Asianet Suvarna News Asianet Suvarna News

Complicated Relationship : ಪತಿಯಿಂದ ಗರ್ಭಿಣಿಯರಾಗೋ ಗರ್ಲ್‌ಫ್ರೆಂಡ್ಸ್, ಪತ್ನಿ ಫುಲ್ ಹ್ಯಾಪಿ!

ಪತಿ-ಪತ್ನಿ ಸಂಬಂಧ ಪವಿತ್ರವಾದದ್ದು. ಇಬ್ಬರ ಮಧ್ಯೆ ಹೊಂದಾಣಿಕೆಯಿದ್ದಾಗ ಜೀವನ ಸಂತೋಷವಾಗಿರುತ್ತದೆ. ಪರಸ್ಪರ ಗೌರವ,ನಂಬಿಕೆ,ವಿಶ್ವಾಸವಿದ್ದಾಗ ಹಾಗೂ ಒಬ್ಬರ ಸಂತೋಷಕ್ಕೆ ಇನ್ನೊಬ್ಬರು ಮಹತ್ವ ನೀಡಿದಾಗ ಜೀವನ ಸುಗಮವಾಗಿ ಸಾಗುತ್ತದೆ. ಇದಕ್ಕೆ ಈ ಮಾಡೆಲ್ ಉತ್ತಮ ನಿದರ್ಶನ. 
 

Husband has Many Pregnant Girlfriends and it made wife happy
Author
Bangalore, First Published Jan 19, 2022, 9:43 AM IST

ಪತಿ (Husband)ಯನ್ನು ಹಂಚಿಕೊಳ್ಳಲು ಯಾವುದೇ ಪತ್ನಿ (Wife )ಇಷ್ಟಪಡುವುದಿಲ್ಲ. ಅದು ಯಾವುದೇ ಸಂದರ್ಭವಿರಲಿ. ಪತಿ ತನ್ನವನು ಮಾತ್ರ ಆಗಿರಬೇಕೆಂದು ಪತ್ನಿ ಬಯಸ್ತಾಳೆ. ಪತಿ, ಸಹೊದ್ಯೋಗಿಗಳ ಜೊತೆ ಮಾತನಾಡಿದ್ರೂ, ಸ್ನೇಹಿತ (Friend)ರ ಜೊತೆ ಮಾತನಾಡಿದ್ರೂ ಬೇಸರಪಟ್ಟುಕೊಳ್ಳುವ ಪತ್ನಿಯರಿದ್ದಾರೆ. ಪತಿಯಾದವನು ತನ್ನನ್ನು ನೋಡ್ಬೇಕು, ತನ್ನನ್ನೇ ಪ್ರೀತಿ(Love)ಸಬೇಕು, ತನ್ನ ಸುತ್ತ ಸುತ್ತುತ್ತಿರಬೇಕು ಎಂಬುದು ಎಲ್ಲ ಮಹಿಳೆಯರ ಆಸೆ. ಗಂಡನನ್ನು ಇನ್ನೊಬ್ಬಳ ಜೊತೆ ಹಂಚಿಕೊಳ್ಳುವ ಕಲ್ಪನೆಯನ್ನೂ ಆಕೆ ಮಾಡಲಾರಳು. ಅಪ್ಪಿತಪ್ಪಿ ಕನಸಿ (Dream)ನಲ್ಲಿ ಇಂಥ ವಿಷ್ಯ ಕಂಡ್ರೂ ಬೆವರು(Sweat)ವ ಪತ್ನಿಯರಿದ್ದಾರೆ.

