Asianet Suvarna News Asianet Suvarna News

ನನ್ನ ಅಪ್ಪ-ಅಮ್ಮನೇ ಈ ಪ್ರಶ್ನೆ ಕೇಳಲ್ಲ, ಇನ್ನು ನಿಮ್ಮದೇನ್ರಿ? ತಮನ್ನಾ ಭಾಟಿಯಾ ಗರಂ ಆಗಿದ್ದೇಕೆ?

ವಿಜಯ್​ ವರ್ಮಾ ಜೊತೆ ಮದುವೆಯ ವಿಷಯ ಕೇಳಿದ್ದಕ್ಕೆ ಅಸಮಾಧಾನಗೊಂಡ ನಟಿ ಕೊಟ್ಟ ಉತ್ತರವೇನು ನೋಡಿ
 

Tamannaah  Gets Irritated On Being Asked About Her Marriage Plans suc
Author
First Published Sep 6, 2023, 2:02 PM IST

ತಮನ್ನಾ ಭಾಟಿಯಾ ಚಿತ್ರರಂಗದ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಒಬ್ಬರು. ಅವರು ಅನೇಕ ಕಾರಣಗಳಿಗಾಗಿ ಜನರ ಗಮನವನ್ನು ಸೆಳೆಯುತ್ತಲೇ ಇರುತ್ತಾರೆ. ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ತೆಲುಗು ಹಾಗೂ ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಜನಪ್ರಿಯರಾಗಿದ್ದಾರೆ. ತೆಲುಗಿನಲ್ಲಿ ಚಿರಂಜೀವಿ ಎದುರು ನಾಯಕಿಯಾಗಿ ನಟಿಸಿದ್ದ ಭೋಳಾ ಶಂಕರ್ ಹಿಟ್ ಆಗದಿದ್ದರೂ ತಲೈವರ್ ರಜನಿಕಾಂತ್ ಅವರ ಜೈಲರ್ ಐಟಂ ಸಾಂಗ್ ಹಿಟ್ ಬ್ಯೂಟಿಗೆ ಉತ್ತಮ ಕಿಕ್ ನೀಡುತ್ತಿದೆ.   ಲಸ್ಟ್ ಸ್ಟೋರೀಸ್ 2, ಬಾಹುಬಲಿ 2, ಜೈಲರ್, ವೀರಂ, ಎಂಟರ್‌ಟೈನ್‌ಮೆಂಟ್, ಅಯಾನ್, ಆಕ್ಷನ್, ಬದರಿನಾಥ್ ಮತ್ತು ಇನ್ನೂ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಕೆಲಸ ಮಾಡುವ ಮೂಲಕ ಮನೆ ಮಾತಾಗಿದ್ದಾರೆ ತಮನ್ನಾ. ಈಕೆ  ಮತ್ತು ನಟ ವಿಜಯ್ ವರ್ಮಾ  (Vijay Varma)  ಡೇಟಿಂಗ್ ಮಾಡುತ್ತಿರುವ ಸುದ್ದಿ ಈಗೇನೂ ಗುಟ್ಟಾಗಿ ಉಳಿದಿಲ್ಲ. ಈ ತಾರಾ ಜೋಡಿ  ಲಸ್ಟ್ ಸ್ಟೋರೀಸ್ 2 ಮೂಲಕ ತೆರೆಯ ಮೇಲೆ ಬಂದಿದೆ. ಈ ಜೋಡಿ ‘ಲಸ್ಟ್ ಸ್ಟೋರಿಸ್ 2’ (Lust Stories 2 Movie) ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಾಗಿ ನಟಿಸಿದೆ. ಅಲ್ಲಿಂದ ಇವರ ಮಧ್ಯೆ ಪ್ರೀತಿ ಮೂಡಿದೆ. ನಿನ್ನೆ ಅಂದರೆ  ಜೂನ್ 29ಕ್ಕೆ ಈ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಿದೆ. ಒಂದು ಸಿನಿಮಾದಲ್ಲಿ ನಾಲ್ಕು ಕಥೆಗಳಿದ್ದು, ಇದಕ್ಕೆ ಸಕತ್​ ಬೇಡಿಕೆಯೂ ಬಂದಿದೆ. 

ಇತ್ತೀಚೆಗೆ, ತಮನ್ನಾ ಭಾಟಿಯಾ ಚೆನ್ನೈನಲ್ಲಿ ಗಲಾಟ್ಟಾ ನಡೆಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈವೆಂಟ್‌ನಲ್ಲಿ, ನಟಿ ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಅವರ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು. ಈ ಸಮಯದಲ್ಲಿ, ಅವರ ಅಭಿಮಾನಿಯೊಬ್ಬರು ತಮನ್ನಾ ಅವರ ಗೆಳೆಯ ವಿಜಯ್ ವರ್ಮಾ ಅವರೊಂದಿಗಿನ ಮದುವೆಯ ಕುರಿತು ಕೇಳಿದರು. ಇದರಿಂದ ತಮನ್ನಾ ಗರಂ ಆದರು. ಹೋದಲ್ಲಿ, ಬಂದಲ್ಲಿ ಇದೇ ವಿಷಯದ ಕುರಿತು ಮಾತನಾಡುವುದು ಈಕೆಗೆ ಏಕೋ ಇರುಸುಮುರುಸು ಉಂಟು ಮಾಡಿದಂತೆ ತೋರಿತು.  ಈ ಪ್ರಶ್ನೆ ಎದುರಾಗುತ್ತಿದ್ದಂತೆಯೇ ನಟಿ ತಮನ್ನಾ ಸ್ವಲ್ಪ ಅಸಮಾಧಾನದಿಂದಲೇ ನನ್ನ ಅಪ್ಪ-ಅಮ್ಮನೇ ಈ ಪ್ರಶ್ನೆ ಕೇಳುವುದಿಲ್ಲ, ಇನ್ನು ನಿಮ್ಮದೇನು ಎಂದು ಪ್ರಶ್ನಿಸಿದರು. 

