Asianet Suvarna News Asianet Suvarna News

ಐಎಎಸ್ ಅಧಿಕಾರ ಅಥರ್ ಅಮೀರ್ ಖಾನ್ ಹುಟ್ಟುಹಬ್ಬಕ್ಕೆ 2ನೇ ಪತ್ನಿ ವಿಶ್ ವೈರಲ್!

ಐಎಎಸ್ ಅಧಿಕಾರಿ ಅಥರ್ ಅಮೀರ್ ಖಾನ್ ಸೆಲೆಬ್ರಿಟಿಯೂ ಹೌದು. ಅವರ ಮದುವೆ, ವಿಚ್ಛೇದನ, ಎರಡನೇ ಮದುವೆ, ಹನಿಮೂನ್ ಎಲ್ಲವೂ ಸುದ್ದಿಯಾಗ್ತಿರುತ್ತದೆ. ಈಗ ಹುಟ್ಟುಹಬ್ಬದ ಸುಂದರ ಕ್ಷಣದ ಫೋಟೋ ವೈರಲ್ ಆಗಿದೆ.
 

IAS Athar Aamir Wife Dr Mehreen Qazi Shares New Photos On His Birthda Calls Him Love Of Life roo
Author
First Published Sep 6, 2023, 3:39 PM IST

ಕೆಲ ಐಎಎಸ್ ಅಧಿಕಾರಿಗಳು ತಮ್ಮ ವೈಯಕ್ತಿಕ ವಿಷ್ಯಗಳನ್ನು ಹಂಚಿಕೊಳ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಪರ್ಸನಲ್ ವಿಷ್ಯಗಳು ಸುದ್ದಿಯಾಗ್ತಿರುತ್ತವೆ. ಅವರಲ್ಲಿ ಐಎಎಸ್ ಅಥರ್ ಅಮೀರ್ ಖಾನ್ ಕೂಡ ಒಬ್ಬರು. ಅಥರ್ ಅಮೀರ್ ಖಾನ್, ದೇಶದ ಅತ್ಯಂತ ಯಂಗ್ ಹಾಗೂ ಸುಂದರ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು. ಅವರು   ಸೆಪ್ಟೆಂಬರ್ 5ರಂದು 31 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಪತ್ನಿ ಜೊತೆ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದ್ರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅವರ ಪತ್ನಿ ಡಾ. ಮಹ್ರೀನ್ ಖಾಜಿ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಲ್ಲದೆ ಪತಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ.

ಫೋಟೋದಲ್ಲಿ ಐಎಎಸ್ (IAS) ಅಧಿಕಾರಿ ಅಥರ್ ಅಮೀರ್ (Athar Aamir) ಖಾನ್ ಹಾಗೂ ಮಹ್ರೀನ್ ಖಾಜಿ (Mehreen Qazi) ರನ್ನು ನೀವು ನೋಡ್ಬಹುದು. ರೊಮ್ಯಾಟಿಕ್ ಪೋಸ್ಟಿನಲ್ಲಿ ಮಹ್ರೀನ್ ಖಾಜಿ, ಅಥರ್ ಅಮೀರ್ ಖಾನ್ ತಮಗೆ ಎಷ್ಟು ಮುಖ್ಯ ಎಂಬುದನ್ನು ಹೇಳಿದ್ದಾರೆ. ನನ್ನ ಜೀವನದ ಪ್ರೀತಿ ಹಾಗೂ ವಂಡರ್ಫುಲ್ ಪತಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಮಹ್ರೀನ್ ಖಾಜಿ ಶೀರ್ಷಿಕೆ ಹಾಕಿದ್ದಾರೆ. ಅಷ್ಟೇ ಅಲ್ಲ, ಮದುವೆಯಾದ್ಮೇಲೆ ಇದು ನಿಮ್ಮ ಮೊದಲ ಹುಟ್ಟುಹಬ್ಬ ಎಂದು ಬರೆದಿರುವ ಮಹ್ರೀನ್ ಖಾಜಿ, ಪತಿ ನನಗೆ ಎಷ್ಟು ಅರ್ಥವಾಗಿದ್ದಾರೆ ಎಂಬುದನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಐಎಎಸ್ ಅಧಿಕಾರಿ ಅಥರ್ ಅಮೀರ್ ಖಾನ್,  ಕರುಣಾಮಯಿ ಮತ್ತು ಸಂವೇದನಾಶೀಲ ವ್ಯಕ್ತಿ ಮಾತ್ರವಲ್ಲ ಅಸಮಾನ್ಯರು ಎಂದು ಮಹ್ರೀನ್ ಖಾಜಿ ತಮ್ಮ ಪತಿಯನ್ನು ಹೊಗಳಿದ್ದಾರೆ. ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಆಧ್ಯಾತ್ಮಿಕವಾಗಿ ಜೀವನದ ಪ್ರತಿಯೊಂದು ಅಂಶದಲ್ಲೂ ನಿಮ್ಮ ಅತ್ಯುತ್ತಮ ಆವೃತ್ತಿಯಾಗಲು ನೀವು ನಿರಂತರವಾಗಿ ಶ್ರಮಿಸುತ್ತೀರಿ ಎಂದಿದ್ದಾರೆ.

ನನ್ನ ಅಪ್ಪ-ಅಮ್ಮನೇ ಈ ಪ್ರಶ್ನೆ ಕೇಳಲ್ಲ, ಇನ್ನು ನಿಮ್ಮದೇನ್ರಿ? ತಮನ್ನಾ ಭಾಟಿಯಾ ಗರಂ ಆಗಿದ್ದೇಕೆ?

