್ಷಮೆ ನಮ್ಮ ಜೀವನಕ್ಕೆ ನೆಮ್ಮದಿ ನೀಡುತ್ತದೆ. ನೋವುಂಟು ಮಾಡಿದ ಜನರನ್ನು ಕ್ಷಮಿಸಲು ಕಲಿತರೆ  ಆ ನೋವಿನಿಂದ ಹೊರಬರಲು ಸುಲಭವಾಗುತ್ತದೆ.  ಇತರರನ್ನು ಕ್ಷಮಿಸುವುದು ನಿಮ್ಮ ಬಲ ಹೆಚ್ಚಿಸುತ್ತದೆ. ಸಂಬಂಧಗಳಲ್ಲಿ ಯಾವುದೇ ಸಮಸ್ಯೆ ಸೃಷ್ಟಿಯಾಗುವುದಿಲ್ಲ. ಆದ್ರೆ ಸುಲಭವಾಗಿ ಎಲ್ಲರನ್ನೂ ಕ್ಷಮಿಸುವುದು ಕಷ್ಟ. ಅನೇಕ ಬಾರಿ ಕ್ಷಮಿಸಲು ಮನಸ್ಸು ಒಪ್ಪುವುದಿಲ್ಲ. ಇದು ಇಬ್ಬರ ಮಧ್ಯೆ ದ್ವೇಷ ಹುಟ್ಟು ಹಾಕುತ್ತದೆ. ಜೀವನ ಪರ್ಯಂತ ಮಾತನಾಡದೆ ಸುಖ ಸಂಬಂಧವನ್ನು ಹಾಳು ಮಾಡಿಕೊಳ್ಳುವವರಿದ್ದಾರೆ.  ಕೆಲವೊಂದು ಸರಳ ವಿಧಾನದ ಮೂಲಕ ನೀವು ಒಬ್ಬ ವ್ಯಕ್ತಿಗೆ ಕ್ಷಮೆ ನೀಡಬಹುದು. ಈ ಮೂಲಕ ಅವರ ಜೊತೆಗಿನ ಸಂಬಂಧವನ್ನು ಸುಮಧುರಗೊಳಿಸಬಹುದು. ಇಂದು ನಾವು ತಪ್ಪು ಮಾಡಿದವರನ್ನು ಕ್ಷಮಿಸುವುದು ಹೇಗೆ ಎಂಬುದನ್ನು ಹೇಳ್ತೇವೆ.

ಸ್ವೀಕಾರ ಬಹಳ ಮುಖ್ಯ : ಕೆಲವು ಜನರು ತಮ್ಮದೇ ಆದ ನಿಯಮಗಳನ್ನು ಹಾಕಿಕೊಂಡು ಅದ್ರಲ್ಲಿ ಬದುಕುತ್ತಿರುತ್ತಾರೆ. ಈ ವೇಳೆ ಯಾರು ಸಣ್ಣ ತಪ್ಪು (Wrong) ಮಾಡಿದ್ರೂ ಅದನ್ನು ಅವರಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ಹಾಗೆ ಅವರ ನಿಯಮ (Rule) ಮುರಿದವರೆಲ್ಲ ತಪ್ಪು ಮಾಡಿದವರು ಎಂದು ಅವರು ಭಾವಿಸ್ತಾರೆ. ಆದ್ರೆ ತಪ್ಪನ್ನು ಪ್ರತಿಯೊಬ್ಬರೂ ಒಂದಲ್ಲ ಒಂದು ಸಂದರ್ಭದಲ್ಲಿ ಮಾಡ್ತಾರೆ ಎಂಬ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು. ನೀವು ಇದನ್ನು ಮನಸ್ಸಿನಲ್ಲಿಟ್ಟುಕೊಂಡಾಗ ನೀವು ಯಾರನ್ನು ಬೇಕಾದ್ರೂ ಕ್ಷಮಿಸಬಹುದು. ಸಣ್ಣದಿರಲಿ, ದೊಡ್ಡದಿರಲಿ ವಿಷ್ಯವನ್ನು ನಿಮ್ಮಲ್ಲಿಯೇ ಹಿಡಿದಿಟ್ಟುಕೊಂಡು  ಕುಳಿತುಕೊಳ್ಳುವುದು ಒಳ್ಳೆಯದಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನರನ್ನು ಕ್ಷಮಿಸಿ ಮುನ್ನಡೆಯುವುದು ಜಾಣತನ.

