ಸಮಂತಾ, ವಿವಾಹಿತ ನಿರ್ದೇಶಕ ರಾಜ್ ನಿಡಿಮೋರು ಜೊತೆ ಸಂಬಂಧದಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ತಿರುಪತಿ ಭೇಟಿ, ವಿಮಾನದಲ್ಲಿ ಒಟ್ಟಿಗೆ ಕಾಣಿಸಿಕೊಂಡ ಚಿತ್ರಗಳು ಇದಕ್ಕೆ ಸಾಕ್ಷಿ. ರಾಜ್ ಪತ್ನಿ ಡಿವೋರ್ಸ್ ನೀಡಿಲ್ಲದಿದ್ದರೂ, ಸಮಂತಾ ಮದುವೆಯಾಗುವ ಯೋಚನೆಯಿಲ್ಲ ಎಂದಿದ್ದಾರೆ. ಇಬ್ಬರೂ ಹಲವು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ರಾಜ್ ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ.
ಮದುವೆಯಾಗಿರುವವರ ಜೊತೆ ಮಹಿಳೆಯರು ಸಂಬಂಧ ಬೆಳೆಸುವುದು, ಇಲ್ಲವೇ ಪ್ರಿಯಕರನ ಜೊತೆಗೂಡಿ ಪತಿಯನ್ನೇ ಮುಗಿಸುವುದು... ಯಾಕೋ ಇತ್ತೀಚಿಗೆ ಇಂಥ ಸುದ್ದಿಗಳೇ ಹೆಚ್ಚಾಗಿ ಹೋಗಿವೆ. ಅದರಲ್ಲಿಯೂ ಸೆಲೆಬ್ರಿಟಿಗಳ ಲೈಫ್ ಅಂತೂ ಬಿಡಿ. ಅಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಇದೆ ಸ್ಥಿತಿ. ಇನ್ನೊಬ್ಬರ ಮನೆಯನ್ನು ಹಾಳು ಮಾಡಿ, ಶ್ರೀಮಂತರ ಜೊತೆ ಸಂಬಂಧ ಬೆಳೆಸಿಕೊಳ್ಳುವುದು ಬಾಲಿವುಡ್ನಲ್ಲಂತೂ ಬಹಳ ಹಿಂದಿನಿಂದಲೂ ನಡೆದು ಬಂದಿದೆ. ಇದೀಗ ಅದೇ ದಾರಿ ಹಿಡಿದ್ರಾ ನಟಿ ಸಮಂತಾ ರುತ್ ಪ್ರಭು? ಹಲವಾರು ವರ್ಷಗಳ ಸಂಬಂಧದ ಬಳಿಕ ನಟ ನಾಗ ಚೈತನ್ಯರನ್ನು ಮದ್ವೆಯಾಗಿದ್ದ ಸಮಂತಾ ಕೊನೆಗೆ ಡಿವೋರ್ಸ್ ಪಡೆದುಕೊಂಡರು. ಇವರಿಬ್ಬರ ಮಧ್ಯೆ ಅದೇನಾಗಿತ್ತೋ ಗೊತ್ತಿಲ್ಲ. ಆದರೆ ಬೇರೆಯಾದ ಮೇಲೆ ಪರಸ್ಪರ ಟಾಂಟ್ ಕೊಟ್ಟುಕೊಂಡೇ ತಿರುಗಿದರು.
ಇದಾದ ಬಳಿಕ, ನಾಗ ಚೈತನ್ಯ ಶೋಭಿತಾ ಧೂಳಿಪಾಲ ಅವರನ್ನು ಮದುವೆಯಾಗಿ ಲೈಫ್ ಸದ್ಯದ ಮಟ್ಟಿಗೆ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಇದೀಗ ಸಮಂತಾರ ನಡೆ ಮಾತ್ರ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣ ಏನೆಂದರೆ, ಸಮಂತಾ ನಿರ್ದೇಶಕ ರಾಜ್ ನಿಡಿಮೋರು ಜೊತೆ ಸಂಬಂಧದಲ್ಲಿ ಇರುವುದು ಸ್ಪಷ್ಟವಾಗಿದೆ. ಇತ್ತೀಚೆಗಷ್ಟೇ ಇಬ್ಬರೂ ತಿರುಪತಿ ದೇವಸ್ಥಾನಕ್ಕೆ ಇಬ್ಬರು ಒಟ್ಟಾಗಿ ಭೇಟಿ ನೀಡಿದ್ದರು. ತಮ್ಮದೇ ನಿರ್ಮಾಣ ಸಂಸ್ಥೆಯಾದ ಟ್ರಾಲಾಲಾ ಮೂವಿಂಗ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ʻಸುಭಮ್ʼ ಚಿತ್ರವನ್ನು ರಿಲೀಸ್ ಮಾಡಿದ್ದ ನಟಿ, ರಾಜ್ ನಿಡಿಮೋರು ಜೊತೆಗೆ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರು ವಿಮಾನದಲ್ಲಿ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ರಾಜ್ ತೋಳಿನಲ್ಲಿ ತಲೆಯಿಟ್ಟು ಮಲಗಿ ಪೋಸ್ ಕೊಟ್ಟು ತಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸಿದ್ದಾರೆ.