ನೀವು ನನ್ನ ಪತಿ ಮಾತ್ರವಲ್ಲ, ನನ್ನ ಉತ್ತಮ ಸ್ನೇಹಿತ. ಹಾಗೆ ಜೀವನದ ಪ್ರತಿಯೊಂದು ಸಂತೋಷವೂ ಹೌದು. ನಾನು ನಿಮ್ಮಿಂದ ಬಹಳಷ್ಟು ಕಲಿತಿದ್ದೇನೆ ಮತ್ತು ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ. ನಿಮ್ಮ ಜನ್ಮದಿನವು ಅತ್ಯುತ್ತಮವಾಗಿ ಇರಬೇಕೆಂದು ನಾನು ಬಯಸುತ್ತೇನೆ. ನಿಮ್ಮ ಮೇಲೆ ನನಗಿರುವ ಪ್ರೀತಿಯನ್ನು ಪದಗಳಲ್ಲಿ ಹೇಳಲಾರೆ. ನೀವು ನನ್ನೊಂದಿಗಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ ಎಂದು ಬರೆದ ಮಹ್ರೀನ್ ಖಾಜಿ, ಕೊನೆಯಲ್ಲಿ ಮತ್ತೊಮ್ಮೆ ಜನ್ಮದಿನದ ಶುಭಾಷಯ ಕೋರಿದ್ದಾರೆ.

ಇನ್ಸ್ಟಾಗ್ರಾಮ್ ನ ಮಹ್ರೀನ್ ಖಾಜಿ ಪೋಸ್ಟ್ ವೈರಲ್ ಆಗಿದೆ. ಮಹ್ರೀನ್ ಖಾಜಿ ಪೋಸ್ಟಿಗೆ ಅಥರ್ ಅಮೀರ್ ಖಾನ್ ಕೂಡ ಕಮೆಂಟ್ ಮಾಡಿದ್ದಾರೆ. ಧನ್ಯವಾದಗಳನ್ನು ಅರ್ಪಿಸಿದ ಅಥರ್ ಅಮೀರ್ ಖಾನ್, ನೀವು ನನ್ನ ಜೀವನವನ್ನು ತುಂಬಾ ಸುಂದರವಾಗಿಸಿದ್ದೀರಿ. ನಿಮ್ಮಿಂದ ನನ್ನ ಜೀವನ ತುಂಬಾ ವಿಶೇಷವಾಗಿದೆ. ನನಗೆ ಸಿಕ್ಕ ಅತ್ಯುತ್ತಮ ನೀವು. ನಿಮ್ಮೆಲ್ಲ ಕೆಲಸಕ್ಕೆ ಧನ್ಯವಾದಗಳು.. ಲವ್ ಯು ಎಂದು ಅಥರ್ ಅಮೀರ್ ಖಾನ್, ಪತ್ನಿ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಏಕಾಂತ ಬಯೋಸೋ ಭಾರತೀಯ ಪ್ರೇಮಿಗಳಿದು ನೆಚ್ಚಿನ ತಾಣಗಳು!

ಇನ್ಸ್ಟಾಗ್ರಾಮ್ ನಲ್ಲಿ ಈವರೆಗೆ 52 ಸಾವಿರಕ್ಕೂ ಹೆಚ್ಚು ಮಂದಿ ಈ ಪೋಸ್ಟ್ ಲೈಕ್ ಮಾಡಿದ್ದಾರೆ. ಸಾಕಷ್ಟು ಕಮೆಂಟ್ ಗಳನ್ನು ಮಾಡಿದ್ದಾರೆ. ಅಥರ್ ಅಮೀರ್ ಖಾನ್ ಅವರಿಗೆ ಬಳಕೆದಾರರು ಹುಟ್ಟುಹಬ್ಬದ ಶುಭಕೋರುವ ಜೊತೆಗೆ  ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ. ಪ್ರೇಮಿಗಳ ದಿನದ ಸಂದರ್ಭದಲ್ಲಿ ಅಥರ್ ಅಮೀರ್ ಖಾನ್ ಹಾಗೂ ಮಹ್ರೀನ್ ಖಾಜಿ ಮುತ್ತಿಟ್ಟ ಫೋಟೋ ವೈರಲ್ ಆಗಿತ್ತು. 

ಐಎಎಸ್ ಅಥರ್ ಅಮೀರ್ ಖಾನ್ ಕಾಶ್ಮೀರದ ಅನಂತನಾಗ್ ಮೂಲದವರು. ಅವರ ತಂದೆ ಮೊಹಮ್ಮದ್ ಶಫಿ ಖಾನ್ ಶಿಕ್ಷಕರು. ಅವರ ತಾಯಿ ಗೃಹಿಣಿ. ಅಥರ್‌ಗೆ ಇದು ಎರಡನೇ ಮದುವೆ. ಮೊದಲ ಪತ್ನಿ ಟೀನಾ ದಾಬಿಗೆ ವಿಚ್ಛೇದನ ನೀಡಿದ ನಂತ್ರ ಅಥರ್ ಖಾನ್ , ಅಕ್ಟೋಬರ್ 2022 ರಲ್ಲಿ ಮಹ್ರೀನ್ ಖಾಜಿ ಮದುವೆಯಾಗಿದ್ದರು.  

Follow Us:
Download App:
  • android
  • ios