Extra Marital Affairs : ಕೊಲೀಗ್ ಜೊತೆ ಸಂಬಂಧ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ
ಭಾರತದಲ್ಲಿ ಮಕ್ಕಳು, ಕುಟುಂಬ, ಸಮಾಜದ ಹೆಸರಿನಲ್ಲಿ ಮಹಿಳೆಯರು ನಿರಂತರವಾಗಿ ನೋವು ತಿನ್ನುತ್ತಾರೆ. ಪ್ರೀತಿಸಿದ ವ್ಯಕ್ತಿ ಮೋಸ ಮಾಡಿದ್ರೂ ಅದನ್ನು ಮರೆ ಮಾಡಿ ಜೀವನ ನಡೆಸ್ತಾರೆ. ಒಬ್ಬರಾದ್ಮೇಲೆ ಒಬ್ಬರಂತೆ ಸರಣಿ ದ್ರೋಹ ಮಾಡಿರುವ ಪತಿಗೆ ಕ್ಷಮೆ ನೀಡ್ಲಾ ಕೇಳ್ತಿದ್ದಾಳೆ ಈ ಮಹಿಳೆ.
ದಾಂಪತ್ಯ (Marriage) ದಲ್ಲಿ ಕ್ಷಮೆ ಅನಿವಾರ್ಯ. ಆದ್ರೆ ನೀವು ನೀಡುವ ಕ್ಷಮೆ (Forgiveness) ಗೆ ಬೆಲೆ ಇಲ್ಲವೆಂದ್ರೆ ನಿಮಗೂ ಅಲ್ಲಿ ಸ್ಥಾನವಿಲ್ಲವೆಂದೇ ಅರ್ಥ. ದಾಂಪತ್ಯ ದ್ರೋಹವಾದ್ರೂ ಅನೇಕ ಮಹಿಳೆಯರು ಸುಮ್ಮನಿರ್ತಾರೆ. ಒಮ್ಮೆ ಪತಿ ಮಾಡಿದ ತಪ್ಪನ್ನು ಕ್ಷಮಿಸಿ ಆತನ ಜೊತೆ ಮತ್ತೆ ಬಾಳ್ವೆ ಶುರು ಮಾಡ್ತಾರೆ. ಆದ್ರೆ ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡ್ತಾ ಪತಿ ಮನಸ್ಸು ನೋಯಿಸುತ್ತಿದ್ದರೆ ಆ ಸಂಬಂಧದಲ್ಲಿದ್ದೂ ಪ್ರಯೋಜನವಿಲ್ಲ. ಒಂದಾದ್ಮೇಲೆ ಒಂದರಂತೆ ಅನೇಕ ಹುಡುಗಿಯರ ಜೊತೆ ಸಂಬಂಧ ಬೆಳೆಸಿದ ಪತಿ ಜೊತೆ ಮುಂದಿನ ಭವಿಷ್ಯ ಹೇಗೆ ಸುಖಮಯವಾಗಿರಲು ಸಾಧ್ಯ? ಇದು ಗೊತ್ತಿದ್ದರೂ ಅನೇಕ ಮಹಿಳೆಯರು ನಾನಾ ಕಾರಣಕ್ಕೆ ಪತಿಯ ಈ ದ್ರೋಹ ನುಂಗಿ ಜೀವನ ನಡೆಸ್ತಾರೆ. ಇಲ್ಲೊಬ್ಬ ಮಹಿಳೆ ಕೂಡ ಈಗ ಉಭಯ ಸಂಕಟದಲ್ಲಿದ್ದಾಳೆ. ಪತಿಗೆ ವಿಚ್ಛೇದನ ನೀಡ್ಬೇಕಾ? ಬೇಡ್ವಾ ಎಂಬ ಚಿಂತೆ ಆಕೆಯನ್ನು ಕಾಡ್ತಿದೆ. ಅಷ್ಟಕ್ಕೂ ಆಕೆ ಸ್ಥಿತಿ ಏನು ಎಂಬುದನ್ನು ನಾವು ಹೇಳ್ತೇವೆ.