ನಟ ವಿಜಯ್​ ಜೊತೆ ಸೆಕ್ಸ್​ ಕುರಿತು ಹೇಳಿದ್ದ ತಮನ್ನಾಗೆ ಮದ್ವೆ ಬಗ್ಗೆ ಕೇಳಿದ್ರೆ ಹೀಗೆ ಹೇಳಿದ್ರು...

ಆದರೂ ಬಿಡದ ಪಾಪರಾಜಿಗಳು, ನಿಮಗೆ ಒಳ್ಳೆಯ ಹುಡುಗ ಸಿಕ್ಕಿದ್ದೀರಾ ಎಂದು ಕೇಳಿದರು. ಅದಕ್ಕೆ ನಟಿ,  ನನ್ನ ಕನಸಿನ ಮನುಷ್ಯನನ್ನು ತಾನು ಕಂಡುಕೊಂಡಿದ್ದೇನೆ. ತನ್ನ ಸಂಬಂಧದಲ್ಲಿ ನಾನು ಸಂತೋಷವಾಗಿದ್ದೇನೆ ಎಂದರು.  ಅಂದಹಾಗೆ ಈ ತಾರಾ ಜೋಡಿ ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದರೂ ಅದರ ಬಗ್ಗೆ ತುಟಿಕ್​ ಪಿಟಿಕ್​ ಅಂದಿರಲಿಲ್ಲ. ಆದರೆ ಕೆಲ ದಿನಗಳ ಹಿಂದೆ  ಡೇಟಿಂಗ್​  ಮಾಡುತ್ತಿರುವ ವಿಷಯವನ್ನು ಖುದ್ದು ತಮನ್ನಾ  ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರು. ತಾವು  ನಿಜವಾಗಿಯೂ ಸಂಬಂಧದಲ್ಲಿ ಇರುವುದಾಗಿ  ಖಚಿತಪಡಿಸಿರುವುದು ಬಹುಶಃ ಇದೇ ಮೊದಲಾಗಿತ್ತು.

 ಲಸ್ಟ್ ಸ್ಟೋರಿಸ್ 2’ ಸಿನಿಮಾ ಪ್ರಚಾರ ಕಾರ್ಯದ ಸಂದರ್ಭದಲ್ಲಿ  ತೀರಾ ವೈಯಕ್ತಿಕ ವಿಷಯಗಳನ್ನು (personal matter) ಈ ಜೋಡಿಗೆ ಕೇಳಲಾಗಿತ್ತು.  ‘ಲಸ್ಟ್ ಸ್ಟೋರಿಸ್ 2’  ಚಿತ್ರದಲ್ಲಿ ಈ ಜೋಡಿಯ ಕಿಸ್ಸಿಂಗ್ ಸೀನ್‌ ಬಹಳ ಸದ್ದು ಮಾಡುತ್ತಿದೆ.   ಮೊದಲು ಭೇಟಿ ಆಗಿದ್ದು ಯಾವಾಗ? ಮೊದಲ ಭೇಟಿ ವೇಳೆ ಒಬ್ಬರ ಮೇಲೆ ಒಬ್ಬರಿಗೆ ಇದ್ದ ಅಭಿಪ್ರಾಯ ಸೇರಿ ಎಲ್ಲ ವಿಚಾರಗಳಲ್ಲಿ ಇವರು ಮುಕ್ತವಾಗಿ ಮಾತನಾಡಿದ್ದರು. ಅದೇ ವೇಳೆ ತಮನ್ನಾ ಅವರು, ವಿಜಯ್ ನನ್ನ ಖುಷಿಯ ಖಜಾನೆ ಎಂದು ಕೂಡ ಹೇಳಿದ್ದರು.  ವಿಜಯ್ ವರ್ಮಾ (Vijay Varma) ಅವರು ಸೆಕ್ಸ್ ವಿಚಾರದಲ್ಲಿ ನೇರವಾಗಿ ಮಾತನಾಡಿದ್ದರು. ‘ಮೊದಲ ಡೇಟ್ ಹೇಗಿತ್ತು, ಅದರಲ್ಲಿ ಸೆಕ್ಸ್ ಇತ್ತಾ’ ಎಂದು ಪ್ರಶ್ನೆ ಮಾಡಲಾಗಿತ್ತು.  ಆಗ ಕೂಡಲೇ ತಮನ್ನಾ ‘ಬೋರಿಂಗ್ ಡೇಟ್’ ಎಂದು ಉತ್ತರ ನೀಡಿದರೆ, ಮಧ್ಯೆ ಪ್ರವೇಶಿಸಿದ  ವಿಜಯ್ ವರ್ಮಾ, ‘ಮೊದಲ ಡೇಟ್​ನಲ್ಲಿ ಯಾವುದೇ ಕಾಮ ಇರಲಿಲ್ಲ’ ಎಂದಿದ್ದರು. 

ಬೆಡ್‌ರೂಮ್‌ ಸೀನ್‌ಗಾಗಿಯೇ 1 ಕೋಟಿ ಜಾಸ್ತಿ ಸಂಭಾವನೆ ಕೇಳಿದ್ರಾ ತಮನ್ನಾ?

Follow Us:
Download App:
  • android
  • ios