ಇನ್ನೊಬ್ಬಳ ಜೊತೆ ಪತಿ ಕೋಣೆ (Room) ಸೇರುವುದನ್ನು ಧಾರಾವಾಹಿ (Serial), ಸಿನಿಮಾ (Cinema)ಗಳಲ್ಲಿ ಮಾತ್ರ ನೋಡಲು ಸಾಧ್ಯ. ಎಂದಿಗೂ ಪತ್ನಿ, ಪತಿಯನ್ನು ಇನ್ನೊಬ್ಬಳ ಜೊತೆ ಕಳುಹಿಸುವುದಿಲ್ಲ. ಆದ್ರೆ ಜಗತ್ತಿನಲ್ಲಿ ಕೆಲ ಮಹಿಳೆಯರು ಭಿನ್ನವಾಗಿದ್ದಾರೆ. ಅವರ ಮುಕ್ತ (Free)ವಾದ ಆಲೋಚನೆ (Thinking) ಅಚ್ಚರಿಗೆ ಕಾರಣವಾಗುತ್ತದೆ. ಹೀಗೂ ಉಂಟಾ ಎಂಬ ಪ್ರಶ್ನೆ (question) ಮೂಡುವಂತೆ ಮಾಡುತ್ತದೆ. ಮಾಡೆಲ್ ಒಬ್ಬಳು ಈಗ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ. ಮಾಡೆಲ್ (Model )ತನ್ನ ಗಂಡನನ್ನು ಒಬ್ಬರಲ್ಲ ಅನೇಕ ಮಹಿಳೆಯರ ಜೊತೆ ಹಂಚಿಕೊಂಡಿದ್ದಾಳೆ. ಪತಿ ಜೊತೆ ನಿಂತಿರುವ ಈಕೆ ಈ ವಿಷ್ಯವನ್ನು ಎಲ್ಲರ ಮುಂದೆ ಹೆಮ್ಮೆಯಿಂದ ಹೇಳಿಕೊಂಡಿದ್ದಾಳೆ. ಬರೀ ಹಂಚಿಕೊಂಡಿದ್ದು ಮಾತ್ರವಲ್ಲ, ಪತಿಯಿಂದ ಅನೇಕ ಮಹಿಳೆಯರು ಗರ್ಭಧರಿಸಿದ್ದಾರೆ ಎನ್ನುತ್ತಾಳೆ ಈ ಮಾಡೆಲ್.  

ಟಿಕ್ ಟಾಕ್ ವಿಡಿಯೋ ವೈರಲ್ (Tik Tok Video Viral ):
ಸಾಮಾಜಿಕ ಜಾಲತಾಣದಲ್ಲಿ @CliqueBaitt ಎಂದು ಜನಪ್ರಿಯವಾಗಿರುವ ಮಹಿಳಾ ಮಾಡೆಲ್ ತನ್ನ ಕಥೆ (story)ಯನ್ನು ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿದ್ದಾಳೆ. ಮಾಡೆಲ್ ಗೆ ಮದುವೆ(Marriage)ಯಾಗಿ 12 ವರ್ಷ ಕಳೆದಿದೆಯಂತೆ. ಆದ್ರೂ ಆಕೆಗೆ ಇನ್ನೂ ಮಕ್ಕಳಾ(Children)ಗಿಲ್ಲವಂತೆ. ಈ ನೋವು ಆಕೆಯ ಮನಸ್ಸಿನಲ್ಲಿದೆ. ಆದ್ರೆ ಮಗುವಾಗಿಲ್ಲ ಎಂಬ ಸಂಗತಿ ನಮ್ಮ ದಾಂಪತ್ಯ ಹಾಳು ಮಾಡಿಲ್ಲ ಎನ್ನುತ್ತಾಳೆ ಮಾಡೆಲ್. ಆಕೆ ಹಾಗೂ ಆಕೆ ಪತಿ ಸಂತೋಷ(Happiness)ವಾಗಿದ್ದಾರಂತೆ.  

Break up ಗೆ ಕಾರಣವಾಗೋ ತಪ್ಪುಗಳಿವು!

ಪತಿಗಿದ್ದಾರೆ ಅನೇಕ ಗರ್ಲ್‌ಫ್ರೆಂಡ್ಸ್ (Girlfriends) : ದಂಪತಿ ಖುಷಿಯಾಗಿರಲು ಪತಿಯ ಗರ್ಲ್‌ಫ್ರೆಂಡ್ಸ್ ಕಾರಣವಂತೆ. ಯಸ್, ಗಂಡನಿಗೆ ಗರ್ಲ್‌ಫ್ರೆಂಡ್ಸ್ ಮಾಡಿಕೊಳ್ಳುವ ಚಟವಿದೆಯಂತೆ. ಇದಕ್ಕೆ ಮಾಡೆಲ್ ಎಂದೂ ಅಡ್ಡಿಪಡಿಸಿಲ್ಲವಂತೆ. ಅನೇಕ ಗೆಳತಿಯರು ಅವನ ಮನೆಗೆ ಆಗಾಗ್ಗೆ ಬರುತ್ತಾರೆ. ಅವಳು ಅವರೆಲ್ಲರಿಗೂ ಊಟವನ್ನು ಸಿದ್ಧಪಡಿಸುತ್ತಾಳಂತೆ. ನಂತ್ರ ಒಟ್ಟಾಗಿ ರಾತ್ರಿ(Night)ಯ ಆನಂದ ಪಡೆಯತ್ತೇವೆ ಎಂದು ಆಕೆ ಹೇಳ್ತಾಳೆ. ಪತಿಯ ಗೆಳತಿಯರೆಲ್ಲರೂ ನನ್ನೊಂದಿಗೆ ಹೊಂದಿಕೊಂಡಿದ್ದಾರೆ ಎನ್ನುತ್ತಾಳೆ ಆಕೆ. ಈ ಕಾರಣಕ್ಕೆ ಪತಿ-ಪತ್ನಿ ಮಧ್ಯೆ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆಯಂತೆ.