ಮುಟ್ಟಿನ ಬಗ್ಗೆ ಟಾಲಿವುಡ್ ಬೆಡಗಿ ಸಮಂತಾ ಓಪನ್ ಮಾತು: ನಟಿ ಹೇಳಿದ್ದೇನು?
ಇವರಿಬ್ಬರೂ ಸಂಬಂಧದಲ್ಲಿಯೇ ಇರಲಿ, ಮದುವೆಯಾಗಲೀ ಅದು ವಿಷಯವಾಗುತ್ತಿರಲಿಲ್ಲ. ಆದರೆ ರಾಜ್ ಅವರಿಗೆ ಇದಾಗಲೇ ಮದುವೆಯಾಗಿದ್ದು, ಒಬ್ಬಳು ಮಗಳು ಕೂಡ ಇದ್ದಾಳೆ ಎನ್ನಲಾಗಿದೆ. ಅವರ ಪತ್ನಿಗೆ ಡಿವೋರ್ಸ್ ಕೂಡ ಕೊಟ್ಟಿಲ್ಲ. ಆದರೆ ಇದರ ನಡುವೆಯೇ ಹೀಗ ಸಮಂತಾ ಜೊತೆ ಖುಲ್ಲಂ ಖುಲ್ಲಾ ತಿರುಗಾಡುತ್ತಿದ್ದಾರೆ. ಇದಾಗಲೇ ಸಮಂತಾ ತಾವು ಮದುವೆಯಾಗುವುದಿಲ್ಲ ಎನ್ನುವ ಹೇಳಿಕೆ ಕೂಡ ನೀಡಿದ್ದು, ಲಿವ್ ಇನ್ನಲ್ಲಿ ಇರುವ ಯೋಚನೆ ಮಾಡಿದಂತಿದೆ. ಅಷ್ಟಕ್ಕೂ, ಸಮಂತಾ ಮತ್ತು ರಾಜ್ ನಿಡಿಮೋರು ಹಲವು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ʻದಿ ಫ್ಯಾಮಿಲಿ ಮ್ಯಾನ್ ಸೀಸನ್ 2’ ಮತ್ತು ʻಸಿಟಾಡೆಲ್ʼನಲ್ಲಿ ಇವರು ಕೆಲಸ ಮಾಡಿದ್ದಾರೆ. ಕಳೆದೊಂದು ವರ್ಷದಿಂದ ಇವರ ಬಗ್ಗೆ ಗಾಳಿಸುದ್ದಿ ಹರಡಿತ್ತು. ಬಳಿಕ ತಿರುಪತಿಗೂ ಭೇಟಿ ಕೊಟ್ಟಿದ್ದರು, ಇದೀಗ ತಮ್ಮ ಸಂಬಂಧದ ಬಗ್ಗೆ ಇನ್ನಷ್ಟು ಪುಷ್ಟಿ ನೀಡಿದ್ದಾರೆ.
ಇನ್ನೊಂದು ಕುತೂಹಲದ ವಿಷಯ ಏನೆಂದರೆ, ಇವರಿಬ್ಬರ ಸಂಬಂಧದ ಬಗ್ಗೆ ರಿವೀಲ್ ಆಗುತ್ತಲೇ, ರಾಜ್ ಪತ್ನಿ ಇನ್ಸ್ಟಾಗ್ರಾಮ್ನಲ್ಲಿ ನೋಟ್ ಶೇರ್ ಮಾಡಿದ್ದಾರೆ. ಅದರಲ್ಲಿ ಅವರು, ನಾನು ಹಿಡಿಯಲು ಇಷ್ಟಪಡುವ ಕೈ ಇದೆ, ನಾನು ನೋಡಲು ಇಷ್ಟಪಡುವ ಮುಖವಿದೆ, ನಾನು ಕೇಳಲು ಇಷ್ಟಪಡುವ ಧ್ವನಿ ಇದೆ, ಅದು ನನಗೆ ಜಗತ್ತನ್ನು ಅರ್ಥೈಸುತ್ತದೆ... ನನ್ನ ಜೀವನದ ಕೇಂದ್ರದಲ್ಲಿ, ಎಲ್ಲದರ ಹೃದಯಭಾಗದಲ್ಲಿ, ನೀವು ಮತ್ತು ನಾವು ಹಂಚಿಕೊಳ್ಳುವ ಪ್ರೀತಿ ಇದೆ. ನಾನು ನನ್ನ ಆಶೀರ್ವಾದಗಳನ್ನು ಎಣಿಸುವಾಗ, ನಾನು ಯಾವಾಗಲೂ ನಿಮ್ಮ ಬಗ್ಗೆ ಯೋಚಿಸುತ್ತೇನೆ ಎಂದಿದ್ದಾರೆ.
ಬಾಯ್‌ಫ್ರೆಂಡ್, ಗಂಡನಿಗೆ ದುಬಾರಿ ಗಿಫ್ಟ್ ಕೊಡೋ ಮೊದ್ಲು... ಯುವತಿಯರಿಗೆ ಸಮಂತಾ ನೀಡಿದ ಎಚ್ಚರಿಕೆ ಏನು?