ಸಹೋದ್ಯೋಗಿ ಜೊತೆ ಪತಿಯ ಅಕ್ರಮ ಸಂಬಂಧ : ಆಕೆ ಉದ್ಯೋಗಿ. ಆಕೆಗೆ 12 ವರ್ಷದ ಮಗಳಿದ್ದಾಳೆ. ಕೆಲಸ, ಮನೆ, ಗಂಡನ ಜೊತೆ ಸುಖವಾಗಿದ್ದವಳಿಗೆ ಗಂಡನ ಅಸಲಿಯತ್ತು ಗೊತ್ತಾಗಿದೆ. ವರ್ಷಗಳ ಹಿಂದೆ ಪತಿ ಸಹೋದ್ಯೋಗಿ ಜೊತೆ ಸಂಬಂಧ ಹೊಂದಿದ್ದಾನೆ ಎಂಬ ಸತ್ಯ ಗೊತ್ತಾಗಿದೆ. ಈ ಬಗ್ಗೆ ಪತಿ ಜೊತೆ ಮಾತನಾಡಿದ್ದಾಳೆ. ತಪ್ಪಾಯ್ತು, ಇನ್ನು ಸಂಬಂಧ ಬೆಳೆಸೋದಿಲ್ಲವೆಂದ ಪತಿಯನ್ನು ಆಕೆ ಪೂರ್ಣವಾಗಿ ನಂಬಿದ್ದಾಳೆ. ಆದ್ರೆ ಪತಿ ಮತ್ತೊಮ್ಮೆ ನಂಬಿಕೆ ದ್ರೋಹ ಮಾಡಿದ್ದಾನೆ.
Relationship Tips: ಅಮ್ಮನಾ? ಹೆಂಡತಿಯಾ? ಕಾಡುವ ಹೆಂಗಸರ ನಿಭಾಯಿಸೋದು ಹೀಗೆ
ಮತ್ತೆ ದಾರಿ ತಪ್ಪಿದ ಪತಿ : ಎಲ್ಲ ಸರಿಯಾಗ್ತಿದೆ ಎನ್ನುವಾಗ್ಲೇ ಪತ್ನಿಗೆ ಮತ್ತೆ ಪತಿ ಆಕೆ ಸಂಬಂಧ ಬೆಳೆಸಿದ್ದಾನೆ ಎಂಬುದು ಗೊತ್ತಾಗಿದೆ. ಇಬ್ಬರ ಜೊತೆಯೂ ಮಾತನಾಡಿದ್ದಾಳೆ. ಸಹೋದ್ಯೋಗಿ ಪತಿ ಜೊತೆಯೂ ಮಾತುಕತೆಯಾಗಿದೆ. ಇಲ್ಲ ಇಂದೇ ಬಿಟ್ಟೆ ಎಂದ ಪತಿ ತನ್ನ ಚಟ ಬಿಡಲಿಲ್ಲ. ಅವರಿಬ್ಬರ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ.
ಫೋನ್ ನಲ್ಲಿತ್ತು ಮತ್ತೊಂದು ಸಿಕ್ರೆಟ್ : ಪತಿಯ ಸತ್ಯ ತಿಳಿಯಲು ಫೋನ್ ಚೆಕ್ ಮಾಡಿದವಳು ಶಾಕ್ ಆಗಿದ್ದಾಳೆ. ಮಾಜಿ ಪ್ರೇಮಿ ಬಿಟ್ಟ ಪತಿ ಈಗ ಮತ್ತೊಬ್ಬಳ ಜೊತೆ ಸಂಬಂಧ ಬೆಳೆಸಿದ್ದಾನೆ ಎಂಬುದು ಗೊತ್ತಾಗಿದೆ. ಸರಣಿಯಾಗಿ ಮೋಸ ಮಾಡ್ತಿರುವ ಪತಿಯಿಂದ ದೂರವಾಗ್ಬೇಕೆಂಬ ಬಯಕೆಯಿದೆ. ಆದ್ರೆ ಮಗಳು, ಆಕೆ ಭವಿಷ್ಯ ಅಡ್ಡ ಬರ್ತಿದೆ ಎನ್ನುತ್ತಾಳೆ ಮಹಿಳೆ. ಮುಂದೇನು ಮಾಡ್ಬೇಕೆಂದು ತಜ್ಞರ ಸಲಹೆ ಕೇಳಿದ್ದಾಳೆ.
