Viral Video: ಬಿಸಿಲ ಧಗೆಯಲ್ಲಿ ಪೊಲೀಸರಿಗೆ ನೀರು ಕೊಟ್ಟು ಪುಣ್ಯ ಕಟ್ಕೊಂಡ ಪುಣ್ಯಾತ್ಮ
ಬಿಸಿಲ ಅಬ್ಬರ ಶುರುವಾಗಿದೆ. ಈ ಧಗೆಯಲ್ಲೇ ರಸ್ತೆ ಬಳಿ ನಿಂತು ಬೆವರು ಹರಿಸ್ತಾ ಟ್ರಾಫಿಕ್ ಪೊಲೀಸರು ಹಣ್ಣಾಗ್ತಿದ್ದಾರೆ. ಅವರ ಕೆಲಸವನ್ನು ಶ್ಲಾಘಿಸುವ ಬದಲು ಬೈದು ಹೋಗೋರೇ ಹೆಚ್ಚು. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ, ಪೊಲೀಸರಿಗೆ ಶಾಪ ಹಾಕ್ತಾ ಹೋಗುವವರ ಮಧ್ಯೆ ಈತನ ಕೆಲಸ ಗಮನ ಸೆಳೆದಿದೆ.
ಸಂಬಂಧಗಳು ಗಟ್ಟಿಯಾಗುವುದೇ ನಾವು ಸಂಕಟದಲ್ಲಿ ಇರೋರಿಗೆ ಸಹಾಯ ಮಾಡಿದಾಗ. ಅಪಾರ್ಟ್‌ಮೆಂಟ್ ಕಾಯೋ ಸೆಕ್ಯೂರಿಟಿ ಆಗಿರಬಹುದು, ಸ್ವೀಪರ್ಸ್ ಆಗಿರಬಹುದು, ಪೌರ ಕಾರ್ಮಿಕರಾಗಿರಬಹುದು. ನಮಗೆ ವೈಯಕ್ತಿವಾಗಿ ಅಲ್ಲದೇ ಹೋದರೂ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡೋ ಇಂಥವರು ಸದಾ ಸ್ಮರಣೀಯರು. ಅದೂ ಈ ಉರಿ ಬಿಸಿಲಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡೋ ಪೊಲೀಸರ ಪಾಡಂತೂ ಹೇಳ ತೀರದು. ರಣಬಿಸಿಲಿನಲ್ಲಿ ತುಟಿ ಒದ್ದೆಯಾಗುವಷ್ಟು ನೀರು ಸಿಕ್ಕಿದ್ರೂ ಸಾಕು ಎನ್ನಿಸುತ್ತಿರುತ್ತದೆ. ಟ್ರಾಫಿಕ್ ಪೊಲೀಸರಿಗೆ ಬಾಟಲ್ ನೀರು ನೀಡಿ ಪುಣ್ಯ ಕಟ್ಟಿಕೊಂಡು ಪುಣ್ಯಾತ್ಮನ ಕಾರ್ಯವೊಂದಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಸುಡು ಬಿಸಿಲಿನಲ್ಲಿ ನಿಂತು ತಮ್ಮ ಕೆಲಸ ಮಾಡುತ್ತಿರುವ ಟ್ರಾಫಿಕ್ (Traffic) ಪೊಲೀಸರಿಗೆ ಬೈಕ್ (Bike) ನಲ್ಲಿ ಬಂದ ವ್ಯಕ್ತಿಯೊಬ್ಬ ನೀರಿ (Water) ನ ಬಾಟಲಿಗಳನ್ನು ನೀಡುತ್ತಿರು ವಿಡಿಯೋ ಈಗ ಸುದ್ದಿ ಮಾಡಿದೆ. ಹೈದ್ರಾಬಾದ್ ನ ನಿಖಿಲ್ ನಾಯಕ್ ಎಂಬ ಬಳಕೆದಾರರು ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ (Instagram) ನಲ್ಲಿ ಹಂಚಿಕೊಂಡಿದ್ದಾರೆ. ಫಲಾಫಲ ಅಪೇಕ್ಷೆ ಮಾಡದೆ ಸಹಾಯ ಮಾಡು ಎಂದು ಶ್ರೀಕೃಷ್ಣ ಹೇಳಿದ ಮಾತನ್ನು ಈತ ಪಾಲಿಸಿದಂತಿದೆ. ಈಗಿನ ದಿನಗಳಲ್ಲಿ ಸಮಾಜ ಸೇವೆ ಮಾಡುವವರ ಸಂಖ್ಯೆ ಬಹಳ ಕಡಿಮೆ. ಜನರು ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ಬಯಸ್ತಾರೆ. ಆದ್ರೆ ಈತ ಸದಾ ಜನರಿಗಾಗಿ ದುಡಿಯುವ, ಬಿಸಿಲು, ಮಳೆ ಲೆಕ್ಕಿಸದೆ ಜನರ ಸೇವೆಗೆ ಸಿದ್ಧರಿರುವವರ ಸಹಾಯಕ್ಕೆ ನಿಂತಿದ್ದಾನೆ. ನೆರವು ಎಂಬ ಮಾತು ಬಂದಾಗ ಹಣ, ಬಂಗಾರ ಮಾತ್ರ ಮುಖ್ಯವಾಗೋದಿಲ್ಲ. ಬಾಯಾರಿದವರಿಗೆ ನೀರು ನೀಡೋದು ಕೂಡ ಪುಣ್ಯದ ಕೆಲಸವೇ. ಇದನ್ನು ಈತ ಸಾಭೀತು ಮಾಡಿದ್ದಾನೆ.