ದಿನಕ್ಕೆ ಆರು ಸೆಕೆಂಡು ಸಂಗಾತಿಗೆ ಮುತ್ತು ಕೊಟ್ರೆ ಮ್ಯಾರೀಡ್ ಲೈಫ್ ಸೂಪರ್

ಬೇರೆಯವರ ಪರಿಸ್ಥಿತಿ ಅರ್ಥಮಾಡಿಕೊಳ್ಳಿ : ಮೊದಲೇ ಹೇಳಿದಂತೆ ಎಲ್ಲರೂ ಎಲ್ಲ ಸಂದರ್ಭದಲ್ಲೂ ಒಂದೇ ರೀತಿ ಇರುವುದಿಲ್ಲ. ಅವರ ಮನಸ್ಥಿತಿ ಬದಲಾಗುತ್ತಿರುತ್ತದೆ. ಕೆಟ್ಟ ಪರಿಸ್ಥಿತಿಯಲ್ಲಿ ಅವರು ತಿಳಿಯದೆ ನಿಮಗೆ ನೋವುಂಟು ಮಾಡಿರಬಹುದು. ಅವರು ನಿಮಗೆ ನೋವುಂಟು ಮಾಡಿದರೆ ಮೊದಲು ಆ ವ್ಯಕ್ತಿಯ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ. ಎಲ್ಲೋ ಆತನಿಗೆ ಯಾವುದೋ ತೊಂದರೆಯಾಗಿದೆ ಎಂಬುದು ನಿಮಗೆ ತಿಳಿದಾಗ ನೀವು ಅವರನ್ನು ಕ್ಷಮಿಸುತ್ತೀರಿ. ಅವರನ್ನು ಅರ್ಥಮಾಡಿಕೊಳ್ಳದೆ ಹೋದ್ರೆ ಆಗ ಅವರನ್ನು ಕ್ಷಮಿಸುವುದು ಕಷ್ಟವಾಗುತ್ತದೆ. 

ಇತರರನ್ನು ಕ್ಷಮಿಸಿದ್ರೆ ಇದೆ ಇಷ್ಟೆಲ್ಲ ಪ್ರಯೋಜನ : ಕ್ಷಮಿಸಿದ್ರೆ ಎಷ್ಟೆಲ್ಲ ಪ್ರಯೋಜನವಿದೆ ಎಂಬ ಸತ್ಯ ನಿಮಗೆ ತಿಳಿದಿರಬೇಕು. ಇದು ನಿಮ್ಮ ಅರಿವಿಗೆ ಬಂದ್ರೆ ನೀವು ಇತರರ ವಿರುದ್ಧ ಯಾವುದೇ ದ್ವೇಷ ಹೊಂದುವುದಿಲ್ಲ. ನಿಮ್ಮ ಮನಸ್ಸು ಅತ್ಯಂತ ಶಾಂತವಾಗಿರುತ್ತದೆ. ನೀವು ಅನೇಕ ನಕಾರಾತ್ಮಕ ಆಲೋಚನೆಗಳಿಂದ ದೂರವಿರಬೇಕು. ಇದು ನಿಮ್ಮ ಕೆಲಸದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಸಾಧ್ಯವಾದಷ್ಟು ಜನರನ್ನು ಕ್ಷಮಿಸಲು ಪ್ರಯತ್ನಿಸಿ ಮತ್ತು ನಿಮ್ಮ ಸಂಬಂಧವನ್ನು ಸಿಹಿಯಾಗಿರಿಸಲು ಪ್ರಯತ್ನಿಸಿ. 

ಮದುವೆಗೂ ಮೊದಲು ಸೆಕ್ಸ್‌, ಹುಡುಗಿಯರ ಏನಂತಾರೆ ?

ಸ್ನೇಹಿತರ ಸಹಾಯ ಪಡೆಯಿರಿ : ನಿಮ್ಮನ್ನು ನೋಯಿಸಿದ ವ್ಯಕ್ತಿಯ ಮೇಲೆ ನೀವು ತುಂಬಾ ಕೋಪಗೊಂಡಿದ್ದರೆ ಮತ್ತು ಅವರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಭಾವಿಸಿದರೆ, ಸ್ನೇಹಿತರು ಅಥವಾ ನಿಮಗೆ ಹತ್ತಿರವಿರುವ ಜನರ ಸಹಾಯವನ್ನು ಪಡೆಯಿರಿ. ಅಂತಹ ಜನರು ನಿಮ್ಮನ್ನು ಪ್ರೇರೇಪಿಸುತ್ತಾರೆ ಮತ್ತು ನಿಮಗೆ ಸರಿಯಾದ ದಿಕ್ಕನ್ನು ತೋರಿಸುತ್ತಾರೆ. ದ್ವೇಷವನ್ನು ಉತ್ತೇಜಿಸುವ ಮಾತುಗಳನ್ನು ಅವರು ಎಂದೂ ಆಡುವುದಿಲ್ಲ. ಅವರ ಸಹಾಯದಿಂದ ನೀವು ನಿಮ್ಮ ಸಮಸ್ಯೆ ಕಡಿಮೆ ಮಾಡಿಕೊಳ್ಳಬಹುದು. 
 

Latest Videos
Follow Us:
Download App:
  • android
  • ios