ಹುಡುಗನ ಮೊದಲ ಸ್ಪರ್ಶವಾಗ್ತಿದ್ದಂತೆ ಹೀಗೆ ಯೋಚಿಸ್ತಾಳೆ ಹುಡುಗಿ!
ತಜ್ಞರ ಸಲಹೆ : ಪ್ರೀತಿಸಿದ ವ್ಯಕ್ತಿಯ ಮೋಸವನ್ನು ಸಹಿಸೋದು ಅಸಾಧ್ಯವಾದ ಮಾತು. ಅದ್ರಲ್ಲೂ ಮೂರ್ನಾಲ್ಕು ಬಾರಿ ಮೋಸ ಹೋದ್ರೆ ಆ ಸಂಬಂಧಕ್ಕೆ ಬೆಲೆ ಇಲ್ಲದಂತಾಗುತ್ತದೆ. ಮುಂದೇನು ಎಂಬುದನ್ನು ನೀವು ನಿರ್ಧರಿಸಬೇಕು ಎನ್ನುತ್ತಾರೆ ತಜ್ಞರು. ಭಾರತದಲ್ಲಿ ಅನೇಕ ಮಹಿಳೆಯರು ಕುಟುಂಬ, ಮಕ್ಕಳ ಕಾರಣಕ್ಕೆ ಹಿಂಸೆ ಅನುಭವಸುತ್ತಿದ್ದಾರೆ. ಮುಂದಿನ ಜೀವನ ಕಠಿಣವಾಗಿರಬಹುದು ಎಂಬ ಭಯಕ್ಕೆ ಈಗಿನ ಕಠೋರ ಜೀವನವನ್ನು ಸಹಿಸಿಕೊಳ್ತಿದ್ದಾರೆ ಎನ್ನುತ್ತಾರೆ ತಜ್ಞರು.
ವಿಚ್ಛೇದನ ನೀಡಿದ್ರೆ ನಿಮ್ಮ ಬದುಕು ಹೇಗಿರುತ್ತೆ? ಆರ್ಥಿಕ ಸ್ಥಿತಿ ಏನು ಎಂಬುದನ್ನು ಹಾಗೂ ವಿಚ್ಛೇದನ ನೀಡದೆ ಹೋದ್ರೆ ಏನೆಲ್ಲ ಆಗ್ಬಹುದು, ಮಗಳ ಭವಿಷ್ಯವೇನು ಎಂಬುದನ್ನು ಬರೆಯಿರಿ. ಎರಡನ್ನೂ ತುಲನೆ ಮಾಡಿ ನೋಡಿ. ಯಾವುದು ಸರಿ ಎನ್ನಿಸುತ್ತದೆಯೋ ಆ ದಾರಿಯಲ್ಲಿ ಸಾಗಿ. ವಿಚ್ಛೇದನದಿಂದ ಮಗಳ ಬಾಳು ಹಾಳಾಗುತ್ತೆ ಎಂಬುದು ಸುಳ್ಳು. ಮಗಳಿಗೆ ಕೌನ್ಸಿಲಿಂಗ್ (Counselling) ಮಾಡ್ಬಹುದು. ಆಕೆಯನ್ನು ಭಾವನಾತ್ಮಕವಾಗಿ ಬಲಗೊಳಿಸಬಹುದು. ಆದ್ರೆ ನಿಮ್ಮ ನಿರ್ಧಾರ ಸ್ಪಷ್ಟವಾಗಿರಬೇಕು ಎನ್ನುತ್ತಾರೆ ತಜ್ಞರು. ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು ಕುಟುಂಬದ ಜೊತೆ ಮಾತನಾಡಿ. ಅವರ ಬೆಂಬಲ ಪಡೆಯಿರಿ. ನಿಮ್ಮ ಜೀವನ ಮುಖ್ಯ ಎಂಬುದು ನೆನಪಿರಲಿ ಎಂದಿದ್ದಾರೆ ತಜ್ಞರು.