Viral Video : ಓಡ್ತಿದ್ದ ಟ್ರೈನಿನಲ್ಲಿ ಡಾನ್ಸ್, ಯುವತಿಯ ಹುಚ್ಚಾಟ ಟ್ರೋಲ್
ವೈರಲ್ ವಿಡಿಯೋದಲ್ಲಿ ಏನಿದೆ? : ಮೊಟೊಬಾಯ್ ನಿಕ್ಕಿ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ನಿಖಿಲ್ ನಾಯಕ್, ಬೈಕ್ ಓಡಿಸ್ತಿದ್ದಾರೆ. ಅವರು ದಾರಿ ಮಧ್ಯೆ ಕಾಣಿಸಿಕೊಳ್ಳುವ ಟ್ರಾಫಿಕ್ ಪೊಲೀಸರಿಗೆ ನೀರಿನ ಬಾಟಲಿಯನ್ನು ನೀಡ್ತಾ ಹೋಗ್ತಿದ್ದಾರೆ. ವಿಡಿಯೋದಲ್ಲಿ ನಾಲ್ಕೈದು ಟ್ರಾಫಿಕ್ ಪೊಲೀಸರಿಗೆ ಸೀಲ್ಡ್ ನೀರಿನ ಬಾಟಲಿಯನ್ನು ನೀಡೋದನ್ನು ನೀವು ನೋಡ್ಬಹುದು. ನಿಖಿಲ್ ರಿಂದ ನೀರಿನ ಬಾಟಲಿಯನ್ನು ಪಡೆಯುವ ಟ್ರಾಫಿಕ್ ಪೊಲೀಸರು ನಕ್ಕು, ಧನ್ಯವಾದ ಹೇಳ್ತಿದ್ದಾರೆ.
ಇನ್ಸ್ಟಾದಲ್ಲಿ ಸಿಕ್ಕಿದೆ ಇಷ್ಟೊಂದು ಪ್ರತಿಕ್ರಿಯೆ : ಇನ್ಸ್ಟಾದಲ್ಲಿ ಈ ವಿಡಿಯೋ ಪೋಸ್ಟ್ ಆಗ್ತಿದ್ದಂತೆ ವೈರಲ್ ಆಗಿದೆ. ಈವರೆಗೆ ಲಕ್ಷಾಂತರ ಬಾರಿ ಈ ವಿಡಿಯೋವನ್ನು ವೀಕ್ಷಣೆ ಮಾಡಲಾಗಿದೆ. 537,000 ಕ್ಕೂ ಹೆಚ್ಚು ಲೈಕ್ಸ್ ಈ ವಿಡಿಯೋಕ್ಕೆ ಸಿಕ್ಕಿದೆ. ಸಾವಿರಾರು ಮಂದಿ ಈ ವಿಡಿಯೋ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಬಟ್ಟೆ ನನ್ನ ಆಯ್ಕೆ ಅಂತ ಹೇಳಿ ಬ್ರಾ, ಮಿನಿ ಸ್ಕರ್ಟ್ ಹಾಕ್ಕೊಂಡು ಮೆಟ್ರೋ ಹತ್ತೋದು ಸರೀನಾ?
ಇನ್ಸ್ಟಾಗ್ರಾಮ್ ಬಳಕೆದಾರರು ಆ ವ್ಯಕ್ತಿಯ ಕೆಲಸವನ್ನು ಮೆಚ್ಚಿಕೊಂಡು ಹೊಗಳಿದ್ದಾರೆ. ನಿಖಿಲ್ ಕೆಲಸವನ್ನುಶ್ಲಾಘಿಸುತ್ತಿದ್ದಾರೆ. ಈ ವಿಡಿಯೋ ಮಾನವೀಯತೆಯ ಉಜ್ವಲ ಉದಾಹರಣೆಯಾಗಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಈತ ಒಂಟಿಯಾಗಿ ಮಾಡ್ತಿರುವ ಕೆಲಸಕ್ಕೆ ಗೌರವ ಸಲ್ಲಿಸಬೇಕೆಂದು ಕೆಲವರು ಸಲಹೆ ನೀಡಿದ್ದಾರೆ. ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ, ಸಹೋದರ ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ನಿಮ್ಮ ಸಹಾಯಕ್ಕೆ ಪ್ರತಿಯಾಗಿ ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂಬ ವ್ಯಕ್ತಿಗೂ ನೀವು ಸಹಾಯ ಮಾಡಿ ಎಂದು ಇನ್ನೊಬ್ಬರು ಬರೆದಿದ್ದಾರೆ. ತುಂಬಾ ಧನ್ಯವಾದ ಹೇಳಲು ಬಯಸುತ್ತೇನೆ ಗೆಳೆಯ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ರೆ ನಿಮ್ಮ ಕೆಲಸಕ್ಕೆ ನನ್ನ ಮೆಚ್ಚುಗೆಯಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಮಾಜ ಸೇವೆಯ ಕೆಲ ವಿಡಿಯೋ ವೈರಲ್ ಆಗ್ತಿರುತ್ತದೆ. ಮುಂಬೈ ಆಟೋ ಚಾಲಕ, ಆಟೋದಲ್ಲಿ ಉಚಿತ ನೀರು, ಬಿಸ್ಕತ್ ನೀಡ್ತಿದ್ದ ವಿಡಿಯೋ ಕೂಡ ಗಮನ ಸೆಳೆದಿತ್ತು.