ಗರ್ಭಿಣಿ ಸ್ನೇಹಿತೆಯರನ್ನು ನೋಡಿ ಸಂತೋಷ : ಮೊದಲೇ ಹೇಳಿದಂತೆ ಮಾಡೆಲ್ ಇನ್ನೂ ಅಮ್ಮನಾಗಿಲ್ಲ. ಆಕೆಯ ಪತಿ ಅನೇಕ ಮಹಿಳೆಯರ ಜೊತೆ ಸಂಬಂಧ ಬೆಳೆಸಿದ್ದಾನೆ. ಅದ್ರಲ್ಲಿ ಕೆಲವರು ಗರ್ಭ ಧರಿಸಿದ್ದಾರೆ. ಪತಿಯ ಗೆಳತಿಯರು ಗರ್ಭ ಧರಿಸಿದ ವಿಷ್ಯ ಕೇಳಿದ್ರೆ ಮಾಡೆಲ್ ಮುಖದಲ್ಲಿ ನಗು ಮೂಡುತ್ತದೆಯಂತೆ. ಮನಸ್ಸು ಸಂತೋಷಗೊಳ್ಳುತ್ತದೆಯಂತೆ. ಈ ಮೂಲಕ ನಾನು ನೆಮ್ಮದಿ ಕಂಡುಕೊಂಡಿದ್ದೇನೆ ಎಂದು ಮಾಡೆಲ್ ಹೇಳಿದ್ದಾಳೆ.

New Dad: ಮೊದಲ ಬಾರಿ ತಂದೆಯಾಗ್ತಿದ್ದರೆ ನಿಮ್ಮ ತಯಾರಿ ಹೀಗಿರಲಿ

ಮಾಡೆಲ್ ವಿಡಿಯೋಕ್ಕೆ ಬಂದಿದೆ ಸಾಕಷ್ಟು ಕಮೆಂಟ್ಸ್ (Comments) :  ಮಾಡೆಲ್‌ ಈ ವಿಡಿಯೋಕ್ಕೆ ಜನರಿಂದ ಭಿನ್ನ ಪ್ರತಿಕ್ರಿಯೆಗಳು ಬರ್ತಿವೆ. ಮಹಿಳೆಯೊಬ್ಬಳು ತನ್ನ ದುಃಖವನ್ನು ಹೇಳಿದ್ದಾಳೆ. ತನ್ನ ಪತಿ ಕೂಡ ಬೇಸರಗೊಂಡಿದ್ದಾನೆ. ನನ್ನ ಕಾಟಕ್ಕೆ ಸುಸ್ತಾಗಿದ್ದಾನೆ. ಆತನಿಗಾಗಿ ನಾನು ಗೆಳತಿಯನ್ನು ಹುಡುಕಬೇಕಿದೆ. ಹೊಸ ಗೆಳತಿ ಜೊತೆ ಪತಿ ಸಂತೋಷವಾಗಿರಬಹುದು ಎಂದಿದ್ದಾಳೆ. ಇನ್ನೊಬ್ಬಳು, ತನ್ನ ಪತಿಯನ್ನು ಇನ್ನೊಬ್ಬರ ಜೊತೆ ನೋಡಲು ನನಗೆ ಇಷ್ಟವಿಲ್ಲ. ಇದು ಎಂದಿಗೂ ಸಾಧ್ಯವಿಲ್ಲವೆಂದು ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾಳೆ.    

 

Follow Us:
Download App:
  • android
  • ios