ಸೀಮಂತ ಶಾಸ್ತ್ರದಲ್ಲಿ ಪತಿಯೊಬ್ಬ ಪತ್ನಿಗೆ ಅನಿರೀಕ್ಷಿತ ಉಡುಗೊರೆಯನ್ನು ನೀಡಿದ್ದಾನೆ. ಗರ್ಭದಲ್ಲಿರುವ ಮಗು ತನ್ನದಲ್ಲ ಎಂಬ ದಾಖಲೆ ಬಹಿರಂಗಪಡಿಸಿ ಎಲ್ಲರನ್ನೂ ಬೆಚ್ಚಿಬೀಳಿಸಿದ್ದಾನೆ. ಈ ಘಟನೆಯಿಂದ ಪತ್ನಿ ಮತ್ತು ಆಕೆಯ ಕುಟುಂಬಸ್ಥರು ಶಾಕ್​ ಆಗಿರುವ ಘಟನೆ ನಡೆದಿದೆ. 

ಬಹುತೇಕ ಎಲ್ಲ ಮಹಿಳೆಯರಿಗೂ ಅಮ್ಮನಾಗುವ ಬಯಕೆ ಇದ್ದೇ ಇರುತ್ತದೆ. ಅಮ್ಮನಾಗುವ ಖುಷಿಯೇ ಬೇರೆ. 9 ತಿಂಗಳು ಮಗುವನ್ನು ಹೊತ್ತು ಒಂದು ಜೀವವನ್ನು ಭೂಮಿಗೆ ತರುವ ಸಂತೋಷವೇ ಬೇರೆ. ಇದೇ ಕಾರಣಕ್ಕೆ, ಅಮ್ಮನಾಗುವ ಮಹಿಳೆಗೆ ಸೀಮಂತ ಶಾಸ್ತ್ರ ಮಾಡುವ ಪದ್ಧತಿ ಹಿಂದೂಗಳಲ್ಲಿ ಮಾತ್ರವಲ್ಲದೇ ಬಹುತೇಕ ಕಡೆಗಳಲ್ಲಿ ಇದೆ. ಈ ಸಮಯದಲ್ಲಿ ಆಕೆಗೆ ಇಷ್ಟವಾಗುವ ತಿನಿಸು, ಉಡುಗೊರೆಗಳನ್ನು ನೀಡಲಾಗುತ್ತದೆ. ಈ ಸಮಯದಲ್ಲಿ ಪತಿಯಾದವ ಪತ್ನಿಗೆ ವಿಶೇಷ ಉಡುಗೊರೆಯನ್ನೂ ಕೊಡುವುದು ಉಂಟು. ಕೆಲವರು ಪತ್ನಿಗೆ ಖುಷಿಪಡಿಸಲು ಸರ್​ಪ್ರೈಸ್​ ಗಿಫ್ಟ್​ ಕೊಡುತ್ತಾರೆ. ಇದನ್ನು ನೋಡಿ ಪತ್ನಿ, ಖುಷಿಯಿಂದ ತೇಲಾಡುವುದನ್ನು ನೋಡಿರಬಹುದು.

ಆದರೆ ಇಲ್ಲೊಂದು ಘಟನೆಯಲ್ಲಿ ಆಗಿದ್ದೇ ಬೇರೆ. ಪತ್ನಿಯ ಮನೆಯವರು ಸೀಮಂತ ಶಾಸ್ತ್ರಕ್ಕೆ ಎಲ್ಲಾ ರೆಡಿ ಮಾಡಿಕೊಂಡಿದ್ದಾರೆ. ಹಲವಾರು ಅತಿಥಿಗಳು ಆಗಮಿಸಿದ್ದು, ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ. ಮಹಿಳೆ ಮತ್ತು ಆಕೆಯ ಅಪ್ಪ ಅಕ್ಕ-ಪಕ್ಕ ಕೂತಿದ್ದಾರೆ. ಮೊದಲಿಗೆ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅದಾದ ಬಳಿಕ ಪತಿ ತಾನು ಸರ್​ಪ್ರೈಸ್​ ನೀಡುವುದಾಗಿ ಹೇಳಿದ್ದಾನೆ. ಇದನ್ನು ಕೇಳಿ ಪತ್ನಿ ಆಕೆಯ ಅಪ್ಪ ಸೇರಿದಂತೆ ಅಲ್ಲಿದ್ದವರೆಲ್ಲರೂ ಉತ್ಸುಕರಾಗಿದ್ದಾರೆ. ಅದೇನೆಂದು ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ನಟಿ ಸಮಂತಾಗೂ ಈ ನಿರ್ದೇಶಕನೇ ಬೇಕು, ಪತ್ನಿಗೂ ಪತಿಯೇ ಬೇಕು: ಏನಾಗ್ತಿದೆ ಇಲ್ಲಿ?

ಆದರೆ ಈ ಪತಿ ಮಾತ್ರ ಯಾರೂ ಊಹಿಸದ ಸರ್​ಪ್ರೈಸ್ ಕೊಟ್ಟಿದ್ದಾನೆ! ಅದೇನೆಂದರೆ, ಪತ್ನಿಯ ಗರ್ಭದಲ್ಲಿ ಇರುವ ಮಗು ತನ್ನದಲ್ಲ ಎನ್ನುವ ದಾಖಲೆ ಬಹಿರಂಗಗೊಳಿಸಿದ್ದಾನೆ! ತನ್ನ ಪತ್ನಿ ತನಗೆ ಮೋಸ ಮಾಡಿ ಬೇರೊಬ್ಬರ ಮಗುವಾಗುತ್ತಿರುವುದಾಗಿ ಅದರಲ್ಲಿ ತೋರಿಸಿದ್ದಾನೆ. ಇದರಿಂದ ಒಂದು ಕ್ಷಣ ಎಲ್ಲರೂ ಕಕ್ಕಾಬಿಕ್ಕಿಯಾಗಿದ್ದಾರೆ. ಅಲ್ಲಿಯವರೆಗೆ ಖುಷಿಯಿಂದ ತೇಲಾಡುತ್ತಿದ್ದ ಮಹಿಳೆ ಮತ್ತು ಆಕೆಯ ಅಪ್ಪನಿಗೆ ಒಂದು ಕ್ಷಣ ಕಣ್ಣಿಗೆ ಕತ್ತಲು ಕವಿದಂತೆ ಆಗಿದೆ. ಪತ್ನಿಗೆ ತನ್ನ ಕಳ್ಳತನ ಎಲ್ಲರ ಎದುರು, ಹೀಗೆ ಬಹಿರಂಗವಾಗಿ ತಿಳಿಯಿತು ಎಂದು ಶಾಕ್​ ಆಗಿದ್ದರೆ, ತನ್ನ ಮಗಳು ಹೀಗೆ ಮಾಡಿದಳಾ, ಅದು ಸಂಬಂಧಿಕರ ಎದುರು ಹೀಗೆ ರಿವೀಲ್​ ಆಯಿತಲ್ಲಾ ಎನ್ನುವ ಆಘಾತದಲ್ಲಿ ಅಪ್ಪ ಇರುವುದನ್ನು ನೋಡಬಹುದು. ಇದನ್ನು ನಂಬುವುದಿಲ್ಲ ಎಂದೇ ವಕೀಲರನ್ನು ಕರೆತಂದು ದಾಖಲೆಯನ್ನು ತೋರಿಸಿದ್ದಾನೆ ಪತಿರಾಯ!

ಬಳಿಕ ಮಹಿಳೆ ಪತಿಯ ಜೊತೆ ಜೋರಾಗಿ ಜಗಳ ಮಾಡುವುದನ್ನು, ಅಲ್ಲಿ ಇದ್ದವರೆಲ್ಲಾ ಗಲಾಟೆ ಮಾಡುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಪತಿ ಕೂಡ ತನ್ನ ಪತ್ನಿ ತನಗೆ ಹೇಗೆ ವಂಚನೆ ಮಾಡಿದಳು, ಅದನ್ನು ಎಲ್ಲರ ಎದುರು ಬಹಿರಂಗಪಡಿಸಲು ತಾನು ಹೇಗೆ ಕಾಯುತ್ತಿದ್ದೆ ಎನ್ನುವುದಾಗಿ ತಿಳಿಸಿದ್ದಾನೆ! 

ಪತಿಯ ದೇಹ ತುಂ*ಡರಿಸಿ ಡ್ರಮ್​ನಲ್ಲಿಟ್ಟು ಲವರ್​ ಜೊತೆ ಹುಟ್ಟುಹಬ್ಬ: ವೈರಲ್​ ಆಯ್ತು ವಿಡಿಯೋ!

View post on